ಬಿಇಎಲ್‌ನಿಂದ ಆಯೋಗಕ್ಕೆ “ಮಾರ್ಕ್-3′ ಇವಿಎಂಗಳ ಪೂರೈಕೆ
Team Udayavani, Apr 20, 2018, 11:47 AM IST
ಬೆಂಗಳೂರು: ದೇಶದಲ್ಲಿ ಇದೇ ಮೊದಲ ಬಾರಿ ಮತದಾನಕ್ಕೆ ಬಳಸಲಾಗುತ್ತಿರುವ “ಮಾರ್ಕ್-3′ ತಂತ್ರಜ್ಞಾನದ ಎಲೆಕ್ಟ್ರಾನಿಕ್ ವೋಟಿಂಗ್ ಮೆಷೀನ್‌ಗಳು (ಇವಿಎಂ) ಶುಕ್ರವಾರ ಚುನಾವಣಾ ಆಯೋಗಕ್ಕೆ ಪೂರೈಕೆಯಾಗಲಿವೆ.
ಭಾರತ್ ಎಲೆಕ್ಟ್ರಾನಿಕ್ ಲಿಮಿಟೆಡ್ (ಬಿಇಎಲ್) ಸಂಸ್ಥೆ ಮಾರ್ಕ್-3 ತಂತ್ರಜ್ಞಾನದ ಮತಯಂತ್ರಗಳನ್ನು ಅಭಿವೃದ್ಧಿಪಡಿಸಿದ್ದು, ಶುಕ್ರವಾರ ನಗರ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಕಂಟ್ರೋಲ್ ಯೂನಿಟ್ ಹಾಗೂ ಬ್ಯಾಲೆಟ್ ಯೂನಿಟ್‌ಗಳನ್ನು ಪೂರೈಸಲಿದೆ.
ಈವರೆಗೆ ದೇಶದಲ್ಲಿ ಮಾರ್ಕ್-2 ತಂತ್ರಜ್ಞಾನದ ಇವಿಎಂಗಳನ್ನು ಬಳಸಲಾಗುತ್ತಿದ್ದು, ಮೊದಲ ಬಾರಿಗೆ ಬೆಂಗಳೂರಿನ ಹಲವು ವಿಧಾನಸಭಾ ಕ್ಷೇತ್ರಗಳಲ್ಲಿ ಮಾರ್ಕ್-3 ಇವಿಎಂಗಳನ್ನು ಬಳಸಲು ಚುನಾವಣಾ ಆಯೋಗ ಮುಂದಾಗಿದೆ. ಅದರಂತೆ ಒಟ್ಟು 5 ಸಾವಿರ ಇವಿಎಂಗಳು ಆಯೋಗಕ್ಕೆ ರವಾನೆಯಾಗಲಿದ್ದು, ಆ ಪೈಕಿ 3250 ಇವಿಎಂಗಳನ್ನು ಬಳಸಲಾಗುತ್ತದೆ.
ಮಾರ್ಕ್-3 ಇವಿಎಂ ವಿಶೇಷತೆ: ಸದ್ಯ ಲಭ್ಯವಿರುವ ಮಾರ್ಕ್-2 ಇವಿಎಂನ ಕಂಟ್ರೋಲ್ ಯೂನಿಟ್‌ಗಳಿಗೆ ತಲಾ 16 ಅಭ್ಯರ್ಥಿಗಳ ಹೆಸರಿರುವ 4 ಬ್ಯಾಲೆಟ್ ಯೂನಿಟ್‌ಗಳನ್ನು ಜೋಡಣೆ ಮಾಡಬಹುದಾಗಿದೆ. ಆದರೆ, ಮಾರ್ಕ್- 3 ಕಂಟ್ರೋಲ್ ಯೂನಿಟ್‌ಗಳಿಗೆ 14 ಬ್ಯಾಲೆಟ್ ಯೂನಿಟ್‌ಗಳನ್ನು ಜೋಡಣೆ ಮಾಡಬಹುದಾಗಿದ್ದು, 384 ಅಭ್ಯರ್ಥಿಗಳ ಹೆಸರುಗಳನ್ನು ಸೇರಿಸಲು ಅವಕಾಶವಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಮಂಜುನಾಥ ಪ್ರಸಾದ್ ಹೇಳಿದರು.
ಮಾರ್ಕ್- 3 ಕಂಟ್ರೋಲ್ ಯೂನಿಟ್ ಹಾಗೂ ಬ್ಯಾಲೆಟ್ ಯೂನಿಟ್‌ಗಳು ಹಾರ್ಡ್‌ವೇರ್ ಅಳವಡಿಸಿದರೆ ಕೂಡಲೇ ಡಿಜಿಟಲ್ ಪ್ರಮಾಣೀಕರಣದ ಮೂಲಕ ಪತ್ತೆ ಮಾಡಿ ಸೂಚನೆ ನೀಡುತ್ತದೆ. ಜತೆಗೆ ಅತ್ಯಂತ ನಿಖರ ಫಲಿತಾಂಶ ನೀಡುವ ಸಾಮರ್ಥ್ಯ ಹೊಂದಿದೆ ಎಂದು ಮಾಹಿತಿ ನೀಡಿದ್ದಾರೆ.
