ಆಪ್ತತೆ ಮೆರೆಯಲು ಹೋಗಿ ಮುಜುಗರಕ್ಕೀಡಾದ ಸಿಎಂ


Team Udayavani, Apr 26, 2018, 6:40 AM IST

180425kpn90.jpg

ಮೈಸೂರು: “ಏ ಮರಿಸ್ವಾಮಿ, ಬಾರಯ್ಯ ಇಲ್ಲಿ,ನೀನೇ ಇಲ್ಲೆಲ್ಲಾ ಓಡಾಡಿಕೊಂಡು ನನಗೆ ಓಟು ಹಾಕಿಸಬೇಕು’ ಎಂದು ಸಿಎಂ ಸಿದ್ದರಾಮಯ್ಯ ಕರೆದರೂ, “ನಾನು ಈಗ ಜೆಡಿಎಸ್‌ನಲ್ಲಿದ್ದೀನಿ, ನಿಮಗೆ ಓಟ್‌ ಹಾಕಲ್ಲ’ ಎಂದು ಗ್ರಾಮ ಪಂಚಾಯತ್‌ ಸದಸ್ಯ ರೊಬ್ಬರು ಮುಖಕ್ಕೆ ಹೊಡೆದ ರೀತಿಯಲ್ಲಿ ಹೇಳಿದ ಘಟನೆ ಬುಧವಾರ ನಡೆದಿದೆ.

ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಬುಧವಾರ ರೋಡ್‌ ಶೋ ನಡೆಸಿ ಮತಯಾಚಿಸಲು ಬಂದಿದ್ದ ಸಂದರ್ಭದಲ್ಲಿ ಹಳೇ ಕೆಸರೆಯಲ್ಲಿ ನಡೆದ ಈ ಘಟನೆಯಿಂದ ಸಿಎಂ ಸಿದ್ದರಾಮಯ್ಯ ಸಾರ್ವಜನಿಕವಾಗಿ ಮುಜುಗರಕ್ಕೀಡಾಗುವಂತಾಯಿತು.

ಬುಧವಾರ ಮಧ್ಯಾಹ್ನ ಕಾಮನಕೆರೆಹುಂಡಿಯಿಂದ ರೋಡ್‌ ಶೋ ಆರಂಭಿಸಿದ ಸಿದ್ದರಾಮಯ್ಯ, ಹಳೇ ಕೆಸರೆಗೆ ಬಂದಾಗ ಮಧ್ಯಾಹ್ನ 2 ಗಂಟೆ ದಾಟಿತ್ತು. ಈ ವೇಳೆ, ಜೆಡಿಎಸ್‌ ಕಾರ್ಯಕರ್ತರು ಮೈಸೂರಿನಲ್ಲಿ ಬಿಎಸ್ಪಿ ನಾಯಕಿ ಮಾಯಾವತಿ ಭಾಗವಹಿಸುವ ಜೆಡಿಎಸ್‌- ಬಿಎಸ್ಪಿ ಸಮಾವೇಶಕ್ಕೆ ವಾಹನಗಳಲ್ಲಿ ಜನರನ್ನು ಹೊರಡಿಸುವ ಕೆಲಸದಲ್ಲಿ ನಿರತರಾಗಿದ್ದರು. ಈ ವೇಳೆಗೆ, ಅಲ್ಲಿಗೆ ಸಿಎಂ ಆಗಮಿಸಿದರು. ಗ್ರಾಮದ ವೃತ್ತದಲ್ಲಿ ತೆರೆದ ವಾಹನದಲ್ಲಿ ನಿಂತು ಭಾಷಣ ಮಾಡುವ ಮೂಲಕ ಮತಯಾಚಿಸಿದ ಸಿದ್ದರಾಮಯ್ಯ, ಎಂದಿನಂತೆ ಗ್ರಾಮದ ಕೆಲ ಹಿರಿಯ ಮುಖಂಡರನ್ನು ಹೆಸರಿಡಿದು ಕರೆದರು. ಮತ್ತೆ ಕೆಲವರ ಹೆಸರು ನೆನಪಾ ಗದಿದ್ದಾಗ “ಈ ಕ್ಷೇತ್ರ ಬಿಟ್ಟು ಹತ್ತು ವರ್ಷ ಆಯ್ತಲ್ಲ ಕೆಲವರ ಹೆಸರು ಮರೆತೋಗಿದೆ’ ಎಂದರು.

