ಬುದ್ಧ, ಧಮ್ಮ, ಸೃಷ್ಟಿಕರ್ತ ಮತ್ತು ನಿಬ್ಟಾನ 


Team Udayavani, Apr 30, 2018, 3:25 AM IST

budda.jpg

ಧರ್ಮವೆಂದರೆ ಸತ್ಯ ಅಥವಾ ಪ್ರಕೃತಿಯ ನಿಯಮ ಹಾಗೂ ಸಂಘವೆಂದರೆ ಈ ಧರ್ಮವನ್ನು ಅರಿತು ಅಕ್ಷರಶಃ 
ಪಾಲಿಸುವ ಬುದ್ಧನ ಅನುಯಾಯಿಗಳು ಎಂದರ್ಥ. ಜ್ಞಾನೋದಯ ಹೊಂದಿದಾಗ ಬುದ್ಧನು ಕಂಡುಕೊಂಡ ಚತುರಾರ್ಯ ಸತ್ಯಗಳು ನಾಲ್ಕು.

ಕೋಟ್ಯಂತರ ವರ್ಷಗಳ ಹಿಂದೆ ನಮ್ಮ ಜಂಬೂದ್ವೀಪದಲ್ಲಿ ಕಟ್ಟಿಗೆ ಒಡೆದು ತರಕಾರಿ ಬೆಳೆಸುತ್ತ ತನ್ನ ತಾಯಿಯನ್ನು ಸಾಕುತ್ತಿದ್ದ ಜನಸಾಮಾನ್ಯನೊಬ್ಬ ಒಂದು ಸಂದರ್ಭದಲ್ಲಿ ಸಮುದ್ರದಲ್ಲಿ ಮುಳುಗಿ ಸಾಯಲಿದ್ದ ತಾಯಿಯನ್ನು ತನ್ನ ಜೀವದ ಹಂಗು ತೊರೆದು ರಕ್ಷಿಸುತ್ತಾನೆ. ಆ ಸಂದರ್ಭದಲ್ಲಿ ಕೃತಜ್ಞತಾಭಾವದಿಂದ ಆತನ ತಾಯಿ ಮುಂದೊಮ್ಮೆ ಈ ಸಂಸಾರವೆಂಬ ಸಮುದ್ರದಲ್ಲಿ ಮುಳುಗಿ ತೊಳಲಾಡುತ್ತಿರುವ ಕೋಟ್ಯಂತರ ಜೀವಿಗಳನ್ನು ರಕ್ಷಿಸಿ ಜ್ಞಾನೋದಯದ ಹಾದಿ ತೋರುವಂತಹ ಬುದ್ಧನಾಗಿ ಹುಟ್ಟು ಎಂದು ಹೃತೂ³ರ್ವಕವಾಗಿ ಹರಸುತ್ತಾಳೆ. ಮುಂದೆ ಆತ ಕೋಟ್ಯಂತರ ಜನ್ಮಗಳಲ್ಲಿ ಹತ್ತು ಗುಣಗಳನ್ನು (ದಶಪಾರಮಿ) ಸ್ವ ಪ್ರಯತ್ನದಿಂದ ಮೂರು ಸಲ ಪರಿಪೂರ್ಣಗೊಳಿಸಿ ಎರಡೂವರೆ ಸಾವಿರ ವರ್ಷಗಳ ಹಿಂದೆ ಸಿದ್ಧಾರ್ಥನಾಗಿ ಹುಟ್ಟಿ ಕೊನೆಗೆ ವೈರಾಗ್ಯ ತಾಳಿ ಬೋಧಿ ವೃಕ್ಷದ ಬುಡದಲ್ಲಿ ಆನಾಪಾನಾಸತಿ ಹಾಗೂ ವಿಪಸ್ಸನ ಧ್ಯಾನದ ಮೂಲಕ ಜ್ಞಾನೋದಯವನ್ನು ಹೊಂದಿ ಬುದ್ಧನೆಂಬ ಪದವಿಗೇರುತ್ತಾನೆ. ಬುದ್ಧನು ತನ್ನ ಮುಂದಿನ ನಲುವತೈದು ವರ್ಷಗಳ ಪರ್ಯಂತ ಪ್ರಕೃತಿ ನಿಯಮದ ಬಗೆಗೆ ನೀಡಿದ ವಿವರವಾದ ಉಪದೇಶವನ್ನು ಧಮ್ಮ (ಧರ್ಮ)ವೆಂದು ಕರೆಯಲಾಗಿದೆ. ತ್ರಿಶರಣವೆಂಬ ಬುದ್ಧ, ಧಮ್ಮ, ಸಂಘಗಳಲ್ಲಿ ಬುದ್ಧನೆಂದರೆ ಸತ್ಯವನ್ನು ಮೈಗೂಡಿಸಿಕೊಂಡವ (ಹೊತ್ತುಕೊಂಡವ), ಧರ್ಮವೆಂದರೆ ಸತ್ಯ ಅಥವಾ ಪ್ರಕೃತಿಯ ನಿಯಮ ಹಾಗೂ ಸಂಘವೆಂದರೆ ಈ ಧರ್ಮವನ್ನು ಅರಿತು ಅಕ್ಷರಶಃ ಪಾಲಿಸುವ ಬುದ್ಧನ ಅನುಯಾಯಿಗಳು ಎಂದರ್ಥ. ಜ್ಞಾನೋದಯ ಹೊಂದಿದಾಗ ಬುದ್ಧನು ಕಂಡುಕೊಂಡ ಚತುರಾರ್ಯ ಸತ್ಯಗಳು ನಾಲ್ಕು. ಅವೆಂದರೆ ಈ ಸಂಸಾರ (ಮನುಷ್ಯ ಲೋಕವನ್ನು ಸೇರಿ ಮೂವತ್ತೂಂದು ಲೋಕಗಳು) ದುಃಖದಿಂದ ಕೂಡಿವೆ ಎಂಬುದು ಮೊದಲ ಸತ್ಯ. ಈ ದುಃಖಕ್ಕೆ ಕಾರಣವೇ ಆಸೆ ಎಂಬುದು ಎರಡನೆಯ ಸತ್ಯ. ಈ ದುಃಖ ಕೊನೆಗೊಳ್ಳುವ ಸ್ಥಿತಿಯೇ ಮೋಕ್ಷ (ನಿಬ್ಟಾನ) ಎಂಬುದು ಮೂರನೇ ಸತ್ಯ. ಈ ಮೋಕ್ಷವನ್ನು ಸಾಧಿಸಲು ಅನುಸರಿಸಬೇಕಾದ ದಾರಿಯಾದ “ಅಷ್ಟಾಂಗ ಮಾರ್ಗವೇ’ ನಾಲ್ಕನೆಯ ಸತ್ಯ. ಅಷ್ಟಾಂಗ ಮಾರ್ಗವನ್ನು ಶೀಲ, ಸಮಾಧಿ ಮತ್ತು ಪ್ರಜ್ಞದ ಮೂಲಕ ಬುದ್ಧನು ವಿವರಿಸುತ್ತಾನೆ. ಮನುಷ್ಯನು ಹುಟ್ಟಿದ ಜಾತಿಗೂ ಪ್ರಕೃತಿ ನಿಯಮವಾದ ಧರ್ಮಕ್ಕೂ ಯಾವ ಸಂಬಂಧವೂ ಇಲ್ಲವೆನ್ನುವ ಬುದ್ಧನ ಬೋಧನೆ ಈಗ ಅತ್ಯಂತ ಪ್ರಸ್ತುತ.

