ಸುಳ್ಯದ ರಂಗಮನೆ ಚಿಣ್ಣರಿಗೆ ರಂಗಿನ ಮನೆ!
Team Udayavani, Apr 22, 2018, 11:20 AM IST
ಸುಳ್ಯ: ಇಲ್ಲಿ ಊರು, ಕೇರಿಯ, ಜಾತಿ, ಧರ್ಮದ ಹಂಗಿಲ್ಲ. ಅವರು- ಇವರೆಂಬ ಭೇದವಿಲ್ಲದೆ, ದಿನವಿಡಿ ಖುಷಿ ಪಡುತ್ತಾರೆ. ಮನೆ ಪೂರ್ತಿ ಪ್ರಕೃತಿ ಪಾಠದ ಹೂರಣ, ವ್ಯಕ್ತಿತ್ವ ವಿಕಸನಕ್ಕೆ ಚಟುವಟಿಕೆ ನೆಲೆಯಾದ ರಂಗಮನೆ ನಿಜಾರ್ಥದಲ್ಲಿ ಚಿಣ್ಣರ ಪಾಲಿನ ರಂಗು ರಂಗಿನ ಮನೆ!
ನಗರದ ಹಳೆಗೇಟಿನಲ್ಲಿರುವ ರಂಗ ನಿರ್ದೇಶಕ ಜೀವನ್‌ರಾಂ ಅವರ ಸಾಂಸ್ಕೃತಿಕ ಕಲಾ ಕೇಂದ್ರದಲ್ಲಿ ಹಮ್ಮಿ ಕೊಂಡಿರುವ ರಾಜ್ಯಮಟ್ಟದ ಚಿಣ್ಣರ ಮೇಳದಲ್ಲಿ ರಾಜ್ಯದ ವಿವಿಧ ಭಾಗಗಳ ವಿದ್ಯಾರ್ಥಿಗಳು ಸಮಾಗಮಗೊಂಡು ಕಲೆಯ ಸೊಗಡಿನ ಕಂಪನ್ನು ಉಂಡರು. ಒಂದಷ್ಟು ಹೊಸ ಸಂಗತಿ ಅರಿತು ಆತ್ಮವಿಶ್ವಾಸ ವೃದ್ಧಿಸಿಕೊಂಡರು. ಬೇರೆ ಬೇರೆ ಕಲಾ ಪ್ರಕಾರಗಳ ನುರಿತದಿಂದ ಆ ಕಲೆಗಳ ಬಗ್ಗೆ, ಪ್ರಕೃತಿ ವೈಶಿಷ್ಟ್ಯದ ಬಗ್ಗೆಯೂ ಶಿಬಿರದಲ್ಲಿ ಅರಿತುಕೊಂಡರು.
ಏನೇನು ಇತ್ತು?
ಸೃಜನಾತ್ಮಕ ಚಿತ್ರಗಳು, ಕ್ರಾಫ್ಟ್, ಮುಖ ವಾಡ, ರಂಗಗೀತೆ, ಅಭಿನಯ ಗೀತೆ, ಮಿಮಿಕ್ರಿ, ರಂಗದಾಟಗಳು, ಮೈಮ್, ಯೋಗ, ಜಾನಪದ ಗೀತೆ, ಚಿಟ್ಟೆ- ಜೇಡ- ಹಾವು-ಇರುವೆ-ಮರಗಳ ಬಗ್ಗೆ ವಿಶೇಷ ಮಾಹಿತಿ, ವಿಜ್ಞಾನ ಮಾದರಿಗಳು, ಅಗ್ನಿಶಮನ ಪ್ರಾತ್ಯಕ್ಷಿಕೆ, ಕಥೆ, ಪರಿಸರ ಕ್ವಿಜ್, ಆರೋಗ್ಯ ಜಾಗೃತಿ, ವರ್ಲಿ ಕಲೆ, ಹಾಡು- ಕುಣಿತ, ನಾಟಕ, ಸಮೂಹ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು.
