ಶಾಂತಿಯುತ ಮತದಾನಕ್ಕೆ ಸೈನಿಕರು ಪೊಲೀಸರಿಂದ ಪಥ ಸಂಚಲನ


Team Udayavani, Apr 22, 2018, 3:48 PM IST

g1-shanti.jpg

ವಾಡಿ: ಜಿಲ್ಲೆಯಲ್ಲಿಯೇ ಅತಿ ಸೂಕ್ಷ್ಮವಲಯ ಎಂದು ಗುರುತಿಸಲಾಗಿರುವ ಪಟ್ಟಣದಲ್ಲಿ ಶಾಂತಿಯುತ ಮತದಾನಕ್ಕಾಗಿ ಸಶಸ್ತ್ರ ಸೀಮಾ ಬಲ (ಎಸ್‌ಎಸ್‌ಬಿ)  ಸೈನಿಕರು ಶನಿವಾರ ಸಂಜೆ ಪಟ್ಟಣದಲ್ಲಿ ಪಥಸಂಚಲನ ನಡೆಸಿದರು. 

ಪೊಲೀಸ್‌ ಠಾಣೆಯಿಂದ ಆರಂಭಗೊಂಡ ಪಥಸಂಚಲನದಲ್ಲಿ ನೂರಾರು ಜನ  ಎಸ್‌ಎಸ್‌ಬಿ ಸೈನಿಕರು ಹಾಗೂ ಸ್ಥಳೀಯ ವಿವಿಧ ಠಾಣೆಗಳ  ಪೊಲೀಸ್‌ ಸಿಬ್ಬಂದಿ, ಪಟ್ಟಣದ ಬಸವೇಶ್ವರ ವೃತ್ತದ ಮಾರ್ಗವಾಗಿ, ಅಂಬೇಡ್ಕರ್‌ ವೃತ್ತ, ರೈಲು ನಿಲ್ದಾಣ, ಮೌಲಾನಾ ಅಬ್ದುಲಕಲಾಂ ಆಜಾದ್‌ ವೃತ್ತ, ಇಂದಿರಾ ಕಾಲೋನಿ,

ಶಿವಾಜಿ ಚೌಕ್‌, ಕಾಮ್ರೇಡ್‌ ಶ್ರೀನಿವಾಸಗುಡಿ ವೃತ್ತದ ಮುಖ್ಯ ರಸ್ತೆಗಳಲ್ಲಿ  ಸಂಚರಿಸಿ ಚುನಾವಣಾ ಮತದಾನದ ಭದ್ರತೆಯ ಜಾಗೃತಿ ಮೂಡಿಸಿದರು. ಚುನಾವಣೆ ಸಂದರ್ಭದಲ್ಲಿ ಸದಾ ಗದ್ದಲ, ಗಲಾಟೆ ಹಾಗೂ  ಘರ್ಷಣೆಗಳ ಮೂಲಕ ಜಿಲ್ಲೆಯ ಗಮನ ಸೆಳೆಯುತ್ತಿರುವ ಚಿತ್ತಾಪುರ ಮೀಸಲು ಮತಕ್ಷೇತ್ರ ವ್ಯಾಪ್ತಿಯ ವಾಡಿ ಪಟ್ಟಣ ಅತ್ಯಂತ ಸೂಕ್ಷ್ಮವಲಯ ಎಂದು  ಈಗಾಗಲೇ ಚುನಾವಣಾಧಿಕಾರಿಗಳು ಘೋಷಣೆ ಮಾಡಿದ್ದಾರೆ.

ಪಟ್ಟಣದಲ್ಲಿನ ಒಟ್ಟು 36 ಮತದಾನ ಕೇಂದ್ರಗಳಿಗೂ ಬಿಗಿ ಬಂದೋಬಸ್ತ್ ಒದಗಿಸಲು ಸಿದ್ಧತೆ  ಮಾಡಿಕೊಳ್ಳಲಾಗಿದೆ. ಪ್ರಮುಖ ವೃತ್ತಗಳಲ್ಲಿ ಸಿಸಿ ಕ್ಯಾಮೆರಾಗಳ ನಿಗರಾಣಿ ಇಡಲಾಗಿದೆ. ಮತಗಟ್ಟೆಗಳ ಸುತ್ತಲೂ ವಿವಿಧ ಪಕ್ಷಗಳ ಕಾರ್ಯಕರ್ತರು  ಹಾಗೂ ಸಾರ್ವಜನಿಕರು ಬೀಡು ಬಿಡದಂತೆ ಕಟ್ಟೆಚ್ಚರ ವಹಿಸಲಾಗುತ್ತಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ. 

ಡಿವೈಎಸ್‌ಪಿ  ಕೆ.ಬಸವರಾಜ, ಸಿಪಿಐ ಮಹಾಂತೇಶ ಪಾಟೀಲ, ವಾಡಿ ಠಾಣೆ ಪಿಎಸ್‌ಐ ವಿಜಯಕುಮಾರ ಎನ್‌.ಭಾವಗಿ, ಚಿತ್ತಾಪುರ ಪಿಎಸ್‌ಐ ನಟರಾಜ ಲಾಡೆ,  ಶಹಾಬಾದ ಪಿಎಸ್‌ಐ ಆನಂದರಾವ, ಮಾಡಬೂಳ ಠಾಣೆಯ ಹುಸೇನ ಬಾಷಾ ಪಥಸಂಚಲನದ ನೇತೃತ್ವ ವಹಿಸಿದ್ದರು.  

