ತಾಯಿ-ಮಕ್ಕಳ ಆರೈಕೆಯ ಹಾದಿಯಲ್ಲಿ ಸೂಲಗಿತ್ತಿಯರು


Team Udayavani, Apr 29, 2018, 6:05 AM IST

midwife3.jpg

ಸೂಲಗಿತ್ತಿ ವೃತ್ತಿಯು ಮನುಷ್ಯ ಜನಾಂಗದಷ್ಟೇ ಪುರಾತನ ಇತಿಹಾಸವುಳ್ಳ ಒಂದು ವೃತ್ತಿಯಾಗಿದೆ. ಅದರ ಅಸ್ತಿತ್ವವು ಕ್ರಿಸ್ತಪೂರ್ವ 5000 ವರ್ಷಗಳಿಗೂ ಹಿಂದಿನದ್ದಾಗಿದೆ. ಹೆರಿಗೆ ಮಾಡಿಸಿಕೊಳ್ಳುವ ಹಿಬ್ರೂ ಮಹಿಳೆಯರಿಗೆ ಸಹಾಯ ಮಾಡುತ್ತಿದ್ದ ಸೂಲಗಿತ್ತಿಯರ ಜತೆಗೆ ಈಜಿಪ್ಟಿನ ದೊರೆ ಮಾತನಾಡುತ್ತಿದ್ದ ಉಲ್ಲೇಖ ಪುರಾತನ ಇತಿಹಾಸದಲ್ಲಿ ಕಂಡುಬರುತ್ತದೆ. ಭಾರತದಲ್ಲಿ ಸ್ವಯಂ ಸೇವಕ ಸಂಸ್ಥೆಗಳ ಸಹಾಯದೊಂದಿಗೆ ತಾಯಿ ಮತ್ತು ಮಕ್ಕಳ  ಆರೋಗ್ಯ ಸೇವೆಗಳು ಆರಂಭವಾದವು. ಆಧುನಿಕ ತಾಯಿ ಮತ್ತು ಮಕ್ಕಳ ಆರೋಗ್ಯ ಸೇವೆಗಳು ಕ್ರೈಸ್ತ ಮಿಶನರಿಗಳಿಂದ ತರಬೇತು ಹೊಂದಿದ ದಾಯಿಗಳಿಂದ ಆರಂಭವಾದವು. 

ತಾಯಿ ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಸಾರ್ವಜನಿಕ ಆರೋಗ್ಯ ವಿಭಾಗದ ಅಡಿಯಲ್ಲಿ ಸಾರ್ವಜನಿಕ ಆರೋಗ್ಯ ಸಹಾಯಕ ನಿರ್ದೇಶಕರ ಮೇಲ್ವಿಚಾರಿಕೆಯಲ್ಲಿ ಪ್ರತ್ಯೇಕ ವಿಭಾಗವನ್ನು ಮೊತ್ತಮೊದಲಿಗೆ ಆರಂಭಿಸಿದ್ದು ಮದ್ರಾಸ್‌ ರಾಜ್ಯ. ಸೂಲಗಿತ್ತಿಯರು ಮತ್ತು ತರಬೇತಿ ಪಡೆಯುತ್ತಿರುವ ಸೂಲಗಿತ್ತಿಯರಂತಹ ವಿದ್ಯಾರ್ಹತೆಯುಳ್ಳ ಪರಿಣಿತ ಸಿಬಂದಿಯ ಸೇವೆಗಳನ್ನು ಆರಂಭಿಸುವ ಪ್ರಯತ್ನವನ್ನು ಮೊತ್ತಮೊದಲ ಬಾರಿಗೆ ಆರಂಭಿಸಿದ್ದು ಕೂಡ ಮದ್ರಾಸ್‌ ರಾಜ್ಯವೇ. 1938ರಲ್ಲಿ ಭಾರತೀಯ ರಿಸರ್ಚ್‌ ಫಂಡ್‌ ಅಸೋಸಿಯೇಶನನ್ನು ಆರಂಭಿಸಲಾಯಿತು, ಇದು ಬಾಣಂತಿಯರು ಮತ್ತು ಶಿಶುಗಳ ಮರಣ ಮತ್ತು ರೋಗಗಳ ಕಾರಣ ಮತ್ತು ಉಂಟಾಗುವಿಕೆಯ ಬಗ್ಗೆ ಸಮಿತಿಯೊಂದನ್ನು ರಚಿಸಿತ್ತು.

