ಕೃಷಿ ಸಂಸ್ಕೃತಿ
Team Udayavani, Apr 22, 2018, 6:00 AM IST
ಬಿಗ್ ಬಾಸ್’ಗೆ ಹೋಗಿ ಬಂದವರಿಗೆ ಸಿನೆಮಾ ರಂಗದಲ್ಲಿ ಸಾಕಷ್ಟು ಅವಕಾಶಗಳು ಸಿಗುತ್ತವೆ, ಮುಂದೆ ಬಿಝಿಯಾಗುತ್ತಾರೆಂಬ ಮಾತುಗಳು ಕೇಳಿಬರುತ್ತಲೇ ಇರುತ್ತವೆ. ಕೃಷಿ ತಾಪಂಡ ಎಂಬ ನಟಿ “ಬಿಗ್‌ಬಾಸ್ ಸೀಸನ್-5′ ನಿಂದ ಬಂದು ಮೂರ್‍ನಾಲ್ಕು ತಿಂಗಳು ಕಳೆದರೂ ಆಕೆಯ ಕಡೆಯಿಂದ ಯಾವುದೇ ಹೊಸ ಸಿನೆಮಾದ ಸುದ್ದಿ ಇರಲಿಲ್ಲ. ಈಗ ಕೃಷಿ ಹೊಸ ಸಿನೆಮಾವೊಂದನ್ನು ಒಪ್ಪಿಕೊಂಡಿದ್ದಾರೆ.
ಅದು ರೂಪಾಯಿ. ಇದು ಸಂಪೂರ್ಣ ಹೊಸಬರ ಸಿನೆಮಾ. ಎಲ್ಲಾ ಓಕೆ, ಇಷ್ಟು ದಿನ ಕೃಷಿಗೆ ಅವಕಾಶ ಬರಲಿಲ್ಲವೇ ಎಂದು ನೀವು ಕೇಳಬಹುದು. ಕೃಷಿ ಹೇಳುವಂತೆ ಅವರಿಗೆ ಸಾಕಷ್ಟು ಅವಕಾಶ ಬಂದಿತ್ತು. ಆದರೆ, ಕಾರಣಾಂತರಗಳಿಂದ ಒಪ್ಪಲಿಲ್ಲವಂತೆ.
“”ಬಿಗ್ ಬಾಸ್‌ನಿಂದ ಬಂದ ನಂತರ ನನಗೆ 20ಕ್ಕೂ ಹೆಚ್ಚು ಅವಕಾಶಗಳು ಬಂದುವು. ಆದರೆ, ಕಾರಣಾಂತರಗಳಿಂದ ನಾನೇ ಯಾವುದೇ ಸಿನೆಮಾಗಳನ್ನು ಒಪ್ಪಲಿಲ್ಲ. ಹೊಸಬರ ರೂಪಾಯಿ ಕಥೆ ಕೇಳಿದೆ. ಹೊಸದಾಗಿತ್ತು, ನನ್ನ ಪಾತ್ರ ಕೂಡಾ ವಿಭಿನ್ನವಾಗಿರುವುದರಿಂದ ಒಪ್ಪಿಕೊಂಡೆ” ಎನ್ನುತ್ತಾರೆ. ಇದೇ ವೇಳೆ ಕೃಷಿ ಒಂದು ಮಾತು ಹೇಳಲು ಮರೆಯೋದಿಲ್ಲ. “”ಬಿಗ್‌ಬಾಸ್‌ಗೆ ಹೋಗಿ ಬಂದ ಕೂಡಲೇ ಸಿಕ್ಕಾಪಟ್ಟೆ ಅವಕಾಶ ಸಿಗುತ್ತದೆ, ಸ್ಟಾರ್ ಆಗುತ್ತಾರೆಂಬುದನ್ನು ನಾನು ನಂಬೋದಿಲ್ಲ. ಆದರೆ, ಹೊರಜಗತ್ತಿಗೆ ನಿಮ್ಮ ಬಗ್ಗೆ ಗೊತ್ತಾಗಲು, ನಿಮ್ಮ ಟ್ಯಾಲೆಂಟ್ ಪ್ರದರ್ಶಿಸಲು ಅದೊಂದು ಒಳ್ಳೆಯ ವೇದಿಕೆಯಂತೂ ಹೌದು. ಈ ಹಿಂದೆ ನಾನು ಹೊರಗಡೆ ಹೋದಾಗ ಕೆಲವೇ ಕೆಲವರು ಗುರುತಿಸುತ್ತಿದ್ದರು. ಆದರೆ, ಈಗ ಸಾವಿರಾರು ಜನ ಗುರುತಿಸುತ್ತಿದ್ದಾರೆ. ಚಿತ್ರರಂಗದ ಮಂದಿಗೂ ಕೃಷಿ ಅಂದರೆ ಯಾರು ಎಂಬುದು ಗೊತ್ತಾಗಿದೆ. ಅದೊಂದು ಒಳ್ಳೆಯ ವೇದಿಕೆ. ಅದನ್ನು ನೀವು ಹೇಗೆ ಬಳಸಿಕೊಳ್ಳುತ್ತೀರಿ ಎಂಬುದು ಕೂಡ ಮುಖ್ಯವಾಗುತ್ತದೆ” ಎನ್ನುತ್ತಾರೆ.
ಸದ್ಯ ರೂಪಾಯಿ ಚಿತ್ರದಲ್ಲಿರುವ ಕೃಷಿ, ಈ ಚಿತ್ರದಲ್ಲಿ ಸ್ಟಂಟ್ಸ್ ಕೂಡ ಮಾಡುತ್ತಾರಂತೆ. ಅದಕ್ಕಾಗಿ ತರಬೇತಿ ಪಡೆಯುತ್ತಿದ್ದಾರಂತೆ. ಇದಲ್ಲದೇ, ಕೃಷಿ ನಟಿಸಿರುವ, ಕನ್ನಡಕ್ಕಾಗಿ ಒಂದನ್ನು ಒತ್ತಿ ಚಿತ್ರ ಕೂಡಾ ಬಿಡುಗಡೆಯ ಹಂತಕ್ಕೆ ಬಂದಿದೆ. ಅಲ್ಪ ವಿರಾಮ ಎಂಬ ಸಿನೆಮಾವೊಂದರಲ್ಲೂ ಕೃಷಿ ನಟಿಸಿದ್ದು, ಐದು ಶೇಡ್‌ನ ಪಾತ್ರ ಸಿಕ್ಕಿದೆಯಂತೆ. ಈ ನಡುವೆಯೇ ಕೃಷಿ ಖುಷಿಯಾಗಿದ್ದಾರೆ. ಅದಕ್ಕೆ ಕಾರಣ ವೆಬ್ ಸಿರೀಸ್. ಕೆನಡಾದ ವೆಬ್ ಸಿರೀಸ್‌ವೊಂದರಲ್ಲಿ ಕೃಷಿ ನಟಿಸಲಿದ್ದು, ಇಲ್ಲಿ ಅವರು ಸೇನಾನಿ ಯಂತೆ. ಡಿಸೆಂಬರ್‌ನಿಂದ ಚಿತ್ರೀಕರಣ ಆರಂಭ ವಾಗಲಿದ್ದು, ಮೂರು ತಿಂಗಳುಗಳ ಕಾಲ ಕೃಷಿ ಕೂಡ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರಂತೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು
8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ
Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ
Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’
ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್ ಮಾದರಿಯಲ್ಲಿ ವಿಶೇಷ ಪೊಲೀಸ್ ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.