ಪಾವಂಜೆ: ಬ್ರಹ್ಮಕಲಶೋತ್ಸವಕ್ಕೆ ಪೂರ್ವ ಸಿದ್ಧತೆ
Team Udayavani, Apr 19, 2018, 11:53 AM IST
ಪಾವಂಜೆ : ಇಲ್ಲಿನ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಎ. 19ರಂದು ನಡೆಯಲಿರುವ ಬ್ರಹ್ಮ ಕಲಶೋತ್ಸವಕ್ಕೆ ದೇವಸ್ಥಾನದಲ್ಲಿ ಪೂರ್ವ ಸಿದ್ಧತೆಗಳು ನಡೆದಿದೆ.
ದೇವಸ್ಥಾನದಲ್ಲಿ ವಿಶ್ವ ಜಿಗೀಷದ್ ಯಾಗ ಹಾಗೂ ಮಹಾರಥೋತ್ಸವ ಸಂಭ್ರಮದ ಮುಕ್ತಾಯದ ಜತೆಗೆ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ನಡೆಯುತ್ತಿರುವುದರಿಂದ ಕ್ಷೇತ್ರಕ್ಕೆ ಆಗಮಿಸುವವರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದ್ದು ಎಲ್ಲ ವ್ಯವಸ್ಥೆಗಳನ್ನು ಆಚ್ಚು ಕಟ್ಟಾಗಿ ನಿರ್ವಹಿಸಲು ಆಡಳಿತ ಮಂಡಳಿ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಸಜ್ಜಾಗಿದೆ.
ಬ್ರಹ್ಮಕಲಶೋತ್ಸವವು ಎಲ್ಲ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯಲಿರುವುದರಿಂದ ಕವಟೋದ್ಘಾಟನೆ, ಚೂರ್ಣೋತ್ಸವ, ಬಲಿ, ಬ್ರಹ್ಮಕಲಶಾಭಿಷೇಕ, ಮಹಾಪೂಜೆ, ಪಲ್ಲಪೂಜೆ, ಮಹಾ ಅನ್ನಸಂತರ್ಪಣೆ, ಸಂಜೆ ನಿತ್ಯ ಪೂಜೆ, ನಿತ್ಯ ರಂಗ ಪೂಜೆ, ಬಲಿ, ಅವಭೃತೋತ್ಸವ, ಧ್ವಜಾವರೋಹಣ, ಮಂತ್ರಾಕ್ಷತೆ, ಅಣ್ಣಪ್ಪ ಸ್ವಾಮೀಗೆ ನರ್ತನ ಸೇವೆ ನಡೆಯಲಿದೆ.
ಶಾರಧ್ವತ ಯಜ್ಞಾಂಗಣದಲ್ಲಿ ಕಲಶಗಳಿಗೆ ವಿಶೇಷ ಪೂಜೆಯನ್ನು ವೇದೋಕ್ತವಾಗಿ ಬುಧವಾರ ನಡೆಸಲಾಯಿತು. ಸ್ವಯಂ ಸೇವಕರು ವಿಶೇಷವಾಗಿ ವಿವಿಧ ಸೇವೆಗಳಲ್ಲಿ ತೊಡಗಿಸಿಕೊಳ್ಳಲು ಕಚೇರಿಯಲ್ಲಿ ಹೆಸರನ್ನು ನೋಂದಾಯಿಸಿದ್ದಾರೆ.
ಚಿನ್ಮಯ ಮಿಷನ್‌ನ ಮುಖ್ಯಸ್ಥರಾದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ವೇದ ಕೃಷಿಕ ಕೆ.ಎಸ್.ನಿತ್ಯಾನಂದ ಸ್ವಾಮೀಜಿ, ದೇವಳದ ಧರ್ಮದರ್ಶಿ ಡಾ| ಯಾಜಿ ನಿರಂಜನ್ ಭಟ್, ಮೊಕ್ತೇಸರ ಎಂ. ಶಶೀಂದ್ರಕುಮಾರ್, ಟ್ರಸ್ಟಿ ನಕ್ರೆ ಬಾಲಕೃಷ್ಣ ಭಟ್, ಬ್ರಹ್ಮಕಲಶೋತ್ಸವ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ವಿಶ್ವ ಜಿಗೀಷದ್ ಯಾಗ ಸಮಿತಿಯ ಪ್ರಮುಖರು ಉಪಸ್ಥಿತರಿದ್ದರು.
ಶಿಖರಕ್ಕೆ ಸಾರ್ವತ್ರಿಕ ಕಲಶಾಭಿಷೇಕ
ಬ್ರಹ್ಮಕಲಶದ ಸಂದರ್ಭದಲ್ಲಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಕಲಶಗಳನ್ನು ಸ್ಥಾಪಿಸಿ, ಪೂಜಿಸಿ ಶಕ್ತಿ ಸಂಚಯಿಸಿ ಆ ಪವಿತ್ರ ತೀರ್ಥ ಜಲವನ್ನು ಶ್ರೀ ದೇವರಿಗೆ ಅಭಿಷೇಕಿಸಿ, ಶೇಷ ಭಾಗವನ್ನು ಗರ್ಭಗೃಹದ ಶಿಖರಕ್ಕೆ ಪುರುಷ ಸೇವಾದಾರರು ವಸ್ತ್ರ ಸಂಹಿತೆಯಾಗಿ, ಸ್ವತಃ ಅಭಿಷೇಕ ಮಾಡುವ ಅಪೂರ್ವ ಕಾರ್ಯಕ್ರಮ ಈ ಕಲಶಾಭಿಷೇಕಕ್ಕೆ ಸದಾವಕಾಶವಿದ್ದು, ಹಿರಿಯರು ಶಾಂತಿ ಕರ್ಮದ ಫಲವನ್ನು ಅನುಭವಿಸುವುದಕ್ಕೆ ಸದಾವಕಾಶ ಇದೆ. ದೇವಳದ ಶಿಖರಕ್ಕೆ ಅಭಿಷೇಕ ಮಾಡಿ, ಶಿಖರಕ್ಕೆ ಒಂದು ಹಿಡಿ ನಾಣ್ಯವನ್ನೂ ಅಭಿಷೇಕ ಮಾಡಿ, ಹೂವಿನ ಹಾರ ಹಾಕಿ ಪೂಜಿಸುವುದರಿಂದ 60 ಸಂವತ್ಸರ ತುಂಬಿದ ಹಿರಿಯರಿಗೆ ಷಷ್ಟ್ಯಬ್ದಿ, ಭೀಮರಥ, ವಿಜಯರಥ.. ಇತ್ಯಾದಿ ಶಾಂತಿಕರ್ಮಗಳ ಫಲಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿಂದ ಈ ವ್ಯವಸ್ಥೆ ಮಾಡಲಾಗಿದೆ. ಈ ತಾತ್ಕಾಲಿಕ ನಿರ್ಮಿಸಿರುವ ಅಟ್ಟಳಿಗೆಯನ್ನು ಸುಮಾರು 5 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಸಾರ್ವಜನಿಕರು ಕಲಶಾಭಿಷೇಕ ಮಾಡುವ ಕ್ರಮವು ವಿಶೇಷವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.