ಇವಿಎಂ-ವಿವಿ ಪ್ಯಾಟ್ ಯಂತ್ರಗಳ ಸಂದೇಹವೇ ಬೇಡ
Team Udayavani, Apr 20, 2018, 2:34 PM IST
ಬಳ್ಳಾರಿ: ಚುನಾವಣೆಗೆ ಸಂಬಂಧಿಸಿದ ಇವಿಎಂ ಮತ್ತು ವಿವಿಪ್ಯಾಟ್ಸ್ ಯಂತ್ರಗಳು ಅತ್ಯಂತ ನಿಖರತೆಯಿಂದ ಕೂಡಿದ್ದು, ಇವುಗಳ ಬಗ್ಗೆ ಯಾವುದೇ ರೀತಿಯ ಗೊಂದಲ ಮತ್ತು ಸಂದೇಹಗಳು ಬೇಡ ಎಂದು ಚುನಾವಣಾ ಮಾಸ್ಟರ್ ಟ್ರೇನರ್ ಸುರೇಶಬಾಬು ಹೇಳಿದರು. ಜಿಲ್ಲಾ ನ್ಯಾಯಾಲಯದ ಬಾರ್ ಅಸೋಸಿಯೇಶನ್ ಸಭಾಂಗಣದಲ್ಲಿ ಇವಿಎಂ ಮತ್ತು ವಿವಿ ಪ್ಯಾಟ್‌ಗಳಿಗೆ ಸಂಬಂಧಿಸಿದಂತೆ ಗುರುವಾರ ಏರ್ಪಡಿಸಿದ್ದ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಚುನಾವಣೆಗೆ ಸಂಬಂಧಿಸಿದಂತೆ ಇವಿಎಂ ಮತ್ತು ವಿವಿ ಪ್ಯಾಟ್ಸ್‌ಗಳು ಅತ್ಯಂತ ನಿಖರತೆಯಿಂದ ಕೂಡಿವೆ. ಮತದಾರರು ತಾವು ಹಾಕಿ ಮತ ಯಾವ ಅಭ್ಯರ್ಥಿಗೆ ಬಿದ್ದಿದೆ ಎಂಬುದನ್ನು ವಿವಿ ಪ್ಯಾಟ್ಸ್ ಮಶೀನ್ ಖಚಿತಪಡಿಸಲಿದ್ದು, ವಿವಿ ಪ್ಯಾಟ್ ಮಷಿನ್ 7 ಸೆಕೆಂಡ್‌ಗಳ ಕಾಲ ಪ್ರದರ್ಶಿಸುವ ಚೀಟಿಯಲ್ಲಿ ಸೂಚಿಸಿದ ಅಭ್ಯರ್ಥಿಗೆ ಮತ ಬಿದ್ದಿದೆಯಾ, ಅಭ್ಯರ್ಥಿಯ ಕ್ರಮ ಸಂಖ್ಯೆಯನ್ನು ವೀಕ್ಷಿಸಿ, ಖಚಿತ ಪಡಿಸಿಕೊಳ್ಳಬಹುದಾಗಿದೆ. ವಿವಿ ಪ್ಯಾಟ್ ಪೆಟ್ಟಿಗೆಯಲ್ಲಿ ಸಂಗ್ರಹವಾಗುವ ಅಭ್ಯರ್ಥಿಗಳಿಗೆ ಹಾಕಿದ ಮತದ ಚೀಟಿಗಳನ್ನು 5 ವರ್ಷಗಳ ಕಾಲ ಅವುಗಳನ್ನು ಭದ್ರವಾಗಿ ಸಂಗ್ರಹಿಸಿಡಲಾಗುವುದು ಎಂದು ತಿಳಿಸಿದರು.
ಇವಿಎಂ ಮತ್ತು ವಿವಿ ಪ್ಯಾಟ್ಸ್‌ಗಳ ಸಂಪೂರ್ಣ ಪ್ರಕ್ರಿಯೆಯನ್ನು ಪ್ರಾತ್ಯಕ್ಷಿಕೆ ಮೂಲಕ ವಿವರವಾಗಿ ಸುರೇಶಬಾಬು ಅವರು ಸಭೆಗೆ ತಿಳಿಸಿದರು. ಸಭೆಯಲ್ಲಿದ್ದ ನ್ಯಾಯಾಧೀಶರು ಮತ್ತು ವಕೀಲರು ಮತ ಹಾಕುವುದರ ಮೂಲಕ ತಮ್ಮ ಮತ ಯಾವ ಅಭ್ಯರ್ಥಿಗಳಿಗೆ ಹಾಕಿದ್ದೇವೆ ಎಂಬುದನ್ನು ಕನ್ಪರ್ಮ್ ಮಾಡಿಕೊಂಡರು. ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಬಿ.ಸಿ.ಬಿರಾದಾರ್, ನ್ಯಾಯಾಧೀಶರಾದ ಕ್ಯಾತ್ಯಾಯಿನಿ, ಎಸ್.ಬಿ.ಹಂದ್ರಾಳ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ನಾಗೇಶ ಬಿಲ್ವಾ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಡಿ.ಎಸ್. ಬದರಿನಾಥ, ಕಾರ್ಯದರ್ಶಿ ರವಿರಾಜಶೇಖರ ರೆಡ್ಡಿ, ಇವಿಎಂ ಮತ್ತು ವಿವಿ ಪ್ಯಾಟ್ ನೋಡಲ್ ಅಧಿಕಾರಿ ವಿಠ್ಠಲರಾಜು, ಮಾಸ್ಟರ್ ಟ್ರೇನರ್ ಪನಮೇಶಲು ಮತ್ತು ಜಿಲ್ಲಾ ಚುನಾವಣಾ ಆಯೋಗದ ಸಿಬ್ಬಂದಿ ನಿರಂಜನ ಮೂರ್ತಿ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Sandur By Election; ಕುಟುಂಬ ಸಮೇತ ಮತದಾನ ಮಾಡಿದ ಸಂಸದ ತುಕಾರಾಂ
Kampli: ಸ.ಹಿ.ಪ್ರಾ. ಶಾಲೆಯ ಬಿಸಿಯೂಟದಲ್ಲಿ ಹಲ್ಲಿ; 26ಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥ
Sanduru: ಕಾಂಗ್ರೆಸ್‌ಗೆ ಕ್ಷೇತ್ರ ಉಳಿಸಿಕೊಳ್ಳುವ ತವಕ, ಕಸಿದುಕೊಳ್ಳಲು ಬಿಜೆಪಿ ಪ್ರಯತ್ನ
Covid Scam: ನ್ಯಾ.ಡಿ.ಕುನ್ಹಾ ವರದಿ ವಿಪಕ್ಷಗಳ ಬೆದರಿಸುವ ತಂತ್ರ: ಬಿ.ವೈ.ವಿಜಯೇಂದ್ರ
MUST WATCH
ಹೊಸ ಸೇರ್ಪಡೆ
IPL Auction: ಸಂಪೂರ್ಣ ಐಪಿಎಲ್ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್
Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ
Bhairathi Ranagal Review: ರೋಣಾಪುರದ ರಣಬೇಟೆಗಾರ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.