ಸಮ್ಮರ್ ಸ್ಪೆಷಲ್ ಸಲಾಡ್ಸ್
Team Udayavani, Apr 27, 2018, 6:00 AM IST
ಬಿರುಬಿಸಿಲಿಗೆ ದಣಿದ ದೇಹ ಸಲಾಡ್ಸ್ ಸೇವಿಸುವುದರಿಂದ ಹೊಸ ಚೈತನ್ಯವನ್ನು ಪಡೆಯಬಲ್ಲದು. ವಿವಿಧ ಹಣ್ಣುಗಳನ್ನು ತರಕಾರಿಗಳೊಡನೆ ಬೆರೆಸಿ ತಯಾರಿಸುವ ಸಲಾಡ್ಸ್‌ನ್ನು ಊಟದ ಜೊತೆ ಅಥವಾ ಚಪಾತಿ ಇನ್ನಿತರ ತಿಂಡಿಗಳ ಜೊತೆ ಸೇವಿಸಿದರೆ ಆರೋಗ್ಯಕ್ಕೆ ಬಹಳ ಹಿತ.
ಕುಕುಂಬರ್ ವಿದ್ ಕಲ್ಲಂಗಡಿ ಸಲಾಡ್
ಬೇಕಾಗುವ ಸಾಮಗ್ರಿ: ಹೆಚ್ಚಿದ ಕಲ್ಲಂಗಡಿ- ಎಂಟು ಚಮಚ, ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿದ ಸೌತೆಕಾಯಿ- ಆರು ಚಮಚ, ನೆನೆಸಿದ ಹೆಸರುಬೇಳೆ- ಎರಡು ಚಮಚ, ಹೆಚ್ಚಿದ ಸೀಡ್‌ಲೆಸ್ ಕಪ್ಪು ದ್ರಾಕ್ಷಿ- ಎರಡು ಚಮಚ, ನೆನೆಸಿದ ಶೇಂಗಾ- ಎರಡು ಚಮಚ, ಸ್ವೀಟ್ ಕಾರ್ನ್- ಎರಡು ಚಮಚ, ಬ್ಲೇಕ್ ಸಾಲ್ಟ್ – ರುಚಿಗೆ ಬೇಕಷ್ಟು, ಪೆಪ್ಪರ್ ಅಥವಾ ಕೆಂಪು ಮೆಣಸಿನ ಪುಡಿ- ಕಾಲು ಚಮಚ ಬೇಕಿದ್ದರೆ.
ತಯಾರಿಸುವ ವಿಧಾನ: ಸರ್ವಿಂಗ್ ಬೌಲ್‌ಗೆ ಕಲ್ಲಂಗಡಿ, ಸೌತೆಕಾಯಿ ಹಾಗೂ ಮೇಲೆ ತಿಳಿಸಿದ ಎಲ್ಲಾ ಸಾಮಗ್ರಿಗಳನ್ನು ಹಾಕಿ ಮಿಶ್ರಮಾಡಿ. ನಂತರ ಇದರ ಮೇಲೆ ಹೆಚ್ಚಿದ ಕಪ್ಪು$ದ್ರಾಕ್ಷಿಯನ್ನು ಹರಡಿ ಮೇಲಿನಿಂದ ಬ್ಲೇಕ್ ಸಾಲ್ಟ್ ಹಾಗೂ ಮೆಣಸಿನ ಪುಡಿಯನ್ನು ಚಿಮುಕಿಸಿ ಸರ್ವ್ ಮಾಡಬಹುದು.
ಬಿಟ್ರೂಟ್ ವಿದ್ ದಾಳಿಂಬೆ ಸಲಾಡ್
ಬೇಕಾಗುವ ಸಾಮಗ್ರಿ: ಬಿಟ್ರೂಟ್ ತುರಿ- ನಾಲ್ಕು ಚಮಚ, ಕ್ಯಾರೆಟ್‌ತುರಿ- ಎಂಟು ಚಮಚ, ಹೆಚ್ಚಿದ ಸೇಬು- ನಾಲ್ಕು ಚಮಚ, ದಾಳಿಂಬೆ- ಆರು ಚಮಚ, ತೆಂಗಿನ ತುರಿ- ಎರಡು ಚಮಚ, ಕೊತ್ತಂಬರಿಸೊಪ್ಪು- ಎರಡು ಚಮಚ, ಹೆಚ್ಚಿದ ಹಸಿಮೆಣಸು- ಒಂದು, ಸ್ವೀಟ್‌ಕಾರ್ನ್- ನಾಲ್ಕು ಚಮಚ, ಹೆಚ್ಚಿದ ಟೊಮೆಟೋ- ಒಂದು, ಲಿಂಬೆರಸ- ಎರಡು ಚಮಚ, ಬ್ಲೇಕ್ ಸಾಲ್ಟ್ – ರುಚಿಗೆ ಬೇಕಷ್ಟು.
ತಯಾರಿಸುವ ವಿಧಾನ: ಮಿಕ್ಸಿಂಗ್ ಬೌಲ್‌ಗೆ ಮೇಲೆ ತಿಳಿಸಿದ ಎಲ್ಲಾ ಸಾಮಗ್ರಿಗಳನ್ನು ಒಂದೊಂದಾಗಿ ಹಾಕಿ ಚೆನ್ನಾಗಿ ಮಿಶ್ರಮಾಡಿ. ಮೇಲಿನಿಂದ ಸೌತೆಕಾಯಿಯನ್ನು ಪೀಸ್‌ಗಳಿಂದ ಅಲಂಕರಿಸಿ ಸರ್ವ್ ಮಾಡಬಹುದು.
