ಕಾಪು: ಕಡಲು, ಕೈಗಾರಿಕೆಗಳ ಸಂಗಮ ಕ್ಷೇತ್ರವಿದು


Team Udayavani, Apr 21, 2018, 8:15 AM IST

Namma-Pranalike-600.jpg

ಬ್ರಿಟಿಷರಿಂದ 1901ರಲ್ಲಿ ಸ್ಥಾಪನೆಯಾದ ಪ್ರಖ್ಯಾತ ದೀಪಸ್ಥಂಭ ಹೊಂದಿರುವ ಕಾಪು ಸುಂದರ ಕಡಲ ಕಿನಾರೆಗೆ ಪ್ರಸಿದ್ಧವಾಗಿರುವಂತೆ ಕೈಗಾರಿಕೆಗಳಿಂದಲೂ ಗುರುತಿಸಲ್ಪಟ್ಟಿದೆ. ಪ್ರವಾಸೋದ್ಯಮ, ಬಂದರು, ಉದ್ಯೋಗ, ಕುಡಿಯುವ ನೀರು, CRZ ಕಾಯ್ದೆಗೆ ತಿದ್ದುಪಡಿ, ಉದ್ಯೋಗಾವಕಾಶಗಳು ಹೀಗೆ ಉಲ್ಲೇಖಗೊಳ್ಳುತ್ತವೆ ಇಲ್ಲಿನ ಆಗ್ರಹಗಳು.

1. ಕುಡಿಯುವ ನೀರು
ಕ್ಷೇತ್ರ ವ್ಯಾಪ್ತಿಯಲ್ಲಿ ಐದು ಹೊಳೆಗಳು ಹರಿಯುತ್ತಿದ್ದು, ಈ ನದಿಗಳ ನೀರನ್ನು ಸಂಗ್ರಹಿಸಿ, ಶುದ್ಧೀಕರಿಸಿ ಮನೆ ಮನೆಗೆ ವಿತರಿಸಲು ಅನುಕೂಲವಾಗುವಂತೆ ಶಾಶ್ವತ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಳ್ಳಬೇಕಿದೆ.

2. ಸ್ವ-ಉದ್ಯೋಗ
ಇಲ್ಲಿ ವಿದ್ಯಾವಂತ ಯುವಕರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದ್ದು, ಅದರ ಜತೆಗೆ ವಿದ್ಯಾವಂತ ನಿರುದ್ಯೋಗಿಗಳ ಸಂಖ್ಯೆಯೂ ವೃದ್ಧಿಸಿದೆ. ಈ ನಿಟ್ಟಿrನಲ್ಲಿ ಸ್ವಉದ್ಯೋಗಕ್ಕೆ ಒತ್ತು ನೀಡುವ ಉದ್ದಿಮೆಗಳ ಸ್ಥಾಪನೆಯಾಗಬೇಕಿದೆ.

3. ಬಂದರು ಅಭಿವೃದ್ಧಿ
ಕಾಪು ವಿಧಾನಸಭಾ ಕ್ಷೇತ್ರದ ಕರಾವಳಿ ತೀರದ ಜನತೆಯ ಬಹುಕಾಲದ ಕನಸಾಗಿರುವ ಹೆಜಮಾಡಿ ಬಂದರು 
ಅಭಿವೃದ್ಧಿ ಯೋಜನೆಗೆ ಶೀಘ್ರದಲ್ಲಿ ಚಾಲನೆ ದೊರಕಬೇಕಿದೆ.

4. ಪ್ರವಾಸೋದ್ಯಮ ಅಭಿವೃದ್ಧಿ
ಕಾಪು ವಿಧಾನಸಭಾ ಕ್ಷೇತ್ರದ ಬಹುಭಾಗವು ಸಮುದ್ರ ದಡ ಮತ್ತು ನದಿ ನೀರಿನ ತಟದಲ್ಲಿದ್ದು, ದೇಶ, ವಿದೇಶಗಳ ಪ್ರವಾಸಿಗರನ್ನು ಬಹುವಾಗಿ ಆಕರ್ಷಿಸುವ ರೀತಿಯಲ್ಲಿ ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಯಾಗಬೇಕಿದೆ.

5. ತಾಲೂಕು ಕ್ರೀಡಾಂಗಣ
ಕಾಪು ವಿಧಾನಸಭಾ ಕ್ಷೇತ್ರದ ಜನತೆಯ ಅನುಕೂಲಕ್ಕಾಗಿ ಸುಸಜ್ಜಿತ ಕ್ರೀಡಾಂಗಣದ ಅಗತ್ಯತೆಯಿದೆ. ಕಾಪು – ಪಡುಬಿದ್ರಿ – ಹೆಜಮಾಡಿ – ಕಟಪಾಡಿಯಲ್ಲಿ ಇದಕ್ಕಾಗಿ ಯೋಜನೆ ರೂಪಿಸಬೇಕಿದೆ.

