ತರಕಾರಿ ಬೆಳೆಯಿಂದ ಬದುಕು ತಂಪಾಯ್ತು !


Team Udayavani, Apr 30, 2018, 6:15 AM IST

13-3-2018-N-D-H-P2.jpg

ಮಲೆನಾಡಿನ ಭಾಗದಲ್ಲಿ ನೀರಿನ ವ್ಯವಸ್ಥೆ ಚೆನ್ನಾಗಿದ್ದರೂ ತರಕಾರಿ ಕೃಷಿ ನಡೆಸುವವರು ವಿರಳ. ಆದರೆ ಶಿವಮೊಗ್ಗ ಜಿಲ್ಲೆ ಆಯನೂರು ಸಮೀಪದ ಉಬ್ಬನಹಳ್ಳಿಯ ನಾಗರಾಜ ಈ ಕೆಲಸ ಮಾಡಿದ್ದಾರೆ. ಇವರು ವೃತ್ತಿಯಲ್ಲಿ ಸರಕು ಸಾಗಣೆಯ ಬಾಡಿಗೆ ಆಟೋ ಓಡಿಸುತ್ತಾರೆ. ಜೊತೆಗೆ ವರ್ಷವಿಡೀ ತರಕಾರಿ ಕೃಷಿಯಲ್ಲಿ ಲಾಭ ಮಾಡುತ್ತಿದ್ದಾರೆ. 

ಆಯನೂರಿನಿಂದ ಸವಳಂಗ ಹೆದ್ದಾರಿಗೆ ತಾಗಿಕೊಂಡಿರುವ ಉಬ್ಬನಹಳ್ಳಿ ಗ್ರಾಮದಲ್ಲಿ ಇವರ ಹೊಲವಿದೆ. ಒಂದು ಎಕರೆ ವಿಸ್ತೀರ್ಣದ ಹೊಲದಲ್ಲಿ ಕೊಳವೆ ಬಾವಿ ತೆಗೆಸಿ ನೀರಾವರಿ ವ್ಯವಸ್ಥೆ ರೂಪಿಸಿಕೊಂಡಿದ್ದಾರೆ. ಮಳೆಗಾಲ ಮುಕ್ತಾಯವಾಗುತ್ತಿದ್ದಂತೆ  ಸೆಪ್ಟೆಂಬರ್‌ ತಿಂಗಳಿನಿಂದ ತರಕಾರಿ ಬೆಳೆಯುತ್ತಾರೆ.

ಕೃಷಿ ಹೇಗೆ ?
ಇವರು ತಮ್ಮ ಒಂದು ಎಕರೆ ಹೊಲವನ್ನು  5 ಭಾಗ ಮಾಡಿಕೊಂಡಿದ್ದಾರೆ. ಒಂದೊಂದು ಭಾಗದಲ್ಲಿ ಬೇರೆ ಬೇರೆ ತರಕಾರಿ ಬೆಳೆಯುತ್ತಾರೆ. ಮೂಲಂಗಿ, ಚೌಳಿಕಾಯಿ, ಬೆಂಡೆಕಾಯಿ, ಬಸಳೆ ಸೊಪ್ಪು, ಹರಬೆ ಸೊಪ್ಪು, ಬದನೆ , ಟೊಮೆಟೊ ಇತ್ಯಾದಿ ಬೆಳೆಸಿದ್ದಾರೆ. ಬೀಜ ಬಿತ್ತಿ ಗಿಡ ಮೊಳಕೆಯಾಗುತ್ತಿದ್ದಂತೆ 20:20 ಕಾಂಪ್ಲೆಕ್ಸ್‌ ಗೊಬ್ಬರ, ಸಗಣಿ ಗೊಬ್ಬರ, ಕುರಿ ಗೊಬ್ಬರವನ್ನು ಸಮ ಪ್ರಮಾಣದಲ್ಲಿ ಮಿಶ್ರಣ ಮಾಡಿ ಗಿಡಗಳಿಗೆ ಪ್ರತಿ 20 ದಿನಕ್ಕೆ ಒಮ್ಮೆಯಂತೆ ನೀಡುತ್ತಾ ಮಣ್ಣು ಏರಿಸಿ ಕೊಡುತ್ತಾ ಕೃಷಿ ನಡೆಸುತ್ತಾರೆ. ತರಕಾರಿ ಪಟ್ಟೆ ಸಾಲಿನ ಮಧ್ಯೆ ನೀರು ಹರಿಯುವಂತೆ  ವ್ಯವಸ್ಥೆ ಮಾಡಿದ್ದಾರೆ. ಜೊತೆಗೆ ಮಧ್ಯೆ ಮಧ್ಯೆ 80 ಬಾಳೆಗಿಡ, 300 ನುಗ್ಗೆ ಗಿಡ, ಶುಂಠಿ, ಅರಿಶಿನ,  400 ಅಡಿಕೆ, 20 ತೆಂಗಿನ ಗಿಡಗಳನ್ನು ಸಹ ಬೆಳೆಸಿದ್ದಾರೆ. ಕಳೆದ ವರ್ಷ ನೆಟ್ಟ ಬಾಳೆ ಗಿಡಗಳು ಈ ವರ್ಷ ಗೊನೆ ಬಿಟ್ಟಿದ್ದು ಬರುವ ಮೇ ತಿಂಗಳಲ್ಲಿ ಫ‌ಸಲು, ಮಾರಾಟಕ್ಕೆ ಸಿಗಲಿದೆ. 