ಭಾರತೀಯ ಕುಟುಂಬ ಕಲ್ಯಾಣ ಯೋಜನೆ ಮತ್ತು ಮಕ್ಕಳ ಕಲ್ಯಾಣ ಕಾರ್ಯಕ್ರಮ ಹಾಗೂ ದೇಶವ್ಯಾಪಿ ಪ್ರಜನನ ಆರೋಗ್ಯ ಕಾರ್ಯಕ್ರಮಗಳನ್ನು ಆರಂಭಿಸುವ ಮೂಲಕ ಅಭಿವೃದ್ಧಿಶೀಲ ದೇಶಗಳ ಪೈಕಿ ಇಂತಹ ಕಾಯಕ್ರಮಗಳನ್ನು ಮೊತ್ತಮೊದಲ ಬಾರಿಗೆ ಆರಂಭಿಸಿದ ದೇಶ ಭಾರತ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ದೇಶವು ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಉಪ ಕೇಂದ್ರಗಳ ವ್ಯಾಪಕ ಜಾಲವನ್ನು ಆರಂಭಿಸುವ ಮೂಲಕ ಗ್ರಾಮೀಣ ಜನಸಂಖ್ಯೆಯ ಶೇ. 80ಕ್ಕೂ ಹೆಚ್ಚು ಜನತೆಗೆ ಪ್ರಾಥಮಿಕ ಆರೋಗ್ಯ ಸೇವೆಗಳನ್ನು ಒದಗಿಸು ಪ್ರಯತ್ನ ಮಾಡಿದೆ. ಗ್ರಾಮೀಣ ಆರೋಗ್ಯ ಸೇವಾ ವ್ಯವಸ್ಥೆಯಲ್ಲಿ ಆಕ್ಸಿಲಿಯರ್‌ ನರ್ಸ್‌ ಮಿಡ್‌ವೈಫ್‌ (ಎಎನ್‌ಎಂ) ಅಥವಾ ಸೂಲಗಿತ್ತಿ ದಾದಿಯರು ತಳಮಟ್ಟದ ಕಾರ್ಯನಿರ್ವಾಹಕ ಸಿಬಂದಿಯಾಗಿದ್ದು, ಸಮುದಾಯದಲ್ಲಿ ಇರುವ ಜನರೊಂದಿಗೆ ನೇರವಾಗಿ ಸಂಪರ್ಕ ಹೊಂದಿರುತ್ತಾರೆ. ಅಲ್ಲದೆ, ಪ್ರಜನನ ಮತ್ತು ಮಕ್ಕಳ ಆರೋಗ್ಯ ಕಾರ್ಯಕ್ರಮಗಳಲ್ಲಿ ಪ್ರಧಾನ ಬಿಂದುವೂ ಆಗಿದ್ದಾರೆ. ಇದು 1960ರ ದಶಕದಲ್ಲಿ ಅಸ್ತಿತ್ವದಲ್ಲಿದ್ದು ಸಮುದಾಯಕ್ಕೆ ಪ್ರಸೂತಿ ಮತ್ತು ಚಿಕಿತ್ಸಾ ಸೇವೆಗಳನ್ನು ಒದಗಿಸುತ್ತಿದ್ದ ಸ್ಥಾನಿಕ ಆಕ್ಸಿಲಿಯರಿ ನರ್ಸ್‌ ಮಿಡ್‌ವೈಫ್‌ಗಳಿಗೂ ಈಗಿನ ದಾದಿ ಎಎನ್‌ಎಂಗಳಿಗೂ ಇರುವ ವ್ಯತ್ಯಾಸವಾಗಿದೆ. 

ಬಾಣಂತಿ –  ತಾಯಂದಿರ ಮರಣ ಪ್ರಮಾಣವನ್ನು ಕಡಿಮೆ ಮಾಡುವ ಗುರಿಯನ್ನು ಮುಟ್ಟಬೇಕಾದರೆ ಎಎನ್‌ಎಂಗಳ ಸೂಲಗಿತ್ತಿ ಪಾತ್ರವನ್ನು ಪುನರ್‌ಸ್ಥಾಪನೆ ಮಾಡಬೇಕಾಗಿದೆ. ಆದ್ಯತೆಯು ಕುಟುಂಬ ಯೋಜನೆ, ಲಸಿಕೆ ಹಾಕುವುದು ಇತ್ಯಾದಿಗಳಿಂದ ತಾಯಿ ಹಾಗೂ ನವಜಾತ ಶಿಶುವಿನ ಆರೈಕೆಯನ್ನು ಒಳಗೊಂಡು ಸಮಗ್ರ ಪ್ರಜನನ ಆರೋಗ್ಯ ಸೇವೆಯತ್ತ ಹೊರಳಬೇಕಾಗಿದೆ. ಈ ಬದಲಾವಣೆಗಳಿಗೆ ಸುಸ್ಥಿರ ಮತ್ತು ಜಾಗರೂಕ ಯೋಜನೆ ಅಗತ್ಯ, ಜತೆಗೆ ಸಂಪನ್ಮೂಲ ಒದಗಣೆಯೂ ಅಗತ್ಯ. ಸಂಪನ್ಮೂಲಗಳನ್ನು ಹೆಚ್ಚಿಸುವುದರ ಜತೆಗೆ ವ್ಯವಸ್ಥಿತ ಸುಧಾರಣೆಗಳ ಮೂಲಕ ಮಹಿಳೆಯರು ಮತ್ತು ಮಕ್ಕಳ ಆರೋಗ್ಯ ಸ್ಥಿತಿಯನ್ನು ಉತ್ತಮಪಡಿಸುವುದು ಸಾಧ್ಯ, ಪ್ರಜನನ ಮಕ್ಕಳ ಆರೋಗ್ಯ ಕಾರ್ಯಕ್ರಮಗಳ ಗುರಿಯೂ ಇದೇ ಆಗಿದೆ.

