ಬೆಳೆ, ಬೆಲೆ ಸಿಗದಿದ್ದಾಗ ರೈತ ಸುದ್ದಿಯಾಗುತ್ತಾನೆ !


Team Udayavani, Apr 30, 2018, 6:15 AM IST

1039451984.jpg

ಬೆಳೆ ಹಾನಿಗೆ ತುತ್ತಾದ ರೈತರು ಹಿತ ಕಾಪಾಡಲು ಸಹಾಯಧನ ನೀಡುವ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದೆ.  ಆದರೆ ಅದನ್ನು ಪಡೆಯಲು ರೈತರು ಮೇಲಿಂದ ಮೇಲೆ ಸರ್ಕಾರಿ ಕಚೇರಿಗಳಿಗೆ ಅಲೆಯಬೇಕಾಗುತ್ತದೆ. ಈ ಸಂದರ್ಭಗಳಲ್ಲಿ ರೈತರಿಗೆ ಸಹಾಯ ಮಾಡಬೇಕಾದ ಅಧಿಕಾರಿಗಳು ಅವರನ್ನು ಬಗೆಬಗೆಯಲ್ಲಿ ಕಾಡುತ್ತಾರೆ. 

ಹಳ್ಳಿಗಳಿಗೆ ಬನ್ನಿ. ಇವತ್ತು ಕೃಷಿಕ ಸಂಕಷ್ಟದಲ್ಲಿದ್ದರೆ ಆತ ಕೃಷಿಗಾಗಿ, ಮಾಡಿದ ಸಾಲಕ್ಕಾಗಿ ಕಟ್ಟಬೇಕಾದ ಬಡ್ಡಿ, ಅಸಲುಗಳ ಚಿಂತೆ ಮಾತ್ರ ಹೈರಾಣ ಮಾಡಿದೆ ಎಂದುಕೊಳ್ಳಬೇಕಾಗಿಲ್ಲ. ಸಹಕಾರಿ ಸಂಘಗಳಿಂದ ರಿಯಾಯ್ತಿ ಬಡ್ಡಿ ದರದ ಸಾಲ ವಿತರಣೆಯನ್ನು ಹೆಚ್ಚಿಸಿದರೆ ಹಾಗೂ ಸಾಲ ಮನ್ನಾ ಮಾಡಿಬಿಟ್ಟರೆ ರೈತ ಇನ್ನೆಂದೂ ಆತ್ಮಹತ್ಯೆಯನ್ನೇ ಮಾಡಿಕೊಳ್ಳುವುದಿಲ್ಲ ಎಂದುಕೊಳ್ಳುವುದು ಮೂರ್ಖತನ. ಜನಪ್ರತಿನಿಧಿಗಳು ಹುಡುಕುತ್ತಿರುವುದು ರೈತ ಆತ್ಮಹತ್ಯೆಯನ್ನು ತಡೆಗಟ್ಟಲು ಬೇಕಾದ ಪರಿಹಾರವನ್ನಲ್ಲವೇ ಅಲ್ಲ. ಸಾವುಗಳ ಭಾರವನ್ನು ವರ್ಗಾಯಿಸಲು ಒಂದು “ತಲೆ’ ಬೇಕು. ಅದಕ್ಕೆ ಅವರು 2 ವರ್ಷದ ಹಿಂದೆ ಆಯ್ಕೆ ಮಾಡಿಕೊಂಡಿದ್ದು ಖಾಸಗಿ ಲೇವಾದೇದಾರರನ್ನು.

ಆಗ ನೋಂದಣಿ ಮಾಡಿಕೊಂಡ ಫೈನಾನ್ಸ್‌ ಮೇಲೆ ಸರ್ಕಾರದ ಕಾಕದೃಷ್ಟಿ ಬಿದ್ದಿತ್ತು. ಪೊಲೀಸರ ಮೂಲಕ ದಾಳಿ ಮಾಡಿಸಿ, ನ್ಯಾಯಾಲಯದಲ್ಲಿ ಪ್ರಕರಣಗಳನ್ನು ದಾಖಲಿಸಿ, ಪತ್ರಿಕಾ ಹೇಳಿಕೆ ನೀಡಿ ಜನರನ್ನು ನಂಬಿಸುವ ಪ್ರಯತ್ನ ನಡೆಯಿತು. “ವಿಪರೀತ ಬಡ್ಡಿಯನ್ನು ಹಾಕಿ ಸರ್ಕಾರೇತರ ಸಾಲ ವ್ಯವಸ್ಥೆಗಳು ರೈತರ ಬದುಕನ್ನು ಮೂರಾಬಟ್ಟೆ ಮಾಡಿವೆ. ಅದರಿಂದ ರೈತರು ಅವಮಾನಕ್ಕೊಳಗಾಗಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಆ ನಿಟ್ಟಿನಲ್ಲಿ ನಾವು ಬಿಗಿ ಕ್ರಮ ತೆಗೆದುಕೊಳ್ಳುತ್ತಿದ್ದೇವೆ’ ಅಂದಿತ್ತು ಸರ್ಕಾರದ ಪ್ರಕಟಣೆ ! ಆಂದರೆ  ಸರ್ಕಾರಕ್ಕೂ ಬೇಕಿರುವುದು ಬಲಿಯೇ!

ಸರ್ಕಾರ, ರೈತರ ಸಾವಿಗೆ ಹಣದ ಪರಿಹಾರ ಕೊಟ್ಟಿದೆ. ಈ ಪರಿಹಾರ ಘೋಷಣೆಯೇ ಎರಡು ಅಲಗಿನದು. ಅದಕ್ಕಿಂತ ಮುಖ್ಯವಾಗಿ, ಸರ್ಕಾರ ಮಾಡಬೇಕಾದ ಎರಡು ಆದ್ಯತಾ ಕೆಲಸಗಳಿವೆ. ಮೊತ್ತಮೊದಲಾಗಿ, ರೈತರಿಗೆ ಅಧಿಕೃತ ವ್ಯವಸ್ಥೆಗಳಲ್ಲಿ ಹೆಚ್ಚಿನ ದಾಖಲೆಗಳ ಚಕ್ರವ್ಯೂಹಕ್ಕೆ ಸಿಲುಕಿಸದೆ ಸಾಲ ಸೌಲಭ್ಯವನ್ನು ಆದಷ್ಟೂ ಕಡಿಮೆ ಬಡ್ಡಿ ದರದಲ್ಲಿ ಒದಗಿಸುವ ವ್ಯವಸ್ಥೆ. ಅದಕ್ಕಿಂತ ಮಿಗಿಲಾಗಿ ರೈತ ಬೆಳೆದ ಬೆಳೆಗೆ ಆಕರ್ಷಕ ಬೆಲೆ ಸಿಗುವಂತೆ ಮಾಡುವುದು ಕೂಡ ಸರ್ಕಾರದ ಜವಾಬ್ದಾರಿ. ಇಷ್ಟು ಮಾಡಿದರೆ, ಯಾವ ಸಾಲ ಮನ್ನಾವೂ ಬೇಡ, ರೈತ ಕೃಷಿ ಕಾರಣಕ್ಕೆ ಜೀವ ಕಳೆದುಕೊಳ್ಳುವುದಕ್ಕೂ ಹೋಗುವುದಿಲ್ಲ.

ಸರ್ಕಾರಗಳು ರೈತರಿಗೆ ಸಾಲ ಕೊಡಲು ಸಹಕಾರಿ ವ್ಯವಸ್ಥೆಯನ್ನೇ ನೆಚ್ಚಿಕೊಳ್ಳಬೇಕು. ಇವುಗಳ ಬೆಂಬಲದಿಂದಲೇ ರೈತರು ಖಾಸಗಿ ಲೇವಾದೇವಿದಾರರ ಜಾಲಕ್ಕೆ ಸಿಲುಕದಂತೆ ರಕ್ಷಿಸಬೇಕು. ಈಗ ಆಗಿರುವುದು ಇದಕ್ಕೆ ವಿರುದ್ಧವಾದ ಪ್ರಕ್ರಿಯೆ. ಪರವಾನಗಿ ಪಡೆದವರನ್ನು ಅಕ್ಷರಶಃ ಜಾಲಾಡಲಾಗುತ್ತಿದೆ. ಆದರೆ ಈ ನೋಂದಣಿಯ ಕಕ್ಷೆಗೆ ಬಾರದೆ ದಿನದ ದರದಲ್ಲಿ, ವಾರದ ದರದಲ್ಲಿ ಮೀಟರ್‌ ಬಡ್ಡಿ ವಿಧಿಸಿ ದಂಧೆ ಮಾಡುತ್ತಿರುವವರನ್ನು ಆಡಳಿತ ಮಟ್ಟ ಹಾಕುವ ಕೆಲಸಕ್ಕೆ ಮುಂದಾಗುತ್ತಿಲ್ಲ.

