ರಾಜ್ಯದ 26 ಅಭ್ಯರ್ಥಿಗಳು ಉತ್ತೀರ್ಣ
Team Udayavani, Apr 28, 2018, 7:00 AM IST
ಬೆಂಗಳೂರು: ಯುಪಿಎಸ್‌ಇ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ಈ ವರ್ಷ ರಾಜ್ಯದ 26 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ.
ಬೀದರ್‌ನ ಶಿಂಧೆ (95), ಕೀರ್ತಿ ಕಿರಣ್ ಪೂಜಾರ್ (115), ಟಿ.ಶುಭಮಂಗಳಾ (147),ಎಂ.ಶ್ವೇತಾ (119), ಸಿ. ವಿಂಧ್ಯಾ(160), ಕೃತಿಕಾ (194), ಪೃಥ್ವಿಕ್ ಶಂಕರ್ (211),ಬಿ.ಗೋಪಾಲಕೃಷ್ಣ (265), ಎಚ್.ವಿನೋದ್ ಪಾಟೀಲ್ (294),ಎಂ.ಪುನೀತ್ ಕುಟ್ಟಯ್ಯ (324), ಸಿದ್ದಲಿಂಗ ರೆಡ್ಡಿ (346),ಸುದರ್ಶನ ಭಟ್ (434), ಎನ್.ವೈ. ವೃಶಾಂಕ್ (478),ಅಭಿಲಾಷ್ ಶಶಿಕಾಂತ್ ಬದ್ದೂರ್ (531), ನಿಖೀಲ್ ನಿಪ್ಪಾಣಿಕರ್(563), ಟಿ.ಎನ್. ನಿಥನ್‌ರಾಜ್ (575), ಸಚಿನ್(652), ಎಸ್. ಪ್ರೀತಮ್ (654), ಬಿ.ಸಿ. ಹರೀಶ (657), ಆರ್.ವಿಜಯೇಂದ್ರ(666), ಶಿವರಾಜ್ ಸಾಯಿಬಣ್ಣ ಮನಗಿರಿ (784), ಸ್ಪರ್ಶ ನೀಲಾಂಗಿ (805), ಆರ್.ಸಿ. ಹರ್ಷವರ್ಧನ (913), ವೆಂಕಟೇಶ ನಾಯಕ್ (930), ಪಿ.ಪವನ್ (933), ಮಹೇಶ ವಡ್ಡೆ (958).
ರಾಜ್ಯ ಮತ್ತು ಹೊರ ರಾಜ್ಯದಿಂದ ಬೆಂಗಳೂರು ನಗರಕ್ಕೆ ಬಂದು ಸ್ಪರ್ಧಾ ಮಿತ್ರ ತರಬೇತಿ ಕೇಂದ್ರದಿಂದ ಸಂದರ್ಶನ ಪಡೆದಿದ್ದ
ಸಚಿನ್ ಗುಪ್ತಾ 3ನೇ ರ್‍ಯಾಂಕ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ರಾಜ್ಯ ವಿದ್ಯಾರ್ಥಿಗಳ ಸಾಧನೆಯನ್ನು ಸ್ಪರ್ಧಾ ಮಿತ್ರದ ನಿರ್ದೇಶಕ ಒಂಕಾರ್ ಪಟೇಲ್ ಹರ್ಷ ವ್ಯಕ್ತಪಡಿಸಿದ್ದಾರೆ. ಶಂಕರ್ ಐಎಎಸ್ ಆಕಾಡೆಮಿಯಲ್ಲಿ 2017ನೇ ಸಾಲಿನಲ್ಲಿ 74 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ ಎಂದು ಅಕಾಡೆಮಿಯ ನಿರ್ದೇಶಕ ಎಂ.ವೆಂಕಟೇಶ್ ತಿಳಿಸಿದ್ದಾರೆ. ಕಳೆದ ವರ್ಷ ಸುಮಾರು 60 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದರು.
ಓದು, ದೃಢ ನಿರ್ಧಾರ ನನ್ನ ಯಶಸ್ಸಿನ ಗುಟ್ಟು
ಬೆಂಗಳೂರು: ಐಎಎಸ್ ಪರೀಕ್ಷೆಯಲ್ಲಿ ಈ ಬಾರಿ 265ನೇ ರ್‍ಯಾಂಕ್ ಪಡೆದಿರುವ ಬೆಂಗಳೂರಿನ ಗೋವಿಂದರಾಜನಗರದ ಡಾ.ಗೋಪಾಲ್ ಕೃಷ್ಣ ಬಿ.ನಿರಂತರ ಓದು ಹಾಗೂ ಧೃಡ ನಿರ್ಧಾರ ಯಶಸ್ಸಿನ ಗುಟ್ಟು ಎಂದು ಹೇಳಿದರು.
