ಹಿರಿಯಡಕ ಕ್ಷೇತ್ರ: ಇಂದು ಬ್ರಹ್ಮಕಲಶೋತ್ಸವ ಸಂಭ್ರಮ
Team Udayavani, Apr 22, 2018, 6:15 AM IST
ಹಿರಿಯಡಕ: 26 ಕೋ.ರೂ. ವೆಚ್ಚದಲ್ಲಿ ಜೀರ್ಣೋದ್ಧಾರಗೊಂಡ ಸುಮಾರು 800 ವರ್ಷ ಇತಿಹಾಸ ವಿರುವ ಶ್ರೀ ವೀರಭದ್ರ ಸ್ವಾಮಿ ದೇಗುಲದಲ್ಲಿ ಎ. 22 ರಂದು ಬ್ರಹ್ಮಕಲಶೋತ್ಸವ ಜರಗಲಿದೆ.
ಆದಿ-ಆಲಡೆ ಎಂದು ಗುರುತಿಸಲ್ಪಡುವ ಈ ಕ್ಷೇತ್ರದಲ್ಲಿ ಎ. 16ರಿಂದ ಎ. 25ರ ತನಕ ವಿವಿಧ ಕಾರ್ಯಕ್ರಮ ನಡೆದಿದ್ದು ಎ. 22ರಂದು ನಡೆಯುವ ಬ್ರಹ್ಮಕಲಶೋತ್ಸವಕ್ಕೆ ಸಹಸ್ರ ಸಂಖ್ಯೆಯ ಭಕ್ತ ಸಾಗರ ಸಾಕ್ಷಿಯಾಗಲಿದೆ.
ಆಲಡೆ ಕ್ಷೇತ್ರವಾದ ಹಿರಿಯಡಕ ಕ್ಷೇತ್ರ ಅತ್ಯಾಕರ್ಷಕ ಕೆತ್ತನೆ, ದಾರುಶಿಲ್ಪದ ಮೂಲಕ ಭಕ್ತ ಸಮೂಹವನ್ನು ಆಕರ್ಷಿ ಸುತ್ತಿದೆ. ಉಡುಪಿ, ದ.ಕ., ಶಿವಮೊಗ್ಗ, ಚಿಕ್ಕಮಗಳೂರು ಮೊದಲಾದ ಪ್ರದೇಶಗಳಿಂದ ಆಗಮಿಸುವ ಭಕ್ತರಿಗೆ ಯಾವುದೇ ಅಡಚಣೆಯಾಗದಂತೆ ಜೀರ್ಣೋದ್ಧಾರ ಸಮಿತಿ ಸುಮಾರು 1,500 ಸ್ವಯಂ ಸೇವಕರ ಮೂಲಕ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ.
ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆ
ಸುಮಾರು 3 ಸಾವಿರಕ್ಕೂ ಮಿಕ್ಕಿ ವಾಹನಗಳ ನಿಲುಗಡೆಗೆ 6 ಪ್ರದೇಶಗಳಲ್ಲಿ ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು ಉಡುಪಿ, ಮಣಿಪಾಲ ದಿಂದ ಆಗಮಿಸುವ ಭಕ್ತರಿಗೆ ಮಾಧವ ಮಂಗಲ ಸಭಾಭವನದ ಬಳಿ, ಹೆಬ್ರಿ ಕಡೆಯಿಂದ ಆಗಮಿಸುವವರಿಗೆ ಹಿರಿಯಡಕ ಗಾಂಧಿ ಮೈದಾನ ಬಳಿ, ಕಾರ್ಕಳ ಕಡೆಯಿಂದ ಬರುವವರಿಗೆ ಕೋಟ್ನಕಟ್ಟೆ ಗಾಂಧಿ ಮೈದಾನ ಬಳಿ, ಬ್ರಹ್ಮಾವರ ಪೇತ್ರಿ ಕಡೆಯಿಂದ ಬರುವವರಿಗೆ ಬಜೆ ರಸ್ತೆಯ ಸಪ್ನಾ ರೆಸ್ಟೋರೆಂಟ್ ಬಳಿ, ಪುರೋಹಿತರು ಮತ್ತು ಸ್ವಯಂಸೇವಕರಿಗೆ ದೇವಸ್ಥಾನದ ಹಿಂಬದಿ ಮಾದ್ರಿ ರಸ್ತೆ ಬಳಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.
ದೇವಸ್ಥಾನಕ್ಕೆ ಉಚಿತ ವಾಹನ
ಪಾರ್ಕಿಂಗ್ ಸ್ಥಳದಿಂದ ದೇವಸ್ಥಾನಕ್ಕೆ ಸುಮಾರು 50ಕ್ಕೂ ಹೆಚ್ಚು ವಾಹನಗಳಿಂದ ಉಚಿತ ವ್ಯವಸ್ಥೆ ಮಾಡಲಾಗಿದೆ.