ಟಾಪ್ ನ್ಯೂಸ್

Cap-Brijesh-Chowta

Mangaluru: ಇಂಧನ ಸ್ಥಾಯಿ ಸಮಿತಿ ಸದಸ್ಯರಾಗಿ ಸಂಸದ ಕ್ಯಾ.ಬ್ರಿಜೇಶ್ ಚೌಟ ನೇಮಕ

1-kkk

PM Modi ನಾನು ಹೇಳಿದ್ದನ್ನು ಮಾಡಿ ತೋರಿಸಿದರೆ ಬಿಜೆಪಿ ಪರ ಪ್ರಚಾರ ಮಾಡುತ್ತೇನೆ: ಕೇಜ್ರಿವಾಲ್

Jaladurga-Puuturu

Putturu: ಭಾರೀ ಮಳೆಗೆ ಪೆರುವಾಜೆ ದೇವಾಲಯ ಜಲಾವೃತ

Shettar (3)

R. Ashoka ಪ್ರಕರಣವನ್ನು ಮುಡಾಕ್ಕೆ ಹೋಲಿಸಿದ್ದು ಸರಿಯಲ್ಲ:ಜಗದೀಶ ಶೆಟ್ಟರ್

1-rain-hebri

Heavy Rain: ಹೆಬ್ರಿಯಲ್ಲಿ ಮೇಘಸ್ಫೋಟ: ನೀರಲ್ಲಿ ಕೊಚ್ಚಿ ಹೋದ ಕಾರು!

1-deee

Bidar; ತೊಗರಿ ಹೊಲದಲ್ಲಿ 700ಕ್ಕೂ ಹೆಚ್ಚು ಗಾಂಜಾ ಗಿಡಗಳು!; ಪೊಲೀಸ್ ದಾಳಿ

1-ind-a

ICC Womens T20 World Cup; ಪಾಕಿಸ್ಥಾನ ವಿರುದ್ಧ ಗೆಲುವಿನ ನಗೆ ಬೀರಿದ ಭಾರತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kalaburagi: ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಶೈಕ್ಷಣಿಕ ಅಭಿವೃದ್ಧಿಗೆ ತಜ್ಞರ ಸಮಿತಿ ರಚನೆ

Kalaburagi: ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಶೈಕ್ಷಣಿಕ ಅಭಿವೃದ್ಧಿಗೆ ತಜ್ಞರ ಸಮಿತಿ ರಚನೆ

ಹೊಸ ಮಾರುಕಟ್ಟೆಗೆ ಪ್ರವೇಶ: ಕೊಲ್ಹಾಪುರ ಮಾರುಕಟ್ಟೆಗೆ ಕಲಬುರಗಿ ಹಾಲು!

ಹೊಸ ಮಾರುಕಟ್ಟೆಗೆ ಪ್ರವೇಶ: ಕೊಲ್ಹಾಪುರ ಮಾರುಕಟ್ಟೆಗೆ ಕಲಬುರಗಿ ಹಾಲು!

Kalaburagi: ಅಧಿಕಾರಿಗಳಿಗೆ ಕೊಬ್ಬು‌ ಹೆಚ್ಚಾಗಿದೆ; ಛಳಿ ಬಿಡಿಸಬೇಕಿದೆ: ಬಿ.ಆರ್.ಪಾಟೀಲ್

Kalaburagi: ಅಧಿಕಾರಿಗಳಿಗೆ ಕೊಬ್ಬು‌ ಹೆಚ್ಚಾಗಿದೆ; ಚಳಿ ಬಿಡಿಸಬೇಕಿದೆ: ಬಿ.ಆರ್.ಪಾಟೀಲ್

ನಾಲ್ಕು ವರ್ಷವಾದರೂ ಸಿಕ್ಕಿಲ್ಲ ವಿವಾಹ ಪ್ರೋತ್ಸಾಹಧನ!  

Govt.,: ನಾಲ್ಕು ವರ್ಷವಾದರೂ ಸಿಕ್ಕಿಲ್ಲ ವಿವಾಹ ಪ್ರೋತ್ಸಾಹಧನ!  

5-kalburgi

Kalaburagi: ಮದ್ಯದ ಗುಂಗಿನಲ್ಲಿ ಪತ್ನಿಯನ್ನು ಕೊಂದ ಪತಿ!

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

1

Bantwala: ಕೇಪು, ಅಳಿಕೆಯಲ್ಲಿ ಸಿಡಿಲು ಬಡಿದು ಮನೆಗೆ ಹಾನಿ

Railway-min-Ashiwini

Railway: ಶೀಘ್ರವೇ ಬೆಂಗಳೂರು-ಮೈಸೂರು, ತುಮಕೂರು ನಮೋ ರ್‍ಯಾಪಿಡ್‌ ರೈಲು: ರೈಲ್ವೆ ಸಚಿವ

dw

Padubidri: ರಸ್ತೆ ಅಪಘಾತ; ಗಾಯಾಳು ಸಾವು

Cap-Brijesh-Chowta

Mangaluru: ಇಂಧನ ಸ್ಥಾಯಿ ಸಮಿತಿ ಸದಸ್ಯರಾಗಿ ಸಂಸದ ಕ್ಯಾ.ಬ್ರಿಜೇಶ್ ಚೌಟ ನೇಮಕ

1-kkk

PM Modi ನಾನು ಹೇಳಿದ್ದನ್ನು ಮಾಡಿ ತೋರಿಸಿದರೆ ಬಿಜೆಪಿ ಪರ ಪ್ರಚಾರ ಮಾಡುತ್ತೇನೆ: ಕೇಜ್ರಿವಾಲ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.