ಶಿಕ್ಷಣದಿಂದ ದೇಶ ಭವಿಷ್ಯ ಸದೃಢ: ಉಪರಾಷ್ಟ್ರಪತಿ
Team Udayavani, Apr 30, 2018, 2:03 PM IST
ಕುಂಬಳೆ: ವಿದ್ಯಾಲಯಗಳಲ್ಲಿ ಸಿಗುವ ಶಿಕ್ಷಣದಿಂದ ರಾಷ್ಟ್ರದ ಭವಿಷ್ಯ ಸದೃಢವಾಗುತ್ತದೆ. ವಿದ್ಯಾರ್ಥಿಗಳು ವಿದ್ಯೆಯೊಂದಿಗೆ ಸಂಸ್ಕಾರ ಮತ್ತು ದೇಶಪ್ರೇಮವನ್ನು ಪಡೆಯಬೇಕು. ಹೆತ್ತ ತಾಯಿ, ಕಲಿಸಿದ ಗುರು, ಜನಿಸಿದ ನಾಡು ಮತ್ತು ಮಾತೃಭಾಷೆಯ ಮೇಲೆ ಮಮಕಾರ ಇರಬೇಕು. ನಮ್ಮ ಮಾತೃಭಾಷೆ ನಮ್ಮ ಭವಿಷ್ಯ ನಿರ್ಧಾರಕ; ಇತರ ಭಾಷೆಗಳು ನಮಗೆ ಕನ್ನಡಕವಿದ್ದಂತೆ ಎಂದು ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಹೇಳಿದರು.
ಕಾಸರಗೋಡಿನ ಪೆರಿಯದಲ್ಲಿ 231 ಕೋ. ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಕೇಂದ್ರೀಯ ವಿಶ್ವ ವಿದ್ಯಾನಿಲಯದ 8 ಅಕಾಡೆಮಿಕ್ ಬ್ಲಾಕ್‌ಗಳ ಸಮುಚ್ಚಯವನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಪ್ರಧಾನಿ ಮೋದಿ ತಮ್ಮ ಪಾರದರ್ಶಕ ಆಡಳಿತದ ಮೂಲಕ ದೇಶವನ್ನು ಉನ್ನತ ಸ್ಥಾನಕ್ಕೆ ಒಯ್ಯಲು ಶ್ರಮಿಸುತ್ತಿದ್ದಾರೆ. ಮೇಕ್ ಇನ್ ಇಂಡಿಯಾದಲ್ಲಿ ಶಿಕ್ಷಣ ಮತ್ತು ಯುವಕರ ಉದ್ಯೋಗಾವಕಾಶಕ್ಕೆ ಆದ್ಯತೆ ನೀಡಲಾಗಿದೆ. ಪ್ರಸ್ತುತ ದೇಶದ ಜನಸಂಖ್ಯೆಯ ಶೇ. 65 ಯುವಜನತೆ ಇದ್ದು, ಅವರು ವಿದ್ಯಾಭ್ಯಾಸದೊಂದಿಗೆ ಶಿಸ್ತು, ಗುಣನಡತೆ, ಬದ್ಧತೆ ಮತ್ತು ಕ್ರಿಯಾಶೀಲತೆ ಹಾಗೂ ಉತ್ತಮ ಚಿಂತನೆಯೊಂದಿಗೆ ಮುಂದುವರಿಯಬೇಕು.
ಮಹಾತ್ಮಾ ಗಾಂಧಿ ಮತ್ತು ಡಾ| ಎ.ಪಿ.ಜೆ. ಅಬ್ದುಲ್ ಕಲಾಂ ಆದರ್ಶವನ್ನು ಪಾಲಿಸಬೇಕು. ದೇಶಾದ್ಯಂತ 800 ವಿ.ವಿ.ಗಳಲ್ಲಿ ಉತ್ತಮ ಶಿಕ್ಷಣ ಮತ್ತು ವಸತಿ ಸೌಕರ್ಯವನ್ನು ಕಲ್ಪಿಸಲಾಗಿದೆ. ವಿದೇಶೀ ವಿದ್ಯಾರ್ಥಿಗಳು ಕೂಡ ಇಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ನಮ್ಮ ಮಕ್ಕಳು ವಿದೇಶ ವ್ಯಾಮೋಹವನ್ನು ತೊರೆದು ಭಾರತದಲ್ಲೇ ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಶ್ರಮಿಸಬೇಕು. ವಸುಧೈವ ಕುಟುಂಬಕಂ ಎಂಬಂತೆ ಸಾಮರಸ್ಯದಿಂದ ಬಾಳಿ ಸರ್ವೇಜನಾಃ ಸುಖೀನೋಭವಂತು ಉಕ್ತಿಯನ್ನು ಸಾಕಾರ ಗೊಳಿಸಬೇಕು ಎಂದರು.
