ದಿಗ್ಗಜರ ಆಸ್ತಿಯಲ್ಲಿ ಏರಿಳಿತ

Team Udayavani, Apr 21, 2018, 6:40 AM IST

ssembly-election.jpg

ಘಟಾನುಘಟಿ ನಾಯಕರು ಶುಕ್ರವಾರವೂ ನಾಮಪತ್ರ ಸಲ್ಲಿಸಿದ್ದು, ಆಸ್ತಿವಿವರವನ್ನೂ ಸಲ್ಲಿಸಿದ್ದಾರೆ. ಹಲವು ನಾಯಕರ ಆಸ್ತಿಯಲ್ಲಿ ಏರಿಳಿತ ಕಂಡಿದೆ. ಹಾಲಾಡಿ ಶ್ರೀನಿವಾಸ ಶೆಟ್ಟರ ಬಳಿ ಚಿನ್ನ, ಬೆಳ್ಳಿ ಸೇರಿ ಬೆಲೆಬಾಳುವ ವಸ್ತುಗಳೇ ಇಲ್ಲ. ಸಚಿವ ರುದ್ರಪ್ಪ ಲಮಾಣಿ ಅವರಿಗಿಂತ ಅವರ ಪತ್ನಿಯೇ ಶ್ರೀಮಂತೆ. ಯಲ್ಲಾಪುರದ ಬಿಜೆಪಿ ಅಭ್ಯರ್ಥಿ ವಿ.ಎಸ್‌. ಪಾಟೀಲ ಅವರ ಆಸ್ತಿ 5 ವರ್ಷಗಳಲ್ಲಿ 90 ಲಕ್ಷ ರೂ.ನಷ್ಟು ಇಳಿಕೆಯಾಗಿದೆ.

ಸಚಿವ ಲಮಾಣಿಗಿಂತ ಪತ್ನಿಯ ಆಸ್ತಿಯೇ ಹೆಚ್ಚು
ಹಾವೇರಿ:
ಸಚಿವ ರುದ್ರಪ್ಪ ಲಮಾಣಿ ತಮ್ಮ ನಾಮಪತ್ರದ ಜತೆಗೆ ಆಸ್ತಿ ವಿವರ ಸಲ್ಲಿಸಿದ್ದು, ತಮ್ಮ ಬಳಿ ಒಟ್ಟು 3,51,20,769 ರೂ. ಹಾಗೂ ಪತ್ನಿ ಬಳಿ 4,33,09,555 ರೂ. ಸೇರಿ ಒಟ್ಟು 7,84,30,324 ರೂ. ಆಸ್ತಿ ಇದೆ ಎಂದು ಘೋಷಿಸಿದ್ದಾರೆ.

ಸಚಿವರಿಗಿಂತ ಸಚಿವರ ಪತ್ನಿಯೇ ಶ್ರೀಮಂತೆಯಾಗಿದ್ದಾರೆ. ಲಮಾಣಿ ತಮ್ಮ ಹೆಸರಲ್ಲಿ 1,61,92,704 ರೂ., ಪತ್ನಿ ಮಂಜುಳಾ ಹೆಸರಲ್ಲಿ 57,26,555 ರೂ., ಪುತ್ರಿ ಭಾನುಪ್ರಿಯಾ ಹೆಸರಲ್ಲಿ 20,02,523 ರೂ. ಹಾಗೂ ಪುತ್ರ ದರ್ಶನ್‌ ಹೆಸರಲ್ಲಿ 9,48,201 ರೂ. ಮೌಲ್ಯದ ಚರಾಸ್ತಿ ಇದೆ. ಹಾಗೆಯೇ ತಮ್ಮ ಹೆಸರಲ್ಲಿ 1,89,28,065 ರೂ., ಪತ್ನಿ ಹೆಸರಲ್ಲಿ 3,75,83,000 ರೂ. ಸ್ಥಿರಾಸ್ತಿ ಇರುವುದಾಗಿ ಎಂದು ಘೋಷಿಸಿದ್ದಾರೆ. ತಮ್ಮ ಬಳಿ ಎಂಟು ಕೆಜಿ ಬೆಳ್ಳಿ, 180 ಗ್ರಾಂ ಚಿನ್ನ ಇದೆ. ಪತ್ನಿ ಬಳಿ 700 ಗ್ರಾಂ ಚಿನ್ನ, ಎಂಟು ಕೆಜಿ ಬೆಳ್ಳಿ, ಪುತ್ರಿ ಬಳಿ 70 ಗ್ರಾಂ ಚಿನ್ನ, ಪುತ್ರನ ಬಳಿ 30 ಗ್ರಾಂ ಚಿನ್ನ ಇದೆ ಎಂದು ಘೋಷಿಸಿಕೊಂಡಿದ್ದಾರೆ.

