ಮೋದಿ ಉಡುಪಿ ಆಗಮನ ಹಿನ್ನೆಲೆ ಸಂಚಾರ ಬದಲಾವಣೆ


Team Udayavani, Apr 30, 2018, 1:50 PM IST

modi-1.jpg

ಉಡುಪಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಆಗಮನ, ಎಂಜಿಎಂ ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳುವ ಹಿನ್ನೆಲೆಯಲ್ಲಿ ಮೇ 1ರಂದು ಉಡುಪಿಯಲ್ಲಿ ವಾಹನ ಸಂಚಾರ ಮಾರ್ಗ ಬದಲಾವಣೆ ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಮೇ 1ರಂದು ಮಧ್ಯಾಹ್ನ 12 ಗಂಟೆಯಿಂದ ಕಾರ್ಯಕ್ರಮ ಮುಕ್ತಾಯದ ವರೆಗೂ ಈ ಆದೇಶ ಜಾರಿಯಲ್ಲಿರುತ್ತದೆ. 
- ಕಾರ್ಕಳ, ಹೆಬ್ರಿ, ಮಣಿಪಾಲ ಕಡೆಯಿಂದ ಉಡುಪಿಗೆ ಬರುವ ಎಲ್ಲ ಘನ ವಾಹನಗಳು ಇಂದ್ರಾಳಿ ಜಂಕ್ಷನ್‌ ಸೇತುವೆ ಬಳಿ ಯು- ಟರ್ನ್ ಪಡೆದು ಮರಳಬೇಕು.

- ಮಣಿಪಾಲದಿಂದ ಉಡುಪಿಗೆ ಬರುವ ಲಘು ವಾಹನಗಳು ಇಂದ್ರಾಳಿ, ಬುಡ್ನಾರು – ಬೀಡಿನಗುಡ್ಡೆ – ಮಿಷನ್‌ ಕಾಂಪೌಂಡ್‌ ಮಾರ್ಗವಾಗಿ ಉಡುಪಿಗೆ ಬರಬೇಕು.

- ಮಂಗಳೂರಿನಿಂದ ಉಡುಪಿಗೆ ಬರುವ ಎಲ್ಲ ಬಸ್‌ ಹಾಗೂ ವಾಹನ ಗಳು ಅಂಬಲಪಾಡಿ, ಅಜ್ಜರಕಾಡು, ಜೋಡುಕಟ್ಟೆಗೆ ಬಂದು ಕಿನ್ನಿಮೂಲ್ಕಿ – ಬಲಾಯಿಪಾದೆ ಮಾರ್ಗವಾಗಿ ಮಂಗಳೂರಿಗೆ ಹಿಂದಿರುಗಬೇಕು.

- ಮಲ್ಪೆಯಿಂದ ಉಡುಪಿಗೆ ಬರುವ ಎಲ್ಲ ಬಸ್‌ ಹಾಗೂ ವಾಹನಗಳು ಕಲ್ಮಾಡಿಯಾಗಿ ಅಂಬಲಪಾಡಿ- ಅಜ್ಜರ ಕಾಡು-ಜೋಡುಕಟ್ಟೆಗೆ ಬಂದು ಅಲ್ಲಿಂದ ಕಿನ್ನಿಮೂಲ್ಕಿ ಮುಖಾಂತರ ಮಲ್ಪೆಗೆ ಹಿಂದಿರುಗಬೇಕು.

- ಅಂಬಾಗಿಲಿನಿಂದ ಉಡುಪಿಗೆ ಬರುವ ಎಲ್ಲ ಬಸ್‌ ಹಾಗೂ ವಾಹನ ಗಳು ಗುಂಡಿಬೈಲು ರಸಿಕ ಬಾರ್‌ ಜಂಕ್ಷನ್‌ ನಿಂದಲೇ ಯು ಟರ್ನ್ ಪಡೆದು ವಾಪಸಾಗಬೇಕು.