ಪಂಚಶೀಲದ ರಕ್ಷಣೆ
ಜ್ಞಾನೋದಯಕ್ಕೆ ಪ್ರಾರಂಭಿಕ ತಯಾರಿಯಾದ ಸುಳ್ಳು ಹೇಳದಿರುವುದು, ಕದಿಯದಿರುವುದು, ಪ್ರಾಣಿ ಹಿಂಸೆ ಹಾಗೂ ಹತ್ಯೆಯನ್ನು ಮಾಡದಿರುವುದು, ಲೈಂಗಿಕ ಪರಿಶುದ್ಧತೆಯನ್ನು ಕಾಪಾಡುವುದು ಹಾಗೂ ಮದ್ಯ ಮತ್ತು ಮಾದಕ ದ್ರವ್ಯಗಳ ಸೇವನೆಯನ್ನು ವರ್ಜಿಸುವುದು ಇವುಗಳ ಆಚರಣೆಯನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿರುವವರ ರಕ್ಷಣೆಯ ಕರ್ತವ್ಯವನ್ನು ಪ್ರಕೃತಿಯು ಧರ್ಮ ರಕ್ಷಕ ದೇವತೆಗಳ ಮೂಲಕ ಚಾಚೂ ತಪ್ಪದೆ ನೆರವೇರಿಸುವ ಸತ್ಯ ವಿಷಯ ಬುದ್ಧನು ವಿವರಿಸಿರುವ ಪರಿ ಪಂಚಶೀಲ ಪಾಲನೆ ಮಾಡುವವರೆಲ್ಲರೂ ನೆಮ್ಮದಿಯಿಂದ ನಿರಾತಂಕವಾಗಿ ಬದುಕಲು ಪ್ರೇರೇಪಿಸುತ್ತದೆ. ತ್ರಿಪಿಟಕದಲ್ಲಿ ಈ ಧರ್ಮ ರಕ್ಷಕ ದೇವತೆಗಳು ಪ್ರತೀ ಹುಣ್ಣಿಮೆ, ಅಮವಾಸ್ಯೆ, ಪಂಚಮಿ ಹಾಗೂ ಚತುರ್ದಶಿಯ ದಿನಗಳಂದು ರಾತ್ರಿ ಭೂಮಿಯನ್ನು ಸಂದರ್ಶಿಸಿ ಪಂಚಶೀಲವನ್ನು ಪಾಲಿಸುತ್ತಿರುವವರಿಗೆ ನಿರಂತರ ರಕ್ಷಣೆ ಹಾಗೂ ಅವರ ವರದಿಯನ್ನು ಚತುರ್ಮಹಾರಾಜಿಕರೆಂದು ಕರೆಯಲ್ಪಡುವ ಧರ್ಮ ದೇವತೆಗಳಿಗೆ ಒಪ್ಪಿಸುವ ಕ್ರಮ ಕೂಲಂಕುಷವಾಗಿ ವಿವರಿಸಲ್ಪಟ್ಟಿದೆ.

ವರ್ತಮಾನದ ನಡತೆ ಭವಿಷ್ಯವನ್ನು ರೂಪಿಸುತ್ತದೆ
ಬುದ್ಧನ ಧ್ಯೇಯ ವಾಕ್ಯವೆನ್ನಿಸಿದ ವ್ಯಕ್ತಿಯ ಭವಿಷ್ಯತ್ತನ್ನು ರೂಪಿಸುವುದು ಆತನ ವರ್ತಮಾನಕಾಲದ ನಡತೆ ಎಂಬುದು ಅತ್ಯಂತ ಪ್ರಾಮುಖ್ಯವೆನಿಸಿದ್ದು, ಮನುಷ್ಯನನ್ನು ವರ್ತಮಾನ ಕಾಲಕ್ಕೆ ಎಳೆದು ತರುತ್ತದೆ. ವ್ಯಕ್ತಿಯು ವರ್ತಮಾನ ಕಾಲದಲ್ಲಿ ಶುದ್ಧ ಮನಸ್ಸಿನಿಂದ ಕೂಡಿದ್ದು, ಒಂದು ಒಳ್ಳೆಯ ಉದ್ದೇಶವನ್ನಿಟ್ಟುಕೊಂಡು ಆ ಸದುದ್ದೇಶದ ಈಡೇರಿಕೆಗಾಗಿ ನಿರಂತರ ನಿಸ್ವಾರ್ಥ ಪ್ರಯತ್ನವನ್ನು ಮಾಡುತ್ತಲಿದ್ದರೆ ಅವನ ಇಡೀ ಜೀವಮಾನವೇ ಸಾರ್ಥಕ. ಏಕೆಂದರೆ ಭವಿಷ್ಯತ್‌ ಕಾಲವು ವರ್ತಮಾನ ಕಾಲಕ್ಕೆ ಬಂದೇ ಭೂತಕಾಲಕ್ಕೆ ಸೇರುತ್ತದೆಯಾದುದರಿಂದ ವರ್ತಮಾನ ಕಾಲವನ್ನು ವ್ಯರ್ಥಮಾಡದಿರೆಂಬ ಬುದ್ಧನ ಅಮರವಾಣಿಯು ಮನುಷ್ಯನ ಜೀವನದ ಪಥವನ್ನು ಸರಿಯಾದ ದಿಕ್ಕಿನಲ್ಲಿ ಸಾಗಿಸುತ್ತದೆ. 