6. ಕೆಎಸ್‌ಆರ್‌ಟಿಸಿ ತಂಗುದಾಣ, ಡಿಪೋ
ರಾಜ್ಯ – ರಾಷ್ಟ್ರಮಟ್ಟಕ್ಕೆ ಸಂಪರ್ಕ ಕಲ್ಪಿಸುವ ರಾ. ಹೆ. 66ನ್ನು ಹೊಂದಿರುವ ಕಾಪುವಿನಲ್ಲಿ KSRTC ಬಸ್‌ ತಂಗುದಾಣ ಮತ್ತು ಡಿಪೋ ನಿರ್ಮಾಣಗೊಳ್ಳಬೇಕಿದೆ. ಗ್ರಾಮೀಣ ಪ್ರದೇಶಗಳಲ್ಲಿ ಸರಕಾರಿ ಬಸ್‌ಗಳು ಸಂಚರಿಸಬೇಕಿವೆ.

7. ಧಾರ್ಮಿಕ ಪ್ರವಾಸೋದ್ಯಮ
ಇಲ್ಲಿನ ಜಾನಪದ ಕಲೆ, ಸಂಸ್ಕೃತಿ, ಭೂತಾರಾಧನೆ ಸಹಿತ ಗ್ರಾಮೀಣ ಜನ ಜೀವನವನ್ನು ಎಲ್ಲೆಡೆಗೆ ಪರಿಚಯಿಸುವ ಉದ್ದೇಶದಿಂದ ಧಾರ್ಮಿಕ ಪ್ರವಾಸೋದ್ಯಮಕ್ಕೆ ಪೂರಕ ಅವಕಾಶ ಕಲ್ಪಿಸಿಕೊಡಬೇಕಿದೆ.

8. ಸಾರಿಗೆ
ಕಾಪು ಕ್ಷೇತ್ರ ಭೂ ಸಾರಿಗೆ, ರೈಲ್ವೇ ಸಾರಿಗೆ, ಜಲ ಸಾರಿಗೆ ಮತ್ತು ವಾಯು ಸಾರಿಗೆ ಮಾರ್ಗಕ್ಕೆ ಹತ್ತಿರದಲ್ಲಿದ್ದು, ನಾಲ್ಕೂ ಮಾರ್ಗಗಳ ನಡುವೆ ನೇರ ಸಂಪರ್ಕಕ್ಕಾಗಿ ಅವಕಾಶ ಒದಗಿಸಿಕೊಡಬೇಕಿದೆ.

9. ಕೈಗಾರಿಕೆಗೆ ಒತ್ತು
ಯುಪಿಸಿಎಲ್‌, ಐಎಸ್‌ಪಿಆರ್‌ಎಲ್‌, ಸುಜ್ಲಾನ್‌ ಹೀಗೆ 3 ಬೃಹತ್‌ ಕೈಗಾರಿಕೆ ಉದ್ದಿಮೆಗಳಿದ್ದು, ಇವುಗಳ ಮೂಲಕ ಕ್ಷೇತ್ರಾಭಿವೃದ್ಧಿಗೆ ಅನುದಾನ ಒದಗಿಸುವಿಕೆ ಮತ್ತು ಸಿಎಸ್‌ಆರ್‌ ಫಂಡ್‌ ಬಿಡುಗಡೆ ಮತ್ತು ಸದ್ಭಳಕೆಗೆ ಒತ್ತು ಸಿಗಬೇಕು.

10. ಅಗ್ನಿ ಶಾಮಕ ಇಲಾಖೆ
ಕರಾವಳಿ, ಗುಡ್ಡಗಾಡು ಮತ್ತು ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳ ಮಧ್ಯದಲ್ಲಿರುವ ಕಾಪುವಿನಲ್ಲಿ ತುರ್ತು ಸಂದರ್ಭಕ್ಕಾಗಿ ಪೂರ್ಣ ಪ್ರಮಾಣದ ಅಗ್ನಿಶಾಮಕ ಕಚೇರಿ ಬೇಕಿದೆ.

11. ತುರ್ತು ಚಿಕಿತ್ಸೆ
ಈ ನಿರಂತರ ಅಪಘಾತ ನಡೆಯುತ್ತಿದ್ದು, ಗಾಯಗೊಂಡವರ ತುರ್ತು ಶುಶ್ರೂಷೆಗಾಗಿ ಟ್ರೋಮಾ ಸೆಂಟರ್‌ ಅತ್ಯಗತ್ಯ. ಅದರ ಜತೆಯಲ್ಲಿ ಶೀಥಲೀಕರಣ ಶವಾಗಾರವೂ ಕಾಪುವಿನ ತುರ್ತು ಅಗತ್ಯಗಳಲ್ಲೊಂದಾಗಿದೆ.

