ಪುಣೆಗೆ ಸಾಗಿದೆ “ವಿಸಲ್ ಪೋಡು ಎಕ್ಸ್‌ಪ್ರೆಸ್’ ರೈಲು!
Team Udayavani, Apr 20, 2018, 6:15 AM IST
ಪುಣೆ: 2018ರ ಐಪಿಎಲ್‌ನಲ್ಲಿ ಅತ್ಯಂತ ಖುಷಿಪಟ್ಟ ಹಾಗೂ ಅಷ್ಟೇ ಬೇಸರಗೊಂಡವರೆಂದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಭಿಮಾನಿಗಳು. ಚೆನ್ನೈ ತಂಡ 2 ವರ್ಷಗಳ ನಿಷೇಧ ಮುಗಿಸಿ ಐಪಿಎಲ್‌ಗೆ ವಾಪಸ್ಸಾದ್ದರಿಂದ ಸಹಜವಾಗಿಯೇ ಚೆನ್ನೈ ಫ್ಯಾನ್ಸ್ ಸಂಭ್ರಮದಲ್ಲಿ ತೇಲಾಡತೊಡಗಿದರು.
ಆದರೆ ಚೆನ್ನೈಯಲ್ಲಿ ಒಂದು ಪಂದ್ಯ ಆಡುವಷ್ಟರಲ್ಲಿ ಐಪಿಎಲ್‌ಗೆ “ಕಾವೇರಿ ಬಿಸಿ’ ತಟ್ಟಿತು. ಪ್ರತಿಭಟನೆ ಜೋರಾಯಿತು. ಚೆನ್ನೈಯಲ್ಲಿ ನಡೆಯಬೇಕಿದ್ದ ಪಂದ್ಯಗಳೆಲ್ಲ ಪುಣೆಗೆ ಸ್ಥಳಾಂತರಗೊಂಡವು. ಅಭಿಮಾನಿಗಳು ಹತಾಶರಾದರು. ತಮ್ಮ ನೆಚ್ಚಿನ ಕ್ರಿಕೆಟ್ ತಾರೆಯರನ್ನು ಕಾಣುವ, ಅವರ ಆಟವನ್ನು ವೀಕ್ಷಿಸುವ ಅವಕಾಶದಿಂದ ವಂಚಿತರಾದುದಕ್ಕೆ ಪರಿತಪಿಸಿದರು. ಒಂದರ್ಥದಲ್ಲಿ ಹೇಳುವುದಾದರೆ, ಇದು ಅವರಾಗಿಯೇ ಆಹ್ವಾನಿಸಿಕೊಂಡ ಅವಾಂತರ.
ಆದರೆ ಚೆನ್ನೈ ಫ್ರಾಂಚೈಸಿ ಸುಮ್ಮನುಳಿಯಲಿಲ್ಲ. ಚೆನ್ನೈ ಅಭಿಮಾನಿಗಳನ್ನು ಪುಣೆಗೆ ಕಳುಹಿಸಿ, ಅಲ್ಲಿ ಧೋನಿ ಪಡೆಯನ್ನು ಹುರಿದುಂಬಿಸಲು ವ್ಯವಸ್ಥೆಯೊಂದನ್ನು ರೂಪಿಸಲು ಮುಂದಾಯಿತು. ಇದರ ಫಲವೇ, “ವಿಸಲ್‌ಪೋಡು ಎಕ್ಸ್‌ಪ್ರೆಸ್ ರೈಲು’!