ಪರಿಣಾಮ ಏನಾದೀತು? ಒಂದೆಡೆ ಅಧಿಕೃತ ಲೇವಾದೇವಿದಾರರು ಅಸುರಕ್ಷಿತ ಭಾವ ತಲೆದೋರಿ ಸಾಲ ತರಿಸುವಿಕೆಗೆ ಕಡಿವಾಣ ಹಾಕುತ್ತಾರೆ. ಮತ್ತೆ ಹಣ ಬೇಕಾದ ರೈತ, ಬಡ್ಡಿ ಕುಳದ ಮನೆಯ ಬಾಗಿಲು ತಟ್ಟುತ್ತಾನೆ. ಬೆಳಗ್ಗೆ ಸಾವಿರ ರೂ. ಸಾಲ ಪಡೆದವನು ಸಂಜೆಯ ವೇಳೆಗೆ ಸಂಜೆ ಅದಕ್ಕೆ ನೂರು ರೂ. ಸೇರಿಸಿ ಹಣ ಪಾವತಿಸಬೇಕಾದ ಅನಿವಾರ್ಯ ಘಟನೆಗಳು ಹುಟ್ಟುತ್ತವೆ. ಇಂಥ ಪರಿಸ್ಥಿತಿ ಜೊತೆಯಾದರೆ ಆತ್ಮಹತ್ಯೆ ನಿಲ್ಲುತ್ತದೆಯೇ?

2004ರಲ್ಲಿ ರಾಜ್ಯ ಸರ್ಕಾರ ಮಿತಿಮೀರಿದ ಬಡ್ಡಿ ವಿಧಿಸುವಿಕೆಯ ನಿಷೇಧ ಅಧಿನಿಯಮವನ್ನು ಜಾರಿಗೆ ತಂದಿತು. ಇದರಡಿಯಲ್ಲಿಯೇ ಈಗ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಹಾಗೂ ಉಪಭಾಗೀಯ ಮಟ್ಟದಲ್ಲಿ ಎಸಿ ಅಧ್ಯಕ್ಷತೆಯ ವಿಚಕ್ಷಣಾ ಸಮಿತಿಗಳನ್ನು ರಚಿಸಿ ಲೇವಾದೇವಿದಾರರನ್ನು ಮಟ್ಟಹಾಕಲು ಹೊರಡಲಾಗಿದೆ. ಸಹಕಾರಿಗಳು ರೈತರ ಉನ್ನತಿಯಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂತಾದರೆ ಕೆಲವು ಬದಲಾವಣೆಗಳಾಗಬೇಕು. ಸರ್ಕಾರ ಸಾಕಷ್ಟು ಕಡಿಮೆ ದರದಲ್ಲಿ ಸಾಲ ಒದಗಿಸಬೇಕು ಎಂಬ ಪ್ರತಿಪಾದನೆಯ ಜೊತೆಗೆ ಸಾಲವನ್ನು ಬೇಕಾಬಿಟ್ಟಿ ತರಿಸಲು ಕೂಡ ಬರುವುದಿಲ್ಲ. ಆ ಸಂದರ್ಭದಲ್ಲಿ ಆಧಾರವಾಗಿ ನೀಡಬೇಕಾದ ದಾಖಲೆಗಳನ್ನು ರೈತ ಸುಲಭವಾಗಿ ಪಡೆಯುವಂತಾಗಲು ಕಂದಾಯ ಇಲಾಖೆಯನ್ನು ಸಜ್ಜುಗೊಳಿಸಬೇಕಾದುದು ಸರ್ಕಾರ. ರೈತ ತನ್ನ ವರ್ಷದ ಪಹಣಿಯಲ್ಲಿ ಬೆಳೆ ನಮೂದನ್ನು ಹೊಂದಲು ಅಥವಾ ಬೆಳೆ ದೃಢೀಕರಣವನ್ನು ಪಡೆಯುವುದಕ್ಕೆ  ಸುಸ್ತಾಗುತ್ತಿರುವಾಗ ಸರ್ಕಾರದ ಕೆಲಸ ಅತ್ಯಂತ ದೊಡ್ಡದಿದೆ. ಅದರ ನಿರ್ವಹಣೆಯಲ್ಲಿ ಈವರೆಗಂತೂ ಸರ್ಕಾರ ಯಶಸ್ಸು ಕಂಡಿಲ್ಲ. 

