ಸುಭಾಷ್‌ನಗರ: ನೀರಿದರೂ ಉಪಯೋಗ ಅಸಾಧ್ಯ!
Team Udayavani, Apr 20, 2018, 11:21 AM IST
ಮುನ್ನೂರು: ನೀರಿನ ಸಮಸ್ಯೆ ಪಟ್ಟಣ ಸಹಿತ ಗ್ರಾಮೀಣ ಪ್ರದೇಶವನ್ನು ಬಿಟ್ಟಿಲ್ಲ. ನೀರಿನ ಕೊರತೆಯಾದಾಗ ಜನರ ಒತ್ತಡ ಸ್ಥಳೀಯಾಡಳಿತ ಮತ್ತು ಜನಪ್ರತಿನಿಧಿಗಳ ಮೇಲೆ ಹೆಚ್ಚಾದಂತೆ ಬೋರ್‌ವೆಲ್ ಬಾವಿ ತೆರೆಯುವ ಕೆಲಸ
ಪ್ರಾರಂಭಗೊಳ್ಳುತ್ತದೆ. ಆದರೆ ಬಾವಿ ತೆರೆದ ಮೇಲೆ ಅದರ ಸುದ್ದಿಗೆ ಜನಪ್ರತಿನಿಧಿಗಳು ಹೋಗುವುದಿಲ್ಲ. ಅಂತಹದೊಂದು ಬಾವಿ ಮುನ್ನೂರು ಗ್ರಾಮದ ಸುಭಾಷ್‌ನಗರ ಬಳಿ ನಿರ್ಮಾಣಗೊಂಡು ವರ್ಷ ಕಳೆ ದರೂ ಜನರ ಉಪಯೋಗಕ್ಕೆ ಸಿಗದೆ ಪಾಳು ಬಿದ್ದಿದೆ.
ಮುನ್ನೂರು ಗ್ರಾ.ಪಂ. ವ್ಯಾಪ್ತಿಯ ಸುಭಾಷ್‌ನಗರ ಹೆಚ್ಚು ಜನವಸತಿ ಇರುವ ಪ್ರದೇಶ. ಸುಮಾರು 300ಕ್ಕೂ ಹೆಚ್ಚು ಮನೆಗಳಿವೆ. ಎಪ್ರಿಲ್ ತಿಂಗಳ ಬಳಿಕ ಇಲ್ಲಿ ನೀರಿನ ಸಮಸ್ಯೆ ಪ್ರಾರಂಭಗೊಳ್ಳುತ್ತದೆ. ನೀರಿನ ಸಮಸ್ಯೆ ಹೆಚ್ಚಾದಾಗ ಈ ಪ್ರದೇಶದ ಜನರ ಬೇಡಿಕೆಯಂತೆ ಮೂರು ವರ್ಷದ ಹಿಂದೆ ಜಿ.ಪಂ. ಸದಸ್ಯರಾಗಿದ್ದ ಎನ್.ಎಸ್. ಕರೀಂ ಜಿ. ಪಂ. ನಿಧಿಯಡಿ ಕುಡಿಯುವ ನೀರಿಗಾಗಿ ಬಾವಿ ಮಂಜೂರು ಮಾಡಿಸಿದ್ದರು. ಬಾವಿ ನಿರ್ಮಾಣಗೊಂಡು ಮೂರು ವರ್ಷ ಕಳೆದರೂ ಬಾವಿಯಲ್ಲಿ ನೀರಿದ್ದರೂ ಜನರ ಬಳಕೆಗೆ ಲಭ್ಯವಾಗಿಲ್ಲ.