ಶೀಘ್ರ ದೇವರ ದರ್ಶನ
ಅಪಾರ ಭಕ್ತರು ದೇವರ ದರ್ಶನಕ್ಕೆ ಬರುವುದರಿಂದ ಯಾವುದೇ ನೂಕು ನುಗ್ಗಲು ಆಗದಂತೆ ಕೇವಲ 15 ನಿಮಿಷಗಳ ಒಳಗೆ ದೇವರ ದರ್ಶನ ಮಾಡಿ ಬರುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ.60 ಸಾವಿರಕ್ಕೂ ಅಧಿಕ ಮಂದಿಗೆ ಅನ್ನಸಂತರ್ಪಣೆ ಎ. 16ರಿಂದ ನಿರಂತರ ಉಪಾಹಾರ, ಅನ್ನಸಂತರ್ಪಣೆ ನಡೆಯುತ್ತಿದ್ದು ಎ. 22ರಂದು ನಡೆಯುವ ಬ್ರಹ್ಮ ಕಲಶೋತ್ಸವಕ್ಕೆ ಸುಮಾರು 60 ಸಾವಿರಕ್ಕೂ ಮಿಕ್ಕಿ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ನೂಕುನುಗ್ಗಲು ತಡೆ ಯಲು ಏಕಕಾಲದಲ್ಲಿ 3 ಸಾವಿರ ಮಂದಿ ಕುಳಿತು ಊಟ ಮಾಡುವ ಟೇಬಲ್ ವ್ಯವಸ್ಥೆ, 6 ಸಾವಿರ ಜನರಿಗಾಗುವಷ್ಟು ಬಫೆ ಕೌಂಟರ್ ವ್ಯವಸ್ಥೆ ಮಾಡಲಾಗಿದೆ.
ಸುಧರ್ಮ ಸಭೆ
ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಸುಧರ್ಮ ಸಭೆ ಶ್ರೀ ಬ್ರಹ್ಮಶ್ರೀ ಉಚ್ಚಿಲತ್ತಾಯ ನೀಲೇಶ್ವರ ಪದ್ಮನಾಭ ತಂತ್ರಿ ಅಧ್ಯಕ್ಷತೆಯಲ್ಲಿ ನಡೆಯಲಿದೆ. ನ್ಯಾ| ಮೂ| ಶ್ರೀ ವಿಶ್ವನಾಥ ಶೆಟ್ಟಿ, ಡಾ| ಬಿ.ಎಂ. ಹೆಗ್ಡೆ, ಎಸ್.ಎನ್. ಹೆಗ್ಡೆ, ಡಾ| ರತನ್ ಕೇಳ್ಕರ್, ಮುನಿಯಂಗಳ ಪ್ರಸಾದ್ ಭಟ್, ನಾಡೋಜ ಜಿ. ಶಂಕರ್, ಡಾ| ಎಂ. ಮೋಹನ್ ಆಳ್ವ, ಸದನಂ ನಾರಾಯಣ ಪುದುವಾಳ್, ಬಿ. ಜಗನ್ನಾಥ ಶೆಟ್ಟಿ, ಡಾ| ಶಶಿಕಿರಣ್ ಶೆಟ್ಟಿ, ಎನ್.ಬಿ. ಶೆಟ್ಟಿ, ಪ್ರಕಾಶ್ ಶೆಟ್ಟಿ ಪರೀಕ, ಪಿ.ಎ. ಕಿಣಿ, ಬಸ್ತಿ ಸರ್ವೋತ್ತಮ ಪೈ, ಕೊಡಿಬೈಲು ನಾರಾಯಣ ಹೆಗ್ಡೆ, ಅರುಣಾಕರ ಡಿ. ಶೆಟ್ಟಿ ಭಾಗವಹಿಸಲಿದ್ದಾರೆ.
ಸಾಂಸ್ಕೃತಿಕ ವೈವಿಧ್ಯ
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ದೇವಸ್ಥಾನದಲ್ಲಿ ರಾಷ್ಟ್ರ ಮಟ್ಟದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿದ್ದು ಎ. 22ರಂದು ಸಂಜೆ 7ರಿಂದ ಪಂ| ಪ್ರವೀಣ್ ಗೋಡಿRಂಡಿ ಮತ್ತು ಬಳಗ ಬೆಂಗಳೂರು ಅವರಿಂದ ಕೊಳಲು ವಾದನ, ರಾತ್ರಿ 9ಕ್ಕೆ ಸನಾತನ ನಾಟ್ಯಾಲಯ ಮಂಗಳೂರು, ನೃತ್ಯ ನಿಕೇತನ ಕೊಡವೂರು, ವಸಂತ ನಾಟ್ಯಾಲಯ ಕುಂದಾಪುರ ಅವರಿಂದ ನೃತ್ಯ ಸಿಂಚನ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಆದಿ ಉಡುಪಿ: ಜುಗಾರಿ ಅಡ್ಡೆಗೆ ಪೊಲೀಸ್ ದಾಳಿ
Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Udupi:ಗೀತಾರ್ಥ ಚಿಂತನೆ 103: ಪಂಡಿತರೆಂದರೇನು?ಅಥವ ಪಂಡಿತರೆಂದರೆ ಯಾರು?
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Maharashtra: ಕಾಂಗ್ರೆಸ್ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ
Politics: ಫಡ್ನವೀಸ್ ಗೆ ಬೆಂಬಲ ನೀಡಿದ ಅಜಿತ್; ಮಹಾರಾಷ್ಟ್ರದಲ್ಲಿ ಮುಗಿಯದ ಸಿಎಂ ತಿಕ್ಕಾಟ
Video: ನೋಟಿನ ಮಾಲೆಯ ನೋಟು ಎಗರಿಸಿದ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ
Sudeep: ʼಮ್ಯಾಕ್ಸ್ʼ ರಿಲೀಸ್ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ
Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.