ಬೆಳ್ತಂಗಡಿ: ಅನುಭವಿ ರಾಜಕಾರಣಿಗೆ ಯುವ ನಾಯಕನ ಸವಾಲು


Team Udayavani, Apr 27, 2018, 9:00 AM IST

Belthangadi-26-4.jpg

ಬೆಳ್ತಂಗಡಿ: ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಾರುಪತ್ಯ ಮೆರೆದಿದ್ದರೂ ಬಿಜೆಪಿಯೂ ತನ್ನ ಪ್ರಾಬಲ್ಯ ತೋರಿದೆ. ಅನುಭವಿ ರಾಜಕಾರಣಿ ಹಾಗೂ ಯುವ ನಾಯಕನ ನಡುವಿನ ಹಣಾಹಣಿಗೆ ಬೆಳ್ತಂಗಡಿ ಕ್ಷೇತ್ರ ವೇದಿಕೆಯಾಗಲಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್‌, ಬಿಜೆಪಿ ನಡುವೆ ನೇರ ಸ್ಪರ್ಧೆ ನಿಚ್ಚಳವಾಗಿದ್ದರೂ ಜೆ.ಡಿ.ಎಸ್‌.ನಿಂದ ಜೆಡಿಎಸ್‌ ಮಹಿಳಾ ಘಟಕ ಜಿಲ್ಲಾಧ್ಯಕ್ಷೆ ಸುಮತಿ ಎಸ್‌. ಹೆಗ್ಡೆ, ಎಂ.ಇ.ಪಿ ಅಭ್ಯರ್ಥಿಯಾಗಿ ತೋಟತ್ತಾಡಿಯ ಜಗನ್ನಾಥ್‌ ಎಂ, ಶಿವಸೇನೆಯಿಂದ ಪ್ರಸಾದ್‌ ಕುಮಾರ್‌ ಯು., ಸ್ವತಂತ್ರ ಅಭ್ಯರ್ಥಿಗಳಾಗಿ ವೆಂಕಟೇಶ್‌ ಬೆಂಡೆ, ಯು.ಎಂ. ಹಮೀದ್‌ ನಾಮಪತ್ರ ಸಲ್ಲಿಸಿದ್ದಾರೆ.

ಬೆಳ್ತಂಗಡಿ ತಾಲೂಕಿನಲ್ಲಿ ಒಟ್ಟು 2,13,875 ಜನ ಮತದಾರರಿದ್ದಾರೆ. ಇವರಲ್ಲಿ 1,07,230 ಪುರುಷರು, 1,06,645 ಮಹಿಳೆಯರು. ಜಾತಿ ಗನುಗುಣವಾಗಿ ಬಿಲ್ಲವರು ಅಧಿಕ ಸಂಖ್ಯೆಯಲ್ಲಿದ್ದಾರೆ. ಒಕ್ಕಲಿಗ ಗೌಡ ಸಮುದಾಯ ಇತರ ಸಮುದಾಯಗಳೂ ತಾಲೂಕಿನಲ್ಲಿವೆ.

ಜಾತಿವಾರು ಗೆದ್ದವರಲ್ಲಿ 1972ರಿಂದ ಬಿಲ್ಲವರು ಹಾಗೂ ಗೌಡ ಸಮುದಾಯದವರು ಪಾರಮ್ಯ ಮೆರೆದಿದ್ದಾರೆ. ಮುಖ್ಯವಾಗಿ 1994ರಿಂದ ಬಂಗೇರ ಸಹೋದರರು ತಾಲೂಕಿನಲ್ಲಿ ನಿರಂತರವಾಗಿ ಅಯ್ಕೆಯಾಗಿದ್ದಾರೆ. 1983, 84ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದಿದ್ದ ವಸಂತ ಬಂಗೇರ ಅವರ ಗೆಲುವಿನ ಓಟಕ್ಕೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಗಂಗಾಧರ ಗೌಡ 1989ರಲ್ಲಿ ಬ್ರೇಕ್‌ ನೀಡಿದ್ದರು. ಆದರೆ ಮತ್ತೆ ಗೆಲುವಿನ ಹಳಿಗೆ ಮರಳಿದ ವಸಂತ ಬಂಗೇರ 1994ರಲ್ಲಿ ಜೆ.ಡಿ.ಎಸ್‌.ನಿಂದ ಸ್ಪರ್ಧಿಸಿ ಗೆದ್ದಿದ್ದರು. 1999, 2004ರಲ್ಲಿ ಪ್ರಭಾಕರ ಬಂಗೇರ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದಿದ್ದರು. 2008, 2013ರ ಚುನಾವಣೆಯಲ್ಲಿ ವಸಂತ ಬಂಗೇರ ಗೆಲ್ಲುವ ಮೂಲಕ 24 ವರ್ಷಗಳ ಕಾಲ ಬಂಗೇರ ಸಹೋದರರು ಆಡಳಿತ ನಡೆಸಿದಂತಾಗಿದೆ.