ಕೋಟ್ಯಧಿಪತಿ ಪಾಟೀಲ್‌ 47 ಲಕ್ಷ ರೂ. ಸಾಲಗಾರ
ಬೀಳಗಿ:
ಕಾಂಗ್ರೆಸ್‌ ಶಾಸಕ ಜೆ.ಟಿ. ಪಾಟೀಲ ಒಟ್ಟು ಚರಾಸ್ತಿ 1,52,76,035 ರೂ., ಅವರ ಅವಲಂಬಿತರ ಒಟ್ಟು ಚರಾಸ್ತಿ 37,89,524 ರೂ. ಸೇರಿ ಒಟ್ಟು ಚರಾಸ್ತಿ ಮೌಲ್ಯ 1,90,65,559. ಇನ್ನು ಶಾಸಕರ ಸ್ಥಿರಾಸ್ತಿ 61,10,000 ರೂ. ಅವರ ಪತ್ನಿಯ ಸ್ಥಿರಾಸ್ತಿ 51,00,000 ರೂ. ಕುಟುಂಬದ ಒಟ್ಟು ಸ್ಥಿರಾಸ್ತಿ-ಚರಾಸ್ತಿ ಮೌಲ್ಯ 2,01,86,559 ರೂ. ಶಾಸಕರಲ್ಲಿರುವ ನಗದು ಹಣ 1,32,027 ರೂ., ಪತ್ನಿಯಲ್ಲಿರುವ ನಗದು 1,23,762 ರೂ. ಶಾಸಕರ ಹೆಸರಲ್ಲಿ ವಿವಿಧ ಬಾಂಕ್‌ಗಳಲ್ಲಿರುವ ಸಾಲ 47,83,483 ರೂ., ಪತ್ನಿಯ ಹೆಸರಲ್ಲಿ ಬ್ಯಾಂಕ್‌ ಸಾಲ 21,70,202 ರೂ. ಇದೆ.

ದೇಶಪಾಂಡೆಗಿಂತ ಪತ್ನಿಯೇ ಸಿರಿವಂತೆ
ಹಳಿಯಾಳ:
ಹಳಿಯಾಳ-ಜೋಯಿಡಾ ಕ್ಷೇತ್ರಕ್ಕೆ ಕಾಂಗ್ರೆಸ್‌ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಸಚಿವ ಆರ್‌.ವಿ. ದೇಶಪಾಂಡೆ ತಮ್ಮ ಆಸ್ತಿ ವಿವರವನ್ನು ಚುನಾವಣಾಧಿಕಾರಿಗೆ ಸಲ್ಲಿಸಿದ್ದು ಅವರಿಗಿಂತ ಪತ್ನಿಯೇ ಹೆಚ್ಚು ಶ್ರೀಮಂತರಾಗಿದ್ದಾರೆ. 

ದೇಶಪಾಂಡೆ ಹೆಸರಿನಲ್ಲಿ ಚರಾಸ್ತಿ ಒಟ್ಟು 22,69,96,666 ರೂ.ನಷ್ಟಿದ್ದು ಅವರ ಪತ್ನಿ ರಾಧಾ ಹೆಸರಿನಲ್ಲಿ 112,26,97,153 ಇದೆ. ದೇಶಪಾಂಡೆ ಹೆಸರಿನಲ್ಲಿ ವಿವಿಧ ಬ್ಯಾಂಕ್‌ಗಳಲ್ಲಿ 18,30,514 ರೂ.ಠೇವಣಿ ಇದ್ದು, ರಾಧಾ ಅವರ ಹೆಸರಿನಲ್ಲಿ 7,45,76,000 ರೂ. ಇದೆ. ದೇಶಪಾಂಡೆ ಬಳಿ 3.56 ಲಕ್ಷ ನಗದು ಇದ್ದರೆ, ಪತ್ನಿ ರಾಧಾ ಬಳಿ 2.69 ಲಕ್ಷ ಇದೆ. ದೇಶಪಾಂಡೆ ಹೆಸರಿನಲ್ಲಿ ಒಟ್ಟು 21 ಕೋಟಿ 74 ಲಕ್ಷ 61 ಸಾವಿರ ರೂ. ಬೆಲೆಯ ಭೂಮಿ ಇದ್ದರೆ,ರಾಧಾ ಹೆಸರಿನಲ್ಲಿ 8,40,52,506 ರೂ. ಬೆಲೆಯ ಭೂಮಿ ಇದೆ. ವಿವಿಧ ಖಾಸಗಿ ಕಂಪನಿಗಳಲ್ಲಿ ರಾಧಾ ಅವರ ಹೆಸರಿನಲ್ಲಿ 1,35,20,080 ಬೆಲೆಯ ಷೇರುಗಳಿವೆ. ಇದರ ಹೊರತಾಗಿ ಇಬ್ಬರ ಹೆಸರಿನಲ್ಲಿ ಕಟ್ಟಡಗಳು, ವಾಣಿಜ್ಯ ಮಳಿಗೆಗಳು, ಕೃಷಿ ಭೂಮಿ, ಕೃಷಿಯೇತರ ಭೂಮಿ ಕೂಡ ಇವೆ ಎಂದು ಘೋಷಿಸಲಾಗಿದೆ.

