ಕೆರೆಕಾಡು: ಯಕ್ಷಕಲಾ ತಂಡದ ಮಕ್ಕಳ ಮೇಳದ ದಶಸಂಭ್ರಮ
Team Udayavani, Apr 30, 2018, 12:48 PM IST
ಕೆರೆಕಾಡು: ಯಕ್ಷಗಾನದಲ್ಲಿ ಬದಲಾವಣೆ ಬೇಕು ಆದರೇ ಕಲೆಯನ್ನು ಅಶ್ಲೀಲವಾಗಿ ಬಳಸಿ ಕೊಲೆಯನ್ನು ಸ್ವತಃ ಕಲೆಗಾರರೇ ಮಾಡುತ್ತಿರುವುದು ಸರಿಯಲ್ಲ. ಸಿನಿಮಾ ಗೀತೆಯನ್ನು ಅಳವಡಿಸಿ ಯಕ್ಷಗಾನದ ಮೂಲಕ್ಕೆ ಧಕ್ಕೆ ತರುವುದನ್ನು ಸಾಮೂಹಿ ಕವಾಗಿ ನಿಷೇಧಿಸಬೇಕು ಎಂದು ಬಾರ್ಕೂರು ಮಹಾಸಂಸ್ಥಾನಮ್‌ನ ಡಾ| ವಿಶ್ವ ಸಂತೋಷ್ ಭಾರತೀ ಸ್ವಾಮೀಜಿ ಹೇಳಿದರು. ಎಸ್.ಕೋಡಿಯ ಷಣ್ಮುಖ ನಗರದಲ್ಲಿ ಕೆರೆಕಾಡು ಶ್ರೀ ವಿನಾಯಕ ಯಕ್ಷಕಲಾ ತಂಡದ ಮಕ್ಕಳ ಮೇಳದ ದಶಸಂಭ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಿಷ್ಟ ಪರಂಪರೆಯ ನವರಸ ಭರಿತ ಕಲೆಯಾಗಿರುವ ಯಕ್ಷಗಾನಕ್ಕೆ ಮತ್ತೂಂದು ಸಮಾನತೆಯ ಕಲೆಯಿಲ್ಲ ಇಂತಹ ಯಕ್ಷಗಾನವನ್ನು ನೋಡುವ ಸಂಖ್ಯೆ ಕ್ಷೀಣವಾಗುತ್ತಿದೆ. ಪರಂಪರೆಯ ವೇಷ ಭೂಷಣಗಳು ಮರೆಯಾಗುತ್ತಿದೆ. ಅಶ್ಲೀಲತೆ, ಅಂಗ ಚಲನೆಯ ಹಾಸ್ಯ ಒಳಹೊಕ್ಕಿ ಧಕ್ಕೆ ತರುತ್ತಿದೆ ಎಂದರು.
ಕಸಾಪದ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿದ್ದರು. ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್‌ನ ಮಾತಾನಂದಮಯಿ ಆಶೀರ್ವಚನ ನೀಡಿ, ಹಿರಿಯರ ಸಾಂಸ್ಕೃತಿಕ ಪರಂಪರೆಯನ್ನು ಮುಂದಿನ ಜನಾಂಗಕ್ಕೆ ತಲುಪಿಸುವ ಜವಾಬ್ದಾರಿಗೆ ಯಕ್ಷಗಾನವು ವೇದಿಕೆಯಾಗಲಿ ಎಂದರು.
ಗೌರವಾರ್ಪಣೆ
ಮೇಳದ ಪ್ರಮುಖರಾದ ಉಮೇಶ್ ಜೆ. ಆಚಾರ್ಯ, ಅಭಿಜಿತ್ ಕೆರೆಕಾಡು, ತಾರಾನಾಥ ಶೆಟ್ಟಿಗಾರ್, ಅಶೋಕ್, ಗಣೇಶ್ ಬಂಗೇರ, ರಾಮಪ್ರಕಾಶ, ಶ್ರೀಪತಿ ನಾಯಕ್, ಕಾವ್ಯಶ್ರೀ ಅಜೇರು, ಪ್ರೇಮಲತಾ ಅಮೀನ್, ಸಂಧ್ಯಾ ಆಚಾರ್ಯ, ರೇಷ್ಮಾ ಜಿ. ಬಂಗೇರ ಅವರನ್ನು ಗೌರವಿಸಲಾಯಿತು.