ಸರ್ಕಾರದ ಕೃಷಿ ಸಂಬಂಧಿ ಇಲಾಖೆಗಳಿಂದ ಪ್ರೋತ್ಸಾಹ ಪಡೆಯಬೇಕಾದ ರೈತ ದಾಖಲೆಗಾಗಿ ಅಲೆದಾಡಿ ಸುಸ್ತಾಗುತ್ತಾನೆ. ರಾಜ್ಯ ತೋಟಗಾರಿಕಾ ಇಲಾಖೆ ಬೋಡೋì ಸಿಂಪಡನೆಗೆ ಸಹಾಯಧನದ ರೂಪದಲ್ಲಿ ಮೈಲುತುತ್ತಕ್ಕೆ ಅರ್ಧ ಬಿಲ್‌ ಮೊತ್ತ ಒದಗಿಸುತ್ತಿದೆ. ಅದಕ್ಕಾಗಿ ಕಚೇರಿಯಿಂದ ಪಡೆದು, ಭರ್ತಿ ಮಾಡಿದ ಅರ್ಜಿ ನಮೂನೆ, ಆ ವರ್ಷದಲ್ಲಿ ಪಡೆದ ಆರ್‌ಟಿಸಿ. ಬೆಳೆ ನಮೂದಾಗದಿದ್ದಲ್ಲಿ ಸಂಬಂಧಿಸಿದ ಪ್ರಾಧಿಕಾರದಿಂದ ಪಡೆದ ಬೆಳೆ ದೃಢೀಕರಣ ಪತ್ರ. ಪಹಣಿ ಹಾಗೂ ದೃಢೀಕರಣದ ಒಂದು ಮೂಲ ಪ್ರತಿ ಹಾಗೂ ಅದರ ಜೆರಾಕ್ಸ್‌ ಒಂದು ಪ್ರತಿ, ಟಿನ್‌ ನಂಬರ್‌ ಇರುವ ಸಸ್ಯ ಸಂರಕ್ಷಣಾ ಔಷಧಿ ಖರೀದಿಸಿರುವ ಬಿಲ್‌, ಇದರದ್ದೂ ಒಂದು ಮೂಲ ಪ್ರತಿ ಹಾಗೂ ಅದರ ಒಂದು ಜೆರಾಕ್ಸ್‌ ಪ್ರತಿ,  ಐಎಸ್‌ಎಫ್ಸಿ ಕೋಡ್‌ ಹೊಂದಿರುವ ಬ್ಯಾಂಕ್‌ ಪಾಸ್‌ ಪುಸ್ತಕದ ಜೆರಾಕ್ಸ್‌ ಪ್ರತಿ,  ಜಂಟಿ ಖಾತೆ ಇದ್ದಲ್ಲಿ ಮತ್ತೂಬ್ಬರ ಒಪ್ಪಿಗೆ ಪತ್ರ,  ಮತದಾರರ ಗುರುತಿನ ಚೀಟಿ ಜೆರಾಕ್ಸ್‌ ಪ್ರತಿ, ಆಧಾರ್‌ ಕಾರ್ಡ್‌ ಜೆರಾಕ್ಸ್‌ ಪ್ರತಿ ಜೊತೆಗೆ ಅರ್ಜಿಯನ್ನು ಸಲ್ಲಿಸಬೇಕು.