ಲಾಭ ಎಷ್ಟು?
ನಾಗರಾಜ್‌ ಅವರಿಗೆ,  ತೊಂಡೆಕಾಯಿ ಮಾರಾಟದಿಂದ ರೂ.10 ಸಾವಿರ, ಚೌಳಿ ಕಾಯಿ ಮಾರಾಟದಿಂದ ರೂ.12 ಸಾವಿರ, ಮೂಲಂಗಿ ಮಾರಾಟದಿಂದ ರೂ.15 ಸಾವಿರ ಆದಾಯ ದೊರೆತಿದೆ. 2 ಕ್ವಿಂಟಾಲ್‌ ಶುಂಠಿ ಬೀಜ ಕೃಷಿ ಮಾಡಿದ್ದು 15 ಕ್ವಿಂಟಾಲ್‌ ಫ‌ಸಲು ದೊರೆತಿದೆ. ಇದರಿಂದ  30 ಸಾವಿರ ಆದಾಯ ದೊರೆತಿದೆ. ಬಸಳೆ ಸೊಪ್ಪು ಮತ್ತು ಹರಬೆ ಸೊಪ್ಪಿನ ಮಾರಾಟದಿಂದ ರೂ.5 ಸಾವಿರ ,ತಿಂಗಳ ಅವರೆ ಕಾಯಿ ಮಾರಾಟದಿಂದ 4 ಸಾವಿರ , ತೊಗರಿಕಾಳು ಮಾರಾಟದಿಂದ 3 ಸಾವಿರ ಆದಾಯ ದೊರೆತಿದೆ. ಹೀಗೆ ಎಲ್ಲ ಬಗೆಯ ಲೆಕ್ಕಹಾಕಿದರೆ ಒಟ್ಟು 70 ಸಾವಿರ ಆದಾಯ ದೊರೆತಿದೆ. ಸುಮಾರು 20 ಸಾವಿರ ಖರ್ಚಾಗಲಿದ್ದು ನಿವ್ವಳ ಲಾಭ 50 ಸಾವಿರ ದೊರೆತಿದೆ. ತರಕಾರಿ ಫ‌ಸಲು ಕಟಾವು ಆಗುತ್ತಿದ್ದಂತೆ ನಿರಂತರವಾಗಿ ತರಕಾರಿ ಮಾರುವ ಉದ್ದೇಶದಿಂದ ಒಂದು ಕಡೆ ಕಟಾವು ಆಗುತ್ತಿದ್ದಂತೆ ಅದೇ ಹೊಲದ ಇನ್ನೊಂದು ಭಾಗದಲ್ಲಿ ಅದೇ ತರಕಾರಿ ಕೃಷಿ ಆರಂಭಿಸಿತ್ತಾ ವರ್ಷ ವಿಡೀ ತರಕಾರಿ ಬೆಳೆಯುತ್ತಾರೆ.

