ಬೂತ್ ಮಟ್ಟದಿಂದ ಜನಸಂಪರ್ಕ ಸಭೆ
Team Udayavani, Apr 23, 2018, 6:00 AM IST
ಉಡುಪಿ: ಕ್ಷೇತ್ರದ ಹೋಬಳಿ, ನಗರದ ವಾರ್ಡ್ ಮಟ್ಟದಲ್ಲಿ ಜನಸಂಪರ್ಕ ಸಭೆಗಳನ್ನು ನಡೆಸಿ ಯಶಸ್ಸು ಸಿಕ್ಕಿದೆ. ಈ ಬಾರಿಯೂ ಶಾಸಕನಾದರೆ ಬೂತ್ ಮಟ್ಟದಿಂದ ಜನಸಂಪರ್ಕ ಸಭೆ ನಡೆಸಿ ಜನರ ಸಮಸ್ಯೆ ಸ್ಥಳದಲ್ಲೇ ಪರಿಹರಿಸಲು ಯೋಜನೆ ಹಾಕಿಕೊಂಡಿದ್ದೇನೆ ಎಂದು ಉಡುಪಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಹೇಳಿದರು.
ಉಡುಪಿ ಮತ್ತು ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ಕಲ್ಸಂಕ ರಾಯಲ್ ಗಾರ್ಡನ್ ಮೈದಾನದಲ್ಲಿ ಎ. 22ರಂದು ನಡೆದ ಬೃಹತ್ ಕಾಂಗ್ರೆಸ್ ಜನಾಶೀರ್ವಾದ ಸಮಾವೇಶದಲ್ಲಿ ಅವರು ಮಾತನಾಡಿದರು. ಕ್ಷೇತ್ರದ 213 ಬೂತ್‌ಗಳಲ್ಲಿಯೂ ವರ್ಷಕ್ಕೆ ಒಂದು ಬಾರಿ, ಅಂದರೆ 5 ವರ್ಷಗಳಲ್ಲಿ ಪ್ರತೀ ಬೂತ್‌ನಲ್ಲಿ 5 ಜನಸಂಪರ್ಕ ಸಭೆ ನಡೆಸಲು ಉದ್ದೇ ಶಿಸ ಲಾಗಿದೆ. ಮೇ 12ರ ವರೆಗೆ ನನ್ನ ಜವಾಬ್ದಾರಿಯನ್ನು ನೀವು ಹೊತ್ತು ನನ್ನ ಗೆಲುವಿಗೆ ಶ್ರಮಿಸಿದರೆ, ಫಲಿತಾಂಶ ಬಂದ ಬಳಿಕ ನಿಮ್ಮ ಜವಾಬ್ದಾರಿಯನ್ನು ನಾನು ವಹಿಸಿಕೊಂಡು ಕೆಲಸ ಮಾಡುವೆ ಎಂದು ಜನರನ್ನುದ್ದೇಶಿಸಿ ಪ್ರಮೋದ್ ಹೇಳಿದರು.
ಜನಸೇವೆಯಿಂದಲೇ ಒಲಿದದ್ದು
ಶಾಸಕ ಸ್ಥಾನಕ್ಕೆ ಸ್ಪರ್ಧಿಸಿ ಎರಡು ಬಾರಿ ಸೋತಾಗಲೂ ಗೆದ್ದು ಶಾಸಕ, ಸಚಿವನಾದ ಬಳಿಕವೂ ಜನಸೇವೆಯನ್ನು ಮರೆತಿರಲಿಲ್ಲ. ಸೋತಿದ್ದಾಗ ಸ್ವಂತ ಹಣದಿಂದ ಜನಸೇವೆ ಮಾಡುತ್ತಾ ಬಂದಿದ್ದೆ. ಈ ಮನೋಧರ್ಮವನ್ನು ನೆನಪಿಟ್ಟಿದ್ದ ಜನರು ಕಳೆದ ಬಾರಿ ಅಭೂತಪೂರ್ವ ಗೆಲವು ತಂದು ಕೊಟ್ಟರು. ಕ್ಷೇತ್ರ ದಲ್ಲಿ ನಿರೀಕ್ಷೆಗೂ ಮೀರಿ ಅಭಿ ವೃದ್ಧಿ ಯಾಗಿದೆ. ಆದರೆ ಅಕ್ರಮ- ಸಕ್ರಮ, 94ಸಿ, ಸಿಸಿಯಲ್ಲಿ ಹಕ್ಕುಪತ್ರ, ನಿವೇಶನ ದೊಂದಿಗೆ ಮನೆ ನೀಡು ವುದು, ಶಾಶ್ವತ ಕುಡಿಯುವ ನೀರಿನ ಯೋಜನೆಗಳು ಇನ್ನೂ ಹೆಚ್ಚಬೇಕಿದೆ. ಇನ್ನೊಮ್ಮೆ ಅವಕಾಶ ಕೊಟ್ಟು ಆಯ್ಕೆ ಮಾಡಿದಲ್ಲಿ ಉಳಿದ ಕೆಲಸಗಳನ್ನೆಲ್ಲ ಪ್ರಾಮಾಣಿಕತೆಯಿಂದ ಮಾಡುತ್ತೇನೆ ಎಂದು ಹೇಳಿದರು.
