ಕ್ಷೇತ್ರದಲ್ಲಿರದ ಸಚಿವರಿಗೆ ಜನರ ಕಷ್ಟ ತಿಳಿಯದು
Team Udayavani, Apr 25, 2018, 12:42 PM IST
ಬನ್ನೂರು: ಕ್ಷೇತ್ರದ ಶಾಸಕರಾಗಿ ಹಾಗೂ ಲೋಕೋಪಯೋಗಿ ಸಚಿವರಾಗಿರುವ ಡಾ.ಎಚ್.ಸಿ.ಮಹದೇವಪ್ಪ ಇದುವರೆಗೂ ಕ್ಷೇತ್ರದಲ್ಲಿ ಮನೆ ಮಾಡದೇ, ಜನರ ನಡುವೆ ಬೆರೆಯದೆ ಜನರ ಕಷ್ಟ ಹೇಗೆ ತಿಳಿಯುತ್ತದೆ ಎಂದು ಬಿಜೆಪಿ ಅಭ್ಯರ್ಥಿ ಶಂಕರ್ ಪ್ರಶ್ನಿಸಿದರು.
ಪಟ್ಟಣದಲ್ಲಿ ಬಿಜೆಪಿ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ಚುನಾವಣೆ ಸಮೀಪವಾದಂತೆ ಜನರಿಗೆ ಅವರ ದರ್ಶನ ಭಾಗ್ಯ ಸಿಗುತ್ತಿದೆ. ಇಂದು ಬದಲಾವಣೆ ತೀರಾ ಅಗತ್ಯವಾಗಿದೆ. ಸುಮಾರು 10 ವರ್ಷಗಳಿಂದ ಆಳ್ವಿಕೆ ಮಾಡುತ್ತ ಕ್ಷೇತ್ರದ ಜನರ ಸಂಪರ್ಕಕ್ಕೆ ಸಿಗದೆ ದೂರದಲ್ಲೆಲ್ಲೋ ಐಷಾರಾಮಿ ಜೀವನದಲ್ಲಿ ತೊಡಗಿರುವ ಮಹದೇವಪ್ಪನವರಿಗೆ ಈ ಭಾರಿ ಚುನಾವಣೆಯಲ್ಲಿ ಸೋಲಿನ ಪಾಠ ಕಲಿಸಬೇಕೆಂದು ತಿಳಿಸಿದರು.
ಮಾಜಿ ಶಾಸಕಿ ಸುನೀತಾ ಮಾತನಾಡಿ, 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಶಂಕರ್‌ಗೆ ಪ್ರಚಂಡ ಗೆಲುವು ನೀಡುವ ಮೂಲಕ ನರಸೀಪುರ ಕ್ಷೇತ್ರದಲ್ಲಿ ಬಿಜೆಪಿ ಇದೆ ಎನ್ನುವುದನ್ನು ಕ್ಷೇತ್ರದ ಮತದಾರರು ತಿಳಿಸುತ್ತಾರೆಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ನಾಯಕ ಸಮುದಾಯದವರು ಶಂಕರ್‌ರನ್ನು ಅಭಿನಂದಿಸಿದರು. ಬಿಜೆಪಿ ಮುಖಂಡ ರಂಗರಾಜು, ಗೋಪಾಲ್, ಮೂಗೂರು ಪ್ರಕಾಶ್, ರಾಮಲಿಂಗೇಗೌಡ, ಮೂಗೂರು ಸಿದ್ದರಾಜು, ಅತ್ತಹಳ್ಳಿ ಕೃಷ್ಣೇಗೌಡ, ರಘು, ಶ್ರೀನಿವಾಸ್, ಸುರೇಶ್, ಕುಳ್ಳಪ್ಪ, ಗುರುಸ್ವಾಮಿ, ಗೋಪಿನಾಥ್, ರಂಗರಾಜು, ಕಾರ್ ಮಹೇಶ್, ಶಾಂತರಾಜು, ಕಂಬುನಾಯಕ್, ಸಿದ್ದೇಗೌಡ ಬಿಜೆಪಿ ಕಾರ್ಯಕರ್ತರು, ಮುಖಂಡರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.