ಶೂಟಿಂಗ್ನಿಂದ ರೈಲ್ವೆಗೆ 1ರೂ ಕೋಟಿ ಆದಾಯ
Team Udayavani, Apr 27, 2018, 6:00 AM IST
ಮುಂಬಯಿ: ಚಲನಚಿತ್ರಗಳು, ಜಾಹೀರಾತುಗಳ ಶೂಟಿಂಗ್ಗಳಿಗಾಗಿ ತನಗೆ ಸೇರಿದ ನಿಲ್ದಾಣ ಹಾಗೂ ಇನ್ನಿತರ ಸ್ಥಳಗಳನ್ನು ಬಾಡಿಗೆಗೆ ನೀಡುವ ಮೂಲಕ ಕೇಂದ್ರೀಯ ರೈಲ್ವೆಯು (ಸಿಆರ್) 2017-18ರ ವಿತ್ತೀಯ ವರ್ಷದಲ್ಲಿ 1 ಕೋಟಿ ರೂ. ಆದಾಯ ಗಳಿಸಿದೆ ಎಂದು ಸಿಆರ್ನ ಸಾರ್ವಜನಿಕ ಸಂಪರ್ಕಾಧಿಕಾರಿ ಸುನಿಲ್ ಉದಾಸಿ ತಿಳಿಸಿದ್ದಾರೆ. 2016-17ನೇ ವಿತ್ತೀಯ ವರ್ಷದ ಆದಾಯಕ್ಕೆ (73.93 ಲಕ್ಷ ರೂ.)ಹೋಲಿಸಿದರೆ ಕಳೆದ ವರ್ಷದ ಆದಾಯ ಶೇ. 36.43ರಷ್ಟು ಹೆಚ್ಚಾಗಿದೆ ಎಂದು ಅವರು ಹೇಳಿದ್ದಾರೆ.
2017-18ನೇ ವರ್ಷದಲ್ಲಿ, ಸಿಆರ್ಗೆ ಅತಿ ಹೆಚ್ಚು ಆದಾಯ ತಂದ ಚಿತ್ರ ಬಾಲಿವುಡ್ ತಾರೆಯರಾದ ಅಲಿಯಾ ಭಟ್ ಹಾಗೂ ರಣವೀರ್ ಸಿಂಗ್ ಅಭಿನಯದ “ಗಲ್ಲಿ ಬಾಯ್’ ಆಗಿದ್ದು, ಈ ಚಿತ್ರದಿಂದ 15.32 ಲಕ್ಷ ರೂ. ಹಣ ಬಂದಿದೆ. ಗಲ್ಲಿ ಬಾಯ್ ನಂತರ ಅತಿ ಹೆಚ್ಚು ಆದಾಯ ತಂದ ಹೆಗ್ಗಳಿಕೆ, ವಥಾರ್ ರೈಲ್ವೆ ನಿಲ್ದಾಣದಲ್ಲಿ ಚಿತ್ರೀಕರಣಗೊಂಡ ಕೋಕಾಕೋಲಾ ಜಾಹಿರಾತು (14.5 ಲಕ್ಷ ರೂ.), ಛತ್ರಪತಿ ಶಿವಾಜಿ ಟರ್ಮಿನಲ್ನಲ್ಲಿ ಚಿತ್ರೀಕರಣಗೊಂಡ “ಜಲೇಬಿ: ಸರ್ಕಲ್ ಆಫ್ ಲವ್’ ಚಿತ್ರದ್ದು (7 ಲಕ್ಷ ರೂ.) ಎಂದು ಅವರು ತಿಳಿಸಿದ್ದಾರೆ.
ಹಿಂದಿಯ “ಗಲ್ಲಿ ಬಾಯ್’ ಚಿತ್ರದಿಂ ದಲೇ ದೊಡ್ಡ ಬಾಡಿಗೆ ಸಂಗ್ರಹ
2016-17ಕ್ಕೆ ಹೋಲಿಸಿದರೆ ಬಾಡಿಗೆಯಲ್ಲಿ ಶೇ. 36.43 ಹೆಚ್ಚಳ
1,00,00,000 ಚಿತ್ರೀಕರಣದಿಂದ ಕೇಂದ್ರೀಯ ರೈಲ್ವೆ ಗಳಿಸಿದ ಬಾಡಿಗೆ
15,32,000 ಗಲ್ಲಿಬಾಯ್ ಚಿತ್ರವೊಂದ ರಿಂದಲೇ ಬಂದ ಹಣ
73,94,000 2016-17ರಲ್ಲಿ ಸಿಆರ್ಗೆ ಬಂದಿದ್ದ ಆದಾಯ
ಸಿಆರ್ಗೆ ಬಾಡಿಗೆ ತಂದುಕೊಟ್ಟ ಟಾಪ್ 3 ಶೂಟಿಂಗ್
ಚಿತ್ರ/ಜಾಹೀರಾತು ಸ್ಥಳ ಆದಾಯ (ಲಕ್ಷಗಳಲ್ಲಿ)
ಗಲ್ಲಿ ಬಾಯ್ ವಾಡಿ ಬಂದರ್ 15.32
ಕೋಕಾಕೋಲಾ ವಥಾರ್ ಸ್ಟೇಷನ್ 14.5
ಜಲೇಬಿ ಛತ್ರಪತಿ ಶಿವಾಜಿ ಟರ್ಮಿನಲ್ 7
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Assembly bypolls; 14 ರಾಜ್ಯಗಳ 48 ಸ್ಥಾನಗಳ ಗೆಲುವಿನ ವಿವರ ಇಲ್ಲಿದೆ: ಎನ್ಡಿಎ ಮೇಲುಗೈ
Maharashtra ; ಕೈ ಯಿಂದ ಲೋಕಸಭಾ ಸ್ಥಾನ ಕಸಿದ ಬಿಜೆಪಿ: ರಾಜ್ಯಸಭೆ ಬಹುಮತದತ್ತ ಚಿತ್ತ
Maharashtra; ಪತಿಗೆ ಸೋಲು: ಮತಯಂತ್ರಗಳ ಕುರಿತು ಆಪಾದಿಸಿದ ನಟಿ ಸ್ವರಾ ಭಾಸ್ಕರ್
West Bengal bypolls; ಟಿಎಂಸಿ ಕ್ಲೀನ್ ಸ್ವೀಪ್: ಪ್ರತಿಭಟನೆಗಳು ಬಿಜೆಪಿಗೆ ಸಹಕಾರಿಯಾಗಲಿಲ್ಲ
Maharashtra Polls: ಯಾರಾಗಲಿದ್ದಾರೆ ಮಹಾ ಮುಖ್ಯಮಂತ್ರಿ? ಸುಳಿವು ನೀಡಿದ ಫಡ್ನವೀಸ್
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.