ಶಾಸಕ ಪ್ರತಾಪ್‌ಚಂದ್ರ ಶೆಟ್ಟಿ, ಮುಖಂಡ ರಾದ ಮುನಿಯಾಲು ಉದಯ ಕುಮಾರ್ ಶೆಟ್ಟಿ, ಎ.ಎಂ. ಗಫೂರ್, ಬಿ. ನರಸಿಂಹಮೂರ್ತಿ, ಪಿ. ಅಮೃತ್ ಶೆಣೈ, ದಿನೇಶ್ ಪುತ್ರನ್, ಗಣೇಶ್ ಎನ್. ಕೋಟ್ಯಾನ್ ಪಡುಬಿದ್ರಿ, ವಿಶ್ವಾಸ್ ವಿ. ಅಮೀನ್, ಸರಳಾ ಕಾಂಚನ್, ಮಲ್ಲಿಕಾ ಬಾಲಕೃಷ್ಣ ಪೂಜಾರಿ, ಮೀನಾಕ್ಷಿ ಮಾಧವ ಬನ್ನಂಜೆ, ಸಂಧ್ಯಾ ತಿಲಕ್‌ರಾಜ್, ಅಶೋಕ್ ಕುಮಾರ್ ಕೊಡವೂರು, ಚಂದ್ರಿಕಾ ಶೆಟ್ಟಿ, ವೆರೋನಿಕಾ ಕರ್ನೇಲಿಯೋ, ಡಾ| ಬೆಳಪು ದೇವಿಪ್ರಸಾದ್ ಶೆಟ್ಟಿ ಬೆಳಪು, ಜನಾರ್ದನ ಭಂಡಾರ್ಕರ್, ದಿವಾಕರ ಕುಂದರ್, ಮೈರ್ಮಾಡಿ ಸುಧಾಕರ ಶೆಟ್ಟಿ, ಯತೀಶ್ ಕರ್ಕೇರ, ಗೀತಾ ವಾಗೆ, ಜಯಶ್ರೀ ಕೃಷ್ಣರಾಜ್, ಯಶೋಧರ ಅಮೀನ್, ಬೇಬಿ ಸಾಲಿಯಾನ್, ಕೀರ್ತಿ ಶೆಟ್ಟಿ, ಡಾ| ಸುನೀತಾ ಶೆಟ್ಟಿ, ರೋಶ್ನಿ ಒಲಿವೆರಾ, ಜಿ.ಪಂ., ತಾ.ಪಂ., ಗ್ರಾ.ಪಂ. ಹಾಗೂ ಉಡುಪಿ ನಗರಸಭೆ ಕಾಂಗ್ರೆಸ್ ಸದಸ್ಯರು ಉಪಸ್ಥಿತರಿದ್ದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜನಾರ್ದನ ತೋನ್ಸೆ ಸ್ವಾಗತಿಸಿದರು. ಬ್ಲಾಕ್ ಅಧ್ಯಕ್ಷರಾದ ಬ್ರಹ್ಮಾವರದ ನಿತ್ಯಾನಂದ ಶೆಟ್ಟಿ ಹಾರಾಡಿ ಪ್ರಸ್ತಾವನೆಗೈದು, ಉಡುಪಿಯ ಸತೀಶ್ ಅಮೀನ್ ಪಡುಕೆರೆ ವಂದಿಸಿದರು. ಸತೀಶ್ ಕೊಡವೂರು ಕಾರ್ಯಕ್ರಮ ನಿರೂಪಿಸಿದರು. ಭಾರೀ ಸಂಖ್ಯೆಯಲ್ಲಿ ಕಾರ್ಯಕರ್ತರು ಸೇರಿದ್ದರು. ವಿವಿಧ ಪಕ್ಷಗಳ ಮುಖಂಡರು ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು.