- ಕುಂದಾಪುರ ಕಡೆಯಿಂದ ಉಡುಪಿಗೆ ಆಗಮಿಸುವ ಬಸ್‌ ಹಾಗೂ ಇತರ ವಾಹನಗಳು ಕರಾವಳಿಗೆ ಬಂದು ಶಾರದಾ ಹೋಟೆಲ್‌ ಬಳಿಯೇ ಯು ಟರ್ನ್ ಪಡೆದು ವಾಪಸಾಗಬೇಕು.

ಇತರ ಮಾರ್ಗ ಬದಲಾವಣೆ
- ಮಣಿಪಾಲ ಟೈಗರ್‌ ಸರ್ಕಲ್‌- ಅಲೆವೂರು- ಕುಕ್ಕಿಕಟ್ಟೆ- ಬೀಡಿನಗುಡ್ಡೆ ಅಥವಾ ಕೊರಂಗ್ರಪಾಡಿ ಜಂಕ್ಷನ್‌- ರಾ. ಹೆದ್ದಾರಿ

- ಸಿಂಡಿಕೇಟ್‌ ಜಂಕ್ಷನ್‌ – ಡಿಸಿ ಆಫೀಸ್‌ ಜಂಕ್ಷನ್‌-ಪೆರಂಪಳ್ಳಿ-ಅಂಬಾಗಿಲು

- ಅಂಬಲಪಾಡಿ-ಜೋಡುಕಟ್ಟೆ – ಕಿನ್ನಿಮೂಲ್ಕಿ- ಬಲಾಯಿಪಾದೆ

- ಅಂಬಾಗಿಲು-ಪೆರಂಪಳ್ಳಿ ಕ್ರಾಸ್‌-ಮಣಿಪಾಲ

- ಮಲ್ಪೆ- ಸಿಟಿಜನ್‌ ಸರ್ಕಲ್‌- ಆಶೀರ್ವಾದ್‌ ಜಂಕ್ಷನ್‌- ಸಂತೆಕಟ್ಟೆ

- ಮಲ್ಪೆ- ಕಲ್ಮಾಡಿ- ಕಿದಿಯೂರು- ಅಂಬಲಪಾಡಿ 

ಪಾರ್ಕಿಂಗ್‌ ಎಲ್ಲೆಲ್ಲಿ ?
- ಉಡುಪಿ ಶಾರದಾ ಮಂಟಪ ಜಂಕ್ಷನ್‌ ಬಳಿಯ ಸುಧೀಂದ್ರ ಮಂಟಪ ರಸ್ತೆಯಲ್ಲಿ ಮೇ 1ರ ಬೆಳಗ್ಗೆ 10ರಿಂದ ರಾತ್ರಿ 8ರ ವರೆಗೆ ದ್ವಿಚಕ್ರ ವಾಹನ ಪಾರ್ಕಿಂಗ್‌ಗಾಗಿ  ಅನ್ಯ ವಾಹನಗಳ ಓಡಾಟ ನಿಷೇಧಿಸಲಾಗಿದೆ. 

- ಉಡುಪಿ ಗೋಸುಲಟ್ಟೆ ರಸ್ತೆ (ಎಂಜಿಎಂ ಲೇಡೀಸ್‌ ಹಾಸ್ಟೆಲ್‌ ಬಳಿ ರಸ್ತೆ) ಯಲ್ಲಿ ಬೆಳಗ್ಗೆ 10ರಿಂದ ರಾತ್ರಿ 8 ಗಂಟೆಯ ವರೆಗೆ ದ್ವಿಚಕ್ರ ವಾಹನ ಪಾರ್ಕಿಂಗ್‌ಗಾಗಿ  ಬೇರೆ ವಾಹನಗಳ ಓಡಾಟ ನಿಷೇಧಿಸಲಾಗಿದೆ.

