ದೇಹ ಸ್ಪಂದಿಸಿದಷ್ಟೂ ಕಾಲ ಬಾಕ್ಸಿಂಗ್: ಮೇರಿ ಕೋಮ್
Team Udayavani, Apr 20, 2018, 7:45 AM IST
ಹೊಸದಿಲ್ಲಿ: ಮೇರಿ ಕೋಮ್ ಬಾಕ್ಸಿಂಗ್‌ನಲ್ಲಿ ಮುಂದುವರಿಯುತ್ತಾರೋ ಇಲ್ಲವೋ ಎಂಬ ಗೊಂದಲಕ್ಕೆ ಒಂದು ಹಂತದ ತೆರೆ ಬಿದ್ದಿದೆ. 5 ಬಾರಿಯ ವಿಶ್ವ ಚಾಂಪಿಯನ್ ಮೇರಿ ಕೋಮ್ ಗೋಲ್ಡ್‌ಕೋಸ್ಟ್ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದ ಬಳಿಕ ವಯಸ್ಸಿನ ಸಮಸ್ಯೆಯಿಂದಾಗಿ ಬಾಕ್ಸಿಂಗ್ ಕಣದಿಂದ ಹೊರಗುಳಿಯುವ ಆಲೋಚನೆ ಮಾಡಿದ್ದಾರೆ ಎನ್ನಲಾಗಿತ್ತು. ಆದರೆ ದೇಹ ಸ್ಪಂದಿಸುವಷ್ಟು ಕಾಲ ತಾನು ಬಾಕ್ಸಿಂಗ್‌ನಲ್ಲಿ ಮುಂದುವರಿಯುವುದಾಗಿ ಮೇರಿ ಹೇಳಿದ್ದಾರೆ.
35ರ ಹರೆಯದ ಮೇರಿ ಕೋಮ್ ಗೋಲ್ಡ್‌ಕೋಸ್ಟ್ ಗೇಮ್ಸ್‌ನ 48 ಕೆಜಿ ಲೈಟ್ ಫ್ಲೈವೇಟ್ ವಿಭಾಗದ ಫೈನಲ್ ಸ್ಪರ್ಧೆಯಲ್ಲಿ ಚಿನ್ನಕ್ಕೆ ಕೊರಳೊಡ್ಡುವ ಮೂಲಕ ಸಾಧನೆಗೆ ವಯಸ್ಸು ಅಡ್ಡಿಯಲ್ಲ ಎಂಬುದನ್ನು ಜಗತ್ತಿಗೆ ಸಾರಿದ್ದರು.
ವಿದಾಯದ ಬಗ್ಗೆ ಮಾತಾಡಿಲ್ಲ
“ನಾನು ವಿದಾಯ ನಿರ್ಧಾರದ ಬಗ್ಗೆ ಯಾವತ್ತಿಗೂ ಮಾತನಾಡಿಲ್ಲ. ಅವೆಲ್ಲ ಗಾಳಿಸುದ್ದಿಗಳು. ಒಲಿಂಪಿಕ್ಸ್ ಪದಕ ಗೆಲ್ಲುವ ಏಕಮಾತ್ರ ಗುರಿ ನನ್ನ ಮುಂದಿದೆ. ನಾನು ಲಿಂಪಿಕ್ಸ್ ಪದಕ ಗೆಲ್ಲುತ್ತೇನೊ, ಇಲ್ಲವೋ ಅದು ಬೇರೆ ಪ್ರಶ್ನೆ. ಆದರೆ ನನ್ನ ಗುರಿ ಸಾಧಿಸುವ ನಿಟ್ಟಿನಲ್ಲಿ ನಾನು ಪರಿಶ್ರಮವನ್ನಂತೂ ಪಡುತ್ತಿದ್ದೇನೆ’ ಎಂದಿದ್ದಾರೆ.
