ಅತ್ಯಾಚಾರ ಖಂಡಿಸಿ ಮೌನ ಮೆರವಣಿಗೆ
Team Udayavani, Apr 23, 2018, 3:47 PM IST
ಚಿಂಚೋಳಿ: ಜಮ್ಮು ಕಾಶ್ಮೀರ ರಾಜ್ಯದ ಕಣಿವೆಯಲ್ಲಿ ಎಂಟು ವರ್ಷದ ಬಾಲಕಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿ ಕೊಲೆ ಮಾಡಿದ ಆರೋಪಿಗಳನ್ನು ಬಂಧಿಸಿ ಗಲ್ಲುಶಿಕ್ಷೆ ನೀಡಬೇಕೆಂದು ಒತ್ತಾಯಿಸಿ ತಾಲೂಕಿನ ಸುಲೇಪೇಟ ಗ್ರಾಮದಲ್ಲಿ ಡಾ| ಅಬ್ದುಲ್ ಕಲಾಂ ವೆಲಫೇರ್ ಟಸ್ಟ್ ಮುಖಂಡರು ಹಾಗೂ ಗ್ರಾಮಸ್ಥರು ಮೇಣಬತ್ತಿ ಹಿಡಿದು ಮೌನ ಮೆರವಣಿಗೆ ನಡೆಸಿ ಕೇಂದ್ರ ಸರಕಾರ ವಿರುದ್ಧ ಪ್ರತಿಭಟನೆ ನಡೆಸಿದರು.
ರಾಜ್ಯಮುಕ್ತಿ ಮೋರ್ಚಾ ಹಿರಿಯ ಮುಖಂಡ ಮಾರುತಿ ಗಂಜಗಿರಿ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ, ದೇಶದಲ್ಲಿ ಅನೇಕ ಕಡೆ ಬಾಲಕಿಯರ ಮೇಲೆ ಕಾಮುಕರು ಅಟ್ಟಹಾಸ ನಡೆಸಿ ಅತ್ಯಾಚಾರ ನಡೆಸುತ್ತಿರುವುದು ಸಮಾಜ ತಲೆತಗ್ಗಿಸುವಂತೆ ಆಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ತಾಪಂ ಮಾಜಿ ಸದಸ್ಯ ತಾಹೇರ ಪಟೇಲ, ಮೋಯಿಜ ಪಟೇಲ್, ಜಹಿರುದ್ದೀನ್ ಪಟೇಲ್, ರಜಾಕ ಪಟೇಲ್, ನಾಸೀರ ಮದರಗಿ, ಸುಲ್ತಾನ ಪಟೇಲ್ ಕೋಹಿರ,ಲಾಡಲೇಸಾಬ ತಾಂಡೂರ, ನಸೀರ ನಮಾಜಗಿ, ಆಶೀಫ ಬಾಗವಾನ, ಪ್ರವೀಣ ಕೋರಿ, ನವೀನಕುಮಾರ ಸಜ್ಜನ, ರಾಧಾಕೃಷ್ಣ, ಬಾಬು ಬುಗಡಿ, ಸುರೇಶ, ಅಮೀರ ಕೋಹಿರ, ತೌಸೀಫ ಅಹ್ಮದ ಮೋಮಿನ ಇನ್ನಿತರರು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
Kalaburagi: ರೌಡಿ ಶೀಟರ್ ಬರ್ಬರ ಹ*ತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.