ಸುಬ್ಬು-ಶಾಲಿನಿ ಪ್ರಕರಣಂ-4


Team Udayavani, Apr 22, 2018, 6:15 AM IST

subbu-4…..jpg

ಸುಬ್ಬು ಹಾಡುಹಗಲೇ ನನ್ನ ವಿಸಿಟರ್ಸ್‌ ಚೇರಿನಲ್ಲೇ ಸೊಂಪಾಗಿ ನಿದ್ರಿಸುತ್ತಿದ್ದ. ಗದರಿ ಎಚ್ಚರಿಸಿದೆ.

ಕ್ಷಣಕಾಲ ಕಣ್ಣು ತೆರೆದು ಮತ್ತೆ ನಿದ್ರೆಗೆ ಜಾರಿದ. ನಾನು ಹೌಹಾರಿದೆ. ಯಾರಾದರೂ ನೋಡಿದರೇನು ಗತಿ? ಟೇಬಲ್‌ ತಟ್ಟಿದೆ, ಕುಟ್ಟಿದೆ, ತಲೆಮೇಲೆ ಮೊಟಕಿದೆ. ಆದರೂ ಸುಬ್ಬು ಏಳಲಿಲ್ಲ. ಎದ್ದರೂ ಮತ್ತೆ ನಿದ್ರೆಗೆ ಜಾರುತ್ತಿದ್ದ. ಎರಡು ತಿಂಗಳಿಂದ ಕಂಡಲ್ಲಿ ನಿದ್ರಿಸುವ ಅವನ ಅಭ್ಯಾಸ ನನಗೆ ನುಂಗಲಾರದ ತುತ್ತಾಗಿತ್ತು. ಹಾಡುಹಗಲೇ ಒಬ್ಬ ಸೀನಿಯರ್‌ ಆಫೀಸರ್‌ ನಿದ್ರಿಸುವುದನ್ನು ಯಾರು ತಾನೆ ಸಹಿಸಿಯಾರು.

ಸುಬ್ಬು ನನ್ನ ಚಡ್ಡಿ ಫ್ರೆಂಡ್‌. ಸಹೋದ್ಯೋಗಿ, ಆಪತ್ಕಾಲದ ಎಟಿಎಮ್ಮು. ಇಬ್ಬರೂ ಒಂದೇ ಇಂಜಿನಿಯರಿಂಗ್‌ ಕಾಲೇಜಲ್ಲಿ ಓದಿ ಒಂದೇ ಫ್ಯಾಕ್ಟ್ರಿಯಲ್ಲಿ ಕೆಲಸ ಮಾಡುತ್ತಿದ್ದೀವಿ.

“”ಸುಬ್ಬು , ನೀನೀಗ ಏಳದಿದ್ದರೆ ಈ ಜಗ್ಗಿನಲ್ಲಿರೋ ನೀರೆಲ್ಲಾ ತಲೆ ಮೇಲೆ ಸುರಿದುಬಿಡ್ತೀನಿ” ಹೆದರಿಸಿದೆ. ತುಸು ಹೆದರಿ ಕಣ್ಣು ಬಿಟ್ಟ.

“”ಹಾಡು ಹಗಲಲ್ಲಿ, ಕೆಲಸದ ಸಮಯದಲ್ಲೇ ತೂಕಡಿಸ್ತಿದ್ದೀ ಯಲ್ಲ? ಅಕಸ್ಮಾತ್‌ ಜಿಎಮ್‌ ಬಂದರೆ ಏನು ಗತಿ?” ಹೆದರಿಸಿದೆ.

