ಬಸವಣ್ಣನ ವಚನಗಳು ಎಂದಿಗೂ ಸಾರ್ವಕಾಲಿಕ: ಶಂಕರೇಗೌಡ
Team Udayavani, Apr 19, 2018, 5:27 PM IST
ಬನ್ನೂರು: ನಮ್ಮ ನಡುವೆ ಇದ್ದು ವಿಚಾರ ಧಾರೆಗಳನ್ನು ತಿಳಿಸುವ ಮೂಲಕ ಪ್ರತಿ ಯೊಬ್ಬರಿಗೂ ಮಾದರಿಯಾದ ಮಹಾ ಮಹಿಮರನ್ನು ನಾವೆಂದಿಗೂ ಮರೆಯಬಾರದು ಎಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವೈ.ಎನ್. ಶಂಕರೇಗೌಡ ತಿಳಿಸಿದರು.
ಹೋಬಳಿಯ ಯಾಚೇನಹಳ್ಳಿಯಲ್ಲಿ ನಡೆದ ಅಂಬೇಡ್ಕರ್ ಮತ್ತು ಬಸವೇಶ್ವರ ಜಯಂತಿ ಹಾಗೂ ಅಕ್ಷಯ ತೃತೀಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ನಾಡು, ಕಲೆ, ಸಂಸ್ಕೃತಿಗೆ ಹೆಸರಾದುದು.
ಹಲವಾರು ಮಹಾಮಹಿಮರು ಇಲ್ಲಿ ಹುಟ್ಟಿ ವಿಚಾರಧಾರೆಯನ್ನು ಮನುಕುಲಕ್ಕೆ ದಾರೆ ಎರೆದು ಹೋಗಿದ್ದಾರೆ. ಅಂತಹವರಲ್ಲಿ ವಚನಕಾರರು ಹಾಗೂ ಮಹಾ ವಾಗ್ಮಿಗಳು ಆದಂತಹ ಬಸವಣ್ಣ ಕಟ್ಟಿಕೊಟ್ಟ ವಚನ ಸಾಹಿತ್ಯ ಸಾರ್ವಕಾಲಿಕ. ವಚನಗಳಿಂದ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೆಲಸ ಮಾಡಿದರು. ಎಲ್ಲಾ ವರ್ಗದ ಜನರು ಒಂದೇ ಎಂಬಂತಹ ನೀತಿ ಪಾಠವನ್ನು ಜಗತ್ತಿಗೆ ಸಾರಿದಂತ ಮಹಾ ಪುರುಷ ಎಂದು ಹೇಳಿದರು.
ಕಾಯಕವೇ ಕೈಲಾಸ: ನಾವು ಮಾಡುವ ಕೆಲಸದಲ್ಲಿ ದೇವರನ್ನು ಕಾಣಬೇಕೆಂದು ತಿಳಿಸುವ ಮೂಲಕ ಪ್ರತಿಯೊಬ್ಬರಿಗು ಲಿಂಗಧಾರಣೆ ಮಾಡಿ ಮನುಕುಲ ಒಂದೇ ಎಂದು ಸಾರಿದರು. ಅದೇ ರೀತಿಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಪ್ರಪಂಚದ ಎಲ್ಲಾ ಸಂವಿಧಾನವನ್ನು ಅಧ್ಯಯನ ಮಾಡಿ ಭಾರತಕ್ಕೆ ಉತ್ತಮ ಸಂವಿಧಾನ ರಚಿಸಿದರು. ಪ್ರತಿಯೊಬ್ಬರೂ ಒಂದೇ ಕಾನೂನಿನ ಚೌಕಟ್ಟಿನಲ್ಲಿ ನಡೆದಾಗ
ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯ. ಕಡುಬಡತನದಲ್ಲಿ ಹುಟ್ಟಿ, ತಮ್ಮ ಆಗಾದ ಜ್ಞಾನದ ಮೂಲಕ ಇಡೀ ವಿಶ್ವವೇ ಭಾರತವನ್ನು ತಿರುಗಿ ನೋಡುವಂತೆ ಮಾಡಿದರು. ಅವರ ಆದರ್ಶಗಳನ್ನು ಪಾಲಿಸುವ ಮೂಲಕ ಜನ್ಮದಿನ ಆಚರಿಸಬೇಕು ಎಂದು ಹೇಳಿದರು.