“ಉದಯವಾಣಿ’ ಜತೆ ಮಾತನಾಡಿದ ಅವರು,ವೈದ್ಯನಾಗಿ ಗ್ರಾಮೀಣ ಜನರ ಸಂಕಷ್ಟವನ್ನು ಬಹಳ ಹತ್ತಿರದಿಂದ ನೋಡಿದ್ದೇನೆ. ಈ ಕಾರಣದಿಂದ ಸಿವಿಲ್ ಸರ್ವೀಸ್ ಆಯ್ಕೆಮಾಡಿಕೊಂಡೆ ಎಂದರು. ಬೆಂಗಳೂರಿನ ಮೆಡಿಕಲ್ ಕಾಲೇಜಿನಲ್ಲಿ 2013ರಲ್ಲಿ ಎಂಬಿಬಿಎಸ್ ಪೂರ್ಣಗೊಂಡ ಬಳಿಕ ವೈದ್ಯಾಧಿಕಾರಿಯಾಗಿ ಶ್ರೀನಿವಾಸಪುರ ತಾಲೂಕಿನ ವಗಳಗೆರೆ ಗ್ರಾಮದ ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ. ಇದೀಗ ಶಿಮ್ಲಾದಲ್ಲಿರುವ ಇಂಡಿಯನ್ ಅಡಿಟ್ ಅಂಡ್ ಅಸೆಸ್‌ಮೆಂಟ್‌ನಲ್ಲಿ(ಐಎಎಎಸ್)ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇನೆ. ನಾಲ್ಕು ವರ್ಷಗಳಿಂದ ಐಎಎಸ್ ಪರೀಕ್ಷೆ ಪಾಸಾಗುವ ಗುರಿಯಿಟ್ಟುಕೊಂಡು ಅಭ್ಯಾಸ ಮಾಡುತ್ತಿದ್ದೆ ಎಂದರು.
ಟ್ಯೂಷನ್‌ಗೆ ಹೋಗದೆ ಶುಭ ಮಂಗಳ ಸಾಧನೆ
ಬೆಂಗಳೂರು: ಎರಡನೇ ಪ್ರಯತ್ನದಲ್ಲಿಯೇ 147ನೇ ರ್‍ಯಾಂಕ್ ಪಡೆದಿರುವ ಡಾ.ಟಿ .ಶುಭ ಮಂಗಳ, ಸಾರ್ವಜನಿಕ ಸೇವೆಯ ಬಯಕೆಯಿಂದ ಐಎಎಸ್ ಗುರಿ ತಲುಪಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಪ್ರಸೂತಿ ತಜ್ಞೆಯಾಗಿ ಕೆಲಸ ಮಾಡುತ್ತಿದ್ದು ಅದು ನನ್ನ ನೆಚ್ಚಿನ ವೃತ್ತಿ. ಆದರೆ, ಸಾಮಾಜಿಕ ಬದಲಾವಣೆ, ಸಾರ್ವಜನಿಕ ಸೇವೆಯ ದೃಢ ನಿರ್ಧಾರದಿಂದ ಐಎಎಸ್ ಆಯ್ಕೆ ಮಾಡಿಕೊಂಡೆ. ಪರೀಕ್ಷೆ ತಯಾರಿಗೆ ಎಲ್ಲಿಯೂ ಕೋಚಿಂಗ್‌ಗೆ ಹೋಗಿಲ್ಲ. ಪತಿ ಡಾ.ಟಿ.ವೆಂಕಟೇಶ್ ಅವರು ತೆರಿಗೆ ಇಲಾಖೆಯಲ್ಲಿ ಉಪ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದು, ಅವರೇ ನನಗೆ ಐಎಎಸ್ ಬರೆಯಲು ಮಾರ್ಗದರ್ಶಕರು. ನಿರಂತರ ಓದಿನಿಂದ ಯಶಸ್ಸು ದಕ್ಕಿದೆ. ಕರ್ನಾಟಕ ಕೇಡರ್ ನಲ್ಲಿಯೇ ಐಎಎಸ್ ಹುದ್ದೆ ದೊರೆಯುವ ನಿರೀಕ್ಷೆಯಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?
B.S.Yediyurappa ಮೇಲೆ ಅಭಿಯೋಜನೆ ಅಸ್ತ್ರ!: ಏನಿದು 12 ಕೋಟಿ ರೂ. ಲಂಚ ಪ್ರಕರಣ?
Panchayat Raj University; ಇನ್ನು ಸಿಎಂ ಕುಲಾಧಿಪತಿ!: ರಾಜ್ಯಪಾಲರ ಅಧಿಕಾರಕ್ಕೆ ಕೊಕ್
Agriculture; ರಾಜ್ಯದ ರೈತರು, ಜನತೆಗೆ ಶುಭ ಸುದ್ದಿ: ಈ ಬಾರಿ ಬಂಪರ್ ಇಳುವರಿ!
R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
SPB: ಎಸ್‌ಪಿಬಿ ಸ್ಮಾರಕ ನಿರ್ಮಾಣಕ್ಕಾಗಿ ಡಿ.8ರಂದು ಸಂಗೀತ ಕಛೇರಿ
Sandalwood: ನಿಮ್ಮ ನಿರೀಕ್ಷೆಗೆ ನಾವು ಜವಾಬ್ದಾರರು: ʼನಾ ನಿನ್ನ ಬಿಡಲಾರೆ’ ಇಂದು ತೆರೆಗೆ
ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?
Pension Fraud: ಕಲ್ಯಾಣ ಪಿಂಚಣಿ ಲಪಟಾವಣೆ; ಸಿಕ್ಕಿ ಬಿದ್ದ 1,458 ಸರಕಾರಿ ಸಿಬಂದಿ
Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.