ಉಪ್ಪಿನಂಗಡಿ: ಚುನಾವಣೆ ಘೋಷಣೆ ಬೆನ್ನಲ್ಲೇ ಬಸ್ ಗಳ ಕೊರತೆ
Team Udayavani, Apr 26, 2018, 11:16 AM IST
ಉಪ್ಪಿನಂಗಡಿ: ಚುನಾವಣೆ ಘೋಷಣೆ ಆಗುತ್ತಿದ್ದಂತೆಯೇ ಉಪ್ಪಿನಂಗಡಿಯಲ್ಲಿ ಕೆಎಸ್ಸಾರ್ಟಿಸಿ ಬಸ್‌ಗಳ ಕೊರತೆ ಕಂಡು ಬರುತ್ತಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ.
ಪುತ್ತೂರು ತಾಲೂಕಿನ ಬೆಳೆಯುತ್ತಿರುವ ನಗರಗಳಲ್ಲಿ ಉಪ್ಪಿನಂಗಡಿಯೂ ಒಂದಾಗಿದ್ದು, ಪ್ರಮುಖ ಪಟ್ಟಣಗಳಿಗೆ ಸಂಪರ್ಕ ಕಲ್ಪಿಸುವ ಕೇಂದ್ರವೂ ಆಗಿದೆ. ಮಂಗಳೂರಿಗೆ ಇಲ್ಲಿಂದ 10 ನಿಮಿಷಕ್ಕೆ ಒಂದ ರಂತಿದ್ದ ಕೆಎಸ್ಸಾರ್ಟಿಸಿ ಬಸ್ ಈಗ ಗಂಟೆಗೊಂದು ಆಗಿದೆ. ಇನ್ನೊಂದೆಡೆ ಕಾಂಕ್ರೀಟ್ ಕಾಮಗಾರಿಗಾಗಿ ಶಿರಾಡಿ ಘಾಟ್ ಬಂದ್ ಆಗಿರುವುದರಿಂದ ನೆಲ್ಯಾಡಿ, ಉದನೆ, ಶಿರಾಡಿ, ಗುಂಡ್ಯ ಭಾಗದ ಕಡೆ ಬಸ್‌ಗಳೇ ಪಯಣಿಸುತ್ತಿಲ್ಲ. ಈ ಭಾಗದ ಜನರು ಸಾರಿಗೆ ಸಮಸ್ಯೆಯಿಂದ ಸಂಕಷ್ಟಕ್ಕೆ ಈಡಾಗಿದ್ದಾರೆ.
ವೇಳಾಪಟ್ಟಿಯಲ್ಲಿದ್ದರೂ ಚುನಾವಣೆಯ ಕೆಲಸ ಹಾಗೂ ಇತರ ಕಾರಣಗಳಿಂದಾಗಿ ಸಮರ್ಪಕ ಸಾರಿಗೆ ವ್ಯವಸ್ಥೆಯಿಲ್ಲದೆ ಜನ ಸಾಮಾನ್ಯರು ಪರದಾಡುವ ಸ್ಥಿತಿ ಬಂದಿದೆ
ನಿಲ್ದಾಣವೇ ಗತಿ!
ಸಂಜೆ ಏಳು ಗಂಟೆಯ ಬಳಿಕ ಉಪ್ಪಿನಂಗಡಿಯಿಂದ ಮಂಗಳೂರು, ಧರ್ಮಸ್ಥಳ, ನೆಲ್ಯಾಡಿ, ಉದನೆ, ಶಿರಾಡಿ ಹಾಗೂ ಗುಂಡ್ಯದ ಕಡೆಗೆ ಬಸ್ ಗಳನ್ನು ಬಿಡುತ್ತಿಲ್ಲ. ಮಂಗಳೂರಿಗೆ ಬಸ್ ಇಲ್ಲದ್ದರಿಂದ ಬಿಳಿಯೂರು, ಪೆರ್ನೆ, ಮಾಣಿ, ಬಿ.ಸಿ. ರೋಡ್ ಕಡೆಗೆ ಹೋಗುವವರಿಗೂ ತೊಂದರೆಯಾಗಿದೆ. ಧರ್ಮಸ್ಥಳ ಕಡೆಗೂ ಬಸ್ ಇಲ್ಲದೆ ಕರಾಯ, ಕಲ್ಲೇರಿ, ಕುಪ್ಪೆಟ್ಟಿ, ಗೇರುಕಟ್ಟೆ, ಗುರುವಾಯನಕೆರೆ, ಬೆಳ್ತಂಗಡಿ ಭಾಗದ ಜನರಿಗೂ ಬಿಸಿ ತಟ್ಟಿದೆ.
ಸರಿಪಡಿಸುತ್ತೇವೆ
ಚುನಾವಣೆಯ ಕೆಲಸಗಳಿಗಾಗಿ ಬಸ್ ಗಳನ್ನು ನೀಡಲಾಗಿದೆ. ಬಸ್‌ಗಳ ಕೊರತೆಯಿಂದಾಗಿ ಕೆಲವು ಕಡೆ ಸಾರಿಗೆ ಸಂಚಾರ ವನ್ನು ಸ್ಥಗಿತಗೊಳಿಸಬೇಕಾದ ಸ್ಥಿತಿ ಬಂದಿದೆ. ಎರಡು ಅಥವಾ ಮೂರು ದಿನಗಳಲ್ಲಿ ಈ ಸಮಸ್ಯೆಯನ್ನು ಸರಿಪಡಿಸಲಾಗುವುದು.
– ವಿಭಾಗೀಯ ನಿಯಂತ್ರಣಾಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Havyaka ಭಾಷೆಗೆ ಅಕಾಡೆಮಿ ಅಥವಾ ಅಧ್ಯಯನ ಪೀಠ ಅಗತ್ಯ: ರವಿಶಂಕರ್ ಭಟ್
Ramnagar; 30ಕ್ಕೂ ಅಧಿಕ ಊರುಗಳಲ್ಲಿ ಆತಂಕ ಹುಟ್ಟಿಸಿದ್ದ ಕಾಡಾನೆ ಸೆರೆ
Yakshagana;ಅಧ್ಯಯನ, ಪಾತ್ರ ಜ್ಞಾನದಿಂದಷ್ಟೇ ಕಲಾವಿದ ರಂಗಸ್ಥಳದಲ್ಲಿ ಮೆರೆಯಲು ಸಾಧ್ಯ
Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು
Udupi; ಕ್ಯಾನ್ಸರ್‌ನಿಂದ ಬಳಲುತ್ತಿದ್ದ ರೋಗಿಯ ರಕ್ಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.