“”ಗುಮ್ಮ ಬಂತು ಅಂತ ಹೆದ್ರಿಸ್ತಿದ್ದೀಯ? ನಾನೇನು ಚಿಕ್ಕ ಮಗೂನೆ?” ಜೋರಾಗಿ ಆಕಳಿಸುತ್ತ ಹೇಳಿದ.””ಎರಡು ತಿಂಗಳಿಂದ ಇದೇ ಕತೆ! ಮನೇಲಿ ನಿದ್ರೆ ಮಾಡೊಲ್ಲವೇನೋ?” ಅನುಮಾನದಿಂದ ಕೇಳಿದೆ.””ನೀನೊಬ್ಬ ಹುಂಬ! ಪ್ರಪಂಚದಲ್ಲಿ ಏನು ನಡೀತಿದೆ ಅನ್ನೋದೂ ಗೊತ್ತಿಲ್ಲದ ಮಂಕ!” ಸುಬ್ಬು ಹಂಗಿಸಿದ. ನನಗೆ ರೇಗಿಹೋಯಿತು. “”ಸರಿ, ನನಗೆ ತಿಳಿಯದ ಘನಕಾರ್ಯಗಳು ಏನು ನಡೀತಿವೆ ಹೇಳು ನೋಡೋಣ?” ಸವಾಲೆಸೆದೆ.

“”ಮೂಢ!  ವಿಂಬಲ್ಡನ್‌ ಟೆನಿಸ್‌, ಗ್ರಾನ್‌ಫ್ರೀ ರೇಸು, ಮಿಸ್‌ ಯೂನಿವರ್ಸ್‌ ಕಾಂಟೆಸ್ಟು. ಇವುಗಳಲ್ಲಿ ಯಾವುದಾದರೂ ಒಂದರ ಬಗ್ಗೆ ನಿನಗೆ ಗೊತ್ತಾ?”

“”ಗೊತ್ತಿಲ್ಲ. ಗೊತ್ತು ಮಾಡ್ಕೊಳ್ಳೋ ಆವಶ್ಯಕತೇನೂ ಇಲ್ಲ” ಕಹಿಯಾಗಿ ನುಡಿದೆ.

“”ನಿನ್ನಂಥವರನ್ನ ಗೂಬೆ ಅಂತಾರೆ. ಪ್ರಪಂಚ ವೇಗವಾಗಿ ಬದಲಾಗ್ತಿದ್ರೂ ನಾನು ಇದ್ದಲ್ಲೇ ಇರ್ತಿàನಿ ಅನ್ನೋದು ಮೂರ್ಖತನ. ಹಳೇ ಮಾಡಲ್‌ ಗಾಡಿ ತರಾ ಜಂಕ್‌ ಆಗ್ತಿàಯ. ಮೂರು ಕಾಸೂ ಬೆಲೆಯಿಲ್ಲದ ಗುಜರಿ ಸಾಮಾನಾಗ್ತಿàಯ” ವಾಗ್ಬಾಣಗಳ ಮಳೆಗರೆದ ಸುಬ್ಬು.

“”ನಾನು ಜಂಕ್‌ ಇರಬಹುದು. ಆದ್ರೆ ನಿನ್ನ ಹಾಗೆ ಹಾಡು ಹಗಲಲ್ಲಿ ಗೊರಕೆ ಹೊಡೆಯೋಲ್ಲ”

“”ಗೊರಕೆ ಹೊಡೆದ್ರೇನಂತೆ? ಅಪ್‌-ಟು-ಡೇಟ್‌ ಆಗಿದ್ದೀನಿ””ಮೊದಲು ಜಾಗ ಖಾಲಿ ಮಾಡು. ಜಿಎಮ್‌ ಬರ್ತಿàನಿ ಅಂದಿದ್ದರು” ಎಂದೆ.     ಜಿಎಮ್‌ ಹೆಸರು ಕೇಳುತ್ತಲೇ ಸುಬ್ಬು ಬೆಕ್ಕಿನಂತೆ ಆಚೆ ನುಸುಳಿದ !

