ಗೌತಮ್ ಆಟ ಜೀವಿತಾವಧಿಯ ಅನುಭವ: ಸ್ಯಾಮ್ಸನ್
Team Udayavani, Apr 24, 2018, 6:15 AM IST
ಜೈಪುರ: ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ರವಿವಾರ ನಡೆದ ಪಂದ್ಯದಲ್ಲಿ ಕರ್ನಾಟಕದ ಕೃಷ್ಣಪ್ಪ ಗೌತಮ್ ಅವರ ಪ್ರಚಂಡ ಆಟವನ್ನು ಜೀವಿತಾವಧಿಯ ಅನುಭವ ಎಂದು ಸಂಜು ಸ್ಯಾಮ್ಸನ್ ಬಣ್ಣಿಸಿದ್ದಾರೆ. ಆದರೆ ತಂಡ ಪ್ರಯತ್ನದಿಂದಲೇ ರಾಜಸ್ಥಾನ್ ರಾಯಲ್ಸ್ ರೋಚಕ ಗೆಲುವು ಕಂಡಿದೆ ಎಂದವರು ಸ್ಪಷ್ಟಪಡಿಸಿದ್ದಾರೆ.
ಬಹಳಷ್ಟು ಒತ್ತಡದ ನಡುವೆಯೂ ಗೌತಮ್ ಕೇವಲ 11 ಎಸೆತಗಳಿಂದ 33 ರನ್ ಸಿಡಿಸಿದ್ದರಿಂದ ರಾಜಸ್ಥಾನ್ ಅಂತಿಮ ಓವರಿನಲ್ಲಿ ಜಯಭೇರಿ ಬಾರಿಸಿತ್ತು. ಎರಡು ಸಿಕ್ಸರ್ ಮತ್ತು ನಾಲ್ಕು ಬೌಂಡರಿ ಬಾರಿಸಿದ ಗೌತಮ್ ತಂಡಕ್ಕೆ 3 ವಿಕೆಟ್‌ಗಳ ಜಯ ತಂದುಕೊಟ್ಟರು. ಈ ಮೊದಲು ಸ್ಯಾಮ್ಸನ್ (52) ಮತ್ತು ಬೆನ್ ಸ್ಟೋಕ್ಸ್ (27 ಎಸೆತಗಳಲ್ಲಿ 40) ಮೂರನೇ ವಿಕೆಟಿಗೆ 72 ರನ್ನುಗಳ ಜತೆಯಾಟ ನಡೆಸಿ ತಂಡದ ಗೆಲುವಿಗೆ ಉತ್ತಮ ಅಡಿಪಾಯ ಹಾಕಿಕೊಟ್ಟಿದ್ದರು.
ಗೌತಮ್ ಅವರ ಆಟ ಆತ್ಯದ್ಭುತವಾಗಿತ್ತು. ಇದೊಂದು ಅವರಿಗೆ ಮತ್ತು ನಮ್ಮ ಪಾಲಿಗೆ ಜೀವಿತಾವಧಿಯ ಅನುಭವ ಎಂದು ಪಂದ್ಯದ ಬಳಿಕ ಸ್ಯಾಮ್ಸನ್ ತಿಳಿಸಿದರು.
22 ರನ್ನಿಗೆ 3 ವಿಕೆಟ್ ಕಿತ್ತು ಮುಂಬೈಯ ರನ್‌ವೇಗಕ್ಕೆ ಕಡಿವಾಣ ಹಾಕಿದ್ದ ರಾಜಸ್ಥಾನದ ವೆಸ್ಟ್‌ಇಂಡೀಸ್‌ನ ಆಟಗಾರ ಜೋಫ್ರಾ ಆರ್ಚರ್‌ಗೆ ಪಂದ್ಯಶ್ರೇಷ್ಠ ಪ್ರಶಸ್ತಿ ನೀಡಲಾಯಿತು. ಆರ್ಚರ್ ಅವರಿಗೆ ಪಂದ್ಯಶ್ರೇಷ್ಠ ನೀಡಿರುವುದಕ್ಕೆ ಪ್ರತಿಕ್ರಿಯೆ ನೀಡಲಾರೆ ಎಂದು ಸ್ಯಾಮ್ಸನ್ ಹೇಳಿದರು.
ಗೌತಮ್ ಕೂಡ ಪಂದ್ಯಶ್ರೇಷ್ಠನೇ ಆದರೆ ಪ್ರತಿಯೊಬ್ಬರ ಕೊಡುಗೆಯೂ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆರ್ಚರ್ ಮೂರು ವಿಕೆಟ್ ಕಿತ್ತರಲ್ಲದೇ ಕೆಲವು ಬೌಂಡರಿ ಬಾರಿಸಿದ್ದಾರೆ. ಹಾಗಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಆಯ್ಕೆಗೆ ಪ್ರತಿಕ್ರಿಯೆ ನೀಡಲಾರೆ ಎಂದರು ಸ್ಯಾಮ್ಸನ್.