ಮಾರ್ಕ್-3 ಇವಿಎಂ ಬಳಕೆ ಎಲ್ಲೆಲ್ಲಿ?: ಬಿಬಿಎಂಪಿ ಕೇಂದ್ರದ ರಾಜರಾಜೇಶ್ವರಿನಗರ, ಶಿವಾಜಿನಗರ, ಶಾಂತಿನಗರ, ಗಾಂಧಿನಗರ, ಚಾಮರಾಜಪೇಟೆ, ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರಗಳು ಹಾಗೂ ಬಿಬಿಎಂಪಿ ದಕ್ಷಿಣದ ಗೋವಿಂದರಾಜನಗರ, ವಿಜಯನಗರ, ಬಸವನಗುಡಿ, ಪದ್ಮನಾಭನಗರ, ಬಿಟಿಎಂ ಬಡಾವಣೆ ವಿಧಾನಸಭಾ ಕ್ಷೇತ್ರಗಳಲ್ಲಿ ಮಾರ್ಕ್-3 ಇವಿಎಂಗಳನ್ನು ಬಳಸಲಾಗುತ್ತದೆ.
ದೇಶದಲ್ಲಿ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಬಳಸಲು ಉದ್ದೇಶಿಸಿರುವ ಮಾರ್ಕ್-3 ತಂತ್ರಜ್ಞಾನ ಇವಿಎಂಗಳು ಶುಕ್ರವಾರ ಆಯೋಗಕ್ಕೆ ಪೂರೈಕೆಯಾಗಲಿದ್ದು, ಅಧಿಕಾರಿಗಳು ಪ್ರಾಥಮಿಕ ಹಂತದ ಪರೀಕ್ಷೆ ನಡೆಸಲಿದ್ದಾರೆ.
-ಎನ್.ಮಂಜುನಾಥ ಪ್ರಸಾದ್, ನಗರ ಚುನಾಣಾಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf: ರೈತರಿಗೆ ನೀಡಿರುವ ನೋಟಿಸ್ ತಕ್ಷಣ ವಾಪಸ್: ಅಧಿಕಾರಿಗಳಿಗೆ ಸಿಎಂ ಖಡಕ್ ಸೂಚನೆ
Kannada Rajyotsava: ಪಾಲಿಕೆ ಆಡಳಿತದಲ್ಲಿ ಸಂಪೂರ್ಣ ಕನ್ನಡ: ತುಷಾರ್
Bengaluru: ಅಕ್ರಮವಾಗಿ ಪಟಾಕಿ ಮಾರಾಟ; 2 ದಿನಗಳಲ್ಲಿ 56 ಕೇಸು ದಾಖಲು
Deepavali: ಐಟಿ ಸಿಟಿಯಲ್ಲಿ ಬೆಳಕಿನ ಹಬ್ಬದ ರಂಗು
Bengaluru: ಬ್ಯಾಗ್ ಪರಿಶೀಲನೆ ವೇಳೆ ವಿಮಾನ ನಿಲ್ದಾಣ ಸಿಬ್ಬಂದಿಗೆ ಬೆದರಿಕೆ: ಕೇಸ್
MUST WATCH
ಹೊಸ ಸೇರ್ಪಡೆ
Waqf ವಿಷಯ ಮುಗಿದು ಹೋಗಿದೆ.. ಬಿಜೆಪಿಯವರಿಂದ ಗೊಂದಲ: ಲಕ್ಷ್ಮಣ ಸವದಿ
Dandeli: ಅಪರಿಚಿತ ವಾಹನ ಡಿಕ್ಕಿ; ಕರು ಸಾವು
Covid ಗಿಂತ ಬಿಜೆಪಿ ಭ್ರಷ್ಟಾಚಾರದಿಂದ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ: ಖಂಡ್ರೆ
Delhi: ಕ್ಷುಲ್ಲಕ ಕಾರಣಕ್ಕೆ 19ರ ಯುವಕನ ಗುಂಡಿಕ್ಕಿ ಹ*ತ್ಯೆಗೈದ ಅಪ್ರಾಪ್ತರು!!
BBK11: ಬಿಗ್‌ಬಾಸ್ ಆಟ ನಿಲ್ಲಿಸಿದ ಖ್ಯಾತ ಸ್ಪರ್ಧಿ.. ಈ ವಾರ ಆಚೆ ಬರುವುದು ಇವರೇ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.