ಮಂಕುಬೂದಿ ಎರಚುವ ಪ್ರಣಾಳಿಕೆ: ಎಚ್ಡಿಕೆ

Team Udayavani, Apr 28, 2018, 12:44 PM IST

m4-mankuboodi.jpg

ಮೈಸೂರು: ಕಾಂಗ್ರೆಸ್‌ ಬಿಡುಗಡೆ ಮಾಡಿರುವ ಚುನಾವಣಾ ಪ್ರಣಾಳಿಕೆ ರಾಜ್ಯದ ಜನರಿಗೆ ಮಂಕುಬೂದಿ ಎರಚುವ ಪ್ರಣಾಳಿಕೆಯಾಗಿದೆಯೇ ಹೊರತು ಬೇರೇನಿಲ್ಲ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಟೀಕಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನ ಈ ಪ್ರಣಾಳಿಕೆ ಜನರಿಗೆ ಆಸೆ ತೋರಿಸುವುದಾಗಿದ್ದು, ರಾಜ್ಯದಲ್ಲಿ ಕಳೆದ 5 ವರ್ಷ ಜನರ ತೆರಿಗೆ ಹಣವನ್ನು ಲೂಟಿ ಹೊಡೆದಿರುವ ಕಾಂಗ್ರೆಸ್‌, ಈ ಬಾರಿ ಮತ್ತಷ್ಟು ಲೂಟಿ ಹೊಡೆಯುವ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರುತ್ತೇವೆಂದು ಪ್ರಣಾಳಿಕೆಯಲ್ಲಿ ಮಂಕುಬೂದಿ ಎರಚಲು ಮುಂದಾಗಿದೆ. ಐದು ವರ್ಷದಲ್ಲಿ ರೈತರ ಆತ್ಮಹತ್ಯೆ ಹೆಚ್ಚಾಗಿದ್ದು, ಬಡವರ ಕಲ್ಯಾಣವಾಗಿಲ್ಲ ಎಂದ ಅವರು, ಕಾಂಗ್ರೆಸ್‌ ಪ್ರಣಾಳಿಕೆಗೆ ರಾಜ್ಯದ ಮತದಾರರು ಮರುಳಾಗುವುದಿಲ್ಲ ಎಂದರು.

ಯಾವ ಪರಿಣಾಮ ಬೀರಲ್ಲ: ರಾಜ್ಯದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಅವರು ಎಷ್ಟು ಪ್ರಚಾರ ಮಾಡಿದರೂ ಅಭ್ಯಂತರವಿಲ್ಲ. ಅವರು ಮಾಡುವ ಪ್ರಚಾರದಿಂದ ನಮಗೇನೂ ಪರಿಣಾಮ ಬೀರುವುದಿಲ್ಲ, ಹೀಗಾಗಿ ಕರ್ನಾಟಕಕ್ಕೆ ಬಂದು ಪ್ರಚಾರ ಮಾಡಬೇಡಿ ಎನ್ನುವುದಿಲ್ಲ.

ಅವರು ರಾಷ್ಟ್ರೀಯ ಪಕ್ಷದ ಅಧ್ಯಕ್ಷರಾಗಿದ್ದು, ಯಾರೋ ಹೇಳಿಕೊಟ್ಟಿದ್ದು, ಬರೆದುಕೊಟ್ಟಿದನ್ನು ಹೇಳಿ ಹೋಗುತ್ತಾರೆ. ಜೆಡಿಎಸ್‌ ಬಿಜೆಪಿಯ ಬಿ ಟೀಮ್ ಎನ್ನುವ ರಾಹುಲ್‌ ಗಾಂಧಿ ಅವರಿಗೆ ಯಾವುದು ಬಿ ಟೀಮ್ ಎಂದು ಚುನಾವಣೆ ಬಳಿಕ ಗೊತ್ತಾಗಲಿದ್ದು, ಕರ್ನಾಟಕದಲ್ಲಿ ರಾಹುಲ್‌ ಗಾಂಧಿ ಪ್ರವಾಸದಿಂದ ಜೆಡಿಎಸ್‌ ವೇಗ ತಡೆಯಲು ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದರು.