ಇಷ್ಟಕ್ಕೂ ಗುಂಟೆಗೆ ಕೇವಲ 12 ರೂ.ನಷ್ಟನ್ನೇ ಸರ್ಕಾರ ಸಹಾಯಧನದ ರೂಪದಲ್ಲಿ ನೀಡುತ್ತದೆ. ಒಬ್ಬ ಸಾಮಾನ್ಯ ರೈತ ಈ ಎಲ್ಲ ದಾಖಲೆಗಳನ್ನು ಸಂಗ್ರಸಿಕೊಳ್ಳಲು ಕನಿಷ್ಠ ಎರಡು ದಿನಗಳ ನಗರ ಓಡಾಟ ಮಾಡಬೇಕು. ಪಹಣಿಯಲ್ಲಿ ಬೆಳೆ ನಮೂದು ಇಲ್ಲದಿದ್ದರಂತೂ ಅವನ ಪರಿಪಾಟಲು ಶತ್ರುಗಳಿಗೂ ಬೇಡ. ಪಹಣಿಯಲ್ಲಿರುವ ರೈತ ಹಿರಿಯ ನಾಗರಿಕ ಆಗಿದ್ದಲ್ಲಿ ಕಚೇರಿಯಿಂದ ಅರ್ಜಿ ನಮೂನೆ ಪಡೆದು ಮನೆಯಲ್ಲಿರುವ ಹಿರಿಯ ರೈತರ ಸಹಿ ಪಡೆಯುವುದು ಒಂದು ದಿನದ ಕೆಲಸ ಅಲ್ಲ.

ಸರ್ಕಾರ ಮತ್ತು ಅಧಿಕಾರಿಗಳು ಗಮನಿಸಬೇಕಾದ ಹಲವು ವಿಚಾರಗಳಿವೆ. ಕೃಷಿ ಮಾಡಬೇಕಾದ ರೈತ ದಾಖಲೆಗಳಿಗಾಗಿ ಇಲಾಖೆಗಳನ್ನು ಸುತ್ತಾಡಬೇಕಾಗುತ್ತದೆಯೇ? ಹೊಸ ಪಹಣಿ ಎಂದರೆ ಪಹಣಿ ಕೌಂಟರ್‌ ಮುಂದೆ ನಿಂತು ದಿನಗಟ್ಟಲೆ ಕ್ಯೂ ಕಾಯಬೇಕಾಗುತ್ತದೆ. ಅಷ್ಟಕ್ಕೂ ಅದರಲ್ಲಿ ಬೆಳೆ ನಮೂದು ಇಲ್ಲದಿರುವ ಸಾಧ್ಯತೆಯೇ ಹೆಚ್ಚು. ಆಗ ಗ್ರಾಮ ಲೆಕ್ಕಿಗರನ್ನು ಅರಸಿ ಬೆಳೆ ದೃಢೀಕರಣ ಪತ್ರ ಪಡೆಯಬೇಕಾಗುತ್ತದೆ. ಡೆತ್‌ ಸರ್ಟಿಫಿಕೇಟ್‌ಗೆ “ವೈಯುಕ್ತಿಕ ಕಂದಾಯ’ ವಸೂಲು ಮಾಡುವ ಗ್ರಾಮ ಲೆಕ್ಕಿಗ ಇದಕ್ಕೆ ಮಾಮೂಲು ಪಡೆಯದೇ ಇರ್ತಾನಾ? ಅರ್ಜಿ ಸಲ್ಲಿಸಲು ಕೂಡ ಹೆಚ್ಚಿನ ಸಮಯಾವಕಾಶ ಇಡುವುದಿಲ್ಲ. ಆದರೆ ಸಹಾಯಧನ ವಿತರಣೆಯಲ್ಲಿ ಇಲಾಖೆಗೆ ಗಡಿಬಿಡಿ ಇಲ್ಲ. ಪ್ರತಿ ವರ್ಷ ಈ ಸಹಾಯಧನ ಬಂದಿದ್ದು ಅಬ್ಬಬ್ಟಾ ಎಂದರೆ ಆ ವರ್ಷದ ಡಿಸೆಂಬರ್‌ ಅಥವಾ ಮರು ವರ್ಷದಲ್ಲೇ! 2017ರ ಮೈಲುತುತ್ತ ಸಹಾಯಧನ ಇನ್ನೂ ಬಿಡುಗಡೆಯಾಗಿಲ್ಲ!