ಶಾಸಕರ ಪಾಳಯದಿಂದ ಭರ್ಜರಿ ತಯಾರಿ

ಹಾಲಿ ಶಾಸಕ ಕೆ. ವಸಂತ ಬಂಗೇರ ಅವರನ್ನು ಅಭ್ಯರ್ಥಿ ಎಂದು ಹಿಂದೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದರಿಂದ ಅವರ ಹ್ಯಾಟ್ರಿಕ್‌ ಗೆಲುವಿಗೆ ಕೈ ಪಾಳಯ ಸಿದ್ಧವಾಗಿದೆ. 9 ಬಾರಿ ಶಾಸಕ ಸ್ಥಾನಕ್ಕೆ ಸ್ಪರ್ಧಿಸಿರುವ ವಸಂತ ಬಂಗೇರ, 6ನೇ ಗೆಲುವು ಕಾಣುವ ನಿರೀಕ್ಷೆಯಲ್ಲಿದ್ದಾರೆ.

ಬಿಜೆಪಿಯಿಂದ ಯುವ ನಾಯಕ
ಬೆಳ್ತಂಗಡಿಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಯುವಮೋರ್ಚಾ ಜಿಲ್ಲಾಧ್ಯಕ್ಷ ಹರೀಶ್‌ ಪೂಂಜ ಭರ್ಜರಿ ಮೆರವಣಿಗೆಯೊಂದಿಗೆ ನಾಮಪತ್ರ ಸಲ್ಲಿಸಿರುವುದು ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದೆ. ವಕೀಲರಾಗಿರುವ ಇವರು ಅಖೀಲ ಭಾರತ ವಿದ್ಯಾರ್ಥಿ ಪರಿಷತ್‌ ನಲ್ಲಿ ಗುರುತಿಸಿಕೊಂಡಿದ್ದು, ಬಿಜೆಪಿ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು. ಯುವನಾಯಕನಾಗಿ ಗುರುತಿಸಿಕೊಂಡಿದ್ದು, ತಾಲೂಕಿನಲ್ಲಿ ಧಾರ್ಮಿಕ ಕಾರ್ಯಗಳಲ್ಲಿ, ಹೋರಾಟಗಳಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದರು.

ಜೆ.ಡಿ.ಎಸ್‌. ಸ್ಪರ್ಧೆ
ಜೆಡಿಎಸ್‌ 1994ರಲ್ಲಿ ಗೆಲುವಿನ ನಗೆ ಬೀರಿದ್ದು, ಬಳಿಕ ಸ್ಪರ್ಧಿಸಿದರೂ ಗೆಲುವು ಸಾಧಿಸಿಲ್ಲ. ಕಳೆದ ಬಾರಿ ಸ್ಪರ್ಧಿಸಿದರೂ ಠೇವಣಿ ಕಳೆದು ಕೊಂಡಿತ್ತು. ಈ ಬಾರಿ ಬಿಎಸ್‌ಪಿ ಜತೆಯಾಗಿ ಸ್ಪರ್ಧಿಸುತ್ತಿದ್ದು, ಸುಮತಿ ಎಸ್‌. ಹೆಗ್ಡೆ ಅಭ್ಯರ್ಥಿಯಾಗಿದ್ದಾರೆ. ಆದರೆ ತಾಲೂಕಿನಲ್ಲಿ ಚುನಾವಣೆ ಘೊಷಣೆ ಬಳಿಕ ಎಲ್ಲೂ ಅಬ್ಬರದ ಪ್ರಚಾರ, ರಾಜ್ಯ ಮುಖಂಡರ ಉಪಸ್ಥಿತಿ ಕಂಡುಬಂದಿಲ್ಲ.