ಪ್ರಮೋದ್‌ರಿಂದ ಸಚಿವ ಸ್ಥಾನ ತಪ್ಪಿಲ್ಲ : ಸೊರಕೆ
ಸಮಾವೇಶವನ್ನು ಉದ್ಘಾಟಿಸಿದ ವಿನಯಕುಮಾರ್ ಸೊರಕೆ ಮಾತನಾಡಿ ನನ್ನ ಮತ್ತು ಪ್ರಮೋದ್ ಸಂಬಂಧ ಉತ್ತಮವಾಗಿದೆ. ನನ್ನ ಸಚಿವ ಸ್ಥಾನ ಕೈತಪ್ಪಲು ಪ್ರಮೋದ್ ಕಾರಣ ಎನ್ನುವ ತಪ್ಪು ಕಲ್ಪನೆ ಕೆಲವರಲ್ಲಿದೆ. ನೈಜ ವಿಷಯವೆಂದರೆ ಬಿಲ್ಲವ ಸಮಾಜದ ಕಾಗೋಡು ತಿಮ್ಮಪ್ಪ ಸಚಿವರಾಗಬೇಕು ಎನ್ನುವ ಒತ್ತಾಸೆಯನ್ನು ಮುಂದಿಟ್ಟಿದ್ದರು. ಅದಕ್ಕಾಗಿ ಅದೇ ಸಮಾಜದ ನಾನು ರಾಜೀನಾಮೆ ಕೊಡಬೇಕಾಗಿ ಬಂತು. ಕಲಬುರಗಿಯಲ್ಲಿ ಬಾಬುರಾವ್ ಚಿಂಚನಸೂರ್ ಅವರ ಸಚಿವ ಸ್ಥಾನ ತೆರವಾದ ಕಾರಣ ಅವರ ಸಮು ದಾಯದ ಕೋಟದಲ್ಲಿ ಪ್ರಮೋದ್‌ಗೆ ಸಚಿವ ಸ್ಥಾನ ಒಲಿಯಿತು ಎಂದು ಹೇಳಿದರು. ಉಡುಪಿಯನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ಪ್ರಮೋದ್‌ರನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸಿ ಎಂದರು.
ಕಾಪು, ಉಡುಪಿ ಗೆಲ್ಲಿಸಿ: ಎಂ.ಎನ್.ಆರ್.
ಎಸ್‌ಸಿಡಿಸಿಸಿ ಬ್ಯಾಂಕಿನ ಅಧ್ಯಕ್ಷ ಎಂ.ಎನ್. ರಾಜೇಂದ್ರ ಕುಮಾರ್ ಮಾತ ನಾಡಿ, ನಾನು ರಾಜಕಾರಣಿ ಅಲ್ಲ. ಪ್ರಮೋದ್ ನನ್ನ ಕಿರಿಯ ಸಹೋದರ ನಿದ್ದಂತೆ. ಹಾಗಾಗಿ ಅವರ ಪರ ಮಾತನಾಡಲು ಬಂದಿರುವೆ. ಮಹಿಳಾ ರಕ್ಷಣೆಗೆ ಉಡುಪಿಯಲ್ಲಿ ಹೆಚ್ಚಿನ ಒತ್ತು ಕೊಡಲಾಗುತ್ತಿದೆ. ಉಡುಪಿ ಮತ್ತು ಕಾಪು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸಿ ಎಂದು ಕರೆ ಇತ್ತರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Video: ಸಿಕ್ಕ ಸಿಕ್ಕವರನ್ನು ಎತ್ತಿ ಬಿಸಾಕಿದ ಗೂಳಿ… 3 ಗಂಟೆಗಳ ಕಾರ್ಯಾಚರಣೆ ಬಳಿಕ ಸೆರೆ
BBK11: ಮೋಕ್ಷಿತಾ ಎರಡು ತಲೆ ನಾಗರಹಾವು ಎಂದ ತ್ರಿವಿಕ್ರಮ್; ನಾಮಿನೇಟ್ ವಿಚಾರವಾಗಿ ವಾಗ್ವಾದ
Udaipur Palace: ರಾಜಮನೆತನದ ಎರಡು ಗುಂಪುಗಳ ನಡುವೆ ಘರ್ಷಣೆ: ಮೂವರಿಗೆ ಗಾಯ
Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್ ಸೆರೆ
Parliament Session: ಗೂಂಡಾಗಿರಿ ಮೂಲಕ ಸಂಸತ್ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.