ಫ್ಯಾಕ್ಟ್ರಿ ಮುಗಿಯೋ ಸಮಯದಲ್ಲಿ ಒಂದು ಕೆಟ್ಟ ಸುದ್ದಿ ಬಂತು. ಅದೂ ಸುಬ್ಬು ಬಗೆಗೆ.ಸುಬ್ಬು ಮೀಟಿಂಗಲ್ಲಿ ತೂಕಡಿಸಿದ್ದಕ್ಕೆ ಜಿಎಮ್ಮು ವಾಚಾಮಗೋಚರವಾಗಿ ಬೈದು, ವಾರ್ನಿಂಗ್‌ ಲೆಟರ್‌ ಕೊಟ್ಟು ತೂಕಡಿಸಿದ್ದಕ್ಕೆ ವಿವರಣೆ ಕೇಳಿದ್ದಾರಂತೆ. ತೂಕಡಿಸೋದು ಇಷ್ಟಕ್ಕೆಲ್ಲ ಕಾರಣವಾಯಿತೆ? ಹಾಗೆ ನೋಡಿದರೆ ನಮ್ಮ ರಾಜಕಾರಣಿಗಳು ಸಭೆಗಳಲ್ಲೇ ರಾಜಾರೋಷವಾಗಿ ತೂಕಡಿಸುತ್ತಾರೆ.

“”ಛೆ ! ವಿಷಯ ಈ ಮಟ್ಟಕ್ಕೆ ಹೋಗಬಾರದಿತ್ತು” ಪೇಚಾಡಿಕೊಳ್ಳುತ್ತ ಸುಬ್ಬುವಿನ ಟೇಬಲ್‌ಗೆ ಫೋನಾಯಿಸಿದೆ. ಅವನಾಗಲೇ ಮನೆಗೆ ಹೋಗಿರುವುದು ತಿಳಿಯಿತು. ಸುಬ್ಬುವಿನ ಮನೆಗೆ ಫೋನು ಮಾಡಿದೆ. ಅವನು ಮನೆಯನ್ನೂ ತಲುಪಿಲ್ಲ ಎಂದು ತಿಳಿದು ಗಾಬರಿಯಾಯಿತು. 

ಫ್ಯಾಕ್ಟ್ರಿಯಲ್ಲಿ ನಡೆದ ವಿಷಯ ಸುಬ್ಬು ಮಡದಿಗೆ ಹೇಳುವುದೋ ಬೇಡವೋ ಎಂಬ ಇಕ್ಕಳದಲ್ಲಿ ಸಿಕ್ಕಿಬಿದ್ದೆ.  ಸುಬ್ಬುವಿನ ಶ್ರೀಮತಿ ಶಾಲಿನಿ ಗಂಡುಗುಂಡಿಗೆಯ ಗಟ್ಟಿ ಹೆಣ್ಣು. ಹೇಳಿದರೂ ತೊಂದರೆಯಿಲ್ಲವೆನಿಸಿ ತೊದಲುತ್ತ ವಿಷಯ ತಿಳಿಸಿಬಿಟ್ಟೆ.””ಅದಕ್ಕೆ ನೀವ್ಯಾಕೆ ಗಾಬರಿಯಾಗಿದ್ದೀರಿ?” ಶಾಲಿನಿ ಅತ್ತಿಗೆ ನನಗೇ ಪ್ರಶ್ನೆ ಹಾಕಿದರು. ನನಗೆ ನಾಚಿಕೆಯಾಯಿತು, ಆಕೆಯಷ್ಟೂ ಧೈರ್ಯ ನನ್ನಲ್ಲಿಲ್ಲವಲ್ಲ ಎನಿಸಿತು. 

“”ಅವರು ಮನೆಗೆ ಬಂದಿಲ್ಲ ಅಂದರೆ ಕ್ಲಬ್ಬಲ್ಲಿ ಇಸ್ಪೀಟಾಡಿ, ಒಂದಿಷ್ಟು ಬೀರೋ, ವಿಸ್ಕೀನೋ ಕುಡಿದು ಹನ್ನೊಂದರ ಒಳಗೆ ಮನೆಗೆ ಬರ್ತಾರೆ. ಆ ಸಮಯ ಮೀರಿದರೆ ಮನೆ ಬಾಗಿಲು ಮುಚ್ಚಿರುತ್ತೆ. ಮನೆ ಎದುರಿನ ಪಾರ್ಕಲ್ಲಿ ಮಲಗಿ ಸೊಳ್ಳೆ ಕೈಲಿ ಕಚ್ಚಿಸಿಕೊಂಡು, ಮುಖ-ಮೂತಿ ಊದಿಸಿಕೊಂಡು ಬೆಳಗಿನ ಜಾವ ಮನೆಗೆ ಬರ್ತಾರೆ. ನೀವೇನೂ ಯೋಚನೆ ಮಾಡಬೇಡಿ”

