ಮಳೆಗಾಲಕ್ಕೆ ಮೊದಲು ಮುಗಿಯಲಿ ಡಾಮರು ಕಾಮಗಾರಿ
Team Udayavani, Apr 27, 2018, 8:45 AM IST
ಬಡಗನ್ನೂರು: ಮುಡಿಪಿನಡ್ಕ- ಮೈಂದನಡ್ಕ ರಸ್ತೆಯ ಮುಡಿಪಿನಡ್ಕ- ಪೇರಾಲು ನಡುವಿನ 2.2 ಕಿ.ಮೀ. ರಸ್ತೆ ವಿಸ್ತರಣೆಗೆ ಚಾಲನೆ ನೀಡಿದ್ದು, ಕಾಮಗಾರಿ ವೇಗ ಪಡೆದುಕೊಳ್ಳುತ್ತಿದೆ. ಇದಕ್ಕೆ ಒನ್ ಟೈಮ್ ಯೋಜನೆಯಡಿ 1.20 ಕೋಟಿ ರೂ. ಬಿಡುಗಡೆಗೊಂಡಿದ್ದು, ಮಳೆಗಾಲ ಆರಂಭಕ್ಕೆ ಮೊದಲು ಕಾಮಗಾರಿ ಪೂರ್ಣಗೊಳ್ಳಬೇಕಿದೆ.
ಮಳೆರಾಯ ಆಗಲೇ ತನ್ನ ಇರವನ್ನು ತೋರಿಸಿದ್ದಾನೆ. ಸಣ್ಣ ಮಳೆಗೆ ಗ್ರಾಮೀಣ ಪ್ರದೇಶದ ಹಲವು ಕಡೆಗಳ ರಸ್ತೆಗಳು ದುಃಸ್ಥಿತಿಗೆ ತಲುಪಿವೆ. ಇದರ ನಡುವೆ ಮುಡಿಪಿನಡ್ಕ- ಪೇರಾಲು ರಸ್ತೆ ಕಾಮಗಾರಿ ನಡೆಯುತ್ತಿದೆ. ಸಾರ್ವಜನಿಕರ ರಸ್ತೆಯಾದ್ದರಿಂದ ದಿನನಿತ್ಯ ನೂರಾರು ಮಂದಿ ಇದರಲ್ಲೇ ಓಡಾಡುತ್ತಾರೆ. ಇವರ ದಿನಚರಿಗೆ ತೊಂದರೆ ಆಗದಂತೆ ಕಾಮಗಾರಿ ನಡೆಸಬೇಕಾದ ಜವಾಬ್ದಾರಿ ಗುತ್ತಿಗೆದಾರರ ಮೇಲಿದೆ. ಒಂದು ತಿಂಗಳ ಒಳಗೆ 2.2 ಕಿ.ಮೀ. ರಸ್ತೆಯನ್ನು 4.5 ಮೀಟರ್‌ನಿಂದ 6 ಮೀಟರ್‌ಗೆ ಅಗಲ ಮಾಡಬೇಕಾಗಿದೆ. ಮಳೆಗಾಲ ಪ್ರಾರಂಭವಾಗುವ ಮೊದಲು ಕಾಮಗಾರಿ ಮುಗಿಸಿದರೆ ವಾಹನ ಸವಾರರು, ವಿದ್ಯಾರ್ಥಿಗಳು, ನಾಗರಿಕರು ಸಹಿತ ಎಲ್ಲರಿಗೂ ಅನುಕೂಲ. ಇಲ್ಲದೇ ಹೋದರೆ ಪ್ರಗತಿಯಲ್ಲಿರುವ ಕಾಮಗಾರಿಯೇ ಸಂಚಾರಕ್ಕೆ ಮುಳುವಾದೀತು ಎಂಬ ಭೀತಿ ಸಾರ್ವಜನಿಕರಲ್ಲಿ ಮೂಡಿದೆ.