ಗತಿ ನಿರ್ಣಯ
ಮನುಷ್ಯನ ಲೋಭ, ಮೋಹ (ಅಜ್ಞಾನ) ಮತ್ತು ದ್ವೇಷ ಹಾಗೂ ಮಿಥ್ಯಾ ದೃಷ್ಟಿಯು ಆತನಿಗೆ ಭವಿಷ್ಯದಲ್ಲಿ ದುರ್ಗತಿಯನ್ನು, ಅಲೋಭ ( ದಾನ), ಅಮೋಹ (ಪ್ರಜ್ಞೆ) ಮತ್ತು ಅದ್ವೇಷ (ಮೈತ್ರಿ)ಗಳು ಸುಗತಿಯನ್ನೂ ದೊರಕಿಸುತ್ತದೆ. ಅಂದರೆ ಅತಿಯಾದ ಲೋಭದಿಂದ ಪ್ರೇತಲೋಕದಲ್ಲೂ, ಅತಿಯಾದ ದ್ವೇಷದಿಂದ ನಿರಾಯ (ನರಕ)ದಲ್ಲೂ, ಅತಿಯಾದ ಮೋಹದಿಂದ ಪ್ರಾಣಿ ಲೋಕದಲ್ಲೂ ಜನಿಸುವಂತೆ ಮಾಡುತ್ತವೆ. ಲೋಭ, ಮೋಹ, ದ್ವೇಷ ಹಾಗೂ ದಾನ, ಮೈತ್ರಿ ಮತ್ತು ಪ್ರಜ್ಞಗಳ ವಿವಿಧ ಪ್ರಮಾಣದ ಮಿಶ್ರಣಗಳಿಂದಾಗಿ ಮನುಷ್ಯ ಲೋಕದ ವಿವಿಧ ಸ್ತರಗಳಲ್ಲಿ ಜನಿಸುವಂತಾಗುತ್ತದೆ. ಹಾಗೆಯೇ ನಿರಂತರ ದಾನದಿಂದ ದೇವಲೋಕದಲ್ಲೂ, ಪರಿಶುದ್ಧವಾದ ಮೈತ್ರಿಭಾವನೆಯಿಂದ ಬ್ರಹ್ಮಲೋಕದಲ್ಲಿ ಜನಿಸುವಂತೆಯೂ, ಪರಿಶುದ್ಧ ಪ್ರಜ್ಞದಿಂದ ಜ್ಞಾನೋದಯದೆಡೆಗೂ ಜೀವಿಯನ್ನೂ ಮುಂದುವರಿಯುವಂತೆ ಮಾಡುತ್ತದೆ. ಆದುದರಿಂದ ಲೋಭ, ಮೋಹ, ದ್ವೇಷ ಮತ್ತು ಮಿಥ್ಯಾ ದೃಷ್ಟಿಗಳನ್ನು ಜಯಿಸುವ ಮಾರ್ಗವೇ ಮೋಕ್ಷದ ಮಾರ್ಗವೆಂದು ಬುದ್ಧ ವಿವರಿಸುತ್ತಾನೆ. ಬುದ್ಧನು ವಿವರಿಸುವ ಧರ್ಮ ಅಥವಾ ಪ್ರಕೃತಿ ನಿಯಮವು (ಐದು ನಿಯಮಗಳಿಂದ ಕೂಡಿದ್ದು) ಋತು ನಿಯಮ, ಬೀಜ ನಿಯಮ, ಚಿತ್ತ ನಿಯಮ, ಕರ್ಮ ನಿಯಮ ಮತ್ತು ಧರ್ಮ ನಿಯಮಗಳೆಂಬ ಇವುಗಳು ಯಾವ ಬಾಹ್ಯ ಶಕ್ತಿಯ ನಿಯಂತ್ರಣಕ್ಕೂ ಒಳಪಡದ ಹಾಗೂ ತಮ್ಮಷ್ಟಕ್ಕೆ ತಾವೇ ಕಾರ್ಯವೆಸಗುವ ನಿಯಮಗಳು. ಇವು ಅತ್ಯಂತ ಕರಾರುವಕ್ಕಾಗಿ ನಿರಾತಂಕವಾಗಿ ಯಾವ ಸೃಷ್ಟಿಕರ್ತನ ಅಗತ್ಯವೂ ಇಲ್ಲದೆ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತವೆ.