ಶಾಲಿನಿ ಸಲೀಸಾಗಿ ಹೇಳಿದಾಗ ನನಗೂ ಧೈರ್ಯಬಂತು. ನೆಮ್ಮದಿಯಿಂದ ಫ್ಯಾಕ್ಟರಿ ಕೆಲಸ ಮುಂದುವರಿಸಿದೆ.ಕೆಲಸ ಮುಗಿಸಿ ನಾನು ಮನೆಗೆ ಮರಳುವ ಹಾದಿಯಲ್ಲಿ ಸುಬ್ಬು ಈಗಲಾದರೂ ತನ್ನ ಮನೆ ಸೇರಿದ್ದಾನೋ ಇಲ್ಲವೋ ಎಂಬ ಯೋಚನೆ ಕೊರೆಯಿತು. ಫೋನು ಮಾಡುವ ಬದಲು ಹತ್ತು ಹೆಜ್ಜೆ ಹೋಗಿ ಸುಬ್ಬೂಗೆ ಸಾಂತ್ವನ ಹೇಳಿದರೆ ನನಗೂ ನೆಮ್ಮದಿಯಾಗುತ್ತೆ ಎಂದು ಹೊರಟೆ.
“”ಸರಿಯಾದ ಟೈಮಿಗೇ ಬಂದಿದ್ದೀಯ” ಸ್ವತಃ ಸುಬ್ಬು ಬಾಗಿಲು ತೆರೆದ. ಅವನನ್ನು ನೋಡಿ ನನಗೆ ನೆಮ್ಮದಿಯಾಯಿತು. 
  
“”ಏನು ನಡೀತಿದೆ?” ಪ್ರಶ್ನೆಯೊಂದಿಗೆ ಒಳಗೆ ಸೇರಿದೆ. “”ಮೂರನೆ ಮಹಾಯುದ್ಧ ನಡೀತಿದೆ” ನಿಜಕ್ಕೂ ಲಿವಿಂಗ್‌ ರೂಮಿನಲ್ಲಿ ರಣರಂಗ ಸೃಷ್ಟಿಯಾಗಿರುವಂತೆ ಕಂಡಿತು. ಒಂದು ಕಡೆ ಶಾಲಿನಿ, ಇನ್ನೊಂದೆಡೆ ಸುಬ್ಬುನ ಮಗಳು ಪಿಂಕಿ ಮತ್ತವಳ ಅಣ್ಣ ಪವನ ಮುಖ ಬಿಗಿದುಕೊಂಡು ಗರಂ ಆಗಿ ಕೂತಿದ್ದರು. ಟಿವಿ ಮೌನವಹಿಸಿತ್ತು. ರಿಮೋಟು ಟೀಪಾಯ್‌ ಮೇಲಿತ್ತು.  “”ನೋಡಿ ಅಂಕಲ್‌, ಟಿವಿ ರಿಮೋಟು ಸದಾ ಅಪ್ಪನ ಕೈನಲ್ಲೇ ಇರಬೇಕಂತೆ. ಅವರು ನೋಡೋ ಚಾನಲ್‌ ಅನ್ನು ನಾವು ಬೇಕಾದರೆ ನೋಡಬಹುದಂತೆ. ಇಲ್ಲವಾದರೆ ಎದ್ದು ಹೋಗಬಹುದಂತೆ. ನಾವಿನ್ನೂ ವಿದ್ಯಾರ್ಥಿಗಳಾಗಿರುವುದರಿಂದ ಟಿವಿ ಮೇಲೆ ನಮಗೆ ಯಾವ ರೈಟೂ ಇಲ್ಲವಂತೆ. ಹಿಟ್ಲರ್‌ ಆಗಿದಾರೆ ನಮ್ಮಪ್ಪ” ಸುಬ್ಬುನ ಮಕ್ಕಳು ಪವನ ಮತ್ತು ಪಿಂಕಿ ಟಿವಿ ವೇಗದಲ್ಲಿ ಹೇಳಿದರು.

