ಸಕ್ಕಿಂಗ್‌ ಯಂತ್ರ ರಿಪೇರಿಗೂ ನೀತಿ ಸಂಹಿತೆ ಅಡ್ಡಿ


Team Udayavani, Apr 30, 2018, 8:20 AM IST

Suck-Tank-29-4.jpg

ನಗರ: ನಗರಸಭೆಯ ಸಕ್ಕಿಂಗ್‌ ಯಂತ್ರ ಹತ್ತು ದಿನಗಳಿಂದ ಕೆಟ್ಟು ನಿಂತಿದೆ. ಇದರ ರಿಪೇರಿಗೆ ಮುಂದಾದರೆ ಚುನಾವಣಾ ನೀತಿ ಸಂಹಿತೆ ಅಡ್ಡಿ. ಚುನಾವಣೆ ಮುಗಿಯುವವರೆಗೆ ಕಾಯುವ ಪರಿಸ್ಥಿತಿ ಈಗಿಲ್ಲ. ಏಕೆಂದರೆ, ಹಲವಾರು ಕಡೆಗಳಿಂದ ಟಾಯ್ಲೆಟ್‌ ಹೊಂಡ ಖಾಲಿ ಮಾಡಲು ಅರ್ಜಿಗಳು ಬರುತ್ತಿವೆ. ಅತಿ ಅಗತ್ಯ ಕೆಲಸಗಳಿಗೂ ಚುನಾವಣಾ ನೀತಿ ಸಂಹಿತೆ ಅಡ್ಡಿಯಾಗುತ್ತಿದೆೆ. ಅನಿವಾರ್ಯ ಪರಿಸ್ಥಿತಿಗಳಲ್ಲಿ ಒಂದಷ್ಟು ಸಡಿಲಿಕೆ ಬೇಕು ಎಂಬ ಬೇಡಿಕೆ ಕೇಳಿಬರುತ್ತಿದೆೆ. ಇದಕ್ಕೆ ಸಕ್ಕಿಂಗ್‌ ಯಂತ್ರವೂ ಹೊರತಾಗಿಲ್ಲ. ಯಂತ್ರ ರಿಪೇರಿಗೆ ಟೆಂಡರ್‌ ಆಹ್ವಾನಿಸುವುದು ಅನಿವಾರ್ಯ. ಹೀಗೆ ಟೆಂಡರ್‌ ಕರೆಯಲು ನೀತಿ ಸಂಹಿತೆ ಇರುವಾಗ ಸಾಧ್ಯವೇ ಇಲ್ಲ. ಇದಕ್ಕೆ ಪರಿಹಾರ ಬೇಕಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ನಗರಸಭೆಯ ಸಕ್ಕಿಂಗ್‌ ಯಂತ್ರ ದಿನದ ಎಂಟು ಗಂಟೆ ಕೆಲಸ ಮಾಡುತ್ತದೆ. ಈ ಅವಧಿಯಲ್ಲಿ ನಾಲ್ಕಕ್ಕೂ ಹೆಚ್ಚು ಟಾಯ್ಲೆಟ್‌ ಹೊಂಡಗಳನ್ನು ಖಾಲಿ ಮಾಡುತ್ತದೆ. ಇಷ್ಟು ಕೆಲಸವಿರುವ ಸಕ್ಕಿಂಗ್‌ ಯಂತ್ರ ಹಠಾತ್ತಾಗಿ ಕೆಟ್ಟು ನಿಂತರೆ ಪರಿಸ್ಥಿತಿ ಹೇಗಿರಬೇಡ? ಇಂತಹ ಸ್ಥಿತಿ ಪುತ್ತೂರಿನಲ್ಲಿ ನಿರ್ಮಾಣವಾಗಿದೆ.