ಕದನ ಕುತೂಹಲ 
ಈಗಾಗಲೇ ಕಾಂಗ್ರೆಸ್‌ ಭರ್ಜರಿ ಸಭೆ, ಮೆರವಣಿಗೆ ನಡೆಸಿ ನಾಮಪತ್ರ ಸಲ್ಲಿಸಿತ್ತು. ತಾಲೂಕಿಗೆ ಜನವರಿಯಿಂದ ಮುಖ್ಯಮಂತ್ರಿ ಸೇರಿದಂತೆ ಕಾಂಗ್ರೆಸ್‌ ಮುಖಂಡರು ಭೇಟಿ ನೀಡಿ ಕಾರ್ಯಕರ್ತರನ್ನು ಹುರಿದುಂಬಿಸುತ್ತಿದ್ದಾರೆ. ರಾಹುಲ್‌ ಗಾಂಧಿ ಅವರೂ ದೇಗುಲ ಭೇಟಿ ನೆಪದಲ್ಲಿ ಬರಲಿದ್ದಾರೆ. ಬಿಜೆಪಿಯಿಂದ ಕೇಂದ್ರ ಸಚಿವ ಮಹೇಂದ್ರ ಪ್ರಧಾನ್‌, ಕೇಂದ್ರ ಗೃಹಸಚಿವ ರಾಜನಾಥ್‌ ಸಿಂಗ್‌ ಹಾಗೂ ಮುಖಂಡರು ತಾಲೂಕಿಗೆ ಆಗಮಿಸಿ ಕಾರ್ಯಕರ್ತರಿಗೆ ಪ್ರೇರಣೆ ನೀಡಿದ್ದಾರೆ. ಗೆಲುವಿಗಾಗಿ ಎರಡೂ ಪಕ್ಷಗಳು ಭರ್ಜರಿ ತಯಾರಿ ನಡೆಸಿದ್ದು, ಮತಯಾಚನೆ ಪ್ರಕ್ರಿಯೆ ಬಿರುಸುಗೊಂಡಿದೆ. ಇತರ ಪಕ್ಷಗಳು, ಪಕ್ಷೇತರರೂ ಗೆಲುವಿನ ನಿರೀಕ್ಷೆಯಲ್ಲಿದ್ದು ಗೆಲುವಿನ ಮಾಲೆ ಯಾರ ಕೊರಳಿಗೆ ಬೀಳಲಿದೆ ಎನ್ನುವ ಕುತೂಹಲದಲ್ಲಿ ಮತದಾರರಿದ್ದಾರೆ.

ಗೆಲ್ಲುವವರ ಮುಂದಿದೆ ಸವಾಲು…
ತಾಲೂಕಿನಲ್ಲಿ ಅಭಿವೃದ್ಧಿ ಕಾರ್ಯಗಳನ್ನು ನಡೆಸಿದ್ದರೂ 81 ಗ್ರಾಮಗಳನ್ನು ಹೊಂದಿರುವು ದರಿಂದ ಇನ್ನೂ ಹಲವು ಅಭಿವೃದ್ಧಿ ಕಾರ್ಯಗಳು ನಡೆಯಬೇಕಿವೆ. ತಾಲೂಕು ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿದ್ದು ಕುದುರೆಮುಖ ರಾಷ್ಟ್ರೀಯ ಉದ್ಯಾನವನವೂ ಇದೆ. ಈ ವ್ಯಾಪ್ತಿಯಲ್ಲಿ ವಾಸಿಸುವ ಕೆಲ ಕುಟುಂಬಗಳು ಮೂಲ ಸೌಕರ್ಯಗಳಿಂದ ವಂಚಿತವಾಗಿವೆ. ಮುಖ್ಯವಾಗಿ ರಸ್ತೆ, ವಿದ್ಯುತ್‌, ಹಕ್ಕುಪತ್ರಗಳು ಸಿಗಬೇಕಿವೆ. ಎಂಡೋಸಲ್ಫಾನ್‌ ಬಾಧಿತರಿಗೆ ಶಾಶ್ವತ ಪರಿಹಾರ ದೊರಕಿಸಬೇಕಿದೆ. ತಾಲೂಕಿನಾದ್ಯಂತ ರಸ್ತೆ , ಕುಡಿಯುವ ನೀರು ಮೊದಲಾದ ಮೂಲಸೌಕರ್ಯಗಳನ್ನು ಆದ್ಯತೆಯಲ್ಲಿ ಕಲ್ಪಿಸಬೇಕು ಎನ್ನುವ ಆಗ್ರಹ ಎಲ್ಲೆಡೆಯಿಂದ ಜನಸಾಮಾನ್ಯರಿಂದ ಕೇಳಿಬರುತ್ತಿದೆ. ಭವಿಷ್ಯದ ಜನಪ್ರತಿನಿಧಿಗಳು ಇತ್ತ ಗಮನಹರಿಸಬೇಕಿದೆ.