ಪ್ರತೀ ವರ್ಷ ಮೇ 5ರಂದು ವಿಶ್ವ ಮಟ್ಟದಲ್ಲಿ 50ಕ್ಕೂ ಹೆಚ್ಚು ದೇಶಗಳಲ್ಲಿ ಜಾಗತಿಕ ಸೂಲಗಿತ್ತಿಯರ ದಿನವನ್ನು ಉತ್ಸಾಹ ಮತ್ತು ಸಂಭ್ರಮಗಳಿಂದ ಆಚರಿಸಲಾಗುತ್ತದೆ. ಜನರ ಆರೋಗ್ಯದ ಕುರಿತಾಗಿ ಸೂಲಗಿತ್ತಿಯರ ನಿಸ್ವಾರ್ಥ ಸೇವೆಯನ್ನು ಸ್ಮರಿಸಿ ಗೌರವಿಸುವುದು ಈ ದಿನಾಚರಣೆಯ ಉದ್ದೇಶವಾಗಿದೆ. 1991ರ ಮೇ 5ರಂದು ಮೊತ್ತಮೊದಲ ಬಾರಿಗೆ ಜಾಗತಿಕ ಸೂಲಗಿತ್ತಿಯರ ದಿನವನ್ನು 2000ನೇ ಇಸವಿಯ ಒಳಗಾಗಿ ಎಲ್ಲರಿಗೂ ಸುರಕ್ಷಿತ ಪ್ರಸೂತಿ ಎಂಬ ಧ್ಯೇಯದೊಂದಿಗೆ ಆಚರಿಸಲಾಯಿತು. 2018ರ ಅಂದರೆ ಈ ವರ್ಷದ ಜಾಗತಿಕ ಸೂಲಗಿತ್ತಿಯರ ದಿನದ ಧ್ಯೇಯವು ಗುಣಮಟ್ಟದ ಆರೈಕೆಯೊಂದಿಗೆ ಸೂಲಗಿತ್ತಿಯರು ಮಾರ್ಗದರ್ಶಕರಾಗಿದ್ದಾರೆ ಎಂಬುದಾಗಿದೆ. ಜಾಗತಿಕ ಸೂಲಗಿತ್ತಿಯರ ದಿನದ ಪ್ರಧಾನ ಉದ್ದೇಶವು ಸೂಲಗಿತ್ತಿಯರ ಸೌಹಾರ್ದ, ಅವರ ಜ್ಞಾನ ಮತ್ತು ಕೌಶಲಗಳನ್ನು ವೃದ್ಧಿಸುವುದು ಆಗಿದೆ. ಸುರಕ್ಷಿತ ತಾಯ್ತನಕ್ಕೆ ನೆರವು ನೀಡುವುದಕ್ಕಾಗಿ ಸೂಲಗಿತ್ತಿಯರು ಇನ್ನಷ್ಟು ಚೆನ್ನಾಗಿ ಕೆಲಸ ಮಾಡುವ ನೆಲೆಯಲ್ಲಿ ಅವರಿಗೆ ಸೌಲಭ್ಯಗಳನ್ನು ಒದಗಿಸುವುದು ಮಾತ್ರವಲ್ಲದೆ ಅವರಿಗೆ ತರಬೇತಿಯನ್ನೂ ನೀಡುವ ನಿಟ್ಟಿನಲ್ಲಿ ಈ ದಿನ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಜಾಗತಿಕ ಸೂಲಗಿತ್ತಿಯರ ದಿನವನ್ನು ಇಡೀ ವಾರಕಾಲ ಅನೇಕ ವಿಚಾರಸಂಕಿರಣ ಗಳು, ಕಾರ್ಯಾಗಾರ ಗಳು ಮತ್ತು ಕೌಶಲ ವೃದ್ಧಿಗಾಗಿ ಸೃಜನಶೀಲ ತರಬೇತಿಗಳನ್ನು ಆಯೋಜಿಸುವ ಮೂಲಕ ಆಚರಿಸಲಾಗುತ್ತದೆ. 

