ಮಕ್ಕಳ ಅತ್ಯಾಚಾರಿಗಳಿಗೆ ನೇಣಿನ ಕುಣಿಕೆ
Team Udayavani, Apr 22, 2018, 6:00 AM IST
ಹೊಸದಿಲ್ಲಿ: ಕಥುವಾ, ಸೂರತ್‌ನಲ್ಲಿನ ಮಕ್ಕಳ ಮೇಲಿನ ಹಾಗೂ ಉನ್ನಾವ್‌ನ ಯುವತಿ ಮೇಲಿನ ಅತ್ಯಾಚಾರ ಪ್ರಕರಣಗಳ ಬಿಸಿ ತಾರಕಕ್ಕೇರಿರುವ ಬೆನ್ನಲ್ಲೇ 12 ವರ್ಷದೊಳಗಿನ ಮಕ್ಕಳ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸುವ ಕಠಿನ ಕಾನೂನು ಜಾರಿಗೆ ತರಲು ಕೇಂದ್ರ ಸರಕಾರ ಅಧ್ಯಾದೇಶ ಹೊರಡಿಸಿದೆ.
ಈ ಪ್ರಕರಣಗಳ ಸಂಬಂಧ ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿದ್ದರೂ ವಿವಿಧೆಡೆ ಇನ್ನೂ ಅತ್ಯಾಚಾರಿಗಳಿಗೆ ಮಕ್ಕಳು ಬಲಿಯಾಗುತ್ತಿರುವುದು ಮುಂದುವರಿದೇ ಇದೆ. ಹೀಗಾಗಿ ಲೈಂಗಿಕ ದೌರ್ಜನ್ಯಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೋಕ್ಸೋ)ಗೆ ತಿದ್ದುಪಡಿ ಮಾಡಲು ಅಧ್ಯಾದೇಶ ತರಲಾಗಿದೆ. ಐದು ದಿನಗಳ ವಿದೇಶ ಪ್ರವಾಸಕ್ಕೆಂದು ತೆರಳಿದ್ದ ಪ್ರಧಾನಿ ಮೋದಿ ಶನಿವಾರ ದಿಲ್ಲಿಗೆ ವಾಪಸ್ ಆದ ಒಂದೆರಡು ಗಂಟೆಗಳಲ್ಲಿ ಕೇಂದ್ರ ಸಂಪುಟ ಸಭೆ ನಡೆಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಅಧ್ಯಾದೇಶವನ್ನು ರಾಷ್ಟ್ರಪತಿಗಳ ಅಂಕಿತಕ್ಕಾಗಿ ಕಳುಹಿಸಲಾಗಿದೆ.
ಸದ್ಯದ ಮಟ್ಟಿಗೆ ಜೀವಾವಧಿ ಅಥವಾ ನಿಗದಿತ ವರ್ಷಗಳ ಕಠಿನ ಕಾರಾಗೃಹ ಶಿಕ್ಷೆ ಮಾತ್ರವೇ ಅತ್ಯಾಚಾರಿಗಳಿಗೆ ನೀಡಬಹುದಾಗಿರುವ ಗರಿಷ್ಠ ಶಿಕ್ಷೆಯಾಗಿರುವುದರಿಂದ ಈ ಕಾನೂನಿನಲ್ಲಿ ಗರಿಷ್ಠ ಶಿಕ್ಷೆಯನ್ನು ಮರಣ ದಂಡನೆಗೆ ಹೆಚ್ಚಿಸಲು, ಭಾರತೀಯ ದಂಡ ಸಂಹಿತೆ (ಐಪಿಸಿ), ಸಾಕ್ಷ್ಯಾಧಾರ ಕಾಯ್ದೆ, ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಹಾಗೂ ಲೈಂಗಿಕ ದೌರ್ಜನ್ಯಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೋಕ್ಸೋ)ಗಳಿಗೆ ತಿದ್ದುಪಡಿ ತರುವ ಪ್ರಸ್ತಾವನೆಯನ್ನು ಅಧ್ಯಾದೇಶದಲ್ಲಿ ವಿವರಿಸಲಾಗಿದೆ.
