ಶಿವಾಚಾರ್ಯ ಮಹಾ ಸ್ವಾಮೀಜಿಯ ಸಂಕಲ್ಪ ಸಿದ್ಧಿ ಉತ್ಸವಕ್ಕೆ ಚಾಲನೆ
Team Udayavani, Apr 20, 2018, 3:45 PM IST
ಸೊಲ್ಲಾಪುರ: ನಗರದ ಬೃಹನ್ಮಠ ಹೋಟಗಿ ಮಠದ ಪರಮ ಪೂಜ್ಯ ಲಿಂಗೈಕ್ಯ ಷ. ಬ್ರ. ತಪೋರತ್ನಂ ಯೋಗಿರಾಜೇಂದ್ರ ಶಿವಾಚಾರ್ಯ ಮಹಾ ಸ್ವಾಮೀಜಿಯವರ ಸಂಕಲ್ಪಸಿದ್ಧಿ ಕಾರ್ಯ ಮಹೋತ್ಸವವು ಎ. 17 ರಂದು ಚಾಲನೆಗೊಂಡಿತು.
ಅಂದು ಬೆಳಗ್ಗೆ 7ರಿಂದ ಭವ್ಯ ಮೆರವಣಿಗೆಯ ಮೂಲಕ ಉತ್ಸವವು ಪ್ರಾರಂಭವಾಗಿದ್ದು ಸುಮಾರು 3 ಸಾವಿರ ಸುಮಂಗಲೆಯರು ಜಲ ಕುಂಭದೊಂದಿಗೆ ಪಾಲ್ಗೊಂಡಿದ್ದರು. ಮುಂಜಾನೆ ಪಂಚಾಚಾರ್ಯ ಧ್ವಜಾರೋಹಣದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಗೌಡಗಾಂವ್‌ನ ಪೂಜ್ಯ ಡಾ| ಜಯಸಿದ್ಧೇಶ್ವರ ಸ್ವಾಮೀಜಿ, ಚಿಟಗುಪ್ಪದ ಗುರಲಿಂಗ ಶ್ರೀಗಳು, ಮಾಗಣ ಕೇರಿಯ ವಿಶ್ವಾರಾಧ್ಯ ಶ್ರೀಗಳು, ನಾಗಣಸೂರದ ಶ್ರೀಕಂಠ ಶ್ರೀಗಳು, ಮಂದ್ರೂಪದ ರೇಣುಕ ಶ್ರೀಗಳು, ಪಾನಮಂಗಳೂರಿನ ಶಿವಯೋಗಿ ಶ್ರೀಗಳ ಸಾನ್ನಿಧ್ಯದಲ್ಲಿ ಧ್ವಜಾರೋಹಣ ನಡೆಯಿತು.
ಹೋಟಗಿ ಮಠದ ಪೂಜ್ಯ ಡಾ| ಮಲ್ಲಿಕಾರ್ಜುನ ಶಿವಾಚಾರ್ಯ ಮಹಾ ಸ್ವಾಮೀಜಿ ಅವರ ನೇತೃತ್ವದಲ್ಲಿ ಹಮ್ಮಿಕೊಂಡ ಮೆರವಣಿಗೆಯಲ್ಲಿ ಮಾಜಿ ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಅವರು ಶ್ರೀಶೈಲ ಪೀಠದ ಆದ್ಯ ಜಗದ್ಗುರು ಪಂಡಿತಾರಾಧ್ಯ ಭಗವತ್ಪಾದರ ಪ್ರತಿಮೆಗೆ ಪೂಜೆ ಸಲ್ಲಿಸಿ, ಶಿವಲಿಂಗ ಮತ್ತು ಗೋಮಾತೆಗೆ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.
