ಕ್ರೀಡೆಗೆ ಇನ್ನಷ್ಟು ಪ್ರೋತ್ಸಾಹ ಬೇಕು : ಗುರುರಾಜ್
Team Udayavani, Apr 20, 2018, 10:31 AM IST
ಕುಂದಾಪುರ: ಗೋಲ್ಡ್ ಕೋಸ್ಟ್ ನಲ್ಲಿ ನಡೆದ ಈ ಬಾರಿಯ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಭಾರತಕ್ಕೆ ಮೊದಲ ಪದಕ ತಂದಿತ್ತ ವೇಟ್ ಲಿಫ್ಟರ್ ಗುರುರಾಜ್ ಅವರು ಗುರುವಾರ ಹುಟ್ಟೂರು ಕುಂದಾಪುರಕ್ಕೆ ಆಗಮಿಸಿದ್ದು, ಈ ವೇಳೆ ‘ಉದಯವಾಣಿ’ಯೊಂದಿಗೆ ತಮ್ಮ ಸಾಧನೆಯ ಯಶೋಗಾಥೆಯನ್ನು ತೆರೆದಿಟ್ಟಿದ್ದಾರೆ.
ಹುಟ್ಟೂರ ಭವ್ಯ ಸ್ವಾಗತದ ಕುರಿತು ಏನನ್ನಿಸುತ್ತಿದೆ ?
– ನಿಜಕ್ಕೂ ಖುಷಿಯಾಗುತ್ತಿದೆ. ನಾನು ಈ ಮಟ್ಟದ ಸ್ವಾಗತವನ್ನು ನಿರೀಕ್ಷಿಸಿರಲಿಲ್ಲ. ಹುಟ್ಟೂರ ಜನರ ಈ ಅದ್ದೂರಿ ಸ್ವಾಗತಕ್ಕೆ ನಾನು ಚಿರಋಣಿ. ಎಲ್ಲ ಕಡೆ, ಮನೆಯಲ್ಲೂ ಸಮ್ಮಾನ ನಡೆಯಿತು. ಗ್ರಾಮೀಣ ಭಾಗದಲ್ಲಿ ಬೆಳೆದ ನನ್ನ ಈ ಸಾಧನೆಗೆ ಹೆತ್ತವರು, ಗುರುಗಳು, ಊರವರು, ಈ ರಾಜ್ಯದ ಜನರೇ ಪ್ರೇರಣೆ. ಅವರ ಆಶೀರ್ವಾದ, ಬೆಂಬಲ, ಸಹಕಾರದಿಂದ ಈ ಮಟ್ಟಿಗಿನ ಯಶಸ್ಸು ಸಿಕ್ಕಿದೆ. ನಿಮ್ಮ ಸಹಕಾರವಿದ್ದರೆ ಮುಂದಿನ ಒಲಿಂಪಿಕ್ಸ್, ಏಶ್ಯನ್ ಗೇಮ್ಸ್
ನಲ್ಲೂ ಪದಕ ಗೆದ್ದು ತರುತ್ತೇನೆ.
ಭಾರತಕ್ಕೆ ಮೊದಲ ಪದಕ ಗೆದ್ದು ಕೊಟ್ಟಿದ್ದೀರಿ, ಹೇಗೆನಿಸುತ್ತಿದೆ?
– ಹೌದು, ಇದು ನಿಜಕ್ಕೂ ಹೆಮ್ಮೆಯ ಸಂಗತಿ. ನಿಜ ಹೇಳಬೇಕೆಂದರೆ ಉದ್ಘಾಟನ ಸಮಾರಂಭದ ಪಥಸಂಚಲನದಲ್ಲಿ ಭಾಗವಹಿಸಬೇಕು ಎನ್ನುವುದು ಮಹದಾಸೆಯಾಗಿತ್ತು. ಆದರೆ ಮರುದಿನ ಬೆಳಗ್ಗೆ ನನಗೆ ಮೊದಲ ಸ್ಪರ್ಧೆ ಇದ್ದುದರಿಂದ ಸಾಧ್ಯವಾಗಲಿಲ್ಲ. ದೇಶದ ಮೊದಲ ಪದಕ ಗೆಲ್ಲುವ ಅವಕಾಶವಿದೆ. ನೀನು ಮೊದಲ ಪದಕ ಗೆದ್ದರೆ ಭಾರತಕ್ಕೆ ಅದೃಷ್ಟ ತರಲಿದೆ ಎಂದು ಸ್ನೇಹಿತರೆಲ್ಲ ಹುರಿದುಂಬಿಸಿದರು. ಅಷ್ಟೊಂದು ದೊಡ್ಡ ಮಟ್ಟದ ಸ್ಪರ್ಧೆಯಲ್ಲಿ ಮೊದಲ ಬಾರಿಗೆ ಕಾಣಿಸಿಕೊಳ್ಳುತ್ತಿರುವುದರಿಂದ ಮೊದಲು ನರ್ವಸ್ ಆಗಿದ್ದೆ. ಆದರೆ ಗೆಲ್ಲಲೇಬೇಕೆಂದು ಪಣ ತೊಟ್ಟಿದ್ದೆ. ಬೆಳ್ಳಿ ಪದಕ ಗೆದ್ದೆ. ಖುಷಿಯಾಯಿತು.