- ಮಲ್ಪೆ ಭಾಗದಿಂದ ಬರುವ ದ್ವಿಚಕ್ರ ವಾಹನಗಳಿಗೆ ಕಡಿಯಾಳಿ ಕಮಲಾಬಾೖ ಹೈಸ್ಕೂಲ್‌ ಮೈದಾನ, ಕಾರುಗಳಿಗೆ ಕಡಿಯಾಳಿ ಆತೀಫ್ ಹುಸೇನ್‌ ಎಸ್ಟೇಟ್‌ನಲ್ಲಿ ಪಾರ್ಕಿಂಗ್‌.

- ಕುಂದಾಪುರ, ಕಾರವಾರ, ಬೈಂದೂರು ಮತ್ತು ಬ್ರಹ್ಮಾವರ ಭಾಗದ ದ್ವಿಚಕ್ರ ವಾಹನಗಳಿಗೆ ಶಾರದಾ ಮಂಟಪ ಜಂಕ್ಷನ್‌ ಬಳಿ ಇರುವ ಸುಧೀಂದ್ರ ಮಂಟಪ ರಸ್ತೆ, ಕಾರು ಗಳಿಗೆ ರಾಜಾಂಗಣ ಪಕ್ಕದ ಪಾರ್ಕಿಂಗ್‌ ಸ್ಥಳ, ಬಸ್ಸುಗಳಿಗೆ ರಾಯಲ್‌ಗಾರ್ಡನ್‌ನಲ್ಲಿ ನಿಲುಗಡೆ.

- ಕಾರ್ಕಳ, ಹೆಬ್ರಿ, ಚಿಕ್ಕಮಗಳೂರು ಭಾಗದಿಂದ ಬರುವ ದ್ವಿಚಕ್ರ ವಾಹನಗಳಿಗೆ ಎಂಜಿಎಂ ಕಾಲೇಜು ಲೇಡೀಸ್‌ ಹಾಸ್ಟೆಲ್‌ ರಸ್ತೆ, ಕಾರುಗಳಿಗೆ ಬೀಡಿನಗುಡ್ಡೆ, ಬಸ್ಸುಗಳಿಗೆ ಮಣಿಪಾಲ ಎಂಜೆಸಿ ಮೈದಾನದಲ್ಲಿ ಪಾರ್ಕಿಂಗ್‌.

- ಕಾಪು, ಪಡುಬಿದ್ರಿ, ಮೂಲ್ಕಿ, ಮಂಗಳೂರಿ ನಿಂದ ಬರುವ ದ್ವಿಚಕ್ರ ವಾಹನಗಳಿಗೆ ಸುಧೀಂದ್ರ ಮಂಟಪ ರಸ್ತೆ, ಕಾರು ಮತ್ತು ಬಸ್ಸುಗಳಿಗೆ ಬೀಡಿನಗುಡ್ಡೆಯಲ್ಲಿ ನಿಲುಗಡೆ. 

- ಶಾರದಾ ರೆಸಿಡೆನ್ಸಿಯಲ್‌ ಹಾಸ್ಟೆಲ್‌ ಮೈದಾನ ವಿಐಪಿ ಪಾರ್ಕಿಂಗ್‌ ಸ್ಥಳವಾಗಿರುತ್ತದೆ. ಟಿ.ಎಂ.ಎ ಪೈ ಆಂಗ್ಲ ಮಾಧ್ಯಮ ಶಾಲೆ ಮೈದಾನ ಮಾಧ್ಯಮದವರು, ಪಕ್ಷದ, ಇತರ ವಿಐಪಿಗಳಿಗೆ ಪಾರ್ಕಿಂಗ್‌ ಸ್ಥಳ.

