ಭೂದಿನ: ಕಡಲತೀರ ಸ್ವಚ್ಛತೆ
Team Udayavani, Apr 27, 2018, 9:49 AM IST
ಮಹಾನಗರ: ಎಪಿಡಿ ಫೌಂಡೇಶನ್ ಮತ್ತು ಆ್ಯಂಟನಿ ತ್ಯಾಜ್ಯ ಹ್ಯಾಂಡ್ಲಿಂಗ್ ಸೆಲ್ ಕಂಪೆನಿಯ ಸಂಯುಕ್ತಾಶ್ರಯದಲ್ಲಿ 48 ನೇ ವಿಶ್ವ ಭೂದಿನವನ್ನು ಇತ್ತೀಚೆಗೆ ಪಣಂಬೂರು ಕಡಲತೀರ ಮತ್ತು ಕಸಬಾ ಬೆಂಗ್ರೆಯನ್ನು ಶುಚಿಗೊಳಿಸುವ ಮೂಲಕ ಆಚರಿಸಲಾಯಿತು. ಪ್ಲಾಸ್ಟಿಕ್ ಮುಕ್ತ ಪರಿಸರದ ಬಗ್ಗೆ ಜಾಗೃತಿ ಮೂಡಿಸಲು ಪೌರಕಾರ್ಮಿಕರು ಮತ್ತು ಆ್ಯಂಟನಿ ತ್ಯಾಜ್ಯ ಹ್ಯಾಂಡ್ಲಿಂಗ್ ಸೆಲ್ ಅಧಿಕಾರಿಗಳೊಂದಿಗೆ ಎಪಿಡಿ ಸ್ವಯಂಸೇವಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ವರ್ಷ ಭೂದಿನ ಪ್ಲಾಸ್ಟಿಕ್ ಬಗ್ಗೆ ಮಾಹಿತಿ ನೀಡಿ ಮಾನವನ ಮನೋಭಾವ ಪರಿವರ್ತನೆಯತ್ತ ಪ್ರಭಾವ ಬೀರಲು ಸಮರ್ಪಿಸಲಾಗಿದೆ. ಆ್ಯಂಥೋನಿ ತ್ಯಾಜ್ಯ ಹ್ಯಾಂಡ್ಲಿಂಗ್ ಸೆಲ್ ಕಂಪೆನಿಯ ಕಾರ್ಯಾಚರಣೆಯ ಮುಖ್ಯಸ್ಥ ಸಂತೋಷ್ ನಾಯರ್ ಮಾತನಾಡಿ, ಬೀಚ್ ಮತ್ತು ಭೂಮಿಯು ತ್ಯಾಜ್ಯ ಹೊದಿಕೆ ಮತ್ತು ಕಸಗಳಿಂದ ತುಂಬಿವೆ. ಇದು ಸಮುದ್ರ ಜೀವವನ್ನು ವಿಷ ಮತ್ತು ಹಾನಿಗೊಳಪಡಿಸುತ್ತದೆ. ಪ್ಲಾಸ್ಟಿಕ್ ಮಾಲಿನ್ಯ ಮಾನವ ಹಾರ್ಮೋನುಗಳನ್ನು ಹಾನಿಗೊಳಪಡಿಸುತ್ತದೆ. ಪ್ಲಾಸ್ಟಿಕ್ ಮಾಲಿನ್ಯವು ತಪ್ಪಿಸಿಕೊಳ್ಳಲಾಗದ ಮತ್ತು ಬದಲಾಯಿಸಲಾಗದ ಪರಿಣಾಮಗಳನ್ನು ಹೊಂದಿದೆ ಎಂದರು.
ಪ್ಲಾಸ್ಟಿಕ್‌ನ ಹಾನಿಕಾರಕ ಪ್ರಭಾವದ ವಿರುದ್ಧ ಜಾಗೃತಿ ಮೂಡಿಸಿ
ಭವಿಷ್ಯದ ಪೀಳಿಗೆಗೆ ನಮ್ಮ ಕರಾವಳಿ ನಗರವನ್ನು ಮತ್ತು ಭೂಮಿಯನ್ನು ಸುಂದರವಾಗಿ ಮತ್ತು ಸುರಕ್ಷಿತವಾಗಿರಿಸಿಕೊಳ್ಳಲು ಹೆಚ್ಚಿನ ಕ್ರಮ ಅಗತ್ಯ. ಜಾಗೃತಿ ಮತ್ತು ಕ್ರಿಯಾಶೀಲತೆ ಮೂಲಕ ಪ್ಲಾಸ್ಟಿಕ್‌ನ ಹಾನಿಕಾರಕ ಪ್ರಭಾವದ ವಿರುದ್ಧ ಜಾಗೃತಿ ಮೂಡಿಸಲು ಬದ್ಧರಾಗಿರಬೇಕು ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.