ಅನತ್ತ ಲಖVನ ಸೂತ್ರ
ಬುದ್ಧನು ಅತ್ಯಂತ ಪ್ರಮುಖ ಹಾಗೂ ಕ್ರಾಂತಿಕಾರಿ ಉಪದೇಶವಾದ ಅನತ್ತ ಲಖVನ ಸೂತ್ರದಲ್ಲಿ ಜೀವಿಗಳೆಲ್ಲರೂ ಬಲವಾಗಿ ನಂಬಿರುವ ಆತ್ಮ ಹಾಗೂ ಸೃಷ್ಟಿಕರ್ತ ಇವೆರಡರ ಅನುಪಸ್ಥಿತಿ (ಇಲ್ಲದಿರುವಿಕೆ)ಯನ್ನು ವಿವರಿಸಿದಾಗ ಈ ಉಪದೇಶದ ಅರಿವು ಮೂಡಿದ ತಕ್ಷಣ ಬುದ್ಧನ ಪ್ರಥಮ ಐವರು ಶಿಷ್ಯಂದಿರು ಜ್ಞಾನೋದಯ ಹೊಂದುತ್ತಾರೆ. ತ್ರಿಪಿಟಕದಲ್ಲಿ ವಿವರಿಸಿರುವಂತೆ ಈ ವಿಶ್ವ ಒಮ್ಮೆಗೆ ಕೋಟ್ಯಂತರ ಕಾಮಲೋಕದ ದೇವತೆಗಳನ್ನು ಹಾಗೂ ಮಿಲಿಯಾಂತರ ರೂಪಲೋಕದ ಬ್ರಹ್ಮರುಗಳನ್ನು ಹೊಂದಿರಲು ಸಾಧ್ಯ. ಆದರೆ ಈ ವಿಶ್ವವು ಒಮ್ಮೆಗೆ ಒಬ್ಬ ಸಮ್ಮಾಸಂಬುದ್ಧನನ್ನು ಮಾತ್ರ ಹೊಂದಲು ಸಾಧ್ಯ. ಅದು ಕೋಟ್ಯಂತರ ವರ್ಷಗಳ ಅವಿರತ ಪ್ರಯತ್ನದಿಂದ ಒಬ್ಬ ಸಮ್ಮಾಸಂಬುದ್ಧನು ಉದಿಸುತ್ತಾನೆಂದರೆ ಬುದ್ಧನ ಊಹಾತೀತ ಹಾಗೂ ಅಸಾಧಾರಣ ವ್ಯಕ್ತಿತ್ವದ ಪರಿಚಯವಾಗುತ್ತದೆ. ಜ್ಞಾನೋದಯ ಹೊಂದದ ಅಸಂಖ್ಯಾತ ದೇವತೆಗಳು ಹಾಗೂ ರೂಪಲೋಕದ ಬ್ರಹ್ಮರುಗಳು ಬೆಳಗಿನ ಜಾವ ಎರಡರಿಂದ ನಾಲ್ಕು ಗಂಟೆಯ ನಿಗದಿತ ಸಮಯದಲ್ಲಿ ಗೌತಮ ಬುದ್ಧನ ದರ್ಶನ ಪಡೆದು ಧರ್ಮದ ಬಗ್ಗೆ ಮಾಹಿತಿ ಪಡೆಯುತ್ತಿದ್ದ ಉದಾಹರಣೆಗಳು ತ್ರಿಪಿಟಕದಲ್ಲಿ ಉಲ್ಲೇಖೀಸಲ್ಪಟ್ಟಿದೆ. ರಾತ್ರಿ ವೇಳೆಯಲ್ಲಿ ಬ್ರಹ್ಮಾದಿ ದೇವತೆಗಳ ಆಗಮನದ ಸಮಯದಲ್ಲಿ ಅವರ ದೇಹದಿಂದ ಹೊರಸೂಸುವ ಪ್ರಚಂಡ ಬೆಳಕಿನಿಂದ ಆ ಪ್ರದೇಶವೆಲ್ಲ ಹಗಲಿನಂತೆ ಬೆಳಗುತ್ತಿದ್ದುದನ್ನು ಜನಸಾಮಾನ್ಯರು ಆಶ್ಚರ್ಯಚಕಿತರಾಗಿ ವೀಕ್ಷಿಸುತ್ತಿದ್ದ ದಾಖಲೆಗಳು ತ್ರಿಪಿಟಕದಲ್ಲಿ ಸಿಗುತ್ತದೆ. 

