ಇನ್ನು ಪ್ರಚಾರ ಸಭೆ; ಸ್ವಾಗತ ಭಾಷಣಕ್ಕೇ ಮಹತ್ವ !


Team Udayavani, Apr 29, 2018, 6:40 AM IST

of-karnataka-election.jpg

ಬಜಪೆ: ಮತದಾನದ ದಿನ ಸಮೀಪಿಸುತ್ತಿದ್ದಂತೆ ಎಲ್ಲೆಡೆ ಎಲ್ಲ ಪಕ್ಷಗಳು, ಪಕ್ಷೇತರರಿಂದಲೂ ಪ್ರಚಾರ ಸಭೆಗಳು ಜೋರಾಗಿಯೇ ನಡೆಯುತ್ತವೆ. ಅದರೆ ಸಭೆಯಲ್ಲಿ ಮುಖ್ಯಭಾಷಣ ನಡೆಯುವುದು ಮಾತ್ರ ಹತ್ತೇ ನಿಮಿಷ. ಹೆಚ್ಚು ಮಾತನಾಡುವುದಕ್ಕೆ ನೀತಿಸಂಹಿತೆಯೂ ಅಡ್ಡಿಯಾಗುತ್ತದೆ. ಆದರೆ ಸ್ವಾಗತ ಭಾಷಣ ಮಾತ್ರ ಉದ್ದಕ್ಕೆ ಬೆಳೆಯುತ್ತದೆ.ಮತದಾರರನ್ನು, ನಾಯಕರನ್ನು ಮೆಚ್ಚಿಸಲು ಇದ್ದಬದ್ದವರ ಹೆಸರುಗಳನ್ನೆಲ್ಲ ಹೇಳಿ ಸ್ವಾಗತ ಭಾಷಣವನ್ನು ಒಂದಷ್ಟು ಉದ್ದ ಕೊಂಡೊಯ್ಯುತ್ತಾರೆ. ಜತೆಗೆ ಸಭೆಯೂ ನಿರ್ದಿಷ್ಟ ಸಮಯಕ್ಕೆ ಶುರುವಾಗದೇ ತಡವಾಗುವ  ರೂಢಿಯೂ ಇರುತ್ತದೆ.

ಸಭೆ ಆರಂಭಗೊಳ್ಳುತ್ತಿದ್ದಂತೆ ಕಾರ್ಯಕ್ರಮ ನಿರೂಪಕ‌ರು ಒಮ್ಮೆ ಎಲ್ಲರ ಪರಿಚಯದ ಮೂಲಕ ಸ್ವಾಗತಿಸುತ್ತಾರೆ. ಆ ಬಳಿಕ ಸ್ವಾಗತ ಮಾಡುವವರು ಇನ್ನೊಬ್ಬರು; ಅವರು ಕೂಡ ಕಾರ್ಯಕ್ರಮ ನಿರೂಪಕ ಬಿಟ್ಟ ವಿಷಯ ಪ್ರಸ್ತಾಪಿಸಿ ಮತ್ತೆ ಸ್ವಾಗತಿಸುತ್ತಾರೆ!

ಅವರು ವೇದಿಕೆಯಲ್ಲಿರುವವರನ್ನು ಸ್ವಾಗತಿಸಬೇಕಿರುವುದು ರೂಢಿ. ಆದರೆ ಆತ ಪಕ್ಷದ ಮುಖಂಡರನ್ನು, ಅಭ್ಯರ್ಥಿಗಳನ್ನು ಸ್ವಾಗತಿಸಲು ಆರಂಭಿಸಿದರೆ ವೇದಿಕೆಯಲ್ಲಿದ್ದವರನ್ನು, ಬಂದು ಹೋದವರನ್ನು, ಇನ್ನು ಬರಲಿಕ್ಕಿರುವವರನ್ನು, ಸಭೆಯಲ್ಲಿರುವವ ರನ್ನು, ಬೇರೆ ಪಕ್ಷದಿಂದ ಬಂದವರನ್ನು, ಟಿಕೆಟ್‌ ವಂಚಿತರ ಗುಂಪಿನಲ್ಲಿ ಕಾಣಿಸಿಕೊಂಡವರನ್ನು ಹೀಗೆ ಎಲ್ಲರನ್ನು ಸ್ವಾಗತಿಸುವ ಹೊತ್ತಿಗೆ ಸ್ವಾಗತ ಭಾಷಣ ಅರ್ಧ ಗಂಟೆ ದಾಟಿರುತ್ತದೆ. ಅವರಿವರ ಹೆಸರನ್ನು ಹೇಳುವ ಜತೆಗೆ ಅವರ ವಿವರಣೆಯನ್ನೂ ನೀಡಿದರೆ ಒಂದು ಗಂಟೆ ದಾಟುವ ಅಪಾಯವೂ ಇರುತ್ತದೆ!