ಸಿದ್ಧೇಶ್ವರ ಮಂದಿರದಿಂದ ವೀರತಪಸ್ವಿ ಮಂದಿರದ ವರೆಗೆ 1008 ಶಿವಲಿಂಗ, 1008 ಗೋಮಾತೆ, 1008 ಸುಮಂಗಲೆಯರ ಜಲಕುಂಭ, 1008 ವೀರಶೈವ ಧರ್ಮಗ್ರಂಥ ಸಿದ್ಧಾಂತ ಶಿಖಾಮಣಿ ಗ್ರಂಥೋತ್ಸವದ ಅದ್ದೂರಿ ಮೆರವಣಿಗೆ ನಡೆಯಿತು.
ಮೆರವಣಿಗೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿಜಯ ಕುಮಾರ್ ದೇಶು¾ಖ್, ಶಾಸಕ ಸಿದ್ಧರಾಮ ಮೆØàತ್ರೆ, ಮೇಯರ್ ಶೋಭಾ ಬನಶೆಟ್ಟಿ, ಪೊಲೀಸ್ ಆಯುಕ್ತ ಮಹಾದೇವ ತಾಂಬಡೆ, ಮಾಜಿ ಶಾಸಕ ಶಿವಶರಣ ಪಾಟೀಲ್, ರಾಜಶೇಖರ ಶಿವದಾರೆ, ಕಾಂಗ್ರೆಸ್ ಶಹರ ಅಧ್ಯಕ್ಷ ಪ್ರಕಾಶ ವಾಲೆ, ಸೊಲ್ಲಾಪುರ ವಿವಿಯ ಮಾಜಿ ಕುಲಪತಿ ಈರೇಶ ಸ್ವಾಮಿ, ನಗರಸೇವಕ ಶಿವಾನಂದ ಪಾಟೀಲ್, ಚೇತನ ನರೂಟೆ, ಡಾ| ಕಿರಣ್ ದೇಶು¾ಖ್, ನಾಗೇಶ ಬೋಗಡೆ, ಅಮರ ಕೂದಾಲೆ, ನಗರಸೇವಿಕಾ ಅಂಬಿಕಾ ಪಾಟೀಲ್, ನರೇಂದ್ರ ಗಂಭೀರೆ, ಕೇದಾರ ಉಂಬರಜೆ, ಸಕಲೇಶ ಚಾಕೋತೆ, ತಮ್ಮಾ ಮಸರೆ, ರಾಜಶೇಖರ ಹಿರೇಹಬ್ಬು, ವಿರಾಜ ಪಾಟೀಲ್ ಸೇರಿದಂತೆ ಭಕ್ತರು ಉಪಸ್ಥಿತರಿದ್ದರು.
ಮೆರವಣಿಗೆ ಮಂದಿರ ತಲು ಪಿದ ಅನಂತರ ಮಧ್ಯಾಹ್ನ 1008 ಸುಮಂಗಲೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನೆರವೇರಿತು. ಮೊದಲಿಗೆ ಮೇಯರ್ ಶೋಭಾ ಬನಶೆಟ್ಟಿ ಅವರಿಗೆ ಉಡಿತುಂಬಿಸುವ ಭಾಗ್ಯ ಒಲಿದು ಬಂದಿತ್ತು. ಬೆಳಗ್ಗೆಯಿಂದ ಸಾಯಂಕಾಲದವರೆಗೂ ದರ್ಶನಕ್ಕೆ ಭಕ್ತರ ದಂಡು ಹರಿದು ಬರುತ್ತಿತ್ತು. ಈ ಸಂಕಲ್ಪಸಿದ್ಧಿ ಮಹೋತ್ಸವದಲ್ಲಿ ಮಹಾರಾಷ್ಟ್ರ ಸೇರಿದಂತೆ ಕರ್ನಾಟಕ ಹಾಗೂ ಆಂಧ್ರದ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.
ಮೆರವಣಿಗೆ ಮಾರ್ಗದ ರಸ್ತೆ ಯಲ್ಲಿ ಬಣ್ಣ-ಬಣ್ಣದ ರಂಗೋಲಿ ಹಾಕಲಾಗಿತ್ತು. ಅಲ್ಲಲ್ಲಿ ಮೆರವಣಿಗೆಗೆ ಪುಷ್ಪವೃಷ್ಟಿಗೈಯುವ ಮೂಲಕ ಮೆರವಣಿಗೆಗೆ ಸ್ವಾಗತ ಕೋರಿದರು.