– ಮುಂದಿನ ವಾರಕ್ಕೆ  

– ಡಾ| ಮರಿಯಾ ಪಾçಸ್‌
ಅಸಿಸ್ಟೆಂಟ್‌ ಪ್ರೊಫೆಸರ್‌,
ಮಣಿಪಾಲ್‌ ಕಾಲೇಜ್‌ ಆಫ್ ನರ್ಸಿಂಗ್‌ಮಣಿಪಾಲ ವಿವಿ, ಮಣಿಪಾಲ

ಟಾಪ್ ನ್ಯೂಸ್

Sabarimala Virtual Queue Booking Limit Increase

Kerala govt: ಶಬರಿಮಲೆ ವರ್ಚುವಲ್‌ ಕ್ಯೂ ಬುಕ್ಕಿಂಗ್‌ ಮಿತಿ ಹೆಚ್ಚಳ

UP-Jhansi

Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು

PM-Nigirya

G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್‌, ಗಯಾನಾ ಪ್ರವಾಸ ಶುರು

Chattisgadh-Petrol

Chhattisgarh: ನೀರಿನ ಬಾವೀಲಿ ಪೆಟ್ರೋಲ್‌: ಸಂಗ್ರಹಕ್ಕೆ ಮುಗಿಬಿದ್ದ ಜನ

Manipu: ಸಿಎಂ ಬಿರೇನ್‌ ಸಿಂಗ್‌ ಮನೆಗೆ ನುಗ್ಗಲು ಯತ್ನಿಸಿದ ಗುಂಪು; ಹೆಚ್ಚಿದ ಹಿಂಸಾಚಾರ

Manipur: ಸಿಎಂ ಬಿರೇನ್‌ ಸಿಂಗ್‌ ಮನೆಗೆ ನುಗ್ಗಲು ಯತ್ನಿಸಿದ ಗುಂಪು; ಹೆಚ್ಚಿದ ಹಿಂಸಾಚಾರ

DK-Shivakumar

Racial Remark: ಕುಮಾರಸ್ವಾಮಿಯವರ “ಕರಿಯ” ಎಂದದ್ದು ತಪ್ಪು: ಡಿ.ಕೆ.ಶಿವಕುಮಾರ್‌

MNG-hosp

Mangaluru: ವೆನ್ಲಾಕ್‌ ಆಸ್ಪತ್ರೆ 10 ಕೋಟಿ ರೂ. ವೆಚ್ಚದಲ್ಲಿ ಆಧುನೀಕರಣ: ಸಚಿವ ದಿನೇಶ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-health

Mother: ತಾಯಂದಿರ ಮಾನಸಿಕ ಆರೋಗ್ಯ

16

Vaccines: ವಯಸ್ಕರಿಗೆ ಲಸಿಕೆಗಳು

5-

ಅಂತಾರಾಷ್ಟ್ರೀಯ ಫ್ಲೂ ದಿನ: ಇನ್‌ಫ್ಲುಯೆಂಜಾ ಅರಿವು ಮತ್ತು ತಡೆ: ಕಾರ್ಯಾಚರಣೆಯ ಕರೆ

4–Lupus-Nephritis

Lupus Nephritis: ಲೂಪಸ್‌ ನೆಫ್ರೈಟಿಸ್‌: ರೋಗಿಗಳಿಗೆ ಒಂದು ಮಾರ್ಗದರ್ಶಿ

3

Mental health: ತಾಯಂದಿರ ಮಾನಸಿಕ ಆರೋಗ್ಯ

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

Sabarimala Virtual Queue Booking Limit Increase

Kerala govt: ಶಬರಿಮಲೆ ವರ್ಚುವಲ್‌ ಕ್ಯೂ ಬುಕ್ಕಿಂಗ್‌ ಮಿತಿ ಹೆಚ್ಚಳ

UP-Jhansi

Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು

PM-Nigirya

G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್‌, ಗಯಾನಾ ಪ್ರವಾಸ ಶುರು

Chattisgadh-Petrol

Chhattisgarh: ನೀರಿನ ಬಾವೀಲಿ ಪೆಟ್ರೋಲ್‌: ಸಂಗ್ರಹಕ್ಕೆ ಮುಗಿಬಿದ್ದ ಜನ

Manipu: ಸಿಎಂ ಬಿರೇನ್‌ ಸಿಂಗ್‌ ಮನೆಗೆ ನುಗ್ಗಲು ಯತ್ನಿಸಿದ ಗುಂಪು; ಹೆಚ್ಚಿದ ಹಿಂಸಾಚಾರ

Manipur: ಸಿಎಂ ಬಿರೇನ್‌ ಸಿಂಗ್‌ ಮನೆಗೆ ನುಗ್ಗಲು ಯತ್ನಿಸಿದ ಗುಂಪು; ಹೆಚ್ಚಿದ ಹಿಂಸಾಚಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.