ಗ್ರಾಪಂ ಸದಸ್ಯನ ತಿರಸ್ಕಾರ: ರಸ್ತೆ ಬದಿಯಲ್ಲಿ ನಿಂತಿದ್ದ ಗ್ರಾಪಂ ಸದಸ್ಯ ಮರಿಸ್ವಾಮಿಯನ್ನು ಕಂಡ ಸಿದ್ದರಾಮಯ್ಯ, “ಏ ಮರಿಸ್ವಾಮಿ, ಬಾರಯ್ಯ ಇಲ್ಲಿ, ನೀನೇ ಇಲ್ಲೆಲ್ಲಾ ನನ್ನ ಪರವಾಗಿ ಓಡಾಡಿ ಓಟು ಹಾಕಿಸಬೇಕು’ ಎಂದರು. ಆಗ ವಾಹನದ ಬಳಿಬಂದ ಮರಿಸ್ವಾಮಿ, “ನಾನೀಗ ಜೆಡಿಎಸ್‌ನಲ್ಲಿ ದ್ದೀನಿ. ನಿಮಗೆ ಓಟು ಕೇಳಲಾಗಲ್ಲ’ ಎಂದು ಸಿದ್ದರಾಮಯ್ಯ ಮಾತನ್ನು ತಿರಸ್ಕರಿಸಿದರು. “ನೀವು ದಲಿತ ವಿರೋಧಿ. ಖರ್ಗೆ, ಪರಮೇಶ್ವರ್‌ ಅವರನ್ನು ಮುಖ್ಯಮಂತ್ರಿಯಾಗಲು ಬಿಡಲಿಲ್ಲ. ಶ್ರೀನಿವಾಸ ಪ್ರಸಾದ್‌ರನ್ನು ಮಂತ್ರಿ ಸ್ಥಾನದಿಂದ
ತೆಗೆದುಹಾಕಿದ್ರಿ, ನಿಮಗೇಕೆ ನಾನು ಸಪೋರ್ಟ್  ಮಾಡಲಿ? ನಾನು ಜೆಡಿಎಸ್‌ ಪರ ಕೆಲಸ ಮಾಡುತ್ತೇನೆ. ಜೆಡಿಎಸ್‌ ಅಧಿಕಾರಕ್ಕೆ ಬಂದರೆ ದಲಿತರೊಬ್ಬರನ್ನು ಉಪಮುಖ್ಯಮಂತ್ರಿ ಮಾಡುವುದಾಗಿ ಕುಮಾರಸ್ವಾಮಿ ಭರವಸೆ ನೀಡಿದ್ದಾರೆ. ನಿಮ್ಮ ಜೊತೆ 15 ವರ್ಷ ಇದ್ದೆ. ನೀವು ದಲಿತ ವಿರೋಧಿ ಅಂತ ಗೊತ್ತಾದ್ದರಿಂದ ಜೆಡಿಎಸ್‌ ಸೇರಿದ್ದೇನೆ’ ಎಂದು ನಡುರಸ್ತೆಯಲ್ಲೇ ಏರಿದ ಧ್ವನಿಯಲ್ಲಿ ಉತ್ತರ ಕೊಟ್ಟರು. ಇದರಿಂದ ಕೊಂಚ ವಿಚಲಿತರಾದ ಸಿದ್ದರಾಮಯ್ಯ, “ನೀವೆಲ್ಲಾ ನಮಗೇ ಓಟು ಮಾಡ್ರಪ್ಪ, ಅವನು ಜೆಡಿಎಸ್‌ಗೆ ಮಾಡಲಿ, ಅವನನ್ನು ಮಾತಾಡಿಸಿ ನಾನು ತಪ್ಪು ಮಾಡಿದೆ’ ಎಂದು ಗರಂ ಆಗಿಯೇ ತೆರೆದ ವಾಹನದಿಂದ ಇಳಿದುಕಾರನ್ನೇರಿದರು. ಆ ಸಂದರ್ಭದಲ್ಲಿ ಮರಿಸ್ವಾಮಿ ಮತ್ತು ಜೊತೆಗಿದ್ದ ಕೆಲ ಯುವಕರು, ಜೆಡಿಎಸ್‌ ಪಕ್ಷಕ್ಕೆ, ಜಿ.ಟಿ.ದೇವೇಗೌಡರಿಗೆ ಜೈಕಾರ ಕೂಗಿದರು.