ಕ್ಷೇತ್ರದಿಂದ ವಿಜೇತರಾದವರು
1952- ಬಾಳುಗೋಡು ವೆಂಕಟರಮಣ ಗೌಡ
1957- ರತ್ನವರ್ಮ ಹೆಗ್ಗಡೆ (ಕಾಂಗ್ರೆಸ್‌)
1962-ವೈಕುಂಠ ಬಾಳಿಗ (ಕಾಂಗ್ರೆಸ್‌)
1967- ಬಿ.ವಿ. ಬಾಳಿಗ (ಕಾಂಗ್ರೆಸ್‌)
1972- ಕೆ. ಸುಬ್ರಹ್ಮಣ್ಯ ಗೌಡ (ಕಾಂಗ್ರೆಸ್‌)
1978- ಕೆ. ಗಂಗಾಧರ ಗೌಡ (ಕಾಂಗ್ರೆಸ್‌)
1983- ಕೆ. ವಸಂತ ಬಂಗೇರ (ಬಿಜೆಪಿ)
1985- ಕೆ. ವಸಂತ ಬಂಗೇರ (ಬಿಜೆಪಿ)
1989- ಕೆ. ಗಂಗಾಧರ ಗೌಡ (ಕಾಂಗ್ರೆಸ್‌)
1994- ಕೆ. ವಸಂತ ಬಂಗೇರ (ಜೆಡಿಎಸ್‌)
1999- ಕೆ. ಪ್ರಭಾಕರ ಬಂಗೇರ ( ಬಿಜೆಪಿ)
2004- ಕೆ. ಪ್ರಭಾಕರ ಬಂಗೇರ (ಬಿಜೆಪಿ)
2008- ಕೆ. ವಸಂತ ಬಂಗೇರ (ಕಾಂಗ್ರೆಸ್‌)
2013- ಕೆ. ವಸಂತ ಬಂಗೇರ (ಕಾಂಗ್ರೆಸ್‌)