ಆಧಾರ್‌ ಕಾರ್ಡ್‌ ನಕಲನ್ನೂ ಕೊಟ್ಟ ನಂತರ ಚುನಾವಣಾ ಗುರುತಿನ ಚೀಟಿ ಏಕೆ ಅಗತ್ಯವಾಗುತ್ತದೆ? ಪ್ರತಿ ವರ್ಷ ಬಹುಪಾಲು ಅದೇ ರೈತರು, ಅದೇ ಅರ್ಜಿ, ಅವೇ ದಾಖಲೆಗಳು. ಇಲ್ಲಿ ಮುಖ್ಯವಾಗುವುದು ಕೇವಲ ಆ ವರ್ಷ ಖರೀದಿಸಿದ ಔಷಧ ಸಾಮಗ್ರಿಯ ಅಧಿಕೃತ ಬಿಲ್‌. ಮೈಲುತುತ್ತವನ್ನೇ ಉಲ್ಲೇಖೀಸಿ ಹೇಳುವುದಾದರೆ, ಈ ಕಾಪರ್‌ ಸಲ್ಪೇಟ್‌ ಅಡಿಕೆ ತೋಟಕ್ಕೆ ಮದ್ದು ಹೊಡೆಯುವುದರ ಹೊರತಾಗಿ ಊಟಕ್ಕೆ ನೆಂಜಿಕೊಳ್ಳಲೂ ಬರುವುದಿಲ್ಲ. ರೈತ ಎಂದರೇ ಮೋಸ ಮಾಡುವವನು ಎಂಬ ಮನೋಭಾವ ಇದ್ದರೆ ಮಾತ್ರ ಈ ಪರಿಯ ದಾಖಲೆಗಳನ್ನು ಕೇಳಲು ಸಾಧ್ಯ.

ಈಗಿನ ಎಲ್ಲ ಇಲಾಖೆಗಳು ಕಂಪ್ಯೂಟರೀಕೃತಗೊಂಡಿವೆ. ರೈತ ಸಲ್ಲಿಸಿದ ಅರ್ಜಿ ಜೊತೆಗೆ ಆತನ ಬ್ಯಾಂಕಿಂಗ್‌ ವಿವರ, ಆತನ ಸರ್ವೆ ನಂಬರ್‌ ಸೇರಿದಂತೆ ಹಿಡುವಳಿ ಮಾಹಿತಿ ಕೂಡ ಅಲ್ಲಿ ಲಭ್ಯವಿರುತ್ತದೆ. ರೈತನ ಒಂದು ಅರ್ಜಿ ಹಾಗೂ ಔಷಧದ ಅಧಿಕೃತ ಬಿಲ್‌ ಇಲಾಖೆಗೆ ಸಿಕ್ಕರೆ ಸಾಕು; ತುಂಬಾ ಸುಲಭವಾಗಿ ಸಹಾಯಧನವನ್ನು  ವರ್ಗಾಯಿಸಬಹುದು. ಆದರೆ ಇಲಾಖೆಯಲ್ಲಿರುವ ದುರುಳರು ರೈತರ ಹೆಸರಿನಲ್ಲಿ ತಮ್ಮವರ ಖಾತೆಗೂ ಹಣ ವರ್ಗಾಯಿಸಲು ಹೇಸುವುದಿಲ್ಲ.  ಅವರ ಮೇಲೆ ಸಂಶಯಿಸುವ ಲೆಕ್ಕ ಪರಿಶೋಧಕರು ವಿವರ ಕೇಳುತ್ತಾರೆ. ತಾವು ಬಚಾವಾಗಲು ಈ ಅಧಿಕಾರಿ ವರ್ಗ, ರೈತರಿಂದಲೇ ಎಲ್ಲ ದಾಖಲೆ ಕೇಳುತ್ತದೆ. ಹೀಗಾದಾಗ, ಕೃಷಿ ಮಾಡಬೇಕಾದ ರೈತ, ದಾಖಲೆ ಒದಗಿಸುವುದರಲ್ಲೇ ದಿನ ಕಳೆಯಬೇಕಾಗುತ್ತದೆ. 