12. CRZ ಕಾಯ್ದೆ ತಿದ್ದುಪಡಿ
ಕಡಲ ತೀರದ ಪ್ರದೇಶಗಳು ಸಿಆರ್‌ಝಡ್‌ -3ರ ವ್ಯಾಪ್ತಿಯಲ್ಲಿದ್ದು ಬೀಚ್‌ನ 500 ಮೀ. ವ್ಯಾಪ್ತಿಯೊಳಗೆ ಯಾವುದೇ ಕಟ್ಟಡ ನಿರ್ಮಾಣ ಅಸಾಧ್ಯ. ಸಿಆರ್‌ಝಡ್‌ -2ಕ್ಕೆ ಪರಿವರ್ತನೆ ಅತ್ಯಗತ್ಯ.

ಟಾಪ್ ನ್ಯೂಸ್

Bengaluru: New Year celebrations allowed only till 1 am: Police Commissioner

Bengaluru ರಾತ್ರಿ 1 ಗಂಟೆವರೆಗೆ ಮಾತ್ರ ಹೊಸ ವರ್ಷಾಚರಣೆಗೆ ಅವಕಾಶ: ಪೊಲೀಸ್‌ ಆಯುಕ್ತ

12-heart-attack

Heart attack; ಹೃದಯಾಘಾತ: ಖಂಡಿತವಾಗಿಯೂ ನಿರ್ಲಕ್ಷ್ಯ ಬೇಡ

Jhansi: Teacher watched obscene video in class; student who noticed was beaten up

Jhansi: ತರಗತಿಯಲ್ಲಿ ಅಶ್ಲೀಲ ವಿಡಿಯೋ ನೋಡಿದ ಶಿಕ್ಷಕ; ಗಮನಿಸಿದ ವಿದ್ಯಾರ್ಥಿಗೆ ಥಳಿತ

10-mng

Train Service: ಮಂಗಳೂರು – ವಿಜಯಪುರ ವಿಶೇಷ ರೈಲು ವಿಸ್ತರಣೆ

8-utkhader

U. T. Khader: ಹೆಬ್ಟಾಳ್ಕರ್‌-ಸಿ.ಟಿ. ರವಿ ಪ್ರಕರಣ ಹಕ್ಕು ಭಾದ್ಯತಾ ಸಮಿತಿಗೆ: ಖಾದರ್‌

7-munirathna

Munirathna ವಿರುದ್ಧದ ಅತ್ಯಾಚಾರ ಆರೋಪ ರುಜುವಾತು

6-bandipura

New Year: ಡಿ.31, ಜ. 1ರಂದು ಬಂಡೀಪುರದಲ್ಲಿ ಪ್ರವಾಸಿಗರ ವಾಸ್ತವ್ಯ ನಿರ್ಬಂಧ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9-

Delhi ಗಣರಾಜ್ಯೋತ್ಸವ; ಹೆಬ್ರಿಯ ಮಹಿಳೆಗೆ ವಿಶೇಷ ಅವಕಾಶ

1-gite

Udupi: ಇಂದು ಗೀತೋತ್ಸವದ ಮಂಗಳ್ಳೋತ್ಸವ

police crime

Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು

1-can

Udupi; ಕ್ಯಾನ್ಸರ್‌ನಿಂದ ಬಳಲುತ್ತಿದ್ದ ರೋಗಿಯ ರಕ್ಷಣೆ

puttige-6-

Udupi; ಗೀತಾರ್ಥ ಚಿಂತನೆ 139: ನಿರಂತರಾಭ್ಯಾಸದಿಂದ ಅಭಿಮಾನತ್ಯಾಗ ಸಾಧ್ಯ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Bengaluru: New Year celebrations allowed only till 1 am: Police Commissioner

Bengaluru ರಾತ್ರಿ 1 ಗಂಟೆವರೆಗೆ ಮಾತ್ರ ಹೊಸ ವರ್ಷಾಚರಣೆಗೆ ಅವಕಾಶ: ಪೊಲೀಸ್‌ ಆಯುಕ್ತ

12-heart-attack

Heart attack; ಹೃದಯಾಘಾತ: ಖಂಡಿತವಾಗಿಯೂ ನಿರ್ಲಕ್ಷ್ಯ ಬೇಡ

Jhansi: Teacher watched obscene video in class; student who noticed was beaten up

Jhansi: ತರಗತಿಯಲ್ಲಿ ಅಶ್ಲೀಲ ವಿಡಿಯೋ ನೋಡಿದ ಶಿಕ್ಷಕ; ಗಮನಿಸಿದ ವಿದ್ಯಾರ್ಥಿಗೆ ಥಳಿತ

11

Kasaragodu: ಹೊಳೆಯಲ್ಲಿ ಮುಳುಗಿ ಮೂವರು ಬಾಲಕರ ಸಾವು

10-mng

Train Service: ಮಂಗಳೂರು – ವಿಜಯಪುರ ವಿಶೇಷ ರೈಲು ವಿಸ್ತರಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.