“”ನಿಮ್ಮ ಸ್ನೇಹಿತರಿಗೆ ಒಂದಿಷ್ಟು ಬುದ್ಧಿ ಹೇಳಿ.  ಗಂಡಸರು ಇಷ್ಟೊಂದು ಟಿವಿಗೆ ಅಡಿಕ್ಟ್ ಆಗಿರೋದನ್ನ ನಾನೆಲ್ಲೂ ಕೇಳಿಲ್ಲ” ದೂರುವ ಸರದಿ ಶಾಲಿನಿಯದಾಗಿತ್ತು, “”ಮತ್ತೆ ಇವರು ನೋಡೋ ಚಾನಲ್ಲುಗಳ್ಳೋ? ಪರಮಾತ್ಮನಿಗೇ ಪ್ರಿಯವಾಗಬೇಕು. ಎಎಕ್ಸ್‌ ಎನ್‌, ಡಿಸ್ಕವರಿ, ಮಿಸ್ಟರಿ, ಹಿಸ್ಟರಿ… ಇಂಥವೇ! ಇವನ್ನ ನಾವ್ಯಾರಾದ್ರೂ ನೋಡೋಕಾಗುತ್ತಾ, ನೀವೇ ಹೇಳಿ? ರಾತ್ರಿಯೆಲ್ಲ ಟಿವಿ ನೋಡೋದು ಬೆಳಿಗ್ಗೆ ಫ್ಯಾಕ್ಟ್ರೀಲಿ ತೂಕಡಿಸೋದು. ಬಾಸುಗಳ ಕೈಲಿ ಉಗಿಸಿಕೊಳ್ಳೋದು” ಶಾಲಿನಿ ಆರೋಪಗಳ ಸುರಿಮಳೆ ಸುರಿಸಿದಳು.

“”ಫ್ಯಾಕ್ಟ್ರಿ ಸುದ್ದಿಗೆ ಬರಬೇಡ ಶಾಲಿನಿ” ಸುಬ್ಬು ಗುಡುಗಿದ.””ಯಾಕ್ರೀ ಬರಬಾರದು? ಫ್ಯಾಕ್ಟ್ರಿಗೆೆ ಹೋಗೋ ಎಲ್ಲಾ ಗಂಡಸರ ಹಾಗೆ ನೀವೂ ರಾತ್ರಿ ಬೇಗನೆ ಮಲಗಿ, ಬೆಳಗ್ಗೆ ಬೇಗನೆ ಎದ್ದು ಒಂಚೂರು ಮನೆಕೆಲಸ ಮಾಡಿ ಫ್ಯಾಕ್ಟ್ರಿಗೆ ಹೋಗಬಾರದೆ?” ಎನ್ನುತ್ತಿದ್ದ ಶಾಲಿನಿ, “”ರಾತ್ರಿ ನೀವೆಷ್ಟು ಹೊತ್ತಿಗೆ ಮಲಗುತ್ತೀರಿ?” ಪ್ರಶ್ನೆ ನನ್ನತ್ತ ತಿರುಗಿದ್ದಕ್ಕೆ ಗಾಬರಿಯಾದೆ.

