ಜಿಗೀಷದ್ ಯಾಗದಿಂದ ಸರ್ವರ ಹಿತ, ಸುಖ : ನಿತ್ಯಾನಂದ ಸ್ವಾಮೀಜಿ
Team Udayavani, Apr 19, 2018, 12:03 PM IST
ಪಾವಂಜೆ: ವಿಶ್ವ ಜಿಗೀಷದ್ ಯಾಗದಿಂದ ಸರ್ವರ ಹಿತ ಮತ್ತು ಸುಖವನ್ನು ಬಯಸಿ, ಒಗ್ಗಟ್ಟಿನಿಂದ ರಾಷ್ಟ್ರದ ಗೌರವವನ್ನು ರಕ್ಷಿಸುವುದು ನಮ್ಮೆಲ್ಲರ ಉದ್ದೇಶವಾಗಬೇಕು. ಈ ಮೂಲಕ ಭಾರತವು ವಿಶ್ವ ಗುರುವಾಗಲಿ. ಕಲುಷಿತಗೊಂಡಿರುವ ಸಮಾಜವನ್ನು ಆಧ್ಯಾತ್ಮಿಕ ಚಿಂತನೆಯಿಂದ ಪರಿವರ್ತನೆ ಮಾಡಬಹುದಾಗಿದೆ ಎಂದು ಚಿಕ್ಕಮಗಳೂರಿನ ವೇದ ಕೃಷಿಕ ಕೆ.ಎಸ್. ನಿತ್ಯಾನಂದ ಸ್ವಾಮೀಜಿ ಹೇಳಿದರು.
ಇಲ್ಲಿನ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮೀ ದೇವಸ್ಥಾನದಲ್ಲಿ ನಡೆದ ವಿಶ್ವ ಜಿಗೀಷದ್ ಯಾಗದ ಸಮಾರೋಪದಲ್ಲಿ ಯಾಗ ವಿದ್ವತ್ ಪರಿಷತ್‌ನಿಂದ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.ನಮ್ಮೊಳಗಿರುವ ವಿಷಮತೆ ಹಾಗೂ ಐಹಿಕ ಸುಖಗಳನ್ನು ಆಧ್ಯಾತ್ಮದ ಔಷಧದಿಂದ ಗುಣಪಡಿಸಬಹುದೇ ಯಾಗದ ಉದ್ದೇಶವಾಗಿದೆ. ಯಾಗವು ಉದಾತ್ತ ಮನೋಭಾವದಿಂದ ಯಶಸ್ವಿಯಾಗಿದ್ದು, ಶಿಕ್ಷಣದಿಂದ ಸ್ವಾರ್ಥ ರಹಿತ ಜೀವನ ನಡೆಸುವ ಉದ್ದೇಶ ನಮ್ಮದಾಗಲಿ ಎಂದರು.
ಈ ಸಂದರ್ಭದಲ್ಲಿ ಕೆ.ಎಸ್. ನಿತ್ಯಾನಂದ ಸ್ವಾಮೀಜಿಯವರನ್ನು ಯಾಗ ಸಮಿತಿಯ ಪರವಾಗಿ ದೇಗುಲದ ಪ್ರಮುಖರು ವಿಶೇಷವಾಗಿ ಸಮ್ಮಾನಿಸಿದರು. ದೇಗುಲದ ಧರ್ಮದರ್ಶಿ ಡಾ| ಯಾಜಿ ನಿರಂಜನ್ ಭಟ್, ಮೊಕ್ತೇಸರ ಎಂ. ಶಶೀಂದ್ರಕುಮಾರ್, ಟ್ರಸ್ಟಿ ನಕ್ರೆ ಬಾಲಕೃಷ್ಣ ಭಟ್, ಡಾ| ಎನ್.ಎನ್ .ಪಡಿಯಾರ್, ಡಾ| ಶಾರದಾ ಪ್ರಸಾದ್, ಸರೋಜಾ ಮಹೇಶ್ ತಿಮರೋಡಿ ಬೀಡು, ವಿಜಯ್‌ಕುಮಾರ್ ಆರ್. ಎಸ್., ಚಂದ್ರಿಕಾ ಪ್ರವೀಣ್ ಕೋಟ್ಯಾನ್ ಉಪಸ್ಥಿತರಿದ್ದರು.ಯಾಗದ ವಕ್ತಾರ ಡಾ| ಸೋಂದಾ ಭಾಸ್ಕರ ಭಟ್ ಸ್ವಾಗತಿಸಿ, ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.