ಬುದ್ಧನ ಉಪದೇಶದ ಹಿರಿಮೆಯನ್ನು ಮನಗಂಡ ಸ್ವತಂತ್ರ ಭಾರತದ ಹಿರಿಯರು ನಮ್ಮ ರಾಷ್ಟ್ರ ಧ್ವಜದಲ್ಲೇ ಬುದ್ಧನ ಉಪದೇಶದ ಸಾರವಾದ ಪಟಿಚ್ಚ ಸಮುಪ್ಪಾದ ಮತ್ತು ಪತ್ತಾನ ನ್ಯಾಯಗಳಲ್ಲಿ ವಿವರಿಸಿದ ಮನಸ್ಸಿನ ಇಪ್ಪತ್ತನಾಲ್ಕು ಪರಿಸ್ಥಿತಿಗಳ ಪ್ರತೀಕವಾದ (ಅಶೋಕ) ಚಕ್ರ ಹಾಗೂ ಚತುರಾರ್ಯ ಸತ್ಯವನ್ನು ಸಾರುವ ನಾಲ್ಕು ಸಿಂಹಗಳ ಮುಖಗಳ ರಾಜಲಾಂಛನವನ್ನು ಚಿರಸ್ಥಾಯಿಯಾಗಿಸಿರುವರು. ಈ ಜಗತ್ತು ಬುದ್ಧನ ಉಪದೇಶವನ್ನು ಅರ್ಥಮಾಡಿಕೊಂಡು ಶಾಂತಿಯಿಂದ ಜೀವನ ಸಾಗಿಸುವಷ್ಟು ಪ್ರಜ್ಞಾವಂತರಾದರೆ ವಿಶ್ವದಲ್ಲಿ ಸಾರ್ವತ್ರಿಕ ಸುಭಿಕ್ಷೆಯುಂಟಾದೀತು.

– ಡಾ| ಎಂ. ವಿ. ಶೆಟ್ಟಿ 

ಟಾಪ್ ನ್ಯೂಸ್

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-jama

Yakshagana; ಮೇಳದ ಯಜಮಾನಿಕೆ ಎಂದರೆ ಆನೆ ಸಾಕಿದ ಹಾಗೆ

9-yoga

Sattvic Diet: ಪರೀಕ್ಷಾ ಒತ್ತಡ ನಿವಾರಣೆ ಯೋಗ, ಸಾತ್ವಿಕ ಆಹಾರದ ಸರಳ ಸೂತ್ರಗಳು

8-bagappa

Bagappa Harijan: ಭೀಮಾ ತೀರದಲ್ಲಿ ಮತ್ತೆ ರಕ್ತದ ಹನಿ

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.