ಚುನಾವಣೆ ಸಂದರ್ಭದಲ್ಲಿ ರಾಜಕೀಯ ಮುಖಂಡರು ಯಾರಿಗೂ ಬೇಸರವಾಗದಂತೆ ನೋಡಿಕೊಳ್ಳುವುದು, ಜಾಗ್ರತೆ ವಹಿಸುವುದೇ ಇದಕ್ಕೆ ಮುಖ್ಯ ಕಾರಣ. ಎಲ್ಲರನ್ನು ಮೆಚ್ಚಿಸಲೇಬೇಕಾದ ಅನಿವಾರ್ಯತೆ ಅವರಿಗೆ ಇರುತ್ತದೆ. ಜತೆಗೆ ಪಕ್ಷದ ಕಾರ್ಯಕರ್ತರ ಉತ್ಸಾಹವನ್ನು ಹೆಚ್ಚಿಸಲು ಅವರ ಹೆಸರನ್ನು ಹೇಳಿಸುತ್ತಾರೆ.

ಇನ್ನು ವೇದಿಕೆ ಹೌಸ್‌ಫ‌ುಲ್‌ !
ಪ್ರಚಾರ ಸಭೆಗಳ ವೇದಿಕೆ ಇನ್ನು ಕಿಕ್ಕಿರಿದು ತುಂಬಿರುತ್ತದೆ.ರಾಜ್ಯ, ಜಿಲ್ಲಾ ಮಟ್ಟದ ನಾಯಕರ ಜತೆ ಸ್ಥಳೀಯ ಮಟ್ಟದ ನಾಯಕರು ಮಿನುಗುವ ಕಾಲ. ಅವರ ಅಗತ್ಯಗಳನ್ನು  ಚುನಾವಣೆ ಸಂದರ್ಭದಲ್ಲಿ ಹಿರಿಯ ನಾಯಕರು ಮರೆಯುವಂತಿಲ್ಲ. ಯಾರೇ ಸ್ಥಳೀಯ ನಾಯಕ ವೇದಿಕೆಯ ಕೆಳಗೆ ಕುಳಿತುಕೊಂಡಿದ್ದರೂ ಹಿರಿಯ ನಾಯಕರು ಅವರನ್ನು ವೇದಿಕೆಯ ಮೇಲೆ ಬರುವಂತೆ ಒತ್ತಾಯ ಮಾಡುತ್ತಾರೆ.

ಕೋಟಿ ಕೋಟಿ ರೂ. ಮೊತ್ತದ ಯೋಜನೆಗಳ ಭರವಸೆ ನೀಡುತ್ತಾರೆ. ಈ ಸಂದರ್ಭ ಸ್ಥಳೀಯ ಸಮಸ್ಯೆ, ಬೇಡಿಕೆಗಳ ಬಗ್ಗೆ ಅಲ್ಲಿರುವ ಮತದಾರರು ಪ್ರಶ್ನಿಸುವುದೂ ಇಲ್ಲ. ಪಕ್ಷದ ಸಾಧನೆ, ಅಭ್ಯರ್ಥಿಯ ಸಾಧನೆಗಳೇ ಪುಂಖಾನುಪುಂಖವಾಗಿ ಕೇಳಿಬರುತ್ತವೆ. ಬೇರೆ ಪಕ್ಷಗಳ, ಪ್ರತಿಸ್ಪರ್ಧಿ ನಾಯಕರ ಕಾಲೆಳೆಯುವ ಕಾರ್ಯ ವನ್ನಂತೂ ಮರೆಯದೆ ಮಾಡುತ್ತಾರೆ.

– ಸುಬ್ರಾಯ ನಾಯಕ್‌

ಟಾಪ್ ನ್ಯೂಸ್

AAP ತೊರೆದ ಬೆನ್ನಲ್ಲೇ ಬಿಜೆಪಿ ಸೇರ್ಪಡೆಗೊಂಡ‌ ಕೇಜ್ರಿವಾಲ್‌ ಆಪ್ತ ಕೈಲಾಶ್‌ ಗೆಹ್ಲೋಟ್!

AAP ತೊರೆದ ಬೆನ್ನಲ್ಲೇ ಬಿಜೆಪಿ ಸೇರ್ಪಡೆಗೊಂಡ‌ ಕೇಜ್ರಿವಾಲ್‌ ಆಪ್ತ ಕೈಲಾಶ್‌ ಗೆಹ್ಲೋಟ್!