ರಾಮಕೃಷ್ಣ ಸೇವಾ ಕೇಂದ್ರದ ಶ್ರೀ ನಾದಾನಂದನಾಥ ಸ್ವಾಮೀಜಿ ಮಾತನಾಡಿ, ನಾವು ಹೊಟ್ಟಗಾಗಿ ಜೀವನ ಮಾಡುವುದಲ್ಲ. ಬದಲಾಗಿ ಏನಾದರೂ ಸಾಧಿಸಿ ಮುಂದಿನ ಪೀಳಿಗೆಗೆ ಮಾದರಿಯಾಗಿ ಇರಬೇಕು. ವಿದ್ಯೆ ಕಲಿತ ಮೇಲೆ ಸಾರ್ಥಕವಾಗಬೇಕಾದರೆ ನಮ್ಮ ನಡುವೆ ಇದ್ದು ಹಲವಾರು ವಿಚಾರಗಳನ್ನು ಗ್ರಂಥ ರೂಪದಲ್ಲಿ ನಮಗಾಗಿ ಬಿಟ್ಟು ಹೋಗಿರುವುದನ್ನು ನಾವು ಕಲಿತು ಉತ್ತಮ ನಡವಳಿಕೆ, ವಿಚಾರಗಳನ್ನು ಕಲಿಯಬೇಕು. ಇಂದು ಮಕ್ಕಳು ತಮ್ಮ ಸಮಯವನ್ನು ಸಾಮಾಜಿಕ ಜಾಲತಾಣಗಳಿಗೆ ವಿನಿಯೋಗಿಸಿ ಹಾಳಾಗುತ್ತಿದ್ದಾರೆ. ಅದರ ಬದಲು ಇಂತಹ ಮಹಾಮಹಿಮರ ವಿಚಾರಗಳನ್ನು ಓದಿದರೆ, ಅದು ವ್ಯಕ್ತಿಯನ್ನು ಪ್ರಬುದ್ಧªರಾಗಿ ಮಾಡುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಯಾಚೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚೆನ್ನಾಜಮ್ಮ, ಉಪಾಧ್ಯಕ್ಷ ಕರಿಸಿದ್ದಶೆಟ್ಟಿ, ಹನುಮಂತೇಗೌಡ, ನನ್ನವ್ವ ಕಲಾ ತಂಡದ ಮಹದೇವು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಿಇಒ ಕ್ಯಾತೇಗೌಡ, ಹಾಲು ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷ ಪುಟ್ಟರಾಜು, ಪ್ರಾಥಮಿಕ ಸಹಕಾರ ಸಂಘದ ನಿರ್ದೇಶಕರು, ಹಾಲು ಉತ್ಪಾದಕ ಸಹಕಾರ ಸಂಘದ ಸದಸ್ಯರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ
MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?
Mysuru: ‘ಕೋಲು ಮಂಡೆ ಜಂಗಮ’ ಹಾಡು ನೃತ್ಯ ಸಂಯೋಜಕ ಕಂಸಾಳೆ ಕಲಾವಿದ ಕುಮಾರಸ್ವಾಮಿ ನಿಧನ
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Mysuru: ಜೆಡಿಎಸ್ ವರಿಷ್ಠರಿಗೆ ನಾನು ಬೇಡ, ನನ್ನ ಮಗ ಬೇಕಾಗಿದ್ದಾನೆ: ಜಿ.ಟಿ.ದೇವೇಗೌಡ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Sirsi: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ಪರಾರಿ; ಆರೋಪಿ ಬಂಧನ
EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್ ಟೀಕೆ
Sirsi: ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾದ ಸಂಸದ ಕಾಗೇರಿ
India: 68 ಮಿಲಿಯನ್ ಟನ್ ಆಹಾರ ಪೋಲು…ದೇಶದ ಅಭಿವೃದ್ಧಿ, ಜನರ ಸಾವು, ಆಹಾರ ಭದ್ರತೆಗೂ ಮಾರಕ
ದೋಟಿಹಾಳ: ಉದ್ಘಾಟನೆ ಕಾಣದೆ ಅಂಗನವಾಡಿ ಕಟ್ಟಡ ಅನಾಥ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.