ಒಂದು ಗ್ರಾಮದಲ್ಲಿ 30ಕ್ಕೂ ಹೆಚ್ಚು ಬೆಳೆಗಾರರಿದ್ದಾರೆ. ಅವರೆಲ್ಲ ಒಂದೇ ದಿನ ದಾಖಲೆಗಳನ್ನು ತಂದು ಇಲಾಖೆಗೆ ಸಂದಾಯ ಮಾಡಿದರು ಎಂದುಕೊಂಡರೂ 30 ಮಾನವ ದಿನಗಳ ವ್ಯಯವಾಗುತ್ತದೆ. ಅದರ ಬದಲು ಇಲಾಖೆಯ ಓರ್ವ, ಅದೂ ಆ ಭಾಗದ ನಿರ್ವಹಣೆಯ ಜವಾಬ್ದಾರಿ ಹೊತ್ತಾತ ಎಲ್ಲರ ಮನೆಗೆ ತೆರಳಿ ಭರ್ತಿ ಮಾಡಿದ ಅರ್ಜಿ, ದಾಖಲೆ ಪಡೆದರೆ ಒಬ್ಬ ವ್ಯಕ್ತಿ ಒಂದೇ ದಿನದಲ್ಲಿ ಅಷ್ಟೂ ದಾಖಲೆಗಳನ್ನು ಸಂಗ್ರಹಿಸಬಹುದು. ಪಹಣಿ ಮಾಹಿತಿಗಳನ್ನು ಈಗ ಅಂತಜಾìಲದಲ್ಲಿ  bhoomi.karnataka.gov.in ಮೂಲಕ ಈಗ ಯಾರು ಬೇಕಾದರೂ ಪರಿಶೀಲಿಸಬಹುದು. ಅರ್ಜಿಯ ಮಾಹಿತಿ ಆಧರಿಸಿ ಇದನ್ನು ಪರಿಶೀಲಿಸುವುದು ಕೆಲವೇ ಸೆಕೆಂಡ್‌ಗಳ ಕೆಲಸ. ಬಹುಪಾಲು ಕೃಷಿ ಅಧಿಕಾರಿಗಳು ಕೇವಲ ಸಹಾಯಧನ ವಿತರಿಸುವುದಷ್ಟೇ ಇಲಾಖೆ ಕೆಲಸ ಅಂದುಕೊಂಡಿದ್ದಾರೆ. ಹಾಗಾಗಿಯೇ ಅವರಿಗೆ ರೈತರ ಮೇಲಿನ ದಾಖಲೆ ಒತ್ತಡವನ್ನು ಕಡಿಮೆ ಮಾಡಬೇಕು ಎಂದು ಎನಿಸಿಲ್ಲ.

ನಿಜ, ಇಂತಹ ಪ್ರಕರಣಗಳಷ್ಟೇ ರೈತರು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಎಂಬುದು ಅವಸರದ ಮಾತಾದೀತು. ಆದರೆ ಒಂದು ಬೋಡೋì ಸಹಾಯಧನ ಪಡೆಯಲು ದಾಖಲೆಗಳನ್ನು ಒದಗಿಸುವಲ್ಲಿ ಹೈರಾಣಾಗುವ ಕೃಷಿಕ ಮತ್ತೆ ಇನ್ನಿತರ ದೊಡ್ಡ ಮೊತ್ತದ ಸಾಲ, ಸಬ್ಸಿಡಿ ಪಡೆಯುವಾಗ ಇಲಾಖೆಗಳ ಸಹವಾಸ ಬೇಡವೇ ಬೇಡ ಎಂಬ ಮನಸ್ಥಿತಿಗೆ ಬರುತ್ತಾನೆ. ಖಾಸಗಿ ಲೇವಾದೇವಿದಾರರೇ ಆ ಕ್ಷಣಕ್ಕೆ ಇಷ್ಟವಾಗುತ್ತಾರೆ; ಅನಿವಾರ್ಯವಾಗುತ್ತಾರೆ. ದುರಂತವೆಂದರೆ, ಬೆಳೆಗಾರನ ನಿರೀಕ್ಷೆಗಳು ಹುಸಿಯಾಗಿ, ಬೆಳೆಯೋ, ಬೆಲೆಯೋ ಸಿಗದಿದ್ದರೆ ಆ ರೈತ ಸುದ್ದಿಯಾಗಿಬಿಡುತ್ತಾನೆ. ಸರ್ಕಾರ ಮತ್ತೆ ಆರಂಭದಲ್ಲಿ ಹೇಳಿದಂತೆ ಪ್ರಹಸನ ಆರಂಭಿಸುತ್ತದೆ.