Father and children who went to fishing went missing in hukkeri

Hukkeri: ಮೀನು ಹಿಡಿಯಲು ಹೋಗಿದ್ದ ತಂದೆ, ಇಬ್ಬರು ಮಕ್ಕಳು ನೀರುಪಾಲು

Emergency: ಹತ್ತಾರು ವಿಳಂಬದ ಬಳಿಕ ಕೊನೆಗೂ ಕಂಗನಾ ʼಎಮರ್ಜೆನ್ಸಿʼ ರಿಲೀಸ್ ಗೆ ಡೇಟ್‌ ಫಿಕ್ಸ್

Emergency: ಹತ್ತಾರು ವಿಳಂಬದ ಬಳಿಕ ಕೊನೆಗೂ ಕಂಗನಾ ʼಎಮರ್ಜೆನ್ಸಿʼ ರಿಲೀಸ್ ಗೆ ಡೇಟ್‌ ಫಿಕ್ಸ್

IPL Mega Auction: 13-year-old boy in mega auction: Who is Vaibhav Suryavanshi?

IPL Mega Auction: ಮೆಗಾ ಹರಾಜಿನಲ್ಲಿ 13ರ ಬಾಲಕ: ಯಾರಿದು ವೈಭವ್‌ ಸೂರ್ಯವಂಶಿ

Gujarat: ಹಿರಿಯ ವಿದ್ಯಾರ್ಥಿಗಳ Ragging-ಪ್ರಥಮ ವರ್ಷದ ಎಂಬಿಬಿಎಸ್‌ ವಿದ್ಯಾರ್ಥಿ ಸಾ*ವು

Gujarat: ಹಿರಿಯ ವಿದ್ಯಾರ್ಥಿಗಳ Ragging-ಪ್ರಥಮ ವರ್ಷದ ಎಂಬಿಬಿಎಸ್‌ ವಿದ್ಯಾರ್ಥಿ ಸಾ*ವು

10

Nayanthara: ʼರಕ್ಕಯಿʼ ಆಗಿ ದುಷ್ಟರ ಪಾಲಿಗೆ ದುಸ್ವಪ್ನವಾದ ಲೇಡಿ ಸೂಪರ್‌ ಸ್ಟಾರ್

BGT 2024-25: Virat Kohli returns to form in Aussies

BGT 2024-25: ಆಸೀಸ್‌ ನಲ್ಲಿ ಲಯಕ್ಕೆ ಮರಳಿದ ವಿರಾಟ್‌ ಕೊಹ್ಲಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2

Mangaluru: ಹೆದ್ದಾರಿ ಬದಿ ನಿಲ್ಲುವ ವಾಹನ; ಅಪಾಯಕ್ಕೆ ಆಹ್ವಾನ

byndoor

Kinnigoli: ದ್ವಿಚಕ್ರ ವಾಹನಗಳ ಢಿಕ್ಕಿ; ಸವಾರ ಮೃತ್ಯು

3

Mangaluru: ಅನಧಿಕೃತ ಫ್ಲೆಕ್ಸ್‌ , ಬ್ಯಾನರ್‌ ತೆರವು ಆರಂಭ

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾವು!

Ullala: ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾವು!

1-maralu

Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

4

Kaup: ಬೆಳಪು ಆಸ್ಪತ್ರೆಗೆ ವಿಟಮಿನ್‌ಎಂ ಕೊರತೆ!

UV Interview: ಕೇಂದ್ರದ ಎಥೆನಾಲ್‌ ನೀತಿಯಿಂದ ರೈತರಿಗಿಲ್ಲ ಲಾಭ…

UV Interview: ಕೇಂದ್ರದ ಎಥೆನಾಲ್‌ ನೀತಿಯಿಂದ ರೈತರಿಗಿಲ್ಲ ಲಾಭ…

AAP ತೊರೆದ ಬೆನ್ನಲ್ಲೇ ಬಿಜೆಪಿ ಸೇರ್ಪಡೆಗೊಂಡ‌ ಕೇಜ್ರಿವಾಲ್‌ ಆಪ್ತ ಕೈಲಾಶ್‌ ಗೆಹ್ಲೋಟ್!

AAP ತೊರೆದ ಬೆನ್ನಲ್ಲೇ ಬಿಜೆಪಿ ಸೇರ್ಪಡೆಗೊಂಡ‌ ಕೇಜ್ರಿವಾಲ್‌ ಆಪ್ತ ಕೈಲಾಶ್‌ ಗೆಹ್ಲೋಟ್!

Suri Loves Sandhya movie teaser

Suri Loves Sandhya: ಟೀಸರ್‌ನಲ್ಲಿ ಸೂರಿ ಲವ್‌ ಸ್ಟೋರಿ

Father and children who went to fishing went missing in hukkeri

Hukkeri: ಮೀನು ಹಿಡಿಯಲು ಹೋಗಿದ್ದ ತಂದೆ, ಇಬ್ಬರು ಮಕ್ಕಳು ನೀರುಪಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.