ಬಾತುಕೋಳಿಯಿಂದ ಬಚಾವಾದ ಪಿಎಂ ಮೋದಿ!
Team Udayavani, Apr 23, 2018, 6:00 AM IST
ಲಂಡನ್: ಇತ್ತೀಚೆಗೆ ಲಂಡನ್ಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ, ಡೌನಿಂಗ್ ಸ್ಟ್ರೀಟ್ನಲ್ಲಿರುವ ಬ್ರಿಟನ್ ಪ್ರಧಾನಿ ಥೆರೇಸಾ ಮೇ ಕಚೇರಿಯಲ್ಲಿ ಉಪಾಹಾರ ಸೇವಿಸುತ್ತಿರುವಾಗ, ಅದೇ ಕಚೇರಿಯ ಒಂದು ಮೂಲೆಯಲ್ಲಿ ಗೂಡು ಕಟ್ಟಿಕೊಂಡು ಕುಳಿತಿದ್ದ ಗರ್ಭಿಣಿ ಬಾತುಕೋಳಿಯ ಮೇಲೆ ಒಂದು ಕಣ್ಣಿಟ್ಟೇ ಇದ್ದರು! ಯಾಕೆ ಗೊತ್ತಾ? ಆ ಬಾತುಕೋಳಿ ಯಾವುದೇ ಹೊತ್ತಲ್ಲೂ ಇವರ ಮೇಲೆ ಬಂದು ಎರಗಬಹುದಾಗಿತ್ತು. ನಿಜ, ಇದೇ ಕಾರಣಕ್ಕೆ ಯಾವುದೇ ಕಾರಣಕ್ಕೂ ಈ ಬಾತುಕೋಳಿಯ ಬಳಿ ಹೋಗಬೇಡಿ ಎಂದು, ಕಚೇರಿಗೆ ಕಾಲಿಡುವುದಕ್ಕೂ ಮೊದಲೇ ಮೋದಿಗೆ ಸೂಚನೆ ನೀಡಲಾಗಿತ್ತಂತೆ.
ಸಾಮಾನ್ಯವಾಗಿ ಡೌನಿಂಗ್ ಸ್ಟ್ರೀಟ್ನಲ್ಲಿ ಈ ಸಮಯದಲ್ಲಿ ಬಾತುಕೋಳಿಗಳು ಗರ್ಭ ಧರಿಸುತ್ತವೆ. ಈ ವೇಳೆ ಅವು ಅತ್ಯಂತ ರಕ್ಷಣಾತ್ಮಕವಾಗಿರುತ್ತವೆ. ಇನ್ನೂ ಜನಿಸದ ತಮ್ಮ ಕುಡಿಯನ್ನು ರಕ್ಷಿಸಲು ಸಮೀಪ ಬಂದವರನ್ನು ಕುಕ್ಕಿಬಿಡುತ್ತವೆ. ಈ ಸಂದರ್ಭದಲ್ಲಿ ಮೋದಿ ಸೇರಿದಂತೆ ವಿಶ್ವದ ಹಲವು ಗಣ್ಯರು ಕಾಮನ್ವೆಲ್ತ್ ರಾಷ್ಟ್ರಗಳ ಮುಖ್ಯಸ್ಥರ ಸಭೆಗೆಂದು ಲಂಡನ್ಗೆ ಆಗಮಿಸಿದ್ದರು. ಇವರೆಲ್ಲರಿಗೂ ಈ ಬಾತು ಕೋಳಿಯ ಬಗ್ಗೆ ಎಚ್ಚರಿಕೆ ನೀಡಲಾಗಿತ್ತಂತೆ. ಗಣ್ಯರ ಅದೃಷ್ಟ ಚೆನ್ನಾಗಿದ್ದರೆ, ಉಷ್ಣತೆ ಹೆಚ್ಚಿರುವುದರಿಂದ ಸಮೀಪದಲ್ಲಿರುವ ಕೊಳಕ್ಕೆ ಹೋಗಬಹುದು. ಹಾಗೆ ಹೋಗದಿದ್ದರೆ ಅವು ಕಚೇರಿಯ ಬಳಿಯೇ ಇರುತ್ತವೆ. ಒಂದು ವೇಳೆ ಬಾತುಕೋಳಿ ಗಣ್ಯರನ್ನು ಕುಕ್ಕಿಬಿಟ್ಟರೆ ಅದು ದೊಡ್ಡ ವಿವಾದಕ್ಕೆ ಕಾರಣವಾಗಬಹುದು ಎಂಬ ಭೀತಿ, ಇಂಗ್ಲೆಂಡ್ ಪ್ರಧಾನಿ ಕಚೇರಿಯ ಸಿಬ್ಬಂದಿಗೆ ಕಾರ್ಯಕ್ರಮ ಮುಗಿಯುವವರೆಗೂ ಕಾಡುತ್ತಲೇ ಇತ್ತು ಎಂದು ಹೇಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
Marriage: ಕ್ರಿಸ್ಮಸ್ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
MUST WATCH
ಹೊಸ ಸೇರ್ಪಡೆ
BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್
Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ
ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
J-K: ಭೀಕರ ಅಪಘಾ*ತದಲ್ಲಿ SUV ಚಲಾಯಿಸುತ್ತಿದ್ದ 17 ರ ಹುಡುಗರಿಬ್ಬರು ಮೃ*ತ್ಯು
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.