-ಮಾ.ವೆಂ.ಸ.ಪ್ರಸಾದ್‌, ದತ್ತಿ ನಿರ್ದೇಶಕರು, ಬಳಕೆದಾರರ ವೇದಿಕೆ, ಸಾಗರ

ಟಾಪ್ ನ್ಯೂಸ್

Maha-Election

Assembly Election: ಮಹಾರಾಷ್ಟ್ರ ಗೆಲ್ಲಲು 10 ಗ್ಯಾರಂಟಿಗಳ ಕೊಟ್ಟ ʼಮಹಾಯುತಿʼ!

HDD–By-election

By Election: ಮುಖ್ಯಮಂತ್ರಿ ಗರ್ವದ ಸೊಕ್ಕು ಮುರಿಯಬೇಕು: ಎಚ್‌.ಡಿ.ದೇವೇಗೌಡ ಗುಡುಗು

ರೈಲು ಬುಕಿಂಗ್‌, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್‌’: ಮುಂದಿನ ತಿಂಗಳು ಬಿಡುಗಡೆ

Super App: ರೈಲು ಬುಕಿಂಗ್‌, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್‌’: ಮುಂದಿನ ತಿಂಗಳು ಬಿಡುಗಡೆ

High-Court

Kambala: ಪೆಟಾ ಪಿಐಎಲ್‌; ವಿಚಾರಣೆ ನ.12ಕ್ಕೆ ಮುಂದೂಡಿದ ಹೈಕೋರ್ಟ್‌

CM-Shiigavi-2

MUDA Case: ಕೇವಲ 14 ಸೈಟ್‌ಗಾಗಿ ನಾನು ರಾಜಕಾರಣ ಮಾಡಬೇಕಾ?: ಸಿಎಂ ಸಿದ್ದರಾಮಯ್ಯ

vidan-soudha-kannada

Golden Jubilee: ಕನ್ನಡವೇ ಅಧಿಕಾರಿಗಳ‌ ಹೃದಯದ ಭಾಷೆ ಆಗಲಿ

KSRTC

Transport: ಕೆಎಸ್ಸಾರ್ಟಿಸಿ ದಾಖಲೆ: ಒಂದೇ ದಿನ 1.23 ಕೋಟಿ ಮಂದಿ ಪ್ರಯಾಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Maha-Election

Assembly Election: ಮಹಾರಾಷ್ಟ್ರ ಗೆಲ್ಲಲು 10 ಗ್ಯಾರಂಟಿಗಳ ಕೊಟ್ಟ ʼಮಹಾಯುತಿʼ!

HDD–By-election

By Election: ಮುಖ್ಯಮಂತ್ರಿ ಗರ್ವದ ಸೊಕ್ಕು ಮುರಿಯಬೇಕು: ಎಚ್‌.ಡಿ.ದೇವೇಗೌಡ ಗುಡುಗು

ರೈಲು ಬುಕಿಂಗ್‌, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್‌’: ಮುಂದಿನ ತಿಂಗಳು ಬಿಡುಗಡೆ

Super App: ರೈಲು ಬುಕಿಂಗ್‌, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್‌’: ಮುಂದಿನ ತಿಂಗಳು ಬಿಡುಗಡೆ

High-Court

Kambala: ಪೆಟಾ ಪಿಐಎಲ್‌; ವಿಚಾರಣೆ ನ.12ಕ್ಕೆ ಮುಂದೂಡಿದ ಹೈಕೋರ್ಟ್‌

CM-Shiigavi-2

MUDA Case: ಕೇವಲ 14 ಸೈಟ್‌ಗಾಗಿ ನಾನು ರಾಜಕಾರಣ ಮಾಡಬೇಕಾ?: ಸಿಎಂ ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.