ಮೇ 11ರ ವರೆಗೆ ಕೋಲ್ಕತ ಬಾರ್ ಅಸೋಸಿಯೇಶನ್ ಮುಷ್ಕರ ವಿಸ್ತರಣೆ
Team Udayavani, Apr 26, 2018, 4:43 PM IST
ಕೋಲ್ಕತ : ನ್ಯಾಯಾಧೀಶರ ನೇಮಕಾತಿಯನ್ನು ಆಗ್ರಹಿಸಿ ಕಳೆದ ಎರಡು ತಿಂಗಳಿಗೂ ಮೀರಿದ ದಾಖಲೆ ಅವಧಿಯಿಂದ ನಡೆಯುತ್ತಿರುವ ವಕೀಲರ ಸಂಘದ ಕೆಲಸ ನಿಲುಗಡೆ ಮುಷ್ಕರ ಮೇ 11ರ ವರೆಗೂ ಮುಂದುವರಿಯುವುದೆಂದು ಕೋಲ್ಕತ ಬಾರ್ ಅಸೋಸಿಯೇಶನ್ ತಿಳಿಸಿದೆ.
ಕಳೆದ ಎರಡು ತಿಂಗಳು ಮೀರಿ ನಡೆಯುತ್ತಿರುವ ವಕೀಲರ ಸಂಘದ ಕೆಲಸ ನಿಲುಗಡೆ ಮುಷ್ಕರದಿಂದಾಗಿ ಕಲ್ಕತ್ತ ಹೈಕೋರ್ಟಿನ ಕಾರ್ಯ ಕಲಾಪಗಳೆಲ್ಲ ತೀವ್ರವಾಗಿ ಬಾಧಿತವಾಗಿವೆ.
ಕಲ್ಕತ್ತಾ ಹೈಕೋರ್ಟಿನಲ್ಲಿ ಕಾರ್ಯ ನಿರ್ವಹಿಸಿಕೊಂಡಿರುವ ಗರಿಷ್ಠ ಸಂಖ್ಯೆಯ ವಕೀಲರನ್ನು ತನ್ನ ಸಂಘದ ಸದಸ್ಯರನಾಗಿ ಹೊಂದಿರುವ ಕೋಲ್ಕತ ಬಾರ್ ಅಸೋಸಿಯೇಶನ್ ನ ಸಾಮಾನ್ಯ ಸಭೆಯಲ್ಲಿ “ಮೇ 11ರ ವರೆಗೂ ಕೆಲಸ ನಿಲುಗಡೆ ಮುಷ್ಕರವನ್ನು ಮುಂದುವರಿಸಲು ಮತ್ತು ಮೇ 14ರಂದು ಈ ನಿರ್ಧಾರವನ್ನು ಪುನರ್ ಪರೀಶೀಲಿಸಲು ಒಪ್ಪಿಕೊಳ್ಳಲಾಯಿತು’ ಎಂದು ಪ್ರಧಾನ ಕಾರ್ಯದರ್ಶಿ ಅಮೋಲ್ ಮುಖರ್ಜಿ ತಿಳಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.