“”ಹತ್ತೂವರೆ ಗಂಟೆಗೆ” ತಡವರಿಸಿದೆ.””ನೋಡಿ ಅದಲ್ಲವೆ ಒಳ್ಳೆ ಗಂಡಸರ ಲಕ್ಷಣ.  ಹುಂ… ಇನ್ನು ಏಳ್ಳೋದು?”””ಐದು ಗಂಟೆ”””ನೋಡ್ರೀ, ನಿಮ್ಮ ಚಡ್ಡಿ ಫ್ರೆಂಡನ್ನ. ಅವರ ಥರ‌ ನೀವ್ಯಾಕ್ರೀ ಇರಬಾರದು?” “”ಅವನಿಗೇನು, ಬೆಳಿಗ್ಗೆ ಎದ್ದು ಕತೆ, ಕವನ ಕೊರೀತಾನೆ” ಸುಬ್ಬು ಗೊಣಗಿದ,””ನೀವೂ ಕೊರೀರಿ. ಅದಾಗದಿದ್ದರೆ ಗಿಡಕ್ಕೆ ನೀರು ಹಾಕಿ, ವಾಕಿಂಗ್‌ ಹೋಗಿ. ರಾತ್ರಿ ಹತ್ತಕ್ಕೆ ಮಲಗಿ, ಬೆಳಿಗ್ಗೆ ನಾಲ್ಕಕ್ಕೆ ಏಳಿ. ಒಂದಿಷ್ಟು ಅಡಿಗೆ ಮನೆ ಕೆಲಸ ಮಾಡಿ. ಗಂಡಸಿಗ್ಯಾಕೆ ಗೌರಿ ದುಃಖ ಅನ್ನೋ ಗಾದೇನ ಬದಲಿಗೆ ಗಂಡಸಿಗ್ಯಾಕೆ ಟಿವಿ ಚಿಂತೆ ಅನ್ನೋ ಹೊಸ ಗಾದೆ ಪ್ರಯೋಗ ಮಾಡಬೇಕು” ಶಾಲಿನೀದು ಮೇಲುಗೈಯಾಗುತ್ತಿತ್ತು.

“”ಅಪ್ಪಾ , ಅಂಕಲ್‌ ನೋಡಿ ಕಲೀರಿ” ಪಿಂಕಿ ಮತ್ತು ಪವನ ಹಿಮ್ಮೇಳ ಹಾಡಿದರು.””ಟಿವಿ ತಂಟೆಗೆ ನೀವು ಬರಬೇಡಿ. ರಾತ್ರಿಯೆಲ್ಲ ಟಿವಿ ನೋಡೋದೂ ಬೇಡ, ಬಾಸುಗಳ ಕೈಲಿ ಬೈಸಿಕೊಳ್ಳೋದೂ ಬೇಡ” ಸುಬ್ಬು ಕೆರಳಿದ. “”ಯಾವೋನು ಹೇಳಿದ್ದು. ನಾನು ಫ್ಯಾಕ್ಟ್ರೀಲಿ ತೂಕಡಿಸುತ್ತೀನಿ, ಬಾಸುಗಳ ಕೈಲಿ ಬೈಸಿಕೋತೀನಿ ಅಂತ?”ಅಪಾಯದ  ವಾಸನೆ ಹಿಡಿದಿದ್ದ ನಾನು ಬಾಗಿಲ ಬಳಿ ಧಾವಿಸಿದ್ದೆ.

“”ಮರೆತೇಬಿಟ್ಟಿದ್ದೆ. ಮನೆಯವಳು ಮೆಣಸಿನಕಾಯಿ ತನ್ನಿ ಅಂತ ಹೇಳಿದ್ದಳು” ಎಂದು ಹೇಳುತ್ತಲೇ ಮೆಲ್ಲನೆ ಜಾರಿದ್ದೆ.””ನಾಳೆ ಸಿಗು, ಮೆಣಸಿನಕಾಯಿ ತಿನ್ನಿಸ್ತೀನಿ” ದನಿಯೆತ್ತರಿಸಿ ಹೇಳಿದ ಸುಬ್ಬು.

“”ತಪ್ಪು ನಿಮ್ಮದು. ಅವರನ್ನ ಯಾಕ್ರೀ ಟಾರ್ಗೆಟ್‌ ಮಾಡ್ಕೊà ದ್ದೀರಾ? ಪಿಂಕಿ ರಿಮೋಟ್‌ ತಗೋ, ಇನ್ನು ನಿಮ್ಮಪ್ಪನಿಗೂ ಟಿವಿಗೂ ಯಾವ ಸಂಬಂಧವೂ ಇಲ್ಲ” ಶಾಲಿನಿ ಜಡ್ಜ್ಮೆಂಟ್‌ ಕೊಡುವಾಗ ನಾನು ಗೇಟಿನ ಬಳಿಯಿದ್ದೆ. 