ಕಾರಜೋಳ ಸ್ವಂತ ವಾಹನ ಹೊಂದಿಲ್ಲ!
ಮುಧೋಳ:
ಶಾಸಕ ಗೋವಿಂದ ಕಾರಜೋಳ 52,52,533 ಮೌಲ್ಯದ ಚರಾಸ್ತಿ ಮತ್ತು 96,00,000 ಮೊತ್ತದ ಸ್ಥಿರಾಸ್ತಿ 
ಹೊಂದಿದ್ದಾರೆ. ಪತ್ನಿ ಶಾಂತಾದೇವಿ 41,82,689 ಮೌಲ್ಯದ ಚರಾಸ್ತಿ, 18 ಲಕ್ಷ ಮೊತ್ತದ ಸ್ಥಿರಾಸ್ತಿ ಹೊಂದಿದ್ದಾರೆ. ಪತ್ನಿ 101 ತೊಲಿ ಬಂಗಾರದ ಆಭರಣಗಳು, 5 ಕೆಜಿ ಬೆಳ್ಳಿ ಸಾಮಾನುಗಳನ್ನು ಹೊಂದಿದ್ದಾರೆ. ಅಲ್ಲದೆ, ಸ್ವಂತ ವಾಹನಗಳಿಲ್ಲ,ಯಾವುದೇ ಸಾಲವಿಲ್ಲವೆಂದು ಘೋಷಿಸಿಕೊಂಡಿದ್ದಾರೆ.

ಟಾಪ್ ನ್ಯೂಸ್

Hunger Strike: ಹದಗೆಟ್ಟ ಅರೋಗ್ಯ: ಪ್ರಶಾಂತ್ ಕಿಶೋರ್ ಆಸ್ಪತ್ರೆಗೆ ದಾಖಲು

Hunger Strike: ಹದಗೆಟ್ಟ ಅರೋಗ್ಯ… ಪ್ರಶಾಂತ್ ಕಿಶೋರ್ ಆಸ್ಪತ್ರೆಗೆ ದಾಖಲು

Team India: ಕೆಎಲ್‌, ಪಾಂಡ್ಯ, ಗಿಲ್‌ ಅಲ್ಲ.., ಚಾಂಪಿಯನ್ಸ್‌ ಟ್ರೋಫಿಗೆ ಈತನೇ ಉಪ ನಾಯಕ

Team India: ಕೆಎಲ್‌, ಪಾಂಡ್ಯ, ಗಿಲ್‌ ಅಲ್ಲ.., ಚಾಂಪಿಯನ್ಸ್‌ ಟ್ರೋಫಿಗೆ ಈತನೇ ಉಪ ನಾಯಕ

Video: ಬೀದಿ ವ್ಯಾಪಾರಿ ಬಳಿ 6 ಟ್ರೇ ಮೊಟ್ಟೆ ಖರೀದಿಸಿ ಹಣ ಪಾವತಿಸದೇ ಪರಾರಿ…ಮುಂದೇನಾಯ್ತು!

Video: ಬೀದಿ ವ್ಯಾಪಾರಿ ಬಳಿ 6 ಟ್ರೇ ಮೊಟ್ಟೆ ಖರೀದಿಸಿ ಹಣ ಪಾವತಿಸದೇ ಪರಾರಿ…ಮುಂದೇನಾಯ್ತು!

Actress Ramya: ಕೋರ್ಟ್‌ಗೆ ಹಾಜರಾದ ಮೋಹಕ ತಾರೆ ರಮ್ಯಾ; ಕಾರಣವೇನು?

Actress Ramya: ಕೋರ್ಟ್‌ಗೆ ಹಾಜರಾದ ಮೋಹಕ ತಾರೆ ರಮ್ಯಾ; ಕಾರಣವೇನು?