“ವಯಸ್ಸು ನನ್ನ ಮಟ್ಟಿಗೆ ದೊಡ್ಡ ವಿಚಾರವೇ ಅಲ್ಲ. ಸಾಧನೆಯ ಗುರಿಯನ್ನಿಟ್ಟುಕೊಂಡಿರುವ ನಾವು ವಯಸ್ಸಿನ ಸಂಗತಿಯನ್ನು ತಲೆಯಿಂದ ಹೊರಗಿಡಬೇಕು. ದೇಹ ಸ್ಪಂದಿಸುವ ವರೆಗೂ ನಾನಂತೂ ಬಾಕ್ಸಿಂಗ್‌ನಲ್ಲಿ ಮಂದುವರಿಯುತ್ತೇನೆ’ ಎಂದು ಮೇರಿ ಕೋಮ್ ಹೇಳಿದ್ದಾರೆ.
“ಕಾಮನ್ವೆಲ್ತ್ ಗೇಮ್ಸ್ ಬಂಗಾರವನ್ನು ನಾನು ಸಾವಾಲಿನೆದುರಿನ ನನ್ನ ಗೆಲುವೆಂದು ಭಾವಿಸುತ್ತೇನೆ. ಈ ಗೆಲುವಿನೊಂದಿಗೆ ನಾನು ನನ್ನೆದುರಿನ ಟೀಕೆಗಳನ್ನು ಮೆಟ್ಟಿ ನಿಂತಿರುವುದಾಗಿ ನಂಬುತ್ತೇನೆ. ನನ್ನ ಅಭ್ಯಾಸದ ವಿಚಾರದಲ್ಲಿ ನಾನು ಯಾವತ್ತಿಗೂ ಮೇಲ್ಮಟ್ಟದಲ್ಲಿರುವಾಗ ನಾನು ಯಾರಿಗೂ ಸವಾಲು ಹಾಕಬಲ್ಲೆ’ ಎಂದು ಮೇರಿ ಕೋಮ್ ಆತ್ಮವಿಶ್ವಾಸ ವ್ಯಕ್ತಪಡಿಸಿದರು.
ವೃತ್ತಿಪರ ಕ್ರೀಡಾಪಟುವಾಗಿ, ತಾಯಿಯಾಗಿ, ಜಿಮ್ ಮಾಲಕಿಯಾಗಿ, ಎಂಪಿಯಾಗಿ… ಹೀಗೆ ಮೇರಿ ಕೋಮ್ ಬಹಳ ಬ್ಯುಸಿಯಾಗಿರುವುದರಿಂದ ಅವರು ಬಾಕ್ಸಿಂಗ್ ಕಣದಿಂದ ದೂರ ಸರಿಯಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ತಾನು ಸದ್ಯ ಬಾಕ್ಸಿಂಗ್‌ನಿಂದ ದೂರ ಉಳಿಯುವುದಿಲ್ಲ ಎನ್ನುವ ಮೂಲಕ ಮೇರಿ ತನ್ನ ಎದುರಾಳಿಗಳನ್ನು ಎಚ್ಚರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDvAUS: ಶಮಿ ವಿರುದ್ದ ನಿಂತರೇ ನಾಯಕ ರೋಹಿತ್?; ವೇಗಿಗೆ ಆಸೀಸ್ ಪ್ರವಾಸ ಕಷ್ಟ!
WTC 25; ಕಠಿಣವಾಯ್ತು ಭಾರತದ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾದಿ; ಹೀಗಿದೆ ಲೆಕ್ಕಾಚಾರ
R.Ashwin retirement: ಅಶ್ವಿನ್ ವಿದಾಯದ ಸುತ್ತಮುತ್ತ…
Shaw left out; ಓ ದೇವರೇ, ನಾನು ಇನ್ನೇನೆಲ್ಲ ನೋಡಬೇಕು..; ಪೃಥ್ವಿ ಶಾ ನೋವು
Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್
MUST WATCH
ಹೊಸ ಸೇರ್ಪಡೆ
Hydarabad: ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಏನೇನಿದೆ ಮಾರ್ಗಸೂಚಿಯಲ್ಲಿ
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.