– ಎಸ್‌. ಜಿ. ಶಿವಶಂಕರ್‌

ಟಾಪ್ ನ್ಯೂಸ್

BJP FLAG

Maharashtra ; ಕೈ ಯಿಂದ ಲೋಕಸಭಾ ಸ್ಥಾನ ಕಸಿದ ಬಿಜೆಪಿ: ರಾಜ್ಯಸಭೆ ಬಹುಮತದತ್ತ ಚಿತ್ತ

kolahara-TV

By Election: ಮೂರು ಕ್ಷೇತ್ರದಲ್ಲೂ ಬಿಜೆಪಿ ಸೋತಿದ್ದಕ್ಕೆ ಟಿವಿಯನ್ನೇ ಒಡೆದು ಹಾಕಿದ ಮುಖಂಡ!

8

Basavaraj Bommai: ಹಣದ ಹೊಳೆಹರಿಸಿ ಕಾಂಗ್ರೆಸ್‌ ಗೆಲುವು: ಬೊಮ್ಮಾಯಿ ಆರೋಪ

RSS

Maharashtra; ಮಹಾಯುತಿಯ ಮಹಾ ಗೆಲುವಿನಲ್ಲಿ ಆರ್ ಎಸ್ಎಸ್ ದೊಡ್ಡ ಕೊಡುಗೆ

CM-Office

By Election Result: ನಾನು ದಂತದ ಗೋಪುರದಲ್ಲಿ ಕೂತವನಲ್ಲ,ಜನರೊಂದಿಗೆ ಸದಾ ಒಡನಾಟವಿದೆ: ಸಿಎಂ

1-ree

Maharashtra; ಪತಿಗೆ ಸೋಲು: ಮತಯಂತ್ರಗಳ ಕುರಿತು ಆಪಾದಿಸಿದ ನಟಿ ಸ್ವರಾ ಭಾಸ್ಕರ್

mamata

West Bengal bypolls; ಟಿಎಂಸಿ ಕ್ಲೀನ್ ಸ್ವೀಪ್: ಪ್ರತಿಭಟನೆಗಳು ಬಿಜೆಪಿಗೆ ಸಹಕಾರಿಯಾಗಲಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

142

Laddu Mutya: ಬದುಕು ಅರಳಿಸಿದ ಬಾಗಲಕೋಟೆಯ ಭಗವಂತ: ತಮಾಷೆಯ ವಸ್ತುವಲ್ಲ ಲಡ್ಡು ಮುತ್ಯಾ

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

6

ಐರನ್‌ ಮ್ಯಾನ್: ರೀಲ್‌ ಅಲ್ಲ, ರಿಯಲ್‌ ಹೀರೋಗಳ ಕಥೆ!

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

BJP FLAG

Maharashtra ; ಕೈ ಯಿಂದ ಲೋಕಸಭಾ ಸ್ಥಾನ ಕಸಿದ ಬಿಜೆಪಿ: ರಾಜ್ಯಸಭೆ ಬಹುಮತದತ್ತ ಚಿತ್ತ

kolahara-TV

By Election: ಮೂರು ಕ್ಷೇತ್ರದಲ್ಲೂ ಬಿಜೆಪಿ ಸೋತಿದ್ದಕ್ಕೆ ಟಿವಿಯನ್ನೇ ಒಡೆದು ಹಾಕಿದ ಮುಖಂಡ!

8

Basavaraj Bommai: ಹಣದ ಹೊಳೆಹರಿಸಿ ಕಾಂಗ್ರೆಸ್‌ ಗೆಲುವು: ಬೊಮ್ಮಾಯಿ ಆರೋಪ

RSS

Maharashtra; ಮಹಾಯುತಿಯ ಮಹಾ ಗೆಲುವಿನಲ್ಲಿ ಆರ್ ಎಸ್ಎಸ್ ದೊಡ್ಡ ಕೊಡುಗೆ

7

Pakistan: ಪಾಕ್‌ನಲ್ಲಿ ಹಿಂಸಾಚಾರ; ಒಟ್ಟು 37 ಮಂದಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.