ರಸ್ತೆ ವಿಸ್ತರಣೆ ಕಾಮಗಾರಿ ಆರಂಭಗೊಂಡಿದ್ದು, ಮೊದಲ ಹಂತದಲ್ಲಿ ವಿಸ್ತರಣೆ ಕಾರ್ಯ ಅಂತಿಮಗೊಂಡಿದೆ. ಜಲ್ಲಿ ಮಿಶ್ರಣ (ಬೆಡ್) ಹಾಕುವ ಕೆಲಸ ಆರಂಭಗೊಂಡಿದೆ. ರಸ್ತೆ ಬದಿಯಲ್ಲಿ ಮರಮಟ್ಟುಗಳು ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಇಲ್ಲದೇ ಇರುವುದರಿಂದ ಅರಣ್ಯ ಇಲಾಖೆಯವರಿಗೆ ದುಂಬಾಲು ಬೀಳುವ ಸನ್ನಿವೇಶ ನಿರ್ಮಾಣಗೊಂಡಿಲ್ಲ. ಹೀಗಾಗಿ, ಕಾಮಗಾರಿ ಸರಾಗವಾಗಿ ಮಾಡಲು ಸುಲಭ ಸಾಧ್ಯ. ರಸ್ತೆ ಬದಿಯಲ್ಲಿರುವ ವಿದ್ಯುತ್ ಕಂಬಗಳು ಮಾತ್ರ ತೊಡಕಾಗಿ ಪರಿಣಮಿಸಿವೆ. ಹಲವು ಕಡೆಯಲ್ಲಿ ರಸ್ತೆ ನಡುವೆಯೇ ತಂತಿಗಳಿವೆ. ಇದರಿಂದ ನಾಗರಿಕರಿಗೆ ತೊಂದರೆ ಆಗಬಾರದು. ಈ ಬಗ್ಗೆ ಮುನ್ನೆಚ್ಚರಿಕೆ ತೆಗೆದುಕೊಂಡು ಕೆಲಸ ಮಾಡಬೇಕಾಗಿದೆ.
ತೇಪೆಗೆ 10 ಲಕ್ಷ ರೂ.
ಮುಡಿಪಿನಡ್ಕ- ಪೇರಾಲು ಮುಂದುವರಿದ ರಸ್ತೆಯಾದ ಪೇರಾಲು- ಮೈಂದನಡ್ಕ ಡಾಮರು ರಸ್ತೆಯ ತೇಪೆ ಕಾಮಗಾರಿಗೆ 10 ಲಕ್ಷ ರೂ. ಅನುದಾನ ಮಂಜೂರಾಗಿದೆ. ಇದನ್ನು ಕೂಡ ಮಳೆಗಾಲದ ಮೊದಲು ಮುಗಿಸಬೇಕಾದ ಅನಿವಾರ್ಯತೆ ಇದೆ.
ವಿಸ್ತರಣೆ, ಡಾಮರು
ಸಮಾರು 30 ವರ್ಷಗಳಿಂದ ಡಾಮರು ಕಾಣದ ರಸ್ತೆಯಲ್ಲಿ ವಾಹನ ಸವಾರರು ಪ್ರಯಾಸಪಟ್ಟು ಸಾಗುತ್ತಿದ್ದರು. ಇದು ಪಡುಮಲೆಗೆ ಅಂಟಿದ ಶಾಪವೋ ಎಂಬಂತೆ ಗುನುಗುತ್ತಿದ್ದರು. ಈ ಮೊದಲು ಒಟ್ಟು 4.5 ಮೀ. ಅಗ ಲ ವಿದ್ದ ರಸ್ತೆ ಯಲ್ಲಿ ಡಾಮರು ಇದ್ದುದು 3 ಮೀ. ಮಾತ್ರ. ರಸ್ತೆಯ ದೊಡ್ಡ ಹೊಂಡಗಳು ಕಾಲ್ನಡಿಗೆಗೂ ತೊಡಕಾಗಿದ್ದವು. ಈ ಹಿನ್ನೆಲೆಯಲ್ಲಿ ಬಡಗನ್ನೂರು ಹಾಗೂ ಪಡುವನ್ನೂರು ನಾಗರಿಕ ಹಿತರಕ್ಷಣ ಸಮಿತಿ ವತಿಯಿಂದ ಒಂದು ವಾರ ಅಹೋರಾತ್ರಿ ಪ್ರತಿಭಟನೆ ನಡೆದಿತು. ಇತರ ಸಂಘ – ಸಂಸ್ಥೆಗಳಿಂದ ರಸ್ತೆ ತಡೆ, ಸಾರ್ವಜನಿಕ ಮನವಿ ಫಲವಾಗಿ ಕರ್ನಾಟಕ ಸರ್ಕಾರ ಒನ್ ಟೈಮ್ ಯೋಜನೆಯಡಿ ಅನುದಾನ ನೀಡಿತು. ಇದರಡಿ ರಸ್ತೆಯನ್ನು 6 ಮೀಟರ್‌ಗೆ ಅಗಲ ಮಾಡಿ, 3.75 ಮೀ. ಅಗಲಕ್ಕೆ ಡಾಮರು ಹಾಕಲಿದೆ.
