ಮೆಟ್ರೋ ಆರು ಬೋಗಿ ಸಂಚಾರ ಪರಿಶೀಲನೆ
Team Udayavani, Apr 21, 2018, 11:56 AM IST
ಬೆಂಗಳೂರು: ಬಹುನಿರೀಕ್ಷಿತ ಆರು ಬೋಗಿಗಳ “ನಮ್ಮ ಮೆಟ್ರೋ’ ರೈಲು ಅನ್ನು ಈಚೆಗೆ ಪರಿಶೀಲನೆ ನಡೆಸಿದ ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರ ತಂಡ, ಈ ಸಂಬಂಧ ಆರು ಬೋಗಿಗಳ ಮೆಟ್ರೋ ರೈಲಿನಲ್ಲಿ ಸಂಚರಿಸಿತು.
ರೈಲ್ವೆ ಸುರಕ್ಷತಾ ಆಯುಕ್ತರ ತಂಡವು ಏಪ್ರಿಲ್ 19ರಂದು ರಾತ್ರಿ 10.30ರಿಂದ ಬೆಳಗಿನಜಾವ 3.10ರವರೆಗೆ ಪೂರ್ವ-ಪಶ್ಚಿಮ ಕಾರಿಡಾರ್‌ನಲ್ಲಿ ಈ ಆರು ಬೋಗಿಗಳ ಮೆಟ್ರೋ ರೈಲಿನಲ್ಲಿ ಸಂಚರಿಸಿತು. ಈ ಸಂದರ್ಭದಲ್ಲಿ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿ) ವ್ಯವಸ್ಥಾಪಕ ನಿರ್ದೇಶಕ ಮಹೇಂದ್ರ ಜೈನ್ ಸೇರಿದಂತೆ ನಿಗಮದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಇದಲ್ಲದೆ, ಆಯುಕ್ತರು ಮಾರ್ಗದ ಬ್ರೇಕಿಂಗ್ ಪರೀಕ್ಷೆ, ವೇಗ, ಸಿಗ್ನಲಿಂಗ್ ಸೇರಿದಂತೆ ಹಲವು ಅಂಶಗಳನ್ನೂ ಪರಿಶೀಲಿಸಿದರು. ಮೊದಲ ಹಂತದ ಹೆಚ್ಚುವರಿ ಮೂರು ಬೋಗಿಗಳು ಬಿಇಎಂಎಲ್ ಕಾರ್ಖಾನೆಯಿಂದ ಪೂರೈಕೆ ಆಗಿದ್ದು, ಮುಂದಿನ ಹಂತದಲ್ಲಿ ಮತ್ತೆ ಮೂರು ಬೋಗಿಗಳು ಪೂರೈಕೆ ಮಾಡಲಿದೆ.
ಇದು ಜುಲೈ ಮೊದಲ ವಾರದಲ್ಲಿ ಸೇರ್ಪಡೆ ಆಗಲಿದೆ. ಅದೇ ರೀತಿ, ಉಳಿದ ಬೋಗಿಗಳು ವಿವಿಧ ಹಂತಗಳಲ್ಲಿ ಬರಲಿವೆ. ಈ ಆರು ಬೋಗಿಗಳ ಮೆಟ್ರೋ ರೈಲು ಅನ್ನು ಪೂರ್ವ-ಪಶ್ಚಿಮ ಕಾರಿಡಾರ್ (ಬೈಯಪ್ಪನಹಳ್ಳಿ-ಮೈಸೂರು ರಸ್ತೆ)ನಲ್ಲಿ ಕಾರ್ಯಾಚರಣೆ ಮಾಡಲು ಬಿಎಂಆರ್‌ಸಿ ಉದ್ದೇಶಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್
Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ
Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ
EVM Issue: ಮತಯಂತ್ರ ತಿರುಚಿದ್ದು ಸಾಬೀತಿಗೆ ನನ್ನ ಬಳಿ ಪುರಾವೆಗಳಿಲ್ಲ: ಕಾರ್ತಿ ಚಿದಂಬರಂ
Kasaragod;ತೀವ್ರ ತಲೆನೋವು: ವಿದ್ಯಾರ್ಥಿನಿ ಸಾ*ವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.