— ಹರ್ಷಿತ್‌ ಪಿಂಡಿವನ

ಟಾಪ್ ನ್ಯೂಸ್

Rubber-Dec

Growers Worried: ಕುಸಿತ ಹಾದಿಯಲ್ಲಿ ರಬ್ಬರ್‌ ಧಾರಣೆ

ಇಂದಿನಿಂದ ಪುಣೆ ಟೆಸ್ಟ್‌ ಪಂದ್ಯ: ಆಯ್ಕೆಯ ಗೊಂದಲದಲ್ಲಿ ಟೀಮ್‌ ಇಂಡಿಯಾ

ಇಂದಿನಿಂದ ಪುಣೆ ಟೆಸ್ಟ್‌ ಪಂದ್ಯ: ಆಯ್ಕೆಯ ಗೊಂದಲದಲ್ಲಿ ಟೀಮ್‌ ಇಂಡಿಯಾ

Dinesh-gundurao

Health Care: ಇಂದು ಗೃಹ ಆರೋಗ್ಯ ಯೋಜನೆಗೆ ಚಾಲನೆ

ನಾಗಪುರದ ಬಾಂಬ್‌ ಬಜಾರ್‌; ಮೂರೇ ತಿಂಗಳಲ್ಲಿ 900 ಕೋಟಿ ರೂ. ಮೌಲ್ಯದ ಸ್ಫೋಟಕ ಮಾರಾಟ

ನಾಗಪುರದ ಬಾಂಬ್‌ ಬಜಾರ್‌; ಮೂರೇ ತಿಂಗಳಲ್ಲಿ 900 ಕೋಟಿ ರೂ. ಮೌಲ್ಯದ ಸ್ಫೋಟಕ ಮಾರಾಟ

1-horoscope

Daily Horoscope: ಲಾಭ- ನಷ್ಟ ಎರಡನ್ನೂ ಸಮಾನವಾಗಿ ಸ್ವೀಕರಿಸಿ

Rubber-Estate

Illegal Immigration: ರಬ್ಬರ್‌ ಎಸ್ಟೇಟ್‌ಗಳು ಶಂಕಿತ ಬಾಂಗ್ಲಾದೇಶಿಗರ ಭದ್ರ ನೆಲೆ?

ICC Test Batting Ranking: ಕೊಹ್ಲಿಯನ್ನು ಹಿಂದಿಕ್ಕಿದ ಪಂತ್‌

ICC Test Batting Ranking: ಕೊಹ್ಲಿಯನ್ನು ಹಿಂದಿಕ್ಕಿದ ಪಂತ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rubber-Dec

Growers Worried: ಕುಸಿತ ಹಾದಿಯಲ್ಲಿ ರಬ್ಬರ್‌ ಧಾರಣೆ

16

Mangaluru: ಅಪಘಾತ; ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದ ಮಹಿಳಾ ಪೊಲೀಸ್‌

money

Mangaluru: ಸಿಬಿಐ ಅಧಿಕಾರಿ ಹೆಸರಿನಲ್ಲಿ ಕರೆ ಮಾಡಿ 31.12 ಲಕ್ಷ ರೂ. ವಂಚನೆ

Crackers

Mangaluru: ಪಟಾಕಿ ಮಾರಾಟಕ್ಕೆ ಸ್ಥಳ ನಿಗದಿ; ವಿರೋಧ

Forest

Mangaluru: ಲೋಕೋಪಯೋಗಿ ನಿರೀಕ್ಷಣ ಮಂದಿರದ ಆವರಣದಿಂದ ಮರ ಸಾಗಾಟ: ಪ್ರಕರಣ ದಾಖಲು

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

Rubber-Dec

Growers Worried: ಕುಸಿತ ಹಾದಿಯಲ್ಲಿ ರಬ್ಬರ್‌ ಧಾರಣೆ

ಇಂದಿನಿಂದ ಪುಣೆ ಟೆಸ್ಟ್‌ ಪಂದ್ಯ: ಆಯ್ಕೆಯ ಗೊಂದಲದಲ್ಲಿ ಟೀಮ್‌ ಇಂಡಿಯಾ

ಇಂದಿನಿಂದ ಪುಣೆ ಟೆಸ್ಟ್‌ ಪಂದ್ಯ: ಆಯ್ಕೆಯ ಗೊಂದಲದಲ್ಲಿ ಟೀಮ್‌ ಇಂಡಿಯಾ

Dinesh-gundurao

Health Care: ಇಂದು ಗೃಹ ಆರೋಗ್ಯ ಯೋಜನೆಗೆ ಚಾಲನೆ

ನಾಗಪುರದ ಬಾಂಬ್‌ ಬಜಾರ್‌; ಮೂರೇ ತಿಂಗಳಲ್ಲಿ 900 ಕೋಟಿ ರೂ. ಮೌಲ್ಯದ ಸ್ಫೋಟಕ ಮಾರಾಟ

ನಾಗಪುರದ ಬಾಂಬ್‌ ಬಜಾರ್‌; ಮೂರೇ ತಿಂಗಳಲ್ಲಿ 900 ಕೋಟಿ ರೂ. ಮೌಲ್ಯದ ಸ್ಫೋಟಕ ಮಾರಾಟ

1-horoscope

Daily Horoscope: ಲಾಭ- ನಷ್ಟ ಎರಡನ್ನೂ ಸಮಾನವಾಗಿ ಸ್ವೀಕರಿಸಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.