ಮಲಯಾಳದಲ್ಲಿ ಭಾಷಣ ಆರಂಭ
ದೇವರ ಸ್ವಂತ ನಾಡು, ಬ್ರಹ್ಮಶ್ರೀ ನಾರಾಯಣ ಗುರುಗಳ ಆದರ್ಶದಿಂದ ಕೂಡಿದ ಕೇರಳದ ಸಮಾರಂಭದಲ್ಲಿ ಭಾಗ ವಹಿಸಲು ಸಂತಸವಾ ಗುತ್ತಿದೆ ಎಂದ ನಾಯ್ಡು ಮಲೆಯಾಳದಲ್ಲಿ ಭಾಷಣ ಆರಂಭಿಸಿದರು.
ಕೇರಳ ರಾಜ್ಯ ಬಂದರು ಸಚಿವ ಕಡನಪ್ಪಳ್ಳಿ ರಾಮಚಂದ್ರನ್ ಉಪರಾಷ್ಟ್ರಪತಿಯವರನ್ನು ಸ್ವಾಗತಿಸಿದರು. ಕಾಸರಗೋಡು ಸಂಸದ ಪಿ. ಕರುಣಾಕರನ್, ಯುಜಿಸಿ ಸದಸ್ಯ ಜಿ. ಗೋಪಾಲ ರೆಡ್ಡಿ, ವಿ.ವಿ. ರಿಜಿಸ್ಟ್ರಾರ್ ಡಾ| ಎ. ರಾಧಾಕೃಷ್ಣನ್ ಉಪಸ್ಥಿತರಿದ್ದರು. ಜಿ. ಗೋಪಕುಮಾರ್ ಪ್ರಸ್ತಾ ವನೆಗೈದು ಸ್ವಾಗತಿಸಿದರು. ವಿ.ವಿ. ಎಕ್ಸಿಕ್ಯೂಟಿವ್ ಕೌನ್ಸಿಲ್ ಸದಸ್ಯ, ಕಾರ್ಯ ಕ್ರಮದ ಸ್ವಾಗತ ಸಮಿತಿ ಕಾರ್ಯದರ್ಶಿ ಪ್ರೊ| ಡಾ| ಕೆ. ಜಯಪ್ರಸಾದ್ ಅವರು ವಂದಿಸಿದರು.
ವೈದ್ಯಕೀಯ ಕಾಲೇಜಿನ ಭರವಸೆ
ಮುಂದೆ ವೈದ್ಯಕೀಯ ಕಾಲೇಜನ್ನೂ ಇಲ್ಲಿ ಆರಂಭಿಸು ವಂತೆ ತಾನು ಕೇಂದ್ರ ಸರಕಾರವನ್ನು ಒತ್ತಾಯಿಸುವುದಾಗಿ ವೆಂಕಯ್ಯ ನಾಯ್ಡು ಭರವಸೆ ನೀಡಿದರು. ಇಲ್ಲಿನ ಹೆಚ್ಚಿನವರು ಉನ್ನತ ಚಿಕಿತ್ಸೆಗಾಗಿ ಮಣಿಪಾಲ ಮತ್ತು ಮಂಗಳೂರನ್ನು ಆಶ್ರಯಿಸು ತ್ತಿರುವುದು ತನ್ನ ಗಮನಕ್ಕೆ ಬಂದಿರುವುದಾಗಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ
Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ
Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್ ರೈ
MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ
Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.