ಸದೃಢ ನಿರ್ಧಾರಕ್ಕೆ  ಮನಸ್ಸು, ಹೃದಯ ಜತೆಯಾಗಲಿ


Team Udayavani, Apr 30, 2018, 3:23 PM IST

30-April-14.jpg

ನೂರಾರು ಕನಸುಗಳನ್ನು ಹೊತ್ತು ಬೆಂಗಳೂರು ಕಡೆ ಹೊರಟಿದ್ದೆ. ಬಸ್‌ ಗೆ ಏರುವ ಮುನ್ನ ಹಿಂದಿರುಗಿ ಮನೆಯವರನ್ನೆಲ್ಲ ನೋಡಿದೆ. ಅಮ್ಮನ ಕಣ್ಣಲ್ಲಿ ಆತಂಕ, ಅಪ್ಪನ ಮೊಗ ದಲ್ಲಿ ಅಭಿ ಮಾನವ, ಅಕ್ಕ, ತಮ್ಮನ ಮನಸ್ಸಲ್ಲಿ ಸಂತೋಷ… ಎಲ್ಲವೂ ಜತೆಯಾಗಿತ್ತು. ನನ್ನ ಮನಸ್ಸು ಹೊಸ ಊರನ್ನು ಕಾಣುವ ತವ ಕದ ಜತೆಗೆ ಹುಟ್ಟಿ ಬೆಳೆದ ಮನೆ, ಪರಿಸರದಿಂದ ದೂರವಾಗುವ ನೋವಿತ್ತು.

ಬದುಕಿನ ಎಷ್ಟೋ ನಿರ್ಧಾರಗಳು ಏಕಕಾಲಕ್ಕೆ ನೂರಾರು ವಿಷಯಗಳನ್ನು ತಂದಿಡು ತ್ತದೆ. ಯಾವುದು ಸರಿ, ಯಾವುದು ತಪ್ಪು ಎಂಬುದರ ಅರಿವೇ ಆಗುವುದಿಲ್ಲ. ನಮಗೆ ಸರಿ ಕಂಡದ್ದು ಮತ್ತೊಬ್ಬರಿಗೆ ತಪ್ಪಾಗಿರಬಹುದು. ಮತ್ತೊಬ್ಬರಿಗೆ ಸರಿಯಾಗಿದ್ದು ನಮಗೆ ತಪ್ಪು ಎಂದೆನಿಸಬಹುದು. ಆದರೆ ಇಲ್ಲಿ ನಿರ್ಧಾರಗಳ ತೂಗುಯ್ನಾಲೆಯ ಬಳ್ಳಿ ನಮ್ಮ ಕೈಯಲ್ಲೇ ಇದ್ದರೂ ಸರಿಯಾಗಿ ಒಂದು ಕಡೆ ತಂದು ನಿಲ್ಲಿಸಲಾಗದ ತಳಮಳ ಹೃದಯಂತರಾಳದಲ್ಲಿ.

ಮನಸ್ಸಿನ ಮಾತಿಗೆ ಹೃದಯ ಮೌನವಾಗುತ್ತದೆ. ಹೃದಯದ ನೋವಿಗೆ ಮನಸ್ಸು ಚೀರುತ್ತದೆ. ಒಂದಕ್ಕೊಂದು ವಿರುದ್ಧ ದಿಕ್ಕಿನಲ್ಲಿ ಸಂಚರಿಸುವ ಈ ಜೋಡಿಗಳನ್ನು ಜತೆ ಸೇರಿಸುವುದು ತುಸು ಕಷ್ಟವೇ ಸರಿ. ಯಾರೋ ಹೇಳಿದರು ಅಲ್ಲಿ ನೂರಾರು ಅವಕಾಶಗಳಿದೆ. ಮತ್ತೊಬ್ಬರು ಹೇಳುತ್ತಾರೆ ಕಷ್ಟಗಳ ಸರಮಾಲೆಯೇ ಕಾದಿದೆ. ಕಷ್ಟಗಳಿಗೆ ಹೆದರಿ ಅವಕಾಶವನ್ನು ಕೈ ಚೆಲ್ಲಿದರೆ ಭವಿಷ್ಯ ಭದ್ರಗೊಳಿಸುವ ಆತಂಕ. 

ಎಲ್ಲರ ಬದುಕಿನಲ್ಲೂ ಇಂತಹ ಪ್ರಶ್ನೆಗಳು, ಸವಾಲುಗಳು ಸಾಕಷ್ಟು ಬಂದಿರಬಹುದು. ಹೆಚ್ಚಿನ ಸಂದರ್ಭದಲ್ಲಿ ಹೃದಯದ ಮಾತನ್ನೇ ಕೇಳುತ್ತೇವೆಯಾದರೂ ಮನದಲ್ಲಿ ತುಂಬಿರುವ ದುಗುಡ, ಆತಂಕಕ್ಕೆ ಹೆದರಿ ಮೌನವಾಗುತ್ತೇವೆ. ಎಲ್ಲದಕ್ಕೂ ಕಾಲವೇ ಉತ್ತರ ಹೇಳಬೇಕು ಎಂದು ಕಾಯುತ್ತೇವೆ. ಹೀಗಾದರೆ ಕೆಲವೊಂದು ಬಾರಿ ಅವಕಾಶಗಳು ಕೈಚೆಲ್ಲುವುದು ಇದೆ. ಹೀಗಾಗಿ ಸಮಯಕ್ಕೆ ತಕ್ಕ ನಿರ್ಧಾರಕ್ಕೆ ಮನಸ್ಸು, ಹೃದಯವನ್ನು ಜತೆಗೂಡಿಸುವ ಶಕ್ತಿಯನ್ನು ನಮ್ಮೊಳಗೆ ತುಂಬಿಕೊಳ್ಳಬೇಕು. ಅದಕ್ಕಾಗಿ ಪರಿ ಪೂರ್ಣ ಜ್ಞಾನದ ಅರಿವು, ಕತ್ತಲಿನಿಂದ ಬೆಳಕಿನೆಡೆಗೆ ಸಾಗುವ ದಾರಿ ತಿಳಿದಿರಬೇಕು. 

ಟಾಪ್ ನ್ಯೂಸ್

4-uv-fusion

Childhood Times: ಕಳೆದು ಹೋದ ಸಮಯ

Ekanath Shindhe

Maharashtra;ಏಕನಾಥ್ ಶಿಂಧೆ ಡಿಸಿಎಂ ಹುದ್ದೆ ಸ್ವೀಕರಿಸುವುದಿಲ್ಲ ಎಂದ ಶಿವಸೇನೆ!

Israel ಮತ್ತು ಲೆಬನಾನ್ ನಡುವೆ ಕದನ ವಿರಾಮ ಒಪ್ಪಂದ:‌ ಅಮೆರಿಕ ಮಧ್ಯಸ್ಥಿಕೆಗೆ ಹಸಿರು ನಿಶಾನೆ

Israel ಮತ್ತು ಲೆಬನಾನ್ ನಡುವೆ ಕದನ ವಿರಾಮ ಒಪ್ಪಂದ:‌ ಅಮೆರಿಕ ಮಧ್ಯಸ್ಥಿಕೆಗೆ ಹಸಿರು ನಿಶಾನೆ

8

Keerthy Suresh: ಮದುವೆ ಸುದ್ದಿ ಬೆನ್ನಲ್ಲೇ ಆಂಟೋನಿ ಜತೆ ಫೋಟೋ ಹಂಚಿಕೊಂಡ ಕೀರ್ತಿ ಸುರೇಶ್

arrested

Punjab; ಗುಂಡಿನ ಚಕಮಕಿ ಬಳಿಕ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಇಬ್ಬರ ಬಂಧನ

2-ai

Artificial Intelligence: ಎಐ ಯುಗದಲ್ಲಿ ನಾವು ನೀವು?

Pushpa 2 Movie: ವರ್ಷದ ಅತೀ ಉದ್ದದ ಸಿನಿಮಾ..? ʼಪುಷ್ಪ-2ʼ ರನ್‌ ಟೈಮ್‌ ಎಷ್ಟು?

Pushpa 2 Movie: ವರ್ಷದ ಅತೀ ಉದ್ದದ ಸಿನಿಮಾ..? ʼಪುಷ್ಪ-2ʼ ರನ್‌ ಟೈಮ್‌ ಎಷ್ಟು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

4

Perla: ರಸ್ತೆ ವಿಸ್ತರಣೆ, ನೇತ್ರಾವತಿ ನದಿ ತಡೆಗೋಡೆ ದುರಸ್ತಿಗೆ ಆಗ್ರಹ

5-uv-fusion

Childhood: ಬಾಲ್ಯವೆಂಬ ನೆನೆದಷ್ಟು ಮುಗಿಯದ ಪಯಣ

3

Aranthodu: ಪ್ರಯಾಣಿಕ ತಂಗುದಾಣದ ದಾರಿ ಮಾಯ!

2

Vitla: ಅಭಿವೃದ್ಧಿಗೆ ಆಗ್ರಹಿಸಿ ರಸ್ತೆ ತಡೆದು ಪ್ರತಿಭಟನೆ

4-uv-fusion

Childhood Times: ಕಳೆದು ಹೋದ ಸಮಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.