ಇಂತಿಷ್ಟೇ ದಿನದಲ್ಲಿ ಪ್ರಕರಣದ ತನಿಖೆ, ವಿಚಾರಣೆ ಮುಗಿಸಿ ಶಿಕ್ಷೆ ಪ್ರಮಾಣ ಘೋಷಿಸಬೇಕು ಎಂಬ ಅಂಶವನ್ನೂ ಸೇರಿಸಲಾಗಿದ್ದು, ನಿರೀಕ್ಷಣಾ ಜಾಮೀನು ಅವಕಾಶವನ್ನೇ ತೆಗೆದು ಹಾಕಲಾಗಿದೆ. ಅಲ್ಲದೆ, ವೇಗಗತಿಯಲ್ಲಿ ಪ್ರಕರಣದ ತನಿಖೆ ಪೂರ್ಣಗೊಳ್ಳಬೇಕು ಎಂಬ ಕಾರಣಕ್ಕಾಗಿ ದೇಶದ ಎಲ್ಲ ಪೊಲೀಸ್ ಠಾಣೆ ಮತ್ತು ಆಸ್ಪತ್ರೆಗಳಿಗೆ ವಿಧಿವಿಜ್ಞಾನ ಕಿಟ್ ನೀಡಲೂ ಒಪ್ಪಿಗೆ ಸೂಚಿಸಲಾಗಿದೆ.
ಜಾಮೀನಿಗೆ ನಿಬಂಧನೆಗಳು
16 ವರ್ಷದೊಳಗಿನವರ ಮೇಲೆ ಅತ್ಯಾಚಾರ ಅಥವಾ ಸಾಮೂಹಿಕ ಅತ್ಯಾಚಾರ ಎಸಗಿರುವವರಿಗೆ ನಿರೀಕ್ಷಣಾ ಜಾಮೀನು ಇಲ್ಲ.
ಆರೋಪಿ ಸಲ್ಲಿಸುವ ಜಾಮೀನು ಅರ್ಜಿಯನ್ನು ಇತ್ಯರ್ಥಗೊಳಿಸುವ ಮುನ್ನ ನ್ಯಾಯಾಧೀಶರು, ಸರಕಾರಿ ಅಭಿಯೋಜಕರಿಗೆ ಹಾಗೂ ಆರೋಪಿ ಪರ ವಕೀಲರಿಗೆ 15 ದಿನಗಳಲ್ಲಿ ಅಹವಾಲು ಸಲ್ಲಿಸಲು ನೋಟಿಸ್ ಜಾರಿ ಮಾಡಬೇಕು.
ಎಲ್ಲ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಹಾಗೂ ಹೈಕೋರ್ಟ್ ಗಳ ಜತೆ ಸಮಾಲೋಚನೆ ನಡೆಸಿ ಅತ್ಯಾಚಾರ ಪ್ರಕರಣಗಳ ತ್ವರಿತ ವಿಚಾರಣೆಗಾಗಿ ತ್ವರಿತ ನ್ಯಾಯಾಲಯ ಸ್ಥಾಪನೆ.
ತ್ವರಿತ ವಿಚಾರಣೆಗಾಗಿ ನೂತನ ಸರಕಾರಿ ಅಭಿಯೋಜಕರ ನೇಮಕ ಹಾಗೂ ಸೂಕ್ತ ಮೂಲಸೌಕರ್ಯಗಳನ್ನು ಒದಗಿಸುವುದು
ಎಲ್ಲ ಪೊಲೀಸ್ ಠಾಣೆಗಳಿಗೆ, ಆಸ್ಪತ್ರೆಗಳಿಗೆ ವಿಶೇಷ ವಿಧಿವಿಜ್ಞಾನ ಕಿಟ್ ನೀಡಿಕೆ.
ತನಿಖೆಗಾಗಿ ನಿಗದಿತ ಅವಧಿಯಲ್ಲಿ ಅಗತ್ಯಕ್ಕೆ ತಕ್ಕಂತೆ ಪ್ರತ್ಯೇಕ ಸಿಬಂದಿ.
ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ವಿಶೇಷ ವಿಧಿವಿಜ್ಞಾನ ಪ್ರಯೋಗಾಲಯ ಸ್ಥಾಪನೆ
ರಾಷ್ಟ್ರೀಯ ಅಪರಾಧ ದಾಖಲೆಗಳ ಸಂಸ್ಥೆಯಲ್ಲಿ ಲೈಂಗಿಕ ಅಪರಾಧಿ ಗಳಿಗಾಗಿ ಪ್ರತ್ಯೇಕ ಡೇಟಾಬೇಸ್.
ನಿಗದಿತ ಕಾಲಘಟ್ಟದಲ್ಲಿ ಡೇಟಾಬೇಸ್‌ನಲ್ಲಿನ ಅಪರಾಧಿಗಳ ಮಾಹಿತಿ ರಾಜ್ಯಗಳಿಗೆ, ಕೇಂದ್ರಾಡಳಿತ ಪ್ರದೇಶಗಳಿಗೆ ರವಾನೆ.
ಸಂತ್ರಸ್ತೆಯರ ನೆರವಿಗಾಗಿ ಪ್ರಸ್ತುತ ಚಾಲ್ತಿಯಲ್ಲಿರುವ “ಒನ್ ಸ್ಟಾಪ್’ ಕೇಂದ್ರಗಳನ್ನು ಎಲ್ಲ ಜಿಲ್ಲೆಗಳಲ್ಲಿ ತೆರೆಯುವುದು.
ಯಾವುದರಲ್ಲಿ ಏನೇನು ಬದಲಾವಣೆ?
ಕ್ರಿಮಿನಲ್ ಕಾನೂನು
ಮಹಿಳೆಯರ ಮೇಲಿನ ಅತ್ಯಾಚಾರ
ಇನ್ನು ಮುಂದೆ ಕನಿಷ್ಠ 10 ವರ್ಷ ಜೈಲು ಶಿಕ್ಷೆ. ಇದುವರೆಗೆ ಕನಿಷ್ಠ ಏಳು ವರ್ಷವಿತ್ತು, ಇನ್ನು ಮುಂದೆ ಇದು ಜೀವಾವಧಿವರೆಗೂ ವಿಸ್ತರಿಸಬಹುದು.
16 ವರ್ಷದೊಳಗಿನ ಸಂತ್ರಸ್ತೆ
ಶಿಕ್ಷೆಯ ಪ್ರಮಾಣ ಈಗಿರುವ 10ರಿಂದ 20 ವರ್ಷ ಅಥವಾ ಜೀವಾವಧಿವರೆಗೂ ವಿಸ್ತರಣೆ.
16 ವರ್ಷದೊಳಗಿನ ಸಂತ್ರಸ್ತೆ ಮೇಲೆ ಗ್ಯಾಂಗ್‌ರೇಪ್
ಅತ್ಯಾಚಾರಿಗಳಿಗೆ ಜೀವಾವಧಿ ಶಿಕ್ಷೆ.
12 ವರ್ಷದೊಳಗಿನ ಮಕ್ಕಳು
ಅತ್ಯಾಚಾರಿಗೆ 20 ವರ್ಷಗಳ ಕಾರಾಗೃಹ ಅಥವಾ ಜೀವಾವಧಿ ಅಥವಾ ಮರಣದಂಡನೆ.
12 ವರ್ಷದೊಳಗಿನ ಬಾಲಕಿ ಮೇಲಿನ ಗ್ಯಾಂಗ್‌ರೇಪ್
ಜೀವಾವಧಿ ಅಥವಾ ಗಲ್ಲುಶಿಕ್ಷೆ.
ವೇಗದ ತನಿಖೆ ಮತ್ತು ವಿಚಾರಣೆ
ಸಂಪೂರ್ಣ ತನಿಖೆಗೆ 2 ತಿಂಗಳ ಗಡುವು
ವಿಚಾರಣೆಗೆ 2 ತಿಂಗಳ ಕಾಲಾವಧಿ
ಮೇಲ್ಮನವಿಯ ಇತ್ಯರ್ಥಕ್ಕೆ ಆರು ತಿಂಗಳ ಗಡುವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ
ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ
Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ
Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.