ಸೋರೆಕಾಯಿ ಸಲಾಡ್
ಬೇಕಾಗುವ ಸಾಮಗ್ರಿ: ಸಣ್ಣಗೆ ಹೆಚ್ಚಿದ ಎಳೆಸೋರೆಕಾಯಿ- ಆರು ಚಮಚ, ಸಿಪ್ಪೆ ತೆಗೆದು ಹೆಚ್ಚಿದ ಸೌತೆಕಾಯಿ- ನಾಲ್ಕು ಚಮಚ, ಹೆಚ್ಚಿದ ಟೊಮೆಟೋ- ಎರಡು, ನೆನೆಸಿದ ಒಣದ್ರಾಕ್ಷಿ- ನಾಲ್ಕು ಚಮಚ, ಹೆಚ್ಚಿದ ಸೇಬು- ನಾಲ್ಕು ಚಮಚ, ಕ್ಯಾರೆಟ್‌ತುರಿ- ನಾಲ್ಕು ಚಮಚ, ಮೊಳಕೆಕಟ್ಟಿದ ಹೆಸರುಕಾಳು- ಎರಡು ಚಮಚ, ತೆಂಗಿನ ತುರಿ- ನಾಲ್ಕು ಚಮಚ, ಉಪ್ಪು ರುಚಿಗೆ.
ತಯಾರಿಸುವ ವಿಧಾನ: ಮಿಕ್ಸಿಂಗ್ ಬೌಲ್‌ಗೆ ಮೇಲೆ ತಿಳಿಸಿದ ಎಲ್ಲಾ ಸಾಮಗ್ರಿಗಳನ್ನು ಹಾಕಿ ಚೆನ್ನಾಗಿ ಮಿಶ್ರಮಾಡಿ. ನಂತರ ಇದಕ್ಕೆ ಕರಿಬೇವು ಸೇರಿಸಿದ ಒಗ್ಗರಣೆಯನ್ನು ತುಪ್ಪದಲ್ಲಿ ನೀಡಿ. ಮೇಲಿನಿಂದ ಚೆರಿಯಿಂದ ಅಲಂಕರಿಸಬಹುದು.
ಖರ್ಬುಜ ವಿದ್ ಮಿಕ್ಸೆಡ್ ಫೂಟ್ಸ್ ಸಲಾಡ್
ಬೇಕಾಗುವ ಸಾಮಗ್ರಿ: ಹೆಚ್ಚಿದ ಖಬೂಜ- ಎಂಟು ಚಮಚ, ದಾಳಿಂಬೆ- ನಾಲ್ಕು ಚಮಚ, ಬಾಳೆಹಣ್ಣು- ನಾಲ್ಕು ಚಮಚ, ಹೆಚ್ಚಿದ ದ್ರಾಕ್ಷಿ- ನಾಲ್ಕು ಚಮಚ, ಹೆಚ್ಚಿದ ಸೇಬು- ನಾಲ್ಕು ಚಮಚ, ಒಣದ್ರಾಕ್ಷಿ- ಎರಡು ಚಮಚ, ಖಜೂರ- ಎರಡು ಚಮಚ, ಜೇನುತುಪ್ಪ- ಒಂದು ಚಮಚ. ಚಾಟ್‌ಪೌಡರ್ ಮತ್ತು ಪುದಿನ-ಒಂದು ಚಮಚ ಬೇಕಿದ್ದರೆ.
ತಯಾರಿಸುವ ವಿಧಾನ: ಖರ್ಬುಜದ ಸಿಪ್ಪೆಯಲ್ಲಿ ಮೇಲೆ ತಿಳಿಸಿದ ಎಲ್ಲಾ ಸಾಮಗ್ರಿಗಳನ್ನು ಒಂದೊಂದಾಗಿ ಸೇರಿಸಿ ಮಿಶ್ರಮಾಡಿ ಮೇಲಿನಿಂದ ಪುದಿನಾದಿಂದ ಅಲಂಕರಿಸಿ ಸರ್ವ್ ಮಾಡಬಹುದು.
ಗೀತಸದಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Belagavi Session: ರಾಜಕೀಯ ಕಿತ್ತಾಟ ಏನಿದ್ದರೂ ಸದನದ ಹೊರಗೆ ನಡೆಸಿ: ಯು.ಟಿ. ಖಾದರ್
Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್ ಆದ ಯುವಕನ ಹತ್ಯೆ
Kiccha Sudeepa: ಕ್ರಿಸ್ಮಸ್ ಗೆ ಬರುತ್ತಿದೆ ʼಮ್ಯಾಕ್ಸ್ʼ
IPL : ಸಿಎಸ್‌ಕೆ ಮಾಲಿಕ ಶ್ರೀನಿವಾಸನ್ ವಿರುದ್ದ ಫಿಕ್ಸಿಂಗ್ ಆರೋಪ ಮಾಡಿದ ಲಲಿತ್ ಮೋದಿ
Ranchi: ಪ್ರೇಯಸಿಯನ್ನು ಕೊಂದು 40ರಿಂದ 50 ತುಂಡು ಮಾಡಿದ ಕಟುಕ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.