ಕಿನ್ನಿಗೋಳಿ ಯುಗಪುರುಷದ ಕೆ. ಭುವನಾಭಿರಾಮ ಉಡುಪ, ಮೂಡ ಬಿದಿರೆಯ ಇನ್ನರ್‌ವೀಲ್ ಅಧ್ಯಕ್ಷ ಜಯಶ್ರೀ ಅಮರನಾಥ ಶೆಟ್ಟಿ, ಉದ್ಯಮಿ ಪಟೇಲ್ ವಾಸುದೇವ ರಾವ್ ಪುನರೂರು, ನಿಡ್ಡೋಡಿ ಜ್ಞಾನರತ್ನ ಎಜುಕೇಶನ್ ಮತ್ತು ಚಾರಿಟೆಬಲ್ ಟ್ರಸ್ಟ್ನ ಅಧ್ಯಕ್ಷ ಭಾಸ್ಕರ್ ದೇವಸ್ಯ, ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ ಪುನರೂರು, ಕಿನ್ನಿಗೋಳಿ ಸ್ವಾಮೀ ವಿವೇಕಾನಂದ ಸೇವಾ ಸಂಸ್ಥೆಯ ಪ್ರವರ್ತಕ ನಿಡ್ಡೋಡಿ ಚಾವಡಿಮನೆ ಜಗನ್ನಾಥ ಶೆಟ್ಟಿ, ಮೇಳದ ಮುಂಬಯಿ ಸಮಿತಿಯ ಕಿಶೋರ್ ಕೋಟ್ಯಾನ್, ಕಿನ್ನಿಗೋಳಿ ಲಯನ್ಸ್ ಕ್ಲಬ್‌ನ ಅಧ್ಯಕ್ಷೆ ಶಾಂಭವಿ ಶೆಟ್ಟಿ ಮುಚ್ಚಾರು, ಯಕ್ಷ ಕೌಮುದಿ ಮಹಿಳಾ ಸಂಘದ ಅಧ್ಯಕ್ಷೆ ಪ್ರಜ್ಞಾ ದೀಪಕ್, ಮೇಳದ ಗೌರವಾಧ್ಯಕ್ಷ ಜೈಕೃಷ್ಣ ಕೋಟ್ಯಾನ್, ಉಪಾಧ್ಯಕ್ಷ ಉಮೇಶ್ ಜೆ. ಅಚಾರ್ಯ, ಕಾರ್ಯದರ್ಶಿ ರೇಷ್ಮಾ ಜಿ. ಬಂಗೇರ, ಸಹ ಕಾರ್ಯದರ್ಶಿ ಸಂಧ್ಯಾ ಆಚಾರ್ಯ, ಕೋಶಾಧಿ ಕಾರಿ ಪ್ರೇಮಲತಾ ಜೆ. ಅಮೀನ್ ಉಪಸ್ಥಿತರಿದ್ದರು.
ಮೇಳದ ಅಧ್ಯಕ್ಷ ಜಯಂತ್ ಅಮೀನ್ ಸ್ವಾಗತಿಸಿ, ಪ್ರಸ್ತಾವನೆಗೈದರು. ಯಕ್ಷಕೌಮುದಿ ಕಲಾ ಸಂಘದ ಅಧ್ಯಕ್ಷ ಡಾ| ಕಿಶೋರ್ ಕುಮಾರ್ ರೈ ಶೇಣಿ ಪರಿಚಯಿಸಿದರು. ಉಪಾಧ್ಯಕ್ಷ ಉಮೇಶ್ ಜೆ. ಆಚಾರ್ಯ ವಂದಿಸಿದರು.
ಸಮ್ಮಾನ
ಈ ಸಂದರ್ಭದಲ್ಲಿ ಗಣೇಶ್ ಕೊಲಕಾಡಿ, ಮಾಂಬಾಡಿ ಸುಬ್ರಹ್ಮಣ್ಯ ಭಟ್, ಪ್ರಸಾದ್ ಚೇರ್ಕಾಡಿ, ದಿವಾಕರ ದಾಸ್, ದಿನೇಶ್ ಶೆಟ್ಟಿ ಕಾವಳಕಟ್ಟೆ, ಮೋಹನ್ ಆಚಾರ್ಯ, ರವಿರಾಜ್ ಭಟ್ ಹಳೆಯಂಗಡಿ ಅವರನ್ನು ಸಮ್ಮಾನಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Jasprit Bumrah ನಾಯಕತ್ವದ ಜವಾಬ್ದಾರಿಯನ್ನು ಆನಂದಿಸುತ್ತಾರೆ: ರವಿಶಾಸ್ತ್ರಿ
Lebanon; ಇಸ್ರೇಲ್, ಹೆಜ್ಬುಲ್ಲಾ ಕದನ ವಿರಾಮಕ್ಕೆ ಒಪ್ಪಿಗೆ: ಯುಎಸ್ ಸಮನ್ವಯ
Bengaluru; ಪಾರ್ಕ್ ಗಳಲ್ಲಿ ನಾಯಿ ಮಲ ವಿಸರ್ಜಿಸಿದ್ರೆ ಮಾಲಿಕರಿಗೆ ದಂಡ: ಹೈಕೋರ್ಟ್
BJP Internal Dispute: ಶಾಸಕ ಬಸನಗೌಡ ಯತ್ನಾಳ್ ವಿವಾದ ಇತ್ಯರ್ಥಕ್ಕೆ ಡಿ.9ರ ಗಡುವು
Constitution Day: ಉಡುಪಿ ಪೇಜಾವರ ಶ್ರೀ ಮನುಸ್ಮೃತಿ ಪ್ರತಿಪಾದಕರು: ಸಿಎಂ ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.