‘ರಾಜಕೀಯ ನಿವೃತ್ತಿ’ ಸುದ್ದಿಗೆ ದ.ಕ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಹರೀಶ್‌ ಕುಮಾರ್ ಸ್ಪಷ್ಟನೆ

‘ರಾಜಕೀಯ ನಿವೃತ್ತಿ’ ಸುದ್ದಿಗೆ ದ.ಕ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಹರೀಶ್‌ ಕುಮಾರ್ ಸ್ಪಷ್ಟನೆ

BBK11: ಸತ್ಯಕ್ಕೆ ಸೋಲಿಲ್ಲ.. ರಜತ್‌ ನಿರ್ಧಾರಕ್ಕೆ ರೊಚ್ಚಿಗೆದ್ದ ಮಂಜು

BBK11: ಸತ್ಯಕ್ಕೆ ಸೋಲಿಲ್ಲ.. ರಜತ್‌ ನಿರ್ಧಾರಕ್ಕೆ ರೊಚ್ಚಿಗೆದ್ದ ಮಂಜು

Delhi Election 2025:  ದೆಹಲಿ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆ; ಬಿಜೆಪಿ V/s AAP

Delhi Election 2025: ದೆಹಲಿ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆ; ಬಿಜೆಪಿ V/s AAP

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sangeetha Mobiles: ಜಯನಗರದಲ್ಲಿ ಸಂಗೀತಾ ಗ್ಯಾಜೆಟ್ಸ್ ನೂತನ ಮಳಿಗೆ ಲೋಕಾರ್ಪಣೆ

Sangeetha Mobiles: ಜಯನಗರದಲ್ಲಿ ಸಂಗೀತಾ ಗ್ಯಾಜೆಟ್ಸ್ ನೂತನ ಮಳಿಗೆ ಲೋಕಾರ್ಪಣೆ

Bengaluru: ಎಂಬಿಎ ವಿದ್ಯಾರ್ಥಿ 3ನೇ ಮಹಡಿಯಿಂದ ಬಿದ್ದು ಸಾವು

Bengaluru: ಎಂಬಿಎ ವಿದ್ಯಾರ್ಥಿ 3ನೇ ಮಹಡಿಯಿಂದ ಬಿದ್ದು ಸಾವು

Fraud Case: 3.25 ಕೋಟಿ ವಂಚನೆ ಕೇಸ್‌; ಐಶ್ವರ್ಯ ದಂಪತಿ ಮತ್ತೆ ಸೆರೆ

Fraud Case: 3.25 ಕೋಟಿ ವಂಚನೆ ಕೇಸ್‌; ಐಶ್ವರ್ಯ ದಂಪತಿ ಮತ್ತೆ ಸೆರೆ

Atul Subhash Case: ಪತ್ನಿ ಮೇಲಿನ ಕೇಸ್‌ ರದ್ದತಿಗೆ ನಿರಾಕರಣೆ

Atul Subhash Case: ಪತ್ನಿ ಮೇಲಿನ ಕೇಸ್‌ ರದ್ದತಿಗೆ ನಿರಾಕರಣೆ

Suspend: ನಕಲಿ ದಾಖಲೆ ಕೊಟ್ಟು ಹುದ್ದೆ ಪಡೆದ ಪಿಎಸ್‌ಐ ಸಸ್ಪೆಂಡ್‌

Suspend: ನಕಲಿ ದಾಖಲೆ ಕೊಟ್ಟು ಹುದ್ದೆ ಪಡೆದ ಪಿಎಸ್‌ಐ ಸಸ್ಪೆಂಡ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Kuchuku Movie: ಟೀಸರ್‌ನಲ್ಲಿ ಕುಚುಕು

Kuchuku Movie: ಟೀಸರ್‌ನಲ್ಲಿ ಕುಚುಕು

Hunger Strike: ಹದಗೆಟ್ಟ ಅರೋಗ್ಯ: ಪ್ರಶಾಂತ್ ಕಿಶೋರ್ ಆಸ್ಪತ್ರೆಗೆ ದಾಖಲು

Hunger Strike: ಹದಗೆಟ್ಟ ಅರೋಗ್ಯ… ಪ್ರಶಾಂತ್ ಕಿಶೋರ್ ಆಸ್ಪತ್ರೆಗೆ ದಾಖಲು

Sandalwood: ಫೆ.7ಕ್ಕೆ ಗಜರಾಮ ತೆರೆಗೆ

Sandalwood: ಫೆ.7ಕ್ಕೆ ಗಜರಾಮ ತೆರೆಗೆ

Team India: ಕೆಎಲ್‌, ಪಾಂಡ್ಯ, ಗಿಲ್‌ ಅಲ್ಲ.., ಚಾಂಪಿಯನ್ಸ್‌ ಟ್ರೋಫಿಗೆ ಈತನೇ ಉಪ ನಾಯಕ

Team India: ಕೆಎಲ್‌, ಪಾಂಡ್ಯ, ಗಿಲ್‌ ಅಲ್ಲ.., ಚಾಂಪಿಯನ್ಸ್‌ ಟ್ರೋಫಿಗೆ ಈತನೇ ಉಪ ನಾಯಕ

10(1

Santhekatte: ಉಡುಪಿಯಿಂದ ಕುಂದಾಪುರ ಕಡೆಗೆ ಸರ್ವಿಸ್‌ ರಸ್ತೆ ಓಪನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.