ಆಯೋಗ ಕ್ರಮ ವಹಿಸಲಿ: ಜೆಡಿಎಸ್‌ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ, ಚುನಾವಣಾ ಆಯೋಗ ಕಠಿಣ ಕ್ರಮಕೈಗೊಳ್ಳಬೇಕು. ಏನಾದರೂ ಜೆಡಿಎಸ್‌ ಕಾರ್ಯಕರ್ತರನ್ನು ಹೆದರಿಸಿ, ಬೆದರಿಸಿ ಚುನಾವಣೆ ಗೆಲ್ಲಬಹುದೆಂಬ ಮಾತುಗಳಿದ್ದರೆ ಅದರಿಂದ ಯಾವ ಪ್ರಯೋಜನವೂ ಆಗುವುದಿಲ್ಲ.

ಕಾರ್ಯಕರ್ತರು ಕಾನೂನು ಸುವ್ಯವಸ್ಥೆಗೆ ಧಕ್ಕೆ ತರದಂತೆ ಪ್ರಚಾರಮಾಡಲಿದ್ದು, ಸರ್ಕಾರ ಕಾರ್ಯಕರ್ತರನ್ನು ಕೆರಳಿಸುವ ಕೆಲಸ ಮಾಡದೇ ಕ್ರಮ ವಹಿಸಬೇಕಿದೆ. ಗುತ್ತಿಗೆದಾರರ ಮೂಲಕ ಕಿಕ್‌ಬ್ಯಾಕ್‌ ಪಡೆದುಕೊಂಡಿದ್ದನ್ನು ಅನೇಕ ಬಾರಿ ಹೇಳಿದ್ದು, ಇದೀಗ ಅದು ಸಾಬೀತಾಗುತ್ತಿದೆ. ಐಟಿ ಅಧಿಕಾರಿಗಳು ಮಾಡಿರುವ ದಾಳಿಯಲ್ಲಿ ಸಿಕ್ಕಿ ಬಿದ್ದಿರುವವರು ಯಾರ ಕಡೆಯವರು ಎಂಬುದು ಕಾಣುತ್ತಿಲ್ಲವೇ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು. 

ಟಾಪ್ ನ್ಯೂಸ್

Kundapura: ತ್ರಾಸಿ – ಮರವಂತೆ ಬೀಚ್‌ನಲ್ಲಿ ಗಗನದೂಟ!

Kundapura: ತ್ರಾಸಿ – ಮರವಂತೆ ಬೀಚ್‌ನಲ್ಲಿ ಗಗನದೂಟ!