ನಿಮ್ಮನ್ನು ಚುನಾವಣಾ ರಾಯಭಾರಿಯಾಗಿ ಆಯ್ಕೆ ಮಾಡಿದ್ದಾರಲ್ಲ?
– ನನಗೆ ಮಣಿಪಾಲಕ್ಕೆ ಬರುವವರೆಗೆ ಗೊತ್ತೇ ಇರಲಿಲ್ಲ. ಜಿಲ್ಲಾಧಿಕಾರಿ ಘೋಷಣೆ ಮಾಡಿದಾಗ ಖುಷಿಯ ಜತೆಗೆ ಅಚ್ಚರಿಯೂ ಆಯಿತು. ಇದೊಂದು ಮಹತ್ವದ ಹೊಣೆಗಾರಿಕೆ.
ಫಿಸಿಯೋ ಇಲ್ಲದಿರುವುದು ನಿಮಗೆ ಸಮಸ್ಯೆ ಆಗಿರಲಿಲ್ಲವೇ?
– ಭಾರತದ ಶೇ. 50ರಷ್ಟು ವೇಟ್‌ಲಿಫ್ಟರ್‌ಗಳು ಫಿಸಿಯೋ ಇಲ್ಲದೆ ಸಾಕಷ್ಟು ತೊಂದರೆ ಅನುಭವಿಸಿದರು. ನನಗೂ ಕಾಲಿಗೆ ನೋವಾಗಿತ್ತು. ನಾನು ಟೇಪ್ ಕಟ್ಟಿಕೊಂಡು ತರಬೇತಿ ಮಾಡುತ್ತಿದ್ದೆ. ಅದಕ್ಕೂ ಬಿಡುತ್ತಿರಲಿಲ್ಲ. ಲಿಫ್ಟರ್‌ಗಳು ನೋವಿನ ಮಧ್ಯೆಯೂ ಅನೇಕ ಪದಕ ಗೆದ್ದು ತಂದಿದ್ದಾರೆ.
ನೀವು ರಾಜ್ಯದಿಂದ ವೈಯಕ್ತಿಕ ಪದಕ ಗೆದ್ದ ಏಕೈಕ ಕ್ರೀಡಾಳು ಅಲ್ಲವೆ?
– ಹೌದು. ಕರ್ನಾಟಕಕ್ಕೆ ಇನ್ನಷ್ಟು ಹೆಚ್ಚಿನ ಪದಕಗಳು ಬರುವ ನಿರೀಕ್ಷೆ ಇತ್ತು. ಆದರೆ ಓರ್ವನಿಗೆ ಮಾತ್ರ ಸಿಕ್ಕಿರುವುದಕ್ಕೆ ಇಲ್ಲಿ ಕ್ರೀಡೆಗೆ ಸಿಗುತ್ತಿರುವ ಅಲ್ಪ ಪ್ರೋತ್ಸಾಹವೇ ಕಾರಣ. ಅದೇ ಹರಿಯಾಣಕ್ಕೆ 22 ಪದಕಗಳು ಬಂದಿವೆ. ಅಲ್ಲಿ ಆ್ಯತ್ಲೀಟ್‌ಗಳಿಗೆ ಭಾರೀ ಪ್ರೋತ್ಸಾಹ ನೀಡುವ ಜತೆ ಪದಕ ಗೆದ್ದವರಿಗೆ ಲಕ್ಷ, ಕೋಟಿ ರೂ. ಕೊಡುತ್ತಾರೆ. ನಮ್ಮಲ್ಲಿ ಚಿನ್ನ ಗೆದ್ದರೆ 25 ಸಾವಿರ ರೂ. ಮಾತ್ರ ಕೊಡುತ್ತಾರೆ. ನಾವು ದೇಶಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡಿ, ತರಬೇತಿಗಾಗಿ ಸಾಕಷ್ಟು ಹಣ ವ್ಯಯಸಿ, ಸ್ಪರ್ಧಿಸಿ ಪದಕ ಗೆದ್ದು ತರುತ್ತೇವೆ. ಆದರೆ ಸರಕಾರಗಳು ಇನ್ನಷ್ಟು ಪ್ರೋತ್ಸಾಹ ಕೊಡಬೇಕಾಗಿದೆ ಎಂದರು.
— ಪ್ರಶಾಂತ್ ಪಾದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.