ಈ ಬಾರಿ 5.10 ಕೋಟಿ ಮತದಾರರು
Team Udayavani, Apr 25, 2018, 6:00 AM IST
ಬೆಂಗಳೂರು: ಮಾರ್ಚ್ 14ರೊಳಗೆ ಅರ್ಜಿ ಸಲ್ಲಿಸಿದ ಎಲ್ಲ ಅರ್ಹ ಮತದಾರರಿಗೆ ಮತದಾನಕ್ಕೆ ಅವಕಾಶ ನೀಡಲಾಗುವುದು. ಅದರಂತೆ 2018ರ ವಿಧಾನಸಭಾ ಚುನಾವಣೆಗೆ ಒಟ್ಟು ಮತದಾರರ ಸಂಖ್ಯೆ 5.10 ಕೋಟಿ ಆಗಲಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ ಕುಮಾರ್ ಹೇಳಿದ್ದಾರೆ.
ಫೆ.28ಕ್ಕೆ ಪ್ರಕಟಗೊಂಡ ಅಂತಿಮ ಮತದಾರರ ಪಟ್ಟಿ ಪ್ರಕಾರ 4.96 ಕೋಟಿ ಮತದಾರರು ಇದ್ದರು. ಬಳಿಕ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಮಾ.14ರವರೆಗೆ ಅವಕಾಶ ನೀಡಲಾಗಿತ್ತು. ಅದರಲ್ಲಿ 13.46 ಲಕ್ಷ ಅರ್ಜಿಗಳು ಸ್ವೀಕಾರಗೊಂಡಿದ್ದು, ಆ ಪೈಕಿ 66 ಸಾವಿರ ಅರ್ಜಿಗಳನ್ನು ತಿರಸ್ಕರಿಸಲಾಗಿದೆ. 12.02 ಲಕ್ಷ ಅರ್ಜಿಗಳನ್ನು ವಿಲೇವಾರಿಗೊಳಿಸಲಾಗಿದ್ದು, 77 ಸಾವಿರ ಅರ್ಜಿಗಳು ಬಾಕಿ ಉಳಿದಿವೆ. ಅದರಂತೆ ಈ ಬಾರಿ ಮತದಾರರ ಸಂಖ್ಯೆ 5.10 ಕೋಟಿ ಆಗಬಹುದು ಎಂದವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಉಳಿದಂತೆ ಫಾರಂ-7ರಡಿ 2.22 ಲಕ್ಷ ಅರ್ಜಿಗಳು ಬಂದಿದ್ದು, 8 ಸಾವಿರ ಅರ್ಜಿಗಳನ್ನು ತಿರಸ್ಕರಿಸಿ 2.08 ಅರ್ಜಿಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ಅವರು ವಿವರಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.