8.5 ಲಕ್ಷ ರೂ. ಖರ್ಚು
ಈ ಪ್ರದೇಶದ ಜನರಿಗೆ ಶಾಶ್ವತ ಕುಡಿಯುವ ನೀರು ಮತ್ತು ಸ್ಥಳೀಯರಿಗೆ ನೀರು ಸೇದುವ ನಿಟ್ಟಿನಲ್ಲಿ ಸುಮಾರು 8.5 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತ ಬಾವಿ ನಿರ್ಮಾಣ ನಡೆಸಲಾಗಿತ್ತು. ಆದರೆ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಈ ಬಾವಿಯನ್ನು ಬಳಸಲು ಸಾಧ್ಯವಾಗುತ್ತಿಲ್ಲ. ದೊಡ್ಡ ಮಟ್ಟದಲ್ಲಿ ಬಾವಿ ನಿರ್ಮಾಣವಾಗಿದ್ದರು. ಬಾವಿಯ ಕೆಳ ಹಂತದವರೆಗೂ ಕಾಂಕ್ರೀಟ್ ನಡೆಸಿ ದ್ದರಿಂದ ನೀರಿನ ಸೆಳೆ ಕಾಂಕ್ರೀಟ್‌ನಿಂದ ಸುತ್ತುವರೆದಿದೆ. ತಳ ಭಾಗದಲ್ಲಿ ಮಾತ್ರ ರಿಂಗ್ ಹಾಕಿದ್ದು, ನೀರಿದ್ದರೂ ಬಳಕೆಗೆ ಸಾಧ್ಯವಾಗುತ್ತಿಲ್ಲ. ಮೂರು ವರ್ಷದಿಂದ ನೀರು ತೆಗೆಯದ ಕಾರಣ ನೀರು ಹಾಳಾ ಗಿದ್ದು, ಕಸಕಡ್ಡಿಗಳು ಬಾವಿಯೊಳಗೆ ಬಿದ್ದಿವೆ. ಇನ್ನೊಂದೆಡೆ ನೀರೆತ್ತಲು ಹಾಕಿ ರುವ ರಾಟೆಯ ಕಂಬಗಳು ಮತ್ತು ಸುತ್ತುಗೋಡೆ ಕಳಪೆಯಾಗಿದ್ದು, ಜನರು ನೀರು ಸೇದಲು ಭಯಪಡುತ್ತಿದ್ದಾರೆ. ಈ ಬಾವಿಯನ್ನು ಸರಿಯಾಗಿ ನಿರ್ವಹಣೆ ಮಾಡಿದರೆ ಸ್ಥಳೀಯವಾಗಿ ಕುಡಿಯುವ ನೀರಿನ ಸಮಸ್ಯೆ ನೀಗಿಸಬಹುದು ಎನ್ನುತ್ತಾರೆ ಸ್ಥಳೀಯರು.
ದುರಸ್ತಿಗೆ ಯೋಜನೆ
ಬಾವಿಯೊಳಗೆ ಅವೈಜ್ಞಾನಿಕವಾಗಿ ಕಾಂಕ್ರೀಟ್ ಹಾಕಿದ್ದರಿಂದ ಜನ ರಿಗೆ ಈ ನೀರನ್ನು ಬಳಸಲು ಸಾಧ್ಯವಾಗುತ್ತಿಲ್ಲ. ಈಗಾಗಲೇ ಎಂಜಿನಿಯರ್ ಗಳನ್ನು ಕರೆಸಿ ಬಾವಿಯನ್ನು ದುರಸ್ತಿ ಮಾಡುವ ನಿಟ್ಟಿನಲ್ಲಿ ಯೋಜನೆ ರೂಪಿಸಿ ಜಿ. ಪಂ. ಗೆ ನೀಡಿದ್ದು, ಕ್ಷೇತ್ರದ ಸುಭಾಷ್‌ನಗರದ ಈ ಬಾವಿ ಮತ್ತು ಸಂತೋಷ್ ನಗರದ ಬಾವಿಯ ದುರಸ್ತಿಗೆ ಸಂಬಂಧಿಸಿದಂತೆ ಅನುದಾನ ಮಂಜೂರಾದರೆ ಶೀಘ್ರವೇ ಕಾಮಗಾರಿ ಪ್ರಾರಂಭಿಸಲಾಗುವುದು.
-ಧನಲಕ್ಷ್ಮಿ ಗಟ್ಟಿ ಸದಸ್ಯರು, ಜಿ.ಪಂ.
ಕಳಪೆ ಕಾಮಗಾರಿ
ಬಾವಿ ನಿರ್ಮಾಣವಾದ ಸ್ಥಳದಲ್ಲಿ ನೀರಿನ ಮೂಲ ದೊಡ್ಡದಿದೆ. ಆದರೆ ಕಳಪೆ ಕಾಮಗಾರಿ ಮತ್ತು ಗುತ್ತಿಗೆದಾರರ ಅಸಡ್ಡೆಯಿಂದ ಸರಕಾರದ ಹಣ ಪೋಲಾಗುತ್ತಿದೆ. ನಿರ್ಮಾಣ ಸಂದರ್ಭದಲ್ಲಿ ಕಾಂಕ್ರೀಟ್ ಹಾಕದಂತೆ ಮನವಿ ಮಾಡಲಾ ಗಿತ್ತು. ಸ್ಪಂದನೆ ಸಿಕ್ಕಿರಲಿಲ್ಲ. ಹೀಗಾಗಿ ಮೂರು ವರ್ಷವಾದರೂ ಬಾವಿಯ ನೀರು ಉಪಯೋಗಕ್ಕಿಲ್ಲದಂತಾಗಿದೆ.
-ಡೆನ್ನಿಸ್ ಲೋಬೋ ಸ್ಥಳೀಯ ನಿವಾಸಿ.
ವಸಂತ್ ಎನ್. ಕೊಣಾಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ
Kambli Health: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!
Unlock Raghava Movie: ರಾಘವನ ಮೇಲೆ ಕಣ್ಣಿಟ್ಟ ರಚೆಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.