1-virat-Kohli

Australia; ಮಂಗಳೂರಿಗನ ಸಲೂನ್‌ನಲ್ಲಿ ಕೊಹ್ಲಿ ರಿಲ್ಯಾಕ್ಸ್‌: ವಿರಾಟ್‌ ನಡೆಗೆ ಕಿರಣ್‌ ಫಿದಾ

mob

OTP ನಿಯಮದಿಂದ ಅಗತ್ಯ ಸೇವೆಗೆ ತೊಂದರೆ ಆಗದು: ಟ್ರಾಯ್‌

Surathkal: ರ‍್ಯಾಗಿಂಗ್; 9 ವಿದ್ಯಾರ್ಥಿಗಳ ಮೇಲೆ ಪ್ರಕರಣ ದಾಖಲು

Surathkal: ರ‍್ಯಾಗಿಂಗ್; 9 ವಿದ್ಯಾರ್ಥಿಗಳ ಮೇಲೆ ಪ್ರಕರಣ ದಾಖಲು

Manipal: ಹುಲ್ಲು ತರಲು ತೆರಳಿದ್ದ ಮಹಿಳೆಯ ಮೃತದೇಹ ಪತ್ತೆ

Manipal: ಹುಲ್ಲು ತರಲು ತೆರಳಿದ್ದ ಮಹಿಳೆಯ ಮೃತದೇಹ ಪತ್ತೆ

Bantwal: ಯಜಮಾನರು-ಓಟಗಾರರಿಂದಲೇ ಹುಟ್ಟಿದ ಕಂಬಳ

Bantwal: ಯಜಮಾನರು-ಓಟಗಾರರಿಂದಲೇ ಹುಟ್ಟಿದ ಕಂಬಳ

rahul-gandhi

Election;ವಿಶ್ವಾಸಾರ್ಹತೆಗೆ ಧಕ್ಕೆ: ಕಾಂಗ್ರೆಸ್‌ ಆಂದೋಲನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-hunsur

Hunsur: ಖಾಸಗಿ ಪೈನಾನ್ಸ್ ನ ಕಿರುಕುಳಕ್ಕೆ ಗೃಹಿಣಿ ಆತ್ಮಹತ್ಯೆಗೆ ಶರಣು

BSY ಸಿಎಂ ಸ್ಥಾನ ಕಳೆದುಕೊಳ್ಳಲು ರೇವಣ್ಣ ಕಾರಣ: ಜಿಟಿಡಿ ಆರೋಪ

BSY ಸಿಎಂ ಸ್ಥಾನ ಕಳೆದುಕೊಳ್ಳಲು ರೇವಣ್ಣ ಕಾರಣ: ಜಿಟಿಡಿ ಆರೋಪ

3-hunsur

Hunsur: ಟ್ರ್ಯಾಕ್ಟರ್ ಡಿಕ್ಕಿ ಹೊಡೆದು ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು

MUDA: ಆಸ್ತಿ ಪಾಲಿಗೆ ಸಿಎಂ ಪತ್ನಿ ಸೇರಿ 12 ಮಂದಿಯ ವಿರುದ್ಧ ದಾವೆ

MUDA: ಆಸ್ತಿ ಪಾಲಿಗೆ ಸಿಎಂ ಪತ್ನಿ ಸೇರಿ 12 ಮಂದಿಯ ವಿರುದ್ಧ ದಾವೆ

mysore

Mysore: ಪತ್ನಿ, ತಾಯಿ, ಇಬ್ಬರು ಮಕ್ಕಳ ಹತ್ಯೆ… ಅಪರಾಧಿಗೆ ಮರಣದಂಡನೆ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Kundapura: ತ್ರಾಸಿ – ಮರವಂತೆ ಬೀಚ್‌ನಲ್ಲಿ ಗಗನದೂಟ!

Kundapura: ತ್ರಾಸಿ – ಮರವಂತೆ ಬೀಚ್‌ನಲ್ಲಿ ಗಗನದೂಟ!

1-virat-Kohli

Australia; ಮಂಗಳೂರಿಗನ ಸಲೂನ್‌ನಲ್ಲಿ ಕೊಹ್ಲಿ ರಿಲ್ಯಾಕ್ಸ್‌: ವಿರಾಟ್‌ ನಡೆಗೆ ಕಿರಣ್‌ ಫಿದಾ

mob

OTP ನಿಯಮದಿಂದ ಅಗತ್ಯ ಸೇವೆಗೆ ತೊಂದರೆ ಆಗದು: ಟ್ರಾಯ್‌

Surathkal: ರ‍್ಯಾಗಿಂಗ್; 9 ವಿದ್ಯಾರ್ಥಿಗಳ ಮೇಲೆ ಪ್ರಕರಣ ದಾಖಲು

Surathkal: ರ‍್ಯಾಗಿಂಗ್; 9 ವಿದ್ಯಾರ್ಥಿಗಳ ಮೇಲೆ ಪ್ರಕರಣ ದಾಖಲು

Manipal: ಹುಲ್ಲು ತರಲು ತೆರಳಿದ್ದ ಮಹಿಳೆಯ ಮೃತದೇಹ ಪತ್ತೆ

Manipal: ಹುಲ್ಲು ತರಲು ತೆರಳಿದ್ದ ಮಹಿಳೆಯ ಮೃತದೇಹ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.