ಇದು ಚೆನ್ನೈ ಕ್ರಿಕೆಟ್ ಅಭಿಮಾನಿಗಳನ್ನು ಪುಣೆಗೆ ಕಳುಹಿಸಲು ಕಲ್ಪಿಸಲಾದ ವಿಶೇಷ ರೈಲು. ಇದರಲ್ಲಿ ಸಾವಿರ ಮಂದಿ ಕ್ರಿಕೆಟ್ ವೀಕ್ಷಕರಿದ್ದಾರೆ. ಇವರನ್ನು ಹೊತ್ತ ರೈಲು ಈಗಾಗಲೇ ಪುಣೆ ಹಾದಿ ಹಿಡಿದಿದೆ. ಅಲ್ಲಿ ಇವರಿಗೆ ಉಚಿತ ಆಹಾರ ಹಾಗೂ ವಸತಿ ಸೌಲಭ್ಯ ಕಲ್ಪಿಸಲಾಗುವುದು. ಚೆನ್ನೈ ತಂಡ ಶುಕ್ರವಾರ ರಾಜಸ್ಥಾನ್ ರಾಯಲ್ಸ್ ವಿರುದ್ಧ ಪುಣೆಯಲ್ಲಿ “ತವರಿನ ಪಂದ್ಯ’ ಆಡಲಿದೆ. ಇದು ತಟಸ್ಥ ತಾಣವಾದ್ದರಿಂದ ಈ ಮುಖಾಮುಖೀಯ ವೇಳೆ ಧೋನಿ ಪಡೆಯನ್ನು ಹುರಿದುಂಬಿಸುವುದು (ವಿಸಲ್ ಪೋಡು-ಶಿಳ್ಳೆ ಹಾಕು) ಈ ಅಭಿಮಾನಿಗಳ ಕೆಲಸ.
ಯಾರಿಗೆ ಒಲಿದೀತು ಪುಣೆ?
ಚೆನ್ನೈ ಸೂಪರ್ ಕಿಂಗ್ಸ್ ಈವರೆಗೆ 3 ಪಂದ್ಯಗಳನ್ನಾಡಿದ್ದು, ಎರಡರಲ್ಲಿ ಜಯ ಸಾಧಿಸಿದೆ. “ವಾಂಖೇಡೆ’ಯಲ್ಲಿ ನಡೆದ ಮುಂಬೈ ಇಂಡಿಯನ್ಸ್ ಎದುರಿನ ಉದ್ಘಾಟನಾ ಪಂದ್ಯವನ್ನು ಒಂದು ವಿಕೆಟ್ ಅಂತರದಿಂದ ರೋಮಾಂಚಕಾರಿಯಾಗಿ ಗೆದ್ದ ಚೆನ್ನೈ, ಬಳಿಕ ಕೆಕೆಆರ್ ವಿರುದ್ಧ ತವರಿನಂಗಳದಲ್ಲಿ 5 ವಿಕೆಟ್‌ಗಳಿಂದ ಜಯಿಸಿತು. ಆದರೆ ಮೊಹಾಲಿಯಲ್ಲಿ ಪಂಜಾಬ್‌ಗ 4 ರನ್ನುಗಳಿಂದ ಶರಣಾಯಿತು.
ಇನ್ನೊಂದೆಡೆ ರಾಜಸ್ಥಾನ್ 4 ಪಂದ್ಯಳನ್ನಾಡಿದ್ದು, ಎರಡನ್ನು ಗೆದ್ದು ಉಳಿದೆರಡರಲ್ಲಿ ಸೋತಿದೆ. ಪುಣೆ ಯಾರಿಗೆ ಒಲಿಯುತ್ತದೆಂಬುದೊಂದು ಕುತೂಹಲ. ಈ ಬಾರಿ ಪುಣೆ ಫ್ರಾಂಚೈಸಿ ಇಲ್ಲವಾದ್ದರಿಂದ ಪುಣೆಯ ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ಇದು ಬಯಸದೇ ಬಂದ ಭಾಗ್ಯವಾಗಿದೆ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20 Asia Cup: ಬಾಂಗ್ಲಾ ವಿರುದ್ದ ಅಂಡರ್ 19 ವನಿತಾ ಏಷ್ಯಾಕಪ್ ಚಾಂಪಿಯನ್ ಆದ ಭಾರತ
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
IND-W vs WI: ವನಿತೆಯರ ಏಕದಿನ ಮುಖಾಮುಖಿ
Ahmed Shehzad: ಭಾರತ-ಪಾಕ್ ಗಡಿಯಲ್ಲಿ ಕ್ರಿಕೆಟ್ ಸ್ಟೇಡಿಯಂಗೆ ಸಲಹೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
T20 Asia Cup: ಬಾಂಗ್ಲಾ ವಿರುದ್ದ ಅಂಡರ್ 19 ವನಿತಾ ಏಷ್ಯಾಕಪ್ ಚಾಂಪಿಯನ್ ಆದ ಭಾರತ
BBK11: ವೀಕ್ಷಕರಿಗೆ ಸರ್ಪ್ರೈಸ್; ಮತ್ತೆ ಬಿಗ್ ಬಾಸ್‌ಗೆ ಗೋಲ್ಡ್ ಸುರೇಶ್
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.