ಮುಗಿಯದಿದ್ದರೆ ತೊಂದರೆ
20 ವರ್ಷಗಳ ಬಳಿಕ ಈ ರಸ್ತೆಗೆ ಡಾಮರು ಹಾಕುವ ಕನಸು ನನಸಾಗುತ್ತಿದೆ. ರಸ್ತೆ ಪೂರ್ತಿ ದೊಡ್ಡ ಹೊಂಡಗಳಿಂದ ಮತ್ತು ಇಕ್ಕಟ್ಟಾಗಿರುವ ರಸ್ತೆಯಿಂದ ವಾಹನ ಸಂಚಾರ ಕಷ್ಟವಾಗುತ್ತಿತ್ತು. ರಸ್ತೆ ತಿರುವುಗಳನ್ನು ಕಡಿಮೆ ಮಾಡಿ ರಸ್ತೆ ವಿಸ್ತರಿಸುವ ಅಗತ್ಯವಿತ್ತು. ಸದ್ಯ ಈ ಕೆಲಸ ಆರಂಭವಾಗಿದೆ. ಮಳೆಗಾಲದ ಒಳಗಾಗಿ ಕಾಮಗಾರಿ ಪೂರ್ಣಗೊಂಡರೆ ಸಾರ್ವಜನಿಕರಿಗೆ ಅನುಕೂಲ, ಇಲ್ಲದಿದ್ದರೆ ತೊಂದರೆ.
– ಮೋಹನ ಪಾಟಾಳಿ ಅಣಿಲೆ, ಸ್ಥಳೀಯ ನಿವಾಸಿ
ಬೇಗನೆ ಮುಗಿಸಲು ಪ್ರಯತ್ನ
ಮುಡಿಪಿನಡ್ಕ – ಪೇರಾಲು ನಡುವಿನ ರಸ್ತೆ ಕಾಮಗಾರಿಗೆ 1.20 ಕೋಟಿ ರೂ. ಅನುದಾನ ಮಂಜೂರಾಗಿದೆ. ರಸ್ತೆಯನ್ನು 3.75 ಮೀ. ಅಗಲಗೊಳಿಸಿ ಡಾಮರು ಹಾಕಲಾಗುವುದು. ರಸ್ತೆ ಒಟ್ಟು 6 ಮೀ.ನಷ್ಟು ಅಗಲವಾಗಲಿದೆ. ಮಳೆಗಾಲದ ಮೊದಲು ಕಾಮಗಾರಿ ಮುಗಿಸುವ ಪ್ರಯತ್ನ ಪಡುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ಗುತ್ತಿಗೆದಾರರಿಗೆ ಒತ್ತಡ ಹಾಕಲಾಗುತ್ತಿದೆ.
– ಬಾಲಕೃಷ್ಣ ಭಟ್, ಪಿಡಬ್ಲ್ಯುಡಿ ಎಂಜಿನಿಯರ್
— ದಿನೇಶ್ ಬಡಗನ್ನೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belthangady: ಈ ಪುಟ್ಟ ಪೋರನಿಗಿದೆ 300 ವಿದೇಶಿ ಹಣ್ಣಿನ ಗಿಡ ಪರಿಚಯ!
Dharmasthala: ಲಕ್ಷದೀಪಗಳ ಜಗಮಗ; ವಿದ್ಯುತ್ ದೀಪಗಳಿಂದ ಶೃಂಗಾರ
Dharmasthala: ಇಂದಿನಿಂದ ಲಕ್ಷದೀಪೋತ್ಸವ… ರಾಜ್ಯಮಟ್ಟದ ವಸ್ತು ಪ್ರದರ್ಶನಕ್ಕೆ ಚಾಲನೆ
ಬೆಳ್ತಂಗಡಿ: ಗ್ರಾಪಂ 3ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ, ಕಾಂಗ್ರೆಸ್ ಬೆಂಬಲಿತ 3ಅಭ್ಯರ್ಥಿಗಳ ಜಯ
Sullia: ರಬ್ಬರ್ ಸ್ಮೋಕ್ ಹೌಸ್‌ಗೆ ಬೆಂಕಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thirthahalli: ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ
RBI ಗವರ್ನರ್ ಶಕ್ತಿಕಾಂತ್ ದಾಸ್ ಚೆನ್ನೈ ಆಸ್ಪತ್ರೆಗೆ ದಾಖಲು; ಶೀಘ್ರವೇ ಡಿಸ್ ಚಾರ್ಜ್
Mundargi: ಲಾರಿ ಹರಿದು 12 ಕುರಿಗಳು ಸಾವು; 30 ಕುರಿಗಳು ಗಂಭೀರ ಗಾಯ
Belthangady: ಈ ಪುಟ್ಟ ಪೋರನಿಗಿದೆ 300 ವಿದೇಶಿ ಹಣ್ಣಿನ ಗಿಡ ಪರಿಚಯ!
Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.