ಇವರ ಜೊತೆ ಇವರ ಪತ್ನಿ ಸಹ ಸಹಕರಿಸುತ್ತಿದ್ದು ಆಟೋ ಬಾಡಿಗೆಗೆ ಹೋಗಿ ಮರಳಿ ಬರುತ್ತಿದ್ದಂತೆ ತರಕಾರಿ ಕೃಷಿಯಲ್ಲಿ ತೊಡಗಿಕೊಳ್ಳುತ್ತಾರೆ. ಹೊಲದಲ್ಲಿ ಬಹು ವಾರ್ಷಿಕ ಫ‌ಸಲಿನ ಅಡಿಕೆ, ಬಾಳೆ,ನುಗ್ಗೆ, ತೆಂಗು ಮುಂತಾದ ಕೃಷಿ ನಡೆಸುತ್ತಿರುವ ಕಾರಣ, ತರಕಾರಿ ಗಿಡಗಳಿಗೆ ಹಾಯಿಸಿದ ನೀರು ಈ ಗಿಡಗಳಿಗೂ ತಾಗಿ ಪರೋಕ್ಷವಾಗಿ ಕೃಷಿ ನಡೆಸುವ ಇವರ ಈ ವಿಧಾನ ಉಳಿದ ರೈತರಿಗೆ ಮಾದರಿಯಾಗಿದೆ.

ಮಾಹಿತಿಗೆ 8197522769

– ಎನ್‌.ಡಿ.ಹೆಗಡೆ ಆನಂದಪುರಂ

ಟಾಪ್ ನ್ಯೂಸ್

1-kannada

Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ

siddanna-2

NABARD ಕಡಿತ ರೈತರಿಗೆ ಮಾಡಿದ ಅನ್ಯಾಯ: ಸಿದ್ದರಾಮಯ್ಯ ಆಕ್ರೋಶ

vidhana-soudha

Karnataka; 5,949 ಗ್ರಾಮ ಪಂಚಾಯತ್‌ಗಳಿಗೆ 448 ಕೋಟಿ ರೂ. ಅನುದಾನ

India: ಕೃತಕ ಬುದ್ಧಿಮತ್ತೆ ತಜ್ಞರಿರುವ 2ನೇ ಅಗ್ರ ರಾಷ್ಟ್ರ ಭಾರತ!

India: ಕೃತಕ ಬುದ್ಧಿಮತ್ತೆ ತಜ್ಞರಿರುವ 2ನೇ ಅಗ್ರ ರಾಷ್ಟ್ರ ಭಾರತ!

1-reee

ದಿ| ದಾಮೋದರ ಆರ್‌. ಸುವರ್ಣ: ಬಡಜನರ ಕಣ್ಣೀರಿಗೆ ಸ್ಪಂದಿಸಿದ ಹೃದಯ ಸಿರಿವಂತ

Arrest

Kasaragodu: ಸಿವಿಲ್‌ ಪೊಲೀಸ್‌ ಆಫೀಸರ್‌ ಕೊಲೆ ಪ್ರಕರಣ: ಪತಿಯ ಸೆರೆ

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-kannada

Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ

siddanna-2

NABARD ಕಡಿತ ರೈತರಿಗೆ ಮಾಡಿದ ಅನ್ಯಾಯ: ಸಿದ್ದರಾಮಯ್ಯ ಆಕ್ರೋಶ

1-kanchi

Kanchi swamiji; ದೇವಸ್ಥಾನಗಳ ಭೂಮಿ ದೇವಸ್ಥಾನಗಳಿಗೇ ಇರಲಿ

vidhana-soudha

Karnataka; 5,949 ಗ್ರಾಮ ಪಂಚಾಯತ್‌ಗಳಿಗೆ 448 ಕೋಟಿ ರೂ. ಅನುದಾನ

India: ಕೃತಕ ಬುದ್ಧಿಮತ್ತೆ ತಜ್ಞರಿರುವ 2ನೇ ಅಗ್ರ ರಾಷ್ಟ್ರ ಭಾರತ!

India: ಕೃತಕ ಬುದ್ಧಿಮತ್ತೆ ತಜ್ಞರಿರುವ 2ನೇ ಅಗ್ರ ರಾಷ್ಟ್ರ ಭಾರತ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.