ಟಾಪ್ ನ್ಯೂಸ್

leopard

leopard: ಮೂಲ್ಕಿ ಕೊಯ್ನಾರಿನಲ್ಲಿ ಸಣ್ಣ ಮರಿಯೊಂದಿಗೆ ಚಿರತೆ ಪ್ರತ್ಯಕ್ಷ?

yathanal-jarakiholi

BJP Meeting: ದಾವಣಗೆರೆಯಲ್ಲಿ ಯತ್ನಾಳ್‌, ರಮೇಶ್‌ ಜಾರಕಿಹೊಳಿ ಇಂದು ಮಹತ್ವದ ಸಭೆ

Bus-Station

Development: ಸಂಪರ್ಕ ಸಾರಿಗೆಗಳಿಂದ ದೇಶದ ಆರ್ಥಿಕತೆ ಹೆಚ್ಚಳ: ಸಚಿವ ರಾಮಲಿಂಗಾರೆಡ್ಡಿ

047

Gulveer Singh: ನೂತನ ರಾಷ್ಟ್ರೀಯ ದಾಖಲೆ ಸ್ಥಾಪಿಸಿದ ಗುಲ್ವೀರ್

04257

T20I series: ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿ: ಸೂರ್ಯಕುಮಾರ್‌ ಯಾದವ್‌ ನಾಯಕ

1-stalin

Tamil Nadu; ಪುತ್ರ ಉದಯನಿಧಿಗೆ ಬಡ್ತಿ ನೀಡಿದ ಸ್ಟಾಲಿನ್: ನಾಳೆ ಪ್ರಮಾಣವಚನ

Car-Auto

Kaup: ರಿಕ್ಷಾ, ಕಾರು ಮುಖಾಮುಖಿ ಢಿಕ್ಕಿ: ಇಬ್ಬರಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Car-Auto

Kaup: ರಿಕ್ಷಾ, ಕಾರು ಮುಖಾಮುಖಿ ಢಿಕ್ಕಿ: ಇಬ್ಬರಿಗೆ ಗಾಯ

655

Fraud: ಹಳೆ ಬ್ಯಾಟರಿ ನೀಡುವುದಾಗಿ ವಂಚನೆ

02554

Padubidri: 10 ವರ್ಷಗಳ ಹಿಂದೆ ಕಾಣೆಯಾಗಿದ್ದ ಮಹಿಳೆಯ ಪತ್ತೆ

002

Karkala: ಎದೆ ನೋವಿನಿಂದ ಕೃಷಿಕ ಸಾವು

Udupi: ರಸ್ತೆ ಮಾರ್ಜಿನ್‌ ಮಾಹಿತಿ ಇಲ್ಲದೆ ಸಂಕಷ್ಟ: ನಗರಕ್ಕೆ 21ಮೀ.,ಗ್ರಾಮಾಂತರಕ್ಕೆ 40 ಮೀ.

Udupi: ರಸ್ತೆ ಮಾರ್ಜಿನ್‌ ಮಾಹಿತಿ ಇಲ್ಲದೆ ಸಂಕಷ್ಟ: ನಗರಕ್ಕೆ 21ಮೀ.,ಗ್ರಾಮಾಂತರಕ್ಕೆ 40 ಮೀ.

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

leopard

leopard: ಮೂಲ್ಕಿ ಕೊಯ್ನಾರಿನಲ್ಲಿ ಸಣ್ಣ ಮರಿಯೊಂದಿಗೆ ಚಿರತೆ ಪ್ರತ್ಯಕ್ಷ?

yathanal-jarakiholi

BJP Meeting: ದಾವಣಗೆರೆಯಲ್ಲಿ ಯತ್ನಾಳ್‌, ರಮೇಶ್‌ ಜಾರಕಿಹೊಳಿ ಇಂದು ಮಹತ್ವದ ಸಭೆ

Bus-Station

Development: ಸಂಪರ್ಕ ಸಾರಿಗೆಗಳಿಂದ ದೇಶದ ಆರ್ಥಿಕತೆ ಹೆಚ್ಚಳ: ಸಚಿವ ರಾಮಲಿಂಗಾರೆಡ್ಡಿ

1242

SAFF U-17 Championship: ಭಾರತ-ಬಾಂಗ್ಲಾ ಫೈನಲ್‌

047

Gulveer Singh: ನೂತನ ರಾಷ್ಟ್ರೀಯ ದಾಖಲೆ ಸ್ಥಾಪಿಸಿದ ಗುಲ್ವೀರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.