ರಂಗ ನಿರ್ದೇಶಕ ಸತ್ಯನಾ ಕೊಡೇರಿ ಕುಂದಾಪುರ, ಶಿವಗಿರಿ ಕಲ್ಮಡ್ಕ, ಕೃಷ್ಣಪ್ಪ ಬಂಬಿಲ, ರಾಜೇಶ್ವರಿ ಧಾರವಾಡ, ಚಿತ್ರ ಕಲಾವಿದರಾದ ಸುನೀಲ್ ಮಿಶ್ರಾ ಬೆಂಗಳೂರು, ತಾರಾನಾಥ ಕೈರಂಗಳ, ಭಾಸ್ಕರ ನೆಲ್ಯಾಡಿ, ಪರಿಸರ ಪ್ರೇಮಿಗಳಾದ ಡಾ| ಅಭಿಜಿತ್ ಮೈಸೂರು, ಡಾ| ರೇವತಿ ನಂದನ, ಗುರುಪ್ರಸಾದ್ ಮೈಸೂರು, ಡಾ| ಸುಂದರ ಕೇನಾಜೆ, ಯೋಗಗುರು ಶ್ರೀಧರ ಮಡಿಯಾರ್, ಡಾ|ಜೆ.ಎನ್. ಭಟ್ ಮಂಗಳೂ ಞರು, ಅಗ್ನಿಶಾಮಕ ದಳದ ಬಿ. ಲೋಕೇಶ್, ಪ್ರಸನ್ನ ಐವರ್ನಾಡು, ಪದ್ಮನಾಭ ಕೊಯಿನಾಡು, ಡಾ| ಮೌಲ್ಯಾ ಜೀವನ್‌ರಾಂ, ಪಟ್ಟಾಭಿರಾಮ್ ಸುಳ್ಯ, ಮನೋಜ್ ಆಚಾರ್ಯ, ಶ್ರೀಕಾಂತ್ ಹಾಗೂ ರಂಗಮನೆಯ ಹಳೆ ವಿದ್ಯಾರ್ಥಿ ಗಳಾದ 16 ಮಂದಿ ತರಬೇತಿದಾರರಾಗಿ ಪಾಲ್ಗೊಂಡರು.
ಶಿಬಿರದಿಂದಾಚೆ
ಸುಮಾರು 7ರಿಂದ 16 ವಯಸ್ಸಿನೊಳಗಿನ 170 ಮಕ್ಕಳು ಪಾಲ್ಗೊಂಡರು. ಪ್ರತಿದಿನ ಬೆಳಗ್ಗೆ 9 ಗಂಟೆಯಿಂದ ಸಂಜೆ 4.30ರ ತನಕ ಚಟುವಟಿಕೆ ನಡೆಯಿತು. ನಮ್ಮ ಮನೆ, ನಮ್ಮ ಪ್ರಕೃತಿ ಎಂಬ ವಿಷಯದಡಿ ಮಕ್ಕಳ ಮಾನಸಿಕ ಮತ್ತು ಬೌದ್ಧಿಕ ವಿಕಸನಕ್ಕೆ ಪೂರಕವಾದ ಚಟುವಟಿಕೆಗಳನ್ನು ಇಲ್ಲಿ ಪ್ರಸ್ತುತಪಡಿಸಲಾಯಿತು. ವಿಶೇಷ ಎಂಬಂತೆ, ತೂಗು ಸೇತುವೆ ವೀಕ್ಷಣೆ, ಅಗ್ನಿಶಮನ ಪ್ರಾತ್ಯಕ್ಷಿಕೆಗಳಲ್ಲಿ ಶಿಬಿರಾರ್ಥಿಗಳು ಪಾಲ್ಗೊಂಡು, ಹೊಸ ಅನುಭವಕ್ಕೆ ಸಂಭ್ರಮಿಸಿದರು.