ನನ್ನಿಂದ ಪಂದ್ಯ ಗೆಲ್ಲಿಸಿಕೊಡಲು ಸಾಧ್ಯವಾಗದಿರುವುದಕ್ಕೆ ಸ್ಯಾಮ್ಸನ್ ಬೇಸರ ವ್ಯಕ್ತಪಡಿಸಿದರು. 17ನೇ ಓವರಿನಲ್ಲಿ ಸ್ಯಾಮ್ಸನ್ ಮತ್ತು ಬಟ್ಲರ್ ಸತತ ಎರಡು ಎಸೆತಗಳಲ್ಲಿ ಬುಮ್ರಾ ದಾಳಿಗೆ ಔಟಾಗಿದ್ದರು. ಪಂದ್ಯ ಇನ್ನಿಂಗ್ಸ್‌ನ ಕೊನೆ ಹಂತದವರೆಗೆ ಸಾಗಿದ್ದಕ್ಕೆ ಪ್ರತಿಕ್ರಿಯೆ ನೀಡಿದ ಅವರು ಪಂದ್ಯ ವಿಳಂಬವಾಗಿಲ್ಲ. ಚೇಸಿಂಗ್ ವೇಳೆ ಬೌಲಿಂಗ್ ತಂಡ ಒತ್ತಡದಲ್ಲಿರುತ್ತದೆ. ಹಾಗಾಗಿ ಅಂತಿಮ ಓವರ್‌ತನಕ ಬ್ಯಾಟಿಂಗ್ ಮಾಡಲು ಬಯಸಿದ್ದೆ ಆದರೆ ದುರದೃಷ್ಟವಶಾತ್ ಔಟಾದೆ ಎಂದು ಸ್ಯಾಮ್ಸನ್ ವಿವರಿಸಿದರು.
15 ರನ್ ಕಡಿಮೆ: ಕಿಶನ್
15 ರನ್ ಕಡಿಮೆಯಾಯಿತು ಆದರೆ ಟ್ವೆಂಟಿ20 ಪಂದ್ಯದಲ್ಲಿ ಇದು ಸಾಮಾನ್ಯ. ರಾಜಸ್ಥಾನ ಉತ್ತಮವಾಗಿ ಬೌಲಿಂಗ್ ನಡೆಸಿತ್ತು ಮತ್ತು ಪಂದ್ಯ ಸಾಗುತ್ತಿದ್ದಂತೆ ಈ ಪಿಚ್‌ನಲ್ಲಿ ಬ್ಯಾಟಿಂಗ್ ಮಾಡಲು ಕಷ್ಟವಾಗುತ್ತಿತ್ತು ಎಂದು ಇಶಾನ್ ಕಿಶನ್ ಹೇಳಿದರು. ಜೋಫ್ರಾ ಆರ್ಚರ್ ದಾಳಿಗೆ ಪ್ರತಿಕ್ರಿಯೆ ನೀಡಿದ ಕಿಶನ್ ಅವರು ಚೆನ್ನಾಗಿ ಬೌಲಿಂಗ್ ಮಾಡಿದ್ದಾರೆ. ಆದರೆ ಅವರ ದಾಳಿಯ ವೇಳೆ ನಾವು ಇನ್ನಷ್ಟು ರನ್ ಗಳಿಸಬಹುದಿತ್ತು ಎಂದರು. ಇದುವೇ ಆಟದ ಆಂದ. ಕೆಲವೊಮ್ಮೆ ನಮಗೆ ಭರ್ಜರಿ ಆಟವಾಡಲು ಸಾಧ್ಯವಾಗುತ್ತದೆ ಮತ್ತೆ ಕೆಲವೊಮ್ಮ ಸಾಧ್ಯವಾಗುವುದೇ ಇಲ್ಲ ಎಂದ ಕಿಶನ್ ಕೊನೆ ಹಂತದಲ್ಲಿ ಸಿಡಿದ ಗೌತಮ್ ಅವರ ಆಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Percentage War: ಮತ್ತೆ 60 ಪರ್ಸೆಂಟ್ ಕಮಿಷನ್ ಯುದ್ಧ ; ಆರೋಪ – ಪ್ರತ್ಯಾರೋಪ
Dinner Meet: ಸಚಿವರ ಮನೆ ಔತಣಕೂಟಕ್ಕೆ ಅಪಾರ್ಥ ಕಲ್ಪಿಸುವುದು ಬೇಡ: ಡಿ.ಕೆ.ಶಿವಕುಮಾರ್
State Budget Meeting: ಇಂದಿನಿಂದ ಸಿಎಂ ಬಜೆಟ್ ಪೂರ್ವಭಾವಿ ಸರಣಿ ಸಭೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.