ಮೆರವಣಿಗೆಯಲ್ಲಿ ಪಾಲ್ಗೊಂಡ ಭಕ್ತರಿಗೆ ವಿವಿಧ ಸಂಘ-ಸಂಸ್ಥೆಗಳ ಕಾರ್ಯಕರ್ತರು ಹಣ್ಣು ಮತ್ತು ನೀರು ವಿತರಣೆಗೈದರು.
10 ಕುದುರೆಗಳು, ಎತ್ತಿನ ಬಂಡಿ, ಎರಡು ರಥ, ತೆರೆದ ವಾಹನ ದಲ್ಲಿ ಪರಮಪೂಜ್ಯ ಲಿಂಗೈಕ್ಯ ಷ. ಬ್ರ. ತಪೋರತ್ನಂ ಯೋಗಿ ರಾಜೇಂದ್ರ ಶಿವಾಚಾರ್ಯ ಮಹಾ ಸ್ವಾಮೀಜಿ ಅವರ ಮೂರ್ತಿ ಮೆರವಣಿಗೆ ನೆರವೇರಿತು. ಆಳಂದ ಶಾಸಕ ಬಿ. ಆರ್. ಪಾಟೀಲ್ ಮತ್ತು ಸೋಮನಾಥ ರಗಬಲೆ ಇವರು ಮಹಾಪ್ರಸಾದ ವ್ಯವಸ್ಥೆ ಕಲ್ಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desiswara: ನ್ಯೂಯಾರ್ಕ್ ಸರಕಾರದಿಂದ ಭರ್ಜರಿ ದೀಪಾವಳಿ ಆಚರಣೆ
Desiswara: ಜಾಗತಿಕ ಬೆಳಕಿನ ಹಬ್ಬ ದೀಪಾವಳಿ – ಬೆಳಕೆಂದರೆ ಬರಿಯ ಬೆಳಕಲ್ಲ…
Desiswara: ಕನ್ನಡ ಉಳಿವಿಗೆ ಜವಾಬ್ದಾರಿಯುತ ನಡೆ ನಮ್ಮದಾಗಲಿ
Kannada Alphanbets: “ಕ’ ಕಾರದಲ್ಲಿನ ವಿಶೇಷ: ಕನ್ನಡ ಅಕ್ಷರಮಾಲೆಯಲ್ಲಿನ “ಕ’ ಕಾರ ವೈಭವ
ನ.9: ವಿಶ್ವ ಕನ್ನಡ ಹಬ್ಬ: ಈ ಬಾರಿ ಸಿಂಗಾಪುರದಲ್ಲಿ ರಂಗೇರಲಿರುವ ಸಂಭ್ರಮ
MUST WATCH
ಹೊಸ ಸೇರ್ಪಡೆ
Bagheera: 3ನೇ ದಿನವೂ ಮುಂದುವರೆದ ʼಬಘೀರʼ ಬಾಕ್ಸಾಫೀಸ್ ಓಟ; ಗಳಿಸಿದ್ದೆಷ್ಟು?
Waqf ಗೆಜೆಟ್ ನೋಟಿಫಿಕೇಶನ್ ನಲ್ಲಿ ಬಿಜೆಪಿ ಪಾಲಿದೆ: ಎಚ್.ಕೆ. ಪಾಟೀಲ್ ಕಿಡಿ
Waqf ವಿಷಯ ಮುಗಿದು ಹೋಗಿದೆ.. ಬಿಜೆಪಿಯವರಿಂದ ಗೊಂದಲ: ಲಕ್ಷ್ಮಣ ಸವದಿ
Dandeli: ಅಪರಿಚಿತ ವಾಹನ ಡಿಕ್ಕಿ; ಕರು ಸಾವು
Covid ಗಿಂತ ಬಿಜೆಪಿ ಭ್ರಷ್ಟಾಚಾರದಿಂದ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ: ಖಂಡ್ರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.