ಇಲ್ಲಿ ಮೈಸೂರು, ಬೆಂಗಳೂರು, ಶೃಂಗೇರಿ, ಮೈಸೂರು, ಮಂಗಳೂರು ಸಹಿತ ವಿವಿಧ ಜಿಲ್ಲೆಯಿಂದ 35ಕ್ಕೂ ಅಧಿಕ ಮಕ್ಕಳು ಆಗಮಿಸಿದ್ದಾರೆ. ಪ್ರತಿ ವರ್ಷವೂ ನೂರಾರು ಮಕ್ಕಳು ಪ್ರವೇಶಕ್ಕೆ ಆಕಾಂಕ್ಷಿತರಾಗಿದ್ದರೂ ಕಲಿಕೆಯ, ವ್ಯವಸ್ಥೆಯ ಹಿತದೃಷ್ಟಿಯಿಂದ ಇಂತಿಷ್ಟು ವಿದ್ಯಾರ್ಥಿಗಳ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಬಾರಿ 170 ಶಿಬಿರಾರ್ಥಿಗಳ ಪೈಕಿ 30 ಮಕ್ಕಳು ಅಲ್ಲೇ ಉಳಿದುಕೊಳ್ಳಲು ವ್ಯವಸ್ಥೆ ಕಲ್ಪಿಸಿದ್ದೇವೆ ಅನ್ನುತ್ತಾರೆ ಡಾ| ಮೌಲ್ಯಾ ಜೀವನ್‌ರಾಂ.
ರಂಗಕಲೆಯ ಮಹಿಮೆ
ಬಾಲ್ಯದಲ್ಲಿ ನನಗೆ ಇಂತಹ ಅವಕಾಶಗಳು ಸಿಕ್ಕಿರಲಿಲ್ಲ. ಆದರೆ ತಂದೆ ಯಕ್ಷಗಾನ ಕಲಾವಿದರು. ಅವರ ಪ್ರದರ್ಶನದಲ್ಲಿ ಪ್ರೇಕಕನಾಗಿ ಪಾಲ್ಗೊಂ ಡದ್ದು, ಕಲೆಯ ಆಸಕ್ತಿಗೆ ಕಾರಣ. ಯಕ್ಷಗಾನವೇ ನನ್ನ ಮೂಲ ಪ್ರೇರಕ ಶಕ್ತಿ. ರಂಗಮನೆ ಬೇಸಗೆ ಶಿಬಿರಕ್ಕೆ ಇದು 17ನೇ ವರ್ಷ. ವೈಯಕ್ತಿಕ ನೆಲೆಯಲ್ಲಿ ನನ್ನ ಬೇಸಗೆ ಶಿಬಿರದ ಚಟುವಟಿಕೆಗಳಿಗೆ ಇದು 27ನೇ ವರ್ಷವಿದು.
– ಜೀವನ್‌ರಾಂ
ರಂಗಮನೆ ನಿದೇರ್ಶಕ
ಕಿರಣ್ ಪ್ರಸಾದ್ ಕುಂಡಡ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf ವಿಷಯ ಮುಗಿದು ಹೋಗಿದೆ.. ಬಿಜೆಪಿಯವರಿಂದ ಗೊಂದಲ: ಲಕ್ಷ್ಮಣ ಸವದಿ
Dandeli: ಅಪರಿಚಿತ ವಾಹನ ಡಿಕ್ಕಿ; ಕರು ಸಾವು
Covid ಗಿಂತ ಬಿಜೆಪಿ ಭ್ರಷ್ಟಾಚಾರದಿಂದ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ: ಖಂಡ್ರೆ
Delhi: ಕ್ಷುಲ್ಲಕ ಕಾರಣಕ್ಕೆ 19ರ ಯುವಕನ ಗುಂಡಿಕ್ಕಿ ಹ*ತ್ಯೆಗೈದ ಅಪ್ರಾಪ್ತರು!!
BBK11: ಬಿಗ್‌ಬಾಸ್ ಆಟ ನಿಲ್ಲಿಸಿದ ಖ್ಯಾತ ಸ್ಪರ್ಧಿ.. ಈ ವಾರ ಆಚೆ ಬರುವುದು ಇವರೇ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.