ತೆರೆದ ವಾಹನ ಅಡ್ಡಗಟ್ಟಿದ ಯುವಕ
ಇದಕ್ಕೂ ಮುನ್ನ, ಕಾಮಕೆರೆ ಹುಂಡಿಯಲ್ಲಿ ರೋಡ್‌ ಶೋ ನಡೆಸಿದ ಸಿದ್ದರಾಮಯ್ಯ, ಅಲ್ಲಿನ ದಲಿತಕೇರಿಗೆ ಮತಯಾಚನೆಗೆ ಹೋದಾಗ ಯುವಕನೊಬ್ಬ ತೆರೆದ ವಾಹನ ಅಡ್ಡಗಟ್ಟಿ  “ಚುನಾವಣೆಯಲ್ಲಿ ಓಟು ಕೇಳಲು ಬಂದಿದ್ದೀರಿ, ನಮ್ಮ ಗ್ರಾಮಕ್ಕೆ ಮೂಲ ಸೌಕರ್ಯ ಕಲ್ಪಿಸಿಲ್ಲ. ಇಲ್ಲೊಂದು ಸರ್ಕಾರಿ ಕಟ್ಟಡ ನಿರ್ಮಿಸಿಲ್ಲವೇಕೆ’ ಎಂದು ಪ್ರಶ್ನಿಸಿದರು. ಇದರಿಂದ ಸಿಡಿಮಿಡಿಗೊಂಡ ಸಿದ್ದರಾಮಯ್ಯ, “ಇಲ್ಲಿಗೆ ಅಂಬೇಡ್ಕರ್‌ ಸಮುದಾಯ ಭವನ ಮಂಜೂರು ಮಾಡಿದ್ದೇವೆ. ಎಲೆಕ್ಷನ್‌ ಆದ ಮೇಲೆ ಕೆಲಸ ಶುರು ಆಗುತ್ತೆ, ನೀನು ಭಾಷಣ ಮಾಡಬೇಡ ಬಿಡಪ್ಪಾ’ ಎಂದು ಹೇಳಿ ಬಂದರು.

ಟಾಪ್ ನ್ಯೂಸ್

Maharashtra Election: Election officials checked Amit Shah’s bag

Maharashtra Election: ಅಮಿತ್‌ ಶಾ ಅವರ ಬ್ಯಾಗ್‌ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು

Anmol Buffalo: The price of this Buffalo weighing 1500 kg is Rs 23 crore!

Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!

13-BBK-11

BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ

Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್‌ ಗೆ 10 ಕೋಟಿ ರೂಪಾಯಿ ಪಂಗನಾಮ!

Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್‌ ಗೆ 10 ಕೋಟಿ ರೂಪಾಯಿ ಪಂಗನಾಮ!

12-gundya

Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು

ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಲ್ಕರ್ ಹತ್ಯೆ ಆರೋಪಿ: ಮೂಲಗಳು

Mumbai: ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಕರ್ ಹತ್ಯೆ ಆರೋಪಿ: ವರದಿ

Kiwi player will be away from Test cricket after the England series

Test: ಇಂಗ್ಲೆಂಡ್‌ ಸರಣಿಯ ಬಳಿಕ ಟೆಸ್ಟ್‌ ಕ್ರಿಕೆಟ್‌ ನಿಂದ ದೂರವಾಗಲಿದ್ದಾರೆ ಕಿವೀಸ್‌ ಆಟಗಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Anandapura: ಸಾಲದ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ

Anandapura: ಸಾಲದ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ

Shimoga; Congress – Statement against Muslims: Sumoto case against KS Eshwarappa

Shimoga; ಕಾಂಗ್ರೆಸ್-ಮುಸ್ಲಿಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ

10-thirthahalli

Thirthahalli: ಶಾಸಕ ಸ್ಥಾನವನ್ನು ಗಿರವಿ ಇಟ್ಟರಾ ಆರಗ ಜ್ಞಾನೇಂದ್ರ ?

9-munirathna

Bengaluru: ಮುನಿರತ್ನ ವಿರುದ್ಧ ಹನಿಟ್ರ್ಯಾಪ್‌ ಕೇಸ್‌: ಪಿಐ ಸೆರೆ

7-r-ashok

Bengaluru: ಇ-ಖಾತಾ ಗೊಂದಲದಿಂದ ಲಂಚಕ್ಕೆ ದಾರಿ: ಆರ್‌. ಅಶೋಕ್‌

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Organ Donation: ಸಾವಿನ ನಂತರವೂ ನೆರವಾದ ಜೀವ

Organ Donation: ಸಾವಿನ ನಂತರವೂ ನೆರವಾದ ಜೀವ

Anandapura: ಸಾಲದ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ

Anandapura: ಸಾಲದ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ

Maharashtra Election: Election officials checked Amit Shah’s bag

Maharashtra Election: ಅಮಿತ್‌ ಶಾ ಅವರ ಬ್ಯಾಗ್‌ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು

15-bng

Bengaluru: ವೈದ್ಯೆಗೆ ಲೈಂಗಿಕ ಕಿರುಕುಳ: ಪಿಎಸ್‌ಐ ವಿರುದ್ದ ಪೊಲೀಸ್‌ ಆಯುಕ್ತರಿಗೆ ದೂರು

14-bng

Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.