ಮನುಷ್ಯರ ಮೂಲಕ ಟಾಯ್ಲೆಟ್‌ ಹೊಂಡ ಶುಚಿ ಮಾಡುವ ಕೆಲಸಕ್ಕೆ ನಿರ್ಬಂಧ ಹೇರಿದ ಬಳಿಕ, ಸಕ್ಕಿಂಗ್‌ ಯಂತ್ರಕ್ಕೆ ಭಾರಿ ಬೇಡಿಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಪುತ್ತೂರು ನಗರಸಭೆಯ ಯಂತ್ರವನ್ನು ಪಟ್ಟಣಕ್ಕೆ ಮಾತ್ರ ಸೀಮಿತ ಮಾಡಿಲ್ಲ. ತನ್ನ ವ್ಯಾಪ್ತಿಯಾಚೆಗೆ ಇರುವ ಗ್ರಾಮಾಂತರ ಭಾಗದಿಂದ ಬರುವ ಕರೆಗಳಿಗೂ ಸ್ಪಂದಿಸುತ್ತಿದೆ. ಕುಂಬ್ರ, ವಿಟ್ಲ, ನರಿಮೊಗರು ಭಾಗಗಳ ಟಾಯ್ಲೆಟ್‌ ಹೊಂಡಗಳನ್ನೂ ಶುಚಿ ಮಾಡಿಸುತ್ತಿದೆ. ಇದೀಗ ಇಷ್ಟು ಕಡೆಯ ಟಾಯ್ಲೆಟ್‌ ಹೊಂಡಗಳು ತುಂಬಿವೆ. ತೆರವಿಗೆ ಪರ್ಯಾಯ ವ್ಯವಸ್ಥೆ ಇಲ್ಲ. ಮನೆ ಅಥವಾ ಸಾರ್ವಜನಿಕ ಶೌಚಾಲಯಗಳ ಸುತ್ತ ಮುತ್ತಲಿನ ಜನರು ಮೂಗು ಮುಚ್ಚಿಕೊಳ್ಳಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ.


ತಾ.ಪಂ.ನಲ್ಲೂ ಇದೆ

ವರ್ಷಗಳ ಹಿಂದೆ ನಗರಸಭೆಯ ಸಕ್ಕಿಂಗ್‌ ಯಂತ್ರ ಕೆಟ್ಟು ನಿಂತಿತ್ತು. ಆಗ ತಾಲೂಕು ಪಂಚಾಯತ್‌ನ ಸಕ್ಕಿಂಗ್‌ ಯಂತ್ರವನ್ನು ಎರವಲು ಪಡೆದುಕೊಳ್ಳಲಾಗಿತ್ತು. ಪುತ್ತೂರು ನಗರಸಭೆಯ ಇಂತಹ ತ್ಯಾಜ್ಯವನ್ನು ಬನ್ನೂರಿನ ನೆಕ್ಕಿಲ ಡಂಪಿಂಗ್‌ ಯಾರ್ಡ್‌ನಲ್ಲಿ ಸುರಿಯಲಾಗುತ್ತದೆ. ಆದರೆ ತಾಲೂಕು ಪಂಚಾಯತ್‌ ಗೆ ಪ್ರತ್ಯೇಕ ಡಂಪಿಂಗ್‌ ಯಾರ್ಡ್‌ ಇಲ್ಲದೆ, ಕಳೆದ ಕೆಲ ವರ್ಷಗಳಿಂದ ಸಕ್ಕಿಂಗ್‌ ಯಂತ್ರ ತುಕ್ಕು ಹಿಡಿಯುತ್ತಾ ಬಿದ್ದಿದೆ. ಇದೀಗ ತಾಲೂಕು ಪಂಚಾಯತ್‌ನ ಸಕ್ಕಿಂಗ್‌ ಯಂತ್ರ ಕೆಟ್ಟು ನಿಂತಿದೆ. ಆದ್ದರಿಂದ ನಗರಸಭೆ ಈ ಬಾರಿ ಎರವಲು ಪಡೆಯಲು ಸಾಧ್ಯವಿಲ್ಲ.

ಪರ್ಯಾಯ ಏನು?
ತಾಲೂಕು ಚುನಾವಣಾಧಿಕಾರಿ ಆಗಿರುವ ಸಹಾಯಕ ಆಯುಕ್ತರ ಅನುಮತಿ ಪಡೆದುಕೊಂಡು, ಸಕ್ಕಿಂಗ್‌ ಯಂತ್ರ ರಿಪೇರಿಗೆ ಮುಂದಾಗಬಹುದು. ಈ ಹಿನ್ನೆಲೆಯಲ್ಲಿ ಸಹಾಯಕ ಆಯುಕ್ತರಿಗೆ ನಗರಸಭೆ ಪತ್ರ ಬರೆದಿದ್ದು, ಪ್ರತಿಕ್ರಿಯೆ ನೀಡಿದ್ದಾರೆ. ಜಿಲ್ಲಾಧಿಕಾರಿಗಳ ಅನುಮತಿ ಪಡೆದುಕೊಂಡು, ಮುಂದಿನ ಕ್ರಮ ಕೈಗೊಳ್ಳಿ ಎಂದು ನಿರ್ದೇಶನ ನೀಡಿದ್ದಾರೆ. ಇದೀಗ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ನಗರಾಭಿವೃದ್ಧಿ ಕೋಶಕ್ಕೆ ಪತ್ರ ಬರೆಯಲಾಗಿದೆ. ಯಾವಾಗ ಉತ್ತರ ಬರುತ್ತದೋ ಯಾವಾಗ ಟೆಂಡರ್‌ ಆಹ್ವಾನಿಸುತ್ತಾರೋ ಯಾವಾಗ ತುಂಬಿರುವ ಟಾಯ್ಲೆಟ್‌ಗಳು ಶುಚಿ ಆಗುತ್ತವೋ ಒಂದೂ ಗೊತ್ತಿಲ್ಲ. ಅಷ್ಟು ಹೊತ್ತಿಗೆ ಚುನಾವಣೆ ಮುಗಿದಿದ್ದರೆ, ಮತ್ತೆ ಈ ಅನುಮತಿಗಳ ಆವಶ್ಯಕತೆಯೇ ಇರುವುದಿಲ್ಲ.

ತುರ್ತು ಕೆಲಸಕ್ಕೆ ಅಡ್ಡಿಯಿಲ್ಲ
ತುರ್ತು ಕೆಲಸಗಳಿಗೆ ಟೆಂಡರ್‌ ಕರೆಯಲು ಅನುಮತಿ ನೀಡಲಾಗುವುದು. ನಗರಸಭೆಯಿಂದ ಪತ್ರ ಬಂದ ಕೂಡಲೇ ವ್ಯವಸ್ಥೆ ಮಾಡುತ್ತೇನೆ. ಚುನಾವಣಾ ನೀತಿ ಸಂಹಿತೆ ತುರ್ತು ಕೆಲಸಗಳಿಗೆ ಅಡ್ಡಿ ಉಂಟು ಮಾಡುವುದಿಲ್ಲ. ಆದರೆ ಅದಕ್ಕೆ ಮೊದಲು ಜಿಲ್ಲಾಧಿಕಾರಿ ಅನುಮತಿ ಪಡೆದುಕೊಳ್ಳಬೇಕೆಂಬ ನಿಯಮವಿದೆ.
– ಶಶಿಕಾಂತ್‌ ಸೆಂಥಿಲ್‌, ಜಿಲ್ಲಾಧಿಕಾರಿ, ದ.ಕ.

— ಗಣೇಶ್‌ ಎನ್‌. ಕಲ್ಲರ್ಪೆ

ಟಾಪ್ ನ್ಯೂಸ್

1-blthangady

Belthangady: ಹೆಬ್ಬಾವು ಹಿಡಿದು ವೈರಲ್‌ ಆದ ಕುಪ್ಪೆಟ್ಟಿ ನಿವಾಸಿ ಆಶಾ!

1-gadag

Gadag; ಮೂವರು ಮಕ್ಕಳನ್ನು ನದಿಗೆ ಎಸೆದು ತಾನೂ ಹಾರಿದ ವ್ಯಕ್ತಿ

1-qrrewr

Folk singer; ಪದ್ಮಭೂಷಣ ಪುರಸ್ಕೃತೆ ಶಾರದಾ ಸಿನ್ಹಾ ವಿಧಿವಶ

Maha-Election

Assembly Election: ಮಹಾರಾಷ್ಟ್ರ ಗೆಲ್ಲಲು 10 ಗ್ಯಾರಂಟಿಗಳ ಕೊಟ್ಟ ʼಮಹಾಯುತಿʼ!

HDD–By-election

By Election: ಮುಖ್ಯಮಂತ್ರಿ ಗರ್ವದ ಸೊಕ್ಕು ಮುರಿಯಬೇಕು: ಎಚ್‌.ಡಿ.ದೇವೇಗೌಡ ಗುಡುಗು

ರೈಲು ಬುಕಿಂಗ್‌, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್‌’: ಮುಂದಿನ ತಿಂಗಳು ಬಿಡುಗಡೆ

Super App: ರೈಲು ಬುಕಿಂಗ್‌, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್‌’: ಮುಂದಿನ ತಿಂಗಳು ಬಿಡುಗಡೆ

High-Court

Kambala: ಪೆಟಾ ಪಿಐಎಲ್‌; ವಿಚಾರಣೆ ನ.12ಕ್ಕೆ ಮುಂದೂಡಿದ ಹೈಕೋರ್ಟ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-blthangady

Belthangady: ಹೆಬ್ಬಾವು ಹಿಡಿದು ವೈರಲ್‌ ಆದ ಕುಪ್ಪೆಟ್ಟಿ ನಿವಾಸಿ ಆಶಾ!

ಸಜೀಪಮೂಡ: ಮನೆಗೆ ಸಿಡಿಲು ಬಡಿದು ಹಾನಿ

Bantwal ಸಜೀಪಮೂಡ: ಮನೆಗೆ ಸಿಡಿಲು ಬಡಿದು ಹಾನಿ

Uppinangady: ರಸ್ತೆ ಬದಿ ಬಿದ್ದ ಕಂಟೈನರ್‌ ಲಾರಿ

Uppinangady: ರಸ್ತೆ ಬದಿ ಬಿದ್ದ ಕಂಟೈನರ್‌ ಲಾರಿ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯಕ್ಷಗಾನ ಮಂಡಳಿ: ಪ್ರಸಕ್ತ ಸಾಲಿನ ಸೇವೆಯಾಟ ಆರಂಭ

Shri Dharmasthala: ಮಂಜುನಾಥೇಶ್ವರ ಯಕ್ಷಗಾನ ಮಂಡಳಿ: ಪ್ರಸಕ್ತ ಸಾಲಿನ ಸೇವೆಯಾಟ ಆರಂಭ

Kumbra

Kukke: ಅಭಯ ಆಂಜನೇಯ ಗುಡಿಯಿಂದ ಕಳವು

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

1-blthangady

Belthangady: ಹೆಬ್ಬಾವು ಹಿಡಿದು ವೈರಲ್‌ ಆದ ಕುಪ್ಪೆಟ್ಟಿ ನಿವಾಸಿ ಆಶಾ!

1-gadag

Gadag; ಮೂವರು ಮಕ್ಕಳನ್ನು ನದಿಗೆ ಎಸೆದು ತಾನೂ ಹಾರಿದ ವ್ಯಕ್ತಿ

1-qrrewr

Folk singer; ಪದ್ಮಭೂಷಣ ಪುರಸ್ಕೃತೆ ಶಾರದಾ ಸಿನ್ಹಾ ವಿಧಿವಶ

Maha-Election

Assembly Election: ಮಹಾರಾಷ್ಟ್ರ ಗೆಲ್ಲಲು 10 ಗ್ಯಾರಂಟಿಗಳ ಕೊಟ್ಟ ʼಮಹಾಯುತಿʼ!

HDD–By-election

By Election: ಮುಖ್ಯಮಂತ್ರಿ ಗರ್ವದ ಸೊಕ್ಕು ಮುರಿಯಬೇಕು: ಎಚ್‌.ಡಿ.ದೇವೇಗೌಡ ಗುಡುಗು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.