ಡೊಂಬಿವಲಿ ಶ್ರೀ ಬಸವೇಶ್ವರ ಶರಣ ಮಂಡಳ: ಬಸವೇಶ್ವರ ಜಯಂತಿ
Team Udayavani, Apr 25, 2018, 10:22 AM IST
ಡೊಂಬಿವಲಿ: ನಮ್ಮ ನಡೆ- ನುಡಿಗಳು ಶುದ್ಧವಾಗಿದ್ದರೆ ಮಾತ್ರ ಪರಮಾತ್ಮನ ಸಾನ್ನಿಧ್ಯ ಸಾಧ್ಯ ಎಂದು ಬೆಳಗಾವಿ ನಾಗನೂರಿನ ಶ್ರೀ ರುದ್ರಾಕ್ಷಿ ಮಠದ ಡಾ| ಸಿದ್ಧರಾಮ ಮಹಾಸ್ವಾಮೀ ಅವರು ನುಡಿದರು.
ಎ. 22ರಂದು ಡೊಂಬಿವಲಿ ಪೂರ್ವದ ಶ್ರೀ ಗಣೇಶ ಮಂದಿರದ ವಕ್ರತುಂಡ ಸಭಾಗೃಹದಲ್ಲಿ ಶ್ರೀ ಬಸವೇಶ್ವರ ಶರಣ ಮಂಡಳ ಡೊಂಬಿ ವಲಿ ವತಿಯಿಂದ ಆಯೋಜಿಸ ಲಾಗಿದ್ದ ಜಗಜ್ಯೋತಿ ಬಸವೇಶ್ವರ ಜಯಂತಿ ಆಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪರ್ಡೆಕರ ಮಂಜಪ್ಪನವರ ಪ್ರಯತ್ನ ದಿಂದಾಗಿ ಪ್ರಾರಂಭಗೊಂಡ ಬಸವೇಶ್ವರ ಜಯಂತಿ ಉತ್ಸವ ಇಂದು ವೈಚಾರಿಕವಾಗಿ ವಿಶ್ವಾ ದ್ಯಂತ ಆಚರಿಸುತ್ತಿರುವುದು ಅಭಿನಂದ ನೀಯವಾಗಿದೆ. ವಿಶ್ವಗುರು ಮಹಾನ್ ಸಮಾಜ ಸುಧಾರಕ ಬಸವೇಶ್ವರರ ಅನುಯಾಯಿಗಳಾದ ನಾವು ಅವರ ತತ್ವಗಳ ಚಿಂತನ ಮಂಥನ ಮಾಡಲು ಪ್ರಾರಂಭಿಸಿದ್ದು, ಇತ್ತೀಚೆಗಷ್ಟೇ ಎಂದು ಹೇಳಿದ ಶ್ರೀಗಳು, ವ್ಯಕ್ತಿ ಪರಿಶುದ್ಧªವಾಗಿದ್ದರೆ ಮಾತ್ರ ಸಮಾಜ ಪರಿಶುದ್ಧವಾಗುತ್ತದೆ ಎಂಬ ನಂಬಿಕೆ ಬಸವೇಶ್ವರದ್ದಾಗಿದೆ. ನಮಗೆ ಸುಖ, ಶಾಂತಿ ಸಿಗಬೇಕಾದರೆ ಬಸವ ತತ್ವಗಳನ್ನು ಜೀವನದಲ್ಲಿ ಅಳವಡಿಸಿ ಕೊಳ್ಳುವುದರ ಜತೆಗೆ ನಮ್ಮ ಮಕ್ಕಳಿಗೂ ಪರಿಚಯಿಸಿದರೆ ಮಕ್ಕಳು ಸುಸಂಸ್ಕೃತರಾಗುತ್ತಾರೆ. ಮುಂಬಯಿ ಉಪನಗರಗಳಲ್ಲಿಯೂ ಬಸವೇಶ್ವರ ಜಯಂತಿಯನ್ನು ಆಚರಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಇಂದಿನ ಈ ಶುಭದಿನದಂದು ಸಕಲ ಜೀವಾತ್ಮಗಳಿಗೆ ಒಳಿತನ್ನೇ ಬಯಸುವುದರ ಜತೆಗೆ ಪರಿಶುದ್ಧ ನಡೆ-ನುಡಿಯ ಸಂಕಲ್ಪ ಮಾಡೋಣ ಎಂದು ಹೇಳಿ ಶುಭಹಾರೈಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಜಾಗತಿಕ ಲಿಂಗಾಯತ ಮಹಾಸಭೆಯ ಕಾರ್ಯದರ್ಶಿ ಡಾ| ಶಶಿಕಾಂತ್ ಪಟ್ಟಣ ಅವರು ಮಾತನಾಡಿ, ಬಸವೇಶ್ವರರು ಜಾತಿ, ಮೂಢನಂಬಿಕೆಗಳನ್ನು ತೆಗೆದು ಮಹಿಳೆಯರಿಗೆ ಸಮಾನ ಹಕ್ಕನ್ನು ಒದಗಿಸಿದ ಮಹಾನುಭಾವ. ಬಸವೇಶ್ವರರು ಯಾವುದನ್ನು ವಿರೋಧಿಸುತ್ತಿದ್ದರೊ ಅದನ್ನು ನಾವು ಅಪ್ಪಿಕೊಳ್ಳುತ್ತಿದ್ದುದು ವಿಪರ್ಯಾಸದ ಸಂಗತಿಯಾಗಿದೆ. ಲಿಂಗಾಯತ ಜಾತಿ ಅಲ್ಲ ಅದೊಂದು ಧರ್ಮ. ವೀರಶೈವ ಲಿಂಗಾಯತರು ಒಂದೇ ಆಗಲು ಸಾಧ್ಯವಿಲ್ಲ. ಅವರು ವೇದಗಳನ್ನು ಒಪ್ಪುವ ಹಾಗೂ ಯಜ್ಞಗಳನ್ನು ಮಾಡುವವರಾದರೂ ನಮಗೆ ಬಸವೇಶ್ವರರೇ ಸರ್ವಸ್ವವಾಗಿದ್ದಾರೆ. ತಾತ್ವಿಕವಾಗಿ ಬಸವೇಶ್ವರರನ್ನು ಕಾಣುವ ವ್ಯವಧಾನ ನಮ್ಮಲ್ಲಿಲ್ಲ. ಮಹಾತ್ಮಾ ಗಾಂಧಿ, ಅಂಬೇಡ್ಕರ್ ಅವರಿಗೆ ತಿಳಿದ ಬಸವಣ್ಣ ನಮಗೆ ತಿಳಿಯಲಿಲ್ಲ. ನಮ್ಮಲ್ಲಿಯ ವೈಚಾರಿಕ ಪ್ರಜ್ಞೆಯನ್ನು ಬೆಳೆಸಿಕೊಳ್ಳುವುದರ ಜೊತೆಗೆ ಬಸವೇಶ್ವರರ ತತ್ವ ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಜಗಜ್ಯೋತಿ ಬಸವೇಶ್ವರರ ಲಿಂಗಾಯತದ ಧರ್ಮ ವಿಶ್ವ ಮಾನ್ಯ ಧರ್ಮ ಎಂಬುವುದನ್ನು ಸಾಬೀತುಪಡಿಸೋಣ ಎಂದು ನುಡಿದರು.
ಇನ್ನೋರ್ವ ಅತಿಥಿ ಗದಗ ತೋಂಟ ದಾರ್ಯ ಮಠದ ಬಸವ ಕೇಂದ್ರದ ಕಾರ್ಯದರ್ಶಿ ಪ್ರೊ| ಜಿ. ಬಿ. ಹಲ್ಯಾಳ ಅವರು ಮಾತನಾಡಿ, ಲಿಂಗಾಯತರ ಮನೆಯ ಜಗುಲಿ ಇವತ್ತು ವಿವಿಧ ದೇವರುಗಳ ಮ್ಯೂಸಿಯಂ ಆಗಿ ಪರಿವರ್ತನೆಗೊಂಡಿದ್ದು, ಲಿಂಗಾಯತ ಧರ್ಮದ ಉಪ ಜಾತಿಗಳು ಯಾವಾಗ ಇದರಿಂದ ಬೇರೆಯಾಗುವುದಿಲ್ಲವೂ ಅಲ್ಲಿಯವರೆಗೆ ಲಿಂಗಾಯತ ಧರ್ಮ ಬಲಿಷ್ಠವಾಗುವುದಿಲ್ಲ. ಲಿಂಗಾಯ ತರಿಗೆ ಇಷ್ಟಲಿಂಗವೇ ದೇವರು ಎಂದು ನುಡಿದು ಅದರ ಪಾವಿತ್ರÂತೆ ಹಾಗೂ ಮಹತ್ವವನ್ನು ವಿವರಿಸಿದರು.
ಇದೇ ಸಂದರ್ಭದಲ್ಲಿ ಡಾ| ಶಶಿಕಾಂತ ಪಟ್ಟಣ, ಸೋಮಶೇಖರ ಮಸಳಿ ದಂಪತಿ, ಕಲಾವಿದೆ ಶ್ಯಾಮಲಾ ರಾಧೇಶ್ ಮೊದಲಾದವರನ್ನು ಸಂಸ್ಥೆಯ ವತಿಯಿಂದ ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಸಮ್ಮಾನಿಸಲಾಯಿತು. ಶರಣವಾಣಿ ಭಜನ ಮಂಡಳಿಯ ಶ್ಯಾಮಲಾ ರಾಧೇಶ್ ಅವರಿಂದ ಶರಣವಾಣಿ ಕಾರ್ಯಕ್ರಮ ನಡೆಯಿತು. ಜನಾರ್ದನ ಸಾಲ್ಯಾನ್, ಗಣೇಶ್ ಶೆಟ್ಟಿ ಸಹಕರಿಸಿದರು.
ಸಂಸ್ಥೆಯ ಅಧ್ಯಕ್ಷ ಎಸ್. ಬಿ. ಕೊಂಡಗೂಳಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈರಣ್ಯಾ ಕನವಳ್ಳಿ, ಪ್ರೊ| ರಾಜಶೇಖರ ಪಾಟೀಲ್ ಇವರು ಅತಿಥಿಗಳನ್ನು ಪರಿಚಯಿಸಿದರು.
ಸಿರಹಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಡಾ| ವಿ. ಎಸ್. ಅಡಿಗಲ್, ಮಹಾಲಿಂಗ ಹೊಸಕೋಟಿ, ಜಿ. ಬಿ. ಮಠಪತಿ, ಹೇಮಂತ ಹೊನಾರಾವ್, ಗೌಡಪ್ಪ ಪಾಟೀಲ್ ಮೊದಲಾದವರು ಉಪಸ್ಥಿತರಿದ್ದರು.
ಚಿತ್ರ-ವರದಿ: ಗುರುರಾಜ ಪೊತನೀಸ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Waqf Report: ಅಮಿತ್ ಶಾ ಅಂಗಳಕ್ಕೆ ಭಿನ್ನರ ವಕ್ಫ್ ವರದಿ: ಕಿರಣ್ ರಿಜಿಜು ಮೂಲಕ ಸಲ್ಲಿಕೆ
Udupi:ಗೀತಾರ್ಥ ಚಿಂತನೆ 149: ಜಗತ್ತಿನಲ್ಲಿ ಇಷ್ಟೊಂದು ವ್ಯತ್ಯಾಸವೇಕೆ? ಪ್ರಶ್ನೆಗುತ್ತರವಿಲ್ಲ
ಮಮ್ತಾಜ್ ಅಲಿ ಆತ್ಮಹ*ತ್ಯೆ ಪ್ರಚೋದನೆ ಆರೋಪ: ಆರೋಪಿಗಳ ವಿರುದ್ದ ಆರೋಪ ಪಟ್ಟಿ ಸಲ್ಲಿಕೆ
Udupi: ಅವಕಾಶಗಳ ಸದ್ಬಳಕೆಗೆ ಮಹಿಳೆಯರು ಹಿಂಜರಿಯಬಾರದು: ಪ್ರಜ್ವಲಾ
Train; ಗೋಮಟೇಶ್ವರ ಎಕ್ಸ್‌ಪ್ರೆಸ್ ಮಂಗಳೂರು ಸೆಂಟ್ರಲ್‌ಗೆ ವಿಸ್ತರಿಸಲು ಕ್ಯಾ| ಚೌಟ ಪತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.