ತೆರಿಗೆ ಪಾವತಿಸಿ: ನೋಟಿಸ್
Team Udayavani, Apr 25, 2018, 9:15 AM IST
ಹೊಸದಿಲ್ಲಿ: ಸರಕಾರಿ ಸ್ವಾಮ್ಯದ SBI, ಖಾಸಗಿ ರಂಗದ HDFC ಬ್ಯಾಂಕ್, ಆ್ಯಕ್ಸಿಸ್ ಬ್ಯಾಂಕ್, ಕೊಟಕ್ ಮಹೀಂದ್ರಾ ಬ್ಯಾಂಕ್, ಐಸಿಐಸಿಐ ಬ್ಯಾಂಕ್‌ಗಳಿಗೆ ಸರಕು ಮತ್ತು ಸೇವಾ ತೆರಿಗೆಗಳ ಗುಪ್ತಚರ ವಿಭಾಗದ ಮಹಾ ನಿರ್ದೇಶನಾಲಯ (DGGST) ನೋಟಿಸ್ ನೀಡಿದೆ.
ನಿಗದಿತ ವಹಿವಾಟಿನ ನಂತರದ ಎಟಿಎಂ ವಹಿವಾಟಿಗೆ ಹೇರುವ ಶುಲ್ಕ, ಚೆಕ್ ಬುಕ್, ಡೆಬಿಟ್ ಕಾರ್ಡ್ ವಿತರಣೆಯಿಂದ ಬರುವ ಆದಾಯ, ಕನಿಷ್ಠ ಮೊತ್ತ ಕಾಯ್ದುಕೊಂಡಿಲ್ಲ ಎಂದು ಗ್ರಾಹಕರ ಮೇಲೆ ಹೇರುವ ದಂಡದಿಂದ ಬಂದ ಆದಾಯ ಇತ್ಯಾದಿಗಳಿಗೂ ತೆರಿಗೆ ಪಾವತಿ ಮಾಡಬೇಕು ಎಂದು ಅದರಲ್ಲಿ ಉಲ್ಲೇಖೀಸಲಾಗಿದೆ. ಪೂರ್ವಾನ್ವಯವಾಗಿಯೇ ಅದನ್ನು ಪಾವತಿ ಮಾಡಬೇಕು ಎಂದು ಹೇಳಲಾಗಿದೆ ಎಂದು ‘ದ ಇಕನಾಮಿಕ್ ಟೈಮ್ಸ್’ ವರದಿ ಮಾಡಿದೆ.
ಕೆಲವೊಂದು ಬ್ಯಾಂಕ್‌ಗಳ ಆಡಳಿತ ಮಂಡಳಿಗಳು ಈ ನೋಟಿಸ್ ಸಿಕ್ಕಿದ ಬಳಿಕ ಗೊಂದಲಕ್ಕೆ ಒಳಗಾಗಿವೆ. ಹೀಗಾಗಿ, ನೋಟಿಸ್ ಬಗ್ಗೆ ಕೇಂದ್ರ ಸರಕಾರದ ಜತೆಗೆ ಚರ್ಚಿಸಲು ಬ್ಯಾಂಕ್‌ಗಳು ನಿರ್ಧರಿಸಿವೆ. ಮೂಲಗಳ ಪ್ರಕಾರ, ಕನಿಷ್ಠ ಐದು ವರ್ಷಗಳ ಅವಧಿಯಿಂದ ತೆರಿಗೆ ಮೊತ್ತ ಸಂಗ್ರಹಿಸಬೇಕಾಗುತ್ತದೆ. ಅದು ಏನಿಲ್ಲದ್ದಿದರೂ 6 ಸಾವಿರ ಕೋಟಿ ರೂ. ಆಗುತ್ತದೆ ಎಂದು ಹೇಳಲಾಗಿದೆ.
2017ರ ಎಪ್ರಿಲ್‌ನಿಂದ ನವೆಂಬರ್ ಅವಧಿಯಲ್ಲಿ SBI, ಕನಿಷ್ಠ ಠೇವಣಿ ಇರಿಸದ ಗ್ರಾಹಕರಿಗೆ ದಂಡ ವಿಧಿಸುವ ನಿಯಮ ಜಾರಿ ಮಾಡಿತ್ತು. ಈ ದಂಡದಿಂದಲೇ ಬ್ಯಾಂಕ್ 1,777 ಕೋಟಿ ರೂ. ಸಂಗ್ರಹಿಸಿತ್ತು. ಅದನ್ನು ಆದಾಯ ಎಂದು ತೋರಿಸಿಕೊಂಡದ್ದರಿಂದ ಡಿಜಿಜಿಎಸ್‌ಟಿ ಎಲ್ಲಾ ಬ್ಯಾಂಕ್‌ಗಳಿಗೆ ನೋಟಿಸ್ ನೀಡಿದೆ. ಒಂದು ವೇಳೆ ಅದು ಜಾರಿಯಾದಲ್ಲಿ ಬ್ಯಾಂಕ್‌ಗಳಲ್ಲಿ ಎಲ್ಲಾ ಸೇವೆಗಳಿಗೂ ಗ್ರಾಹಕರು ಶುಲ್ಕ ಪಾವತಿ ಮಾಡಬೇಕಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ಇಸ್ಪೀಟ್ ಅಡ್ಡೆಯ ಮೇಲೆ ಡಿವೈಎಸ್ಪಿ ದಾಳಿ; ಮಾಜಿ ಅಧ್ಯಕ್ಷ-ಹಾಲಿ ಉಪಾಧ್ಯಕ್ಷ ಸೇರಿ 8 ಜನರ ಬಂಧನ
Anthyarambha: ನ.28ರಂದು ಕೊಂಕಣಿ ಚಲನಚಿತ್ರ “ಅಂತ್ಯಾರಂಭ’ ಪ್ರದರ್ಶನ
Belagavi Session: ರಾಜಕೀಯ ಕಿತ್ತಾಟ ಏನಿದ್ದರೂ ಸದನದ ಹೊರಗೆ ನಡೆಸಿ: ಯು.ಟಿ. ಖಾದರ್
Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್ ಆದ ಯುವಕನ ಹತ್ಯೆ
Kiccha Sudeepa: ಕ್ರಿಸ್ಮಸ್ ಗೆ ಬರುತ್ತಿದೆ ʼಮ್ಯಾಕ್ಸ್ʼ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.