ಸಿದ್ದಾಪುರ: ಗ್ರಾಮೀಣ ಪ್ರದೇಶಗಳಲ್ಲಿ ಜೆಡಿಎಸ್ ಪ್ರಚಾರ ಅಬ್ಬರ
Team Udayavani, Apr 30, 2018, 2:57 PM IST
ಸಿದ್ದಾಪುರ: ಜೆಡಿಎಸ್ ಅಭ್ಯರ್ಥಿ ಶಶಿಭೂಷಣ ಹೆಗಡೆ ಸೋವಿನಕೊಪ್ಪ ಗ್ರಾಪಂ ವ್ಯಾಪ್ತಿಯ ಹುಲ್ಕುತ್ರಿ, ಹಳ್ಳಿಬೈಲ್, ಬೊಗರಿಮಕ್ಕಿ, ಕಿಲುವಳ್ಳಿ ಊರುಗಳಿಗೆ ತೆರಳಿ ಜನ ಸಂಪರ್ಕ ಸಭೆ ನಡೆಸಿ ಮತಯಾಚಿಸಿದರು. ಕತ್ರಗಾಲ-ಹುಲ್ಕುತ್ರಿ-ಮಾನಿಹೊಳೆ ಸಂಪರ್ಕ ರಸ್ತೆ, ಪ್ರಧಾನ ಮಂತ್ರಿ ಗ್ರಾಮೀಣ ಸಡಕ್ ರಸ್ತೆಯಾಗಿದ್ದು 2012 ರಲ್ಲಿ ರಸ್ತೆ ಪೂರ್ಣಗೊಂಡು ಬಿಲ್ ಪಾವತಿಯಾಗಿದೆ. ಆದರೆ ಕೆಲಸ ಅರ್ಧದಷ್ಟು ಮಾತ್ರ ಆಗಿದೆ. ಆಗಿರುವ ಕಾಮಗಾರಿ ತೀವ್ರ ಕಳಪೆಯಾಗಿದೆ ಎಂದು ಜನತೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದಾಗ ಶಶಿಭೂಷಣ ಹೆಗಡೆ ಈ ರಸ್ತೆಯ ವಿಚಾರ ಪೂರ್ಣವಾಗಿ ನನ್ನ ಅರಿವಿನಲ್ಲಿದೆ. ನನ್ನನ್ನು ಆಯ್ಕೆಮಾಡಿ ಈ ರಸ್ತೆಯನ್ನು ಒಂದು ವರ್ಷದಲ್ಲಿ ಪೂರ್ಣಗೊಳಿಸುವ ವ್ಯವಸ್ಥೆ ಮಾಡುತ್ತೇನೆ ಎಂದರು.
ನಂತರ ಅವರು ಬೇಡ್ಕಣಿ ಗ್ರಾಪಂ ವ್ಯಾಪ್ತಿಯ ಹುಲಿಮನೆ ಬೇಡ್ಕಣಿಗಳಲ್ಲಿ ಬಹಿರಂಗ ಸಭೆ ನಡೆಸಿ ಮತ ಯಾಚಿಸಿದರು. ಶಶಿಭೂಷಣ ಹೆಗಡೆ ಮಾತನಾಡಿ ನಿಮ್ಮ ಭಾವನೆಗಳನ್ನು ಅರ್ಥಮಾಡಿಕೊಂಡಿದ್ದೇನೆ. ಚುನಾವಣೆಯಲ್ಲಿ ನನ್ನನ್ನು ಆಯ್ಕೆ ಮಾಡಿದರೆ ನಿಮ್ಮ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಯತ್ನಿಸುತ್ತೇನೆ ಎಂದರು.
ನಮ್ಮ ಪ್ರಣಾಳಿಕೆಯಲ್ಲಿ ಕಾಣಿಸಿದಂತೆ ರೈತರ ಸಾಲಾ ಮನ್ನಾ, ಸ್ತ್ರೀ ಶಕ್ತಿ ಗುಂಪುಗಳ ಸಾಲ ಮನ್ನಾ ಮಾಡಲಿಕ್ಕೆ ನಮ್ಮ ಪಕ್ಷ ಬದ್ಧವಾಗಿದೆ. ನಾನು ನಿಮ್ಮ ಸಂಪರ್ಕದಲ್ಲಿ ಸದಾ ಇರುತ್ತೇನೆ ಎಂದರು. ಕಡಕೇರಿ ಕೋಲ್‌ಸಿರ್ಸಿ, ನಿಡುಗೋಡ ಮತ್ತು ಕಾನಗೋಡಗಳಲ್ಲಿ ಸಭೆ ನಡೆಸಿ ಮತಯಾಚನೆ ಮಾಡಿದರು. ಅವರೊಂದಿಗೆ ಪಕ್ಷದ ಜಿಲ್ಲಾಧ್ಯಕ್ಷ ಬಿ.ಆರ್. ನಾಯ್ಕ, ತಾಲೂಕ ಅಧ್ಯಕ್ಷ ಎಸ್.ಕೆ ನಾಯ್ಕ, ಮುಖಂಡರಾದ ತಿಮ್ಮಪ್ಪ ಎಂ.ಕೆ, ಶ್ರೀಧರ ಭಟ್ಟ ಗಡಿಹಿತ್ಲು , ಬೂತ್ ಕಮೀಟಿ ಸದಸ್ಯರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ,ಮಗಳು
Dandeli: ವಿದ್ಯುತ್ ಕಂಬದ ಜಿಓಎಸ್ ಕಳವು ಮಾಡಿದ್ದ ಆರೋಪಿ;ಮಾಲು ಸಹಿತ ವಶಕ್ಕೆ ಪಡೆದ ಪೊಲೀಸರು
Gujjar Kere: ಕೆರೆ ಪರಿಸರದ ರಕ್ಷಣೆಗೆ ಆದ್ಯತೆ ಅಗತ್ಯ; ತಹಶೀಲ್ದಾರ್‌ಗೆ ಮರು ಮನವಿ
MUST WATCH
ಹೊಸ ಸೇರ್ಪಡೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ
Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.