ಉತ್ತಮ ಗ್ರಂಥಗಳು ನಾಡಿನ ಸಂಸ್ಕೃತಿಯ ಪ್ರತೀಕ: ಯತ್ತಿನಹಳ್ಳಿ
Team Udayavani, Apr 26, 2018, 5:05 PM IST
ಹೊನ್ನಾಳಿ: ಉತ್ತಮ ಗ್ರಂಥಗಳು ನಾಡಿನ ಸಂಸ್ಕೃತಿಯ ಪ್ರತೀಕ. ಉತ್ತಮ ಪುಸ್ತಕಗಳ ಲೋಕದಲ್ಲಿ ವಿಹರಿಸುವ ಪ್ರತಿಯೊಬ್ಬನ ಬದುಕು ಸುಂದರ ಎಂದು ಪ್ರಾಂಶುಪಾಲ ಶಿವಬಸಪ್ಪ ಎಚ್ ಯತ್ತಿನಹಳ್ಳಿ ಹೇಳಿದರು. ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಪುಸ್ತಕ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರತಿ ವರ್ಷ ಏ. 23ರಂದು ವಿಶ್ವ ಪುಸ್ತಕ ದಿನವನ್ನು ಆಚರಿಸಲಾಗುತ್ತದೆ. ಜನರಲ್ಲಿ ಹಾಗೂ ವಿಶೇಷವಾಗಿ ಮಕ್ಕಳಲ್ಲಿ ಓದುವ ಆಸಕ್ತಿ ಮೂಡಿಸಲು ಉತ್ತೇಜಿಸುವ ದಿನ. ವಿಶ್ವ ಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ ಅಥವಾ ಯುನೆಸ್ಕೋ ವಿಶ್ವ ಪುಸ್ತಕ ದಿನ ಆಚರಿಸಲು 1955ರಲ್ಲಿ ಕರೆ ನೀಡಿತು. ಪುಸ್ತಕ ಸಂಸ್ಕೃತಿ ನಮ್ಮಲ್ಲಿ ಬೆಳೆಯಬೇಕು. ಪುಸ್ತಕಗಳನ್ನೋದುವ ಹವ್ಯಾಸ ನಮ್ಮದಾಗಬೇಕು. ಪುಸ್ತಕ ನಮಗೆ ಜ್ಞಾನವನ್ನು ನೀಡುತ್ತದೆ ಎಂದು ಹೇಳಿದರು.
ಗ್ರಂಥಪಾಲಕರು ಮತ್ತು ಸಾಂಸ್ಕೃತಿಕ ವಿಭಾಗದ ಸಂಚಾಲಕ ಎಂ. ನಾಗರಾಜನಾಯ್ಕ ಮಾತನಾಡಿ, ಏ. 23ರಂದೇ ಪುಸ್ತಕ ದಿನ ಆಚರಿಸುವುದರಲ್ಲಿ ಒಂದು ಸ್ವಾರಸ್ಯವೂ ಇದೆ. 1564ರ ಏ. 23 ನಾಟಕಕಾರ ವಿಲಿಯಂ ಷೇಕ್ಸ್‌ಪಿಯರ್ ಜನಿಸಿದ ದಿನ. ಅಲ್ಲದೆ ಅವರು ತೀರಿಕೊಂಡದ್ದೂ ಏ. 23ರಂದು ಎಂದು ಹೇಳಿದರು. ಸಹ ಪ್ರಾಧ್ಯಾಪಕರಾದ ದೇವರಾಜ ಸಿ ಪಾಟೀಲ್, ಸಹಾಯಕ ಪ್ರಾಧ್ಯಾಪಕರಾದ ಹಾರಾಳು ಮಹಾಬಲ್ಲೇಶ್ವರ, ಎ.ಎಲ್. ಪಾರ್ಥಸಾರಥಿ, ಡಾ| ಟಿ ವಿದ್ಯಾ ಟಿ ಪವಾರ್, ಬೆಳ್ಳುಳ್ಳಿ ಕೊಟ್ರೇಶ, ಎಂ. ಆರ್. ಲೋಕೇಶ, ಹರೀಶ್ ಪಿ.ಎಸ್, ಅರಸಯ್ಯ, ಮಂಜುನಾಥ ಗುರು, ಜಿ.ಎನ್. ಧನಂಜಯ ಮೂರ್ತಿ, ಆರ್. ಎಚ್. ಅಮೂಲ್ಯ, ಗ್ರಂಥಾಲಯ ಸಹಾಯಕ ಎಸ್. ಜಗದೀಶಪ್ಪ, ವಿದ್ಯಾರ್ಥಿಗಳು ಉಪಸ್ಥಿತರಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಶಾಸಕರ ಖರೀದಿ ಆರೋಪ; ತನಿಖೆಗೆ ಎಸ್‌ಐಟಿ ರಚಿಸಿ: ಎಂ.ಪಿ.ರೇಣುಕಾಚಾರ್ಯ
Market: ಇಳುವರಿ ಕೊರತೆ: ತೆಂಗಿನಕಾಯಿ ಬೆಲೆ 58ರಿಂದ 60 ರೂಪಾಯಿ!
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.