ಅಗರಿಯವರ ಪ್ರಸಂಗ ದಶಕ ಸಂಪುಟ 


Team Udayavani, Apr 27, 2018, 6:00 AM IST

303.jpg

ತೆಂಕುತಿಟ್ಟು ಭಾಗವತಿಕೆಯ ಪ್ರಾತಃಸ್ಮರಣೀಯರಾದ ಅಗರಿ ಶ್ರೀನಿವಾಸ ಭಾಗವತರ ಪುತ್ರನಾದ ಅಗರಿ ಭಾಸ್ಕರ ರಾಯರು ತಂದೆಯವರಂತೆ ಪ್ರಸಂಗ ರಚನೆಯನ್ನು ಗಂಭೀರವಾಗಿ ಪರಿಗಣಿಸಿದವರು.ತೆಂಕು ಮತ್ತು ಬಡಗಿನಲ್ಲಿ ಸಾವಿರಾರು ಪ್ರದರ್ಶನಗಳನ್ನು ಕಂಡು ಗಿನ್ನಿಸ್‌ ದಾಖಲೆಯತ್ತ ಮುನ್ನುಗ್ಗುತ್ತಿರುವ ಶ್ರೀದೇವಿ ಮಹಾತ್ಮೆಯೂ ಶ್ರೀನಿವಾಸ ಭಾಗವತರ ಕೃತಿಗಳಲ್ಲಿ ಒಂದು.ಭಾಸ್ಕರ ರಾಯರು ಸುಮಾರು ಮೂವತ್ತು ಪ್ರಸಂಗಗಳನ್ನು ರಚಿಸಿದರೂ ಎಲ್ಲವೂ ಲಭ್ಯವಿಲ್ಲ. 

ಶ್ರೀ ಹರಿಲೀಲಾರ್ಣವ ಅಥವಾ ಶ್ರೀ ಮಹಾಲಸಾ ನಾರಾಯಣಿ ಪ್ರಸಂಗ 2015ರಲ್ಲಿ ಮುದ್ರಿತವಾಯಿತು.ಅಗರಿಯವರು ಬರೆದ ವಿಭಿನ್ನ ಕಥಾವಸ್ತುಗಳನ್ನೊಳಗೊಂಡ ಹತ್ತು ಪ್ರಸಂಗಗಳನ್ನು ಹಿರಿಯ ವಿದ್ವಾಂಸರಾದ ಡಾ| ಪಾದೆಕಲ್ಲು ವಿಷ್ಣು ಭಟ್‌ ಅವರು ಸಂಪಾದಿಸಿ ಸಂಪುಟ ರೂಪದಲ್ಲಿ ಸಿದ್ಧಪಡಿಸಿದ್ದು, ಪ್ರೊ| ಹೆರಂಜೆ ಕೃಷ್ಣ ಭಟ್‌ ಅದನ್ನು ತಮ್ಮ ಶೇವಧಿ ಪ್ರಕಾಶನದ ಮೂಲಕ ಪ್ರಕಟಿಸಿದ್ದಾರೆ. ಶ್ರೀ ವಿಶ್ವಕರ್ಮ ಮಹಾತ್ಮೆ,ಅಗಸ್ತ್ಯ ಚರಿತೆ, ತಪಸ್ವಿ ಮಹೇಂದ್ರ, ಧರ್ಮ ವಿಜಯ, ರುದ್ರಾಂತರ್ಗತ ಲಕ್ಷ್ಮೀನರಸಿಂಹ, ವೀರರಾಣಿ ಅಪ್ರಮೇಯ, ಶ್ರೀಹರಿ ಲೀಲಾರ್ಣವ, ಶ್ರೀದೇವಿ ತ್ರಿಕಣ್ಣೇಶ್ವರಿ ಮಹಾತ್ಮೆ, ಶ್ರೀರಾಘವೇಂದ್ರ ಮಹಾತ್ಮೆ, ಶ್ರೀವಾಣಿ ವಿಲಾಸವೆಂಬ ಹತ್ತು ಪ್ರಸಂಗಗಳನ್ನೊಳಗೊಂಡ ಬೃಹತ್‌ ಸಂಪುಟವನ್ನು ಎ. 28ರಂದು ಪರ್ಯಾಯ ಶ್ರೀ ಪಲಿಮಾರು ಮಠಾದೀಶ ವಿದ್ಯಾದೀಶ ಶ್ರೀಪಾದರು ಉಡುಪಿಯಲ್ಲಿ ಲೋಕಾರ್ಪಣೆಗೊಳಿಸಲಿದ್ದಾರೆ.

 ಭಾಸ್ಕರ ರಾಯರಿಗೆ ಸುರತ್ಕಲ್‌ ವಿದ್ಯಾದಾಯಿನಿ ಶಾಲೆಯ ಅಧ್ಯಾಪಕ ಪದ್ಮನಾಭ ಸೋಮಯಾಜಿಯವರಿಂದ ಛಂದಸ್ಸಿನ ಪ್ರಾಥಮಿಕ ಪಾಠ ದೊರೆಯಿತು.21ನೇ ವಯಸ್ಸಿನಲ್ಲಿ ಪಾಲ್ಕೆ ಬಾಬುರಾಯ ಆಚಾರ್ಯರ ಒತ್ತಾಸೆಯಿಂದ ಯಕ್ಷಗಾನ ಪ್ರಸಂಗ ರಚನೆಗೆ ಕೈಹಾಕಿದರು.ಹಿರಿಯ ಕವಿ ಎಸ್‌.ವಿ.ಪರಮೇಶ್ವರ ಭಟ್ಟರು ಅದಕ್ಕೆ ಮುನ್ನುಡಿ ಬರೆದು ಇಹವಸ್ತು ಪರವಸ್ತು ಸೇರಿ ಆಧ್ಯಾತ್ಮಿಕ ಪರಮ ತತ್ವ ಇದರಲ್ಲಿ ಅಡಕವಾಗಿದೆ ಎಂದು ಪ್ರಶಂಸಿಸಿದ್ದರು.ಅವರ ಸಹೋದರ ಅಗರಿ ರಘುರಾಮ ಭಾಗವತರು ತೆಂಕುತಿಟ್ಟಿನ ಮೇರು ಶ್ರೇಣಿಯ ಭಾಗವತರು. ಶೇಣಿ ಗೋಪಾಲಕೃಷ್ಣ ಭಟ್‌,ಪೆರ್ಲ ಕೃಷ್ಣ ಭಟ್‌,ಸಾಮಗದ್ವಯರು ದಾಮೋದರ ಮಂಡೆಚ್ಚ ಅವರ ಸಹಕಾರದಿಂದ ಅವರ ಯಕ್ಷಕೃತಿಗಳು ಅರಳಿದವು. ಕಾಳಿಂಗ ನಾವಡ ಮತ್ತು ಕಡತೋಕ ಮಂಜುನಾಥ ಭಾಗವತರು ಇವರ ಪ್ರಸಂಗಳಿಗೆ ಹಾಡಿ ದ್ದಾರೆ.ವೃತ್ತಿಯಲ್ಲಿ ಸಿವಿಲ್‌ ಕಂಟ್ರಾಕ್ಟರ್‌ ಆಗಿದ್ದ ಇವರು ಕುಟುಂಬದ ಪ್ರೇರಣೆಯಿಂದ ಪ್ರಸಂಗ ರಚನೆಯಲ್ಲಿ  ತೊಡಗಿದವರು. ಅಗರಿ ಯವರು ತಮ್ಮ ಪ್ರಸಂಗಗಳಿ ಗೆ ಪೌರಾಣಿಕ,ಕಾಲ್ಪನಿಕ, ಸ್ಥಳ ಪುರಾಣಗಳನ್ನೇ ಹೆಚ್ಚಾಗಿ ಆಧರಿಸಿದ್ದಾರೆ. 

ಅವರ ಗುಂಡಬಾಳ ಕ್ಷೇತ್ರ ಮಹಾತ್ಮೆ ಅತ್ಯಧಿಕ ಪ್ರಯೋಗ ಕಂಡ ಪ್ರಸಂಗ.ಈಗಲೂ ಗುಂಡಬಾಳದಲ್ಲಿ ಈ ಪ್ರಸಂಗ ನಿತ್ಯವೂ ನಡೆಯುತ್ತದೆ.ಅವರ ತಂದೆಯವರ ಬಪ್ಪನಾಡು ಕ್ಷೇತ್ರ ಮಹಾತ್ಮೆ ಅತ್ಯಂತ ಯಶಸ್ವಿಯಾದ ಪ್ರಸಂಗ.ಅವರ ಪ್ರೇರಣೆಯಿಂದ ಅನೇಕ ಕ್ಷೇತ್ರ ಮಹಾತ್ಮೆಯನ್ನು ಇವರು ರಚಿಸಿದ್ದಾರೆ.ಬಾಸ್ಕರ ರಾಯರ ಮನೆಮಾತು ಕನ್ನಡ ವಾದರೂ ತುಳುವಿನಲ್ಲಿ ಕೆಲವು ಪ್ರಸಂಗಗಳನ್ನು ರಚಿಸಿದ್ದಾರೆ.ಅವರ ಸಿರಿ ಮಹಾತ್ಮೆ, ರಾಣಿ ಅಬ್ಬಕ್ಕ ಪ್ರಸಂಗಗಳು ತುಳುನಾಡಿನ ಕಥೆಗಳನ್ನೇ ಹೊಂದಿವೆ.
 ಅಗರಿಯವರು ಇತರರು ಸಂಗ್ರಹಿಸಿದ ಕಥೆಗೆ ಪ್ರಸಂಗರೂಪ ನೀಡಿದ್ದಾರೆ.ಆದರೆ ಕಥೆ ಯಾರದ್ದು, ಪದ್ಯ ರಚನೆ ಯಾರದ್ದು ಎಂಬುದನ್ನು ಸ್ಪಷ್ಟವಾಗಿ ದಾಖಲಿಸಿದ್ದಾರೆ.ಅವರ ಧರ್ಮ ವಿಜಯ, ದಶಮಗ್ರಹ ವಿಜಯ, ಶ್ರೀ ವಾಣಿ ವಿಲಾಸ ಪ್ರಸಂಗಗಳ ಕತೆ ಬೆಣ್ಣೆಮನೆ ಗೋಪಾಲಕ್ರಷ್ಣ ಭಟ್ಟರದ್ದು.ಮುದ್ರಿತವಾದ ಈ ಮೂರೂ ಪ್ರಸಂಗಗಳಲ್ಲಿ ಅವರ ಹೆಸರು ದಾಖಲಾಗಿದೆ.

ಟಾಪ್ ನ್ಯೂಸ್

Maha-Election

Assembly Election: ಮಹಾರಾಷ್ಟ್ರ ಗೆಲ್ಲಲು 10 ಗ್ಯಾರಂಟಿಗಳ ಕೊಟ್ಟ ʼಮಹಾಯುತಿʼ!

HDD–By-election

By Election: ಮುಖ್ಯಮಂತ್ರಿ ಗರ್ವದ ಸೊಕ್ಕು ಮುರಿಯಬೇಕು: ಎಚ್‌.ಡಿ.ದೇವೇಗೌಡ ಗುಡುಗು

ರೈಲು ಬುಕಿಂಗ್‌, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್‌’: ಮುಂದಿನ ತಿಂಗಳು ಬಿಡುಗಡೆ

Super App: ರೈಲು ಬುಕಿಂಗ್‌, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್‌’: ಮುಂದಿನ ತಿಂಗಳು ಬಿಡುಗಡೆ

High-Court

Kambala: ಪೆಟಾ ಪಿಐಎಲ್‌; ವಿಚಾರಣೆ ನ.12ಕ್ಕೆ ಮುಂದೂಡಿದ ಹೈಕೋರ್ಟ್‌

CM-Shiigavi-2

MUDA Case: ಕೇವಲ 14 ಸೈಟ್‌ಗಾಗಿ ನಾನು ರಾಜಕಾರಣ ಮಾಡಬೇಕಾ?: ಸಿಎಂ ಸಿದ್ದರಾಮಯ್ಯ

vidan-soudha-kannada

Golden Jubilee: ಕನ್ನಡವೇ ಅಧಿಕಾರಿಗಳ‌ ಹೃದಯದ ಭಾಷೆ ಆಗಲಿ

KSRTC

Transport: ಕೆಎಸ್ಸಾರ್ಟಿಸಿ ದಾಖಲೆ: ಒಂದೇ ದಿನ 1.23 ಕೋಟಿ ಮಂದಿ ಪ್ರಯಾಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

3

Yakshagana: ಚಪ್ಪಾಳೆಗಾಗಿ ರಸಾಭಾಸ ಮಾಡಬಾರದು

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Maha-Election

Assembly Election: ಮಹಾರಾಷ್ಟ್ರ ಗೆಲ್ಲಲು 10 ಗ್ಯಾರಂಟಿಗಳ ಕೊಟ್ಟ ʼಮಹಾಯುತಿʼ!

HDD–By-election

By Election: ಮುಖ್ಯಮಂತ್ರಿ ಗರ್ವದ ಸೊಕ್ಕು ಮುರಿಯಬೇಕು: ಎಚ್‌.ಡಿ.ದೇವೇಗೌಡ ಗುಡುಗು

ರೈಲು ಬುಕಿಂಗ್‌, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್‌’: ಮುಂದಿನ ತಿಂಗಳು ಬಿಡುಗಡೆ

Super App: ರೈಲು ಬುಕಿಂಗ್‌, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್‌’: ಮುಂದಿನ ತಿಂಗಳು ಬಿಡುಗಡೆ

High-Court

Kambala: ಪೆಟಾ ಪಿಐಎಲ್‌; ವಿಚಾರಣೆ ನ.12ಕ್ಕೆ ಮುಂದೂಡಿದ ಹೈಕೋರ್ಟ್‌

CM-Shiigavi-2

MUDA Case: ಕೇವಲ 14 ಸೈಟ್‌ಗಾಗಿ ನಾನು ರಾಜಕಾರಣ